IPL 2022: ಲಕ್ನೋ ತಂಡಕ್ಕೆ ಕೆ.ಎಲ್ ರಾಹುಲ್, ಸ್ಟೊಯ್ನಿಸ್, ರವಿ ಬಿಷ್ಣೋಯ್ ಸೇರ್ಪಡೆ!

ಟೀಮ್ ಇಂಡಿಯಾ ಸ್ಟಾರ್ ಆಟಗಾರ, ಪ್ರಸ್ತುತ ಲಿಮಿಟೆಡ್ ಓವರ್ ಕ್ಯಾಪ್ಟನ್ ಕೆಎಲ್ ರಾಹುಲ್ ಪಂಜಾಬ್ ತೊರೆದು ಯಾವ ಫ್ರಾಂಚೈಸಿ ಸೇರಲಿದ್ದಾರೆ ಎಂಬುದಕ್ಕೆ ಬಹುತೇಕ ಉತ್ತರ ಸಿಕ್ಕಂತಾಗಿದೆ.

ಕೆ.ಎಲ್ ರಾಹುಲ್ ಜೊತೆಗೆ ಆಸ್ಟ್ರೇಲಿಯಾದ ಆಲ್ ರೌಂಡರ್ ಮಾರ್ಕಸ್ ಸ್ಟೊಯ್ನಿಸ್ ಮತ್ತು ಯುವ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಮುಂಬರುವ ಐಪಿಎಲ್ 2022 ಋತುವಿನಲ್ಲಿ ಹೊಸ ಫ್ರಾಂಚೈಸಿ ಲಕ್ನೋವನ್ನು ಪ್ರತಿನಿಧಿಸಲಿದ್ದಾರೆ.

ಅತಿ ಹೆಚ್ಚು ಬೆಲೆಯ ಲಕ್ನೋ ಫ್ರಾಂಚೈಸಿಯನ್ನು ಪಡೆದುಕೊಂಡಿರುವ RPSG ಗೋಯೆಂಕಾ ಗ್ರೂಪ್ ಮುಂಬರುವ ಸೀಸನ್‌ಗೆ ಸಿದ್ಧವಾಗಿದೆ. ಲಕ್ನೋ ತಂಡವು ಈಗಾಗಲೇ ಜಿಂಬಾಬ್ವೆಯ ಮಾಜಿ ನಾಯಕ ಆ್ಯಂಡಿ ಫ್ಲವರ್ ಅವರನ್ನು ತಂಡದ ಮುಖ್ಯ ಕೋಚ್ ಆಗಿ ಮತ್ತು ವಿಜಯ್ ದಹಿಯಾ ಅವರನ್ನು ಬ್ಯಾಟಿಂಗ್ ಕೋಚ್ ಆಗಿ ನೇಮಿಸಿದೆ. ಗೌತಮ್ ಗಂಭೀರ್ ಅವರನ್ನು ಮೆಂಟರ್ ಆಗಿ ಆಯ್ಕೆ ಮಾಡಿದೆ.

ಜನವರಿ 22ರೊಳಗೆ 2 ಹೊಸ ತಂಡಗಳು ಮೂವರು ಆಟಗಾರರನ್ನ ಪ್ರಕಟಿಸಬೇಕು!

ಜನವರಿ 22ರೊಳಗೆ 2 ಹೊಸ ತಂಡಗಳು ಮೂವರು ಆಟಗಾರರನ್ನ ಪ್ರಕಟಿಸಬೇಕು!

ಮೆಗಾ ಹರಾಜಿಗೂ ಮೊದಲು, ಈಗಾಗಲೇ ರೀಟೈನ್ ಪ್ರಕ್ರಿಯೆ ಮುಗಿದಿದ್ದು, ಎರಡು ಹೊಸ ತಂಡಗಳಿಗೆ ಮೂರು ಆಟಗಾರರನ್ನು ಆಯ್ಕೆ ಮಾಡಬೇಕಾಗಿದೆ. ಅಹಮದಾಬಾದ್ ಮತ್ತು ಲಕ್ನೋ ಲೀಗ್‌ಗೆ ಹೊಸಬರು ಈ ತಿಂಗಳ 22 ರೊಳಗೆ ಪ್ರಕ್ರಿಯೆ ಪೂರ್ಣಗೊಳಿಸುವ ನಿರೀಕ್ಷೆಯಿದೆ.

ಇದೇ ಕ್ರಮಾಂಕದಲ್ಲಿ ಲಖನೌ ಸ್ಟಾರ್ ಆಟಗಾರ ಕೆಎಲ್ ರಾಹುಲ್, ಆಲ್ ರೌಂಡರ್ ಮಾರ್ಕಸ್ ಸ್ಟೋನ್ಸ್ ಹಾಗೂ ರವಿ ಬಿಷ್ಣೋಯ್ ಅವರನ್ನು ಫ್ರಾಂಚೈಸಿ ಪಡೆದಿದ್ದು, ಕೆಎಲ್ ರಾಹುಲ್ ತಂಡದ ನಾಯಕತ್ವ ವಹಿಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ವಾಸ್ತವವಾಗಿ, ಮಾರ್ಕಸ್ ಸ್ಟೊಯ್ನಿಸ್ ಮತ್ತು ರವಿ ಬಿಷ್ಣೋಯ್ ಹೆಸರುಗಳು ಹೆಚ್ಚು ಕೇಳಿಬಂದಿಲ್ಲ. ಆದಾಗ್ಯೂ, ಇಎಸ್‌ಪಿಎನ್ ಮೂವರ ಹೆಸರನ್ನ ಪಟ್ಟಿಯನ್ನು ಲಕ್ನೋ ಡ್ರಾಫ್ಟ್ ಎಂದು ಘೋಷಿಸಿತು.

ಕೆ.ಎಲ್ ರಾಹುಲ್‌ಗೆ ಎಷ್ಟು ಕೋಟಿ ರೂಪಾಯಿ ಸಿಗಬಹುದು?

ಕೆ.ಎಲ್ ರಾಹುಲ್‌ಗೆ ಎಷ್ಟು ಕೋಟಿ ರೂಪಾಯಿ ಸಿಗಬಹುದು?

ಆಟಗಾರರ ಹೆಸರು ಅಷ್ಟೇ ಅಲ್ಲದೆ ಇಎಸ್‌ಪಿಎನ್‌ ಆಟಗಾರರಿಗೆ ಎಷ್ಟು ಪಾವತಿಸಬಹುದು ಎಂಬ ಮಾಹಿತಿ ಬಹಿರಂಗಪಡಿಸಿದೆ. ಐಪಿಎಲ್ ನಿಯಮಗಳ ಪ್ರಕಾರ ಮೂವರು ಆಟಗಾರರನ್ನು ನೇಮಿಸಿಕೊಂಡರೆ ಕ್ರಮವಾಗಿ 15 ಕೋಟಿ , 11 ಕೋಟಿ, 7 ಕೋಟಿ ರೂಪಾಯಿ ಪಾವತಿಸಬೇಕು. ಇದೇ ರೀತಿಯಲ್ಲಿ ಲಕ್ನೋ ಫ್ರಾಂಚೈಸಿ ಕೆ. ಎಲ್ ರಾಹುಲ್‌ಗೆ 15 ಕೋಟಿ ನೀಡಲು ಸಿದ್ಧರಿದ್ದರೆ, ಮಾರ್ಕಸ್ ಸ್ಟೊಯ್ನಿಸ್‌ಗೆ 11 ಕೋಟಿ ರೂಪಾಯಿ, ರವಿ ಬಿಷ್ಣೋಯ್ಗೆ 4 ಕೋಟಿ ರೂಪಾಯಿ ಪಾವತಿಸಬಹುದು ಎಂದು ಅಂದಾಜಿಸಿದೆ.

ಕಳೆದ ಸೀಸನ್‌ವರೆಗೆ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದ ಕೆ.ಎಲ್ ರಾಹುಲ್ ಈ ಬಾರಿ ತಂಡವನ್ನು ಬದಲಾಯಿಸಲು ಬಯಸಿದ್ದರು. ಹೀಗಾಗಿಯೇ ಪಂಜಾಬ್ ಕಿಂಗ್ಸ್ ಈ ಬದಲಾವಣೆ ನಿಯಮವನ್ನ ಒಪ್ಪಿಕೊಳ್ಳಲಿಲ್ಲ.

ಟೆಸ್ಟ್ ನಾಯಕತ್ವ ತೊರೆದ ವಿರಾಟ್ ಕೊಹ್ಲಿ ಬಗ್ಗೆ ಶಾಹಿದ್ ಅಫ್ರಿದಿ ಕುತೂಹಲಕಾರಿ ಹೇಳಿಕೆ!

ಆರ್‌ಸಿಬಿ ಪರ ಆಡಿದ್ದ ರಾಹುಲ್‌ ಈಗ ಹೊಸ ತಂಡದ ನಾಯಕ!

ಆರ್‌ಸಿಬಿ ಪರ ಆಡಿದ್ದ ರಾಹುಲ್‌ ಈಗ ಹೊಸ ತಂಡದ ನಾಯಕ!

ರಾಹುಲ್ 2013 ರಲ್ಲಿ RCB ಗಾಗಿ ತಮ್ಮ ಐಪಿಎಲ್ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು 2014 ರಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ಪರ ಆಡಿ 2016 ರಲ್ಲಿ ಆರ್‌ಸಿಬಿಗೆ ಗೆ ಮತ್ತೆ ಸೇರಿಕೊಂಡರು. 2018 ರಲ್ಲಿ ಪಂಜಾಬ್ ಕಿಂಗ್ಸ್ ಅವರಿಗೆ 11 ಕೋಟಿ ರೂಪಾಯಿ ಕೊಟ್ಟು ತೆಗೆದುಕೊಂಡಿದೆ. ಅವರು 2020 ಮತ್ತು 2021 ರ ಐಪಿಎಲ್‌ಗೆ ನಾಯಕರಾಗಿದ್ದರು. ಆದರೆ, ರಾಹುಲ್ ಅದ್ಭುತ ಪ್ರದರ್ಶನ ನೀಡಿದರೂ ತಂಡಕ್ಕೆ ಗೆಲುವು ಸಾಧ್ಯವಾಗಲಿಲ್ಲ.

ಕೆ.ಎಲ್ ರಾಹುಲ್‌ ಐಪಿಎಲ್‌ನ 55 ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ ಮತ್ತು 56.62 ಸರಾಸರಿಯಲ್ಲಿ 2548 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕ ಹಾಗೂ 25 ಅರ್ಧ ಶತಕಗಳು ಸೇರಿವೆ. ಐಪಿಎಲ್ 2020 ಮತ್ತು 2021 ಸೀಸನ್‌ಗಳಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರನಾಗಿದ್ದಾನೆ.

ನಾಯಕತ್ವಕ್ಕೆ ಕೊಹ್ಲಿ ರಾಜೀನಾಮೆ ನೀಡಲು ಈತನೇ ಕಾರಣ ಎಂದ ರಶೀದ್ ಲತೀಫ್!

ಮಾರ್ಕೊ ಸ್ಟೊಯ್ನಿಸ್ ಮತ್ತು ರವಿ ಬಿಷ್ಣೊಯ್ ಐಪಿಎಲ್ ರೆಕಾರ್ಡ್ಸ್

ಮಾರ್ಕೊ ಸ್ಟೊಯ್ನಿಸ್ ಮತ್ತು ರವಿ ಬಿಷ್ಣೊಯ್ ಐಪಿಎಲ್ ರೆಕಾರ್ಡ್ಸ್

ಮಾರ್ಕೊ ಸ್ಟೊಯ್ನಿಸ್ 2015 ರಿಂದ ಕಳೆದ ಋತುವಿನವರೆಗೆ ಡೆಲ್ಲಿ ಕ್ಯಾಪಿಟಲ್ಸ್‌ ಪರ ಆಡಿದ್ದರು. ಅವರು 27 ಪಂದ್ಯಗಳಲ್ಲಿ 441 ರನ್‌ಗಳಿಗೆ 44 ವಿಕೆಟ್‌ಗಳನ್ನು ಪಡೆದರು. ವಿಶೇಷವಾಗಿ ಕಳೆದ ಎರಡು ಸೀಸನ್‌ಗಳಲ್ಲಿ ಅವರು ಉತ್ತಮ ಟಚ್‌ನಲ್ಲಿದ್ದಾರೆ.

ಈ ಹಿಂದೆ ಆರ್‌ಸಿಬಿ ಜೊತೆಗೆ ಕಿಂಗ್ಸ್ ಪಂಜಾಬ್ ಪರ ಕೂಡ ಈತ ಆಡಿದ್ದ. 2020ರ ಅಂಡರ್-19 ವಿಶ್ವಕಪ್ ಮೂಲಕ ಎಲ್ಲರ ಗಮನ ಸೆಳೆದಿದ್ದ ರವಿ ಬಿಷ್ಣೋಯ್ ಅವರನ್ನು ಪಂಜಾಬ್ ಕಿಂಗ್ಸ್ ಕಣಕ್ಕಿಳಿಸಿತು. ಐಪಿಎಲ್ 2021 ರ ಋತುವಿನಲ್ಲಿ 12 ವಿಕೆಟ್‌ಗಳನ್ನು ಪಡೆದ ಬಿಷ್ಣೋಯ್, ತಮ್ಮ ನಾಯಕ KL ರಾಹುಲ್ ಅವರೊಂದಿಗೆ ಲಕ್ನೋವನ್ನು ಸೇರಿಕೊಂಡರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, January 18, 2022, 17:18 [IST]
Other articles published on Jan 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X