ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Lucknow IPL Team Name: ನೂತನ ಐಪಿಎಲ್ ಫ್ರಾಂಚೈಸಿ ಲಕ್ನೋ ತಂಡದ ಹೆಸರು ಅಧಿಕೃತ ಘೋಷಣೆ

IPL 2022: Lucknow’s IPL team named as Lucknow Super Giants

2022ರ ಐಪಿಎಲ್‌ನಲ್ಲಿ ಎರಡು ಹೊಸ ಫ್ರಾಚೈಸಿಗಳು ಸೇರ್ಪಡೆಯಾಗಿದ್ದು ಲಕ್ನೋ ಹಾಗೂ ಅಹಮದಾಬಾದ್ ಫ್ರಾಂಚೈಸಿಗಳು ಈ ಬಾರಿ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಟ್ರೋಫಿಗಾಗಿ ಸೆಣೆಸಾಡಲಿದೆ. ಈಗಾಗಲೇ ಮೂವರು ಆಟಗಾರರನ್ನು ಈ ಎರಡು ತಂಡಗಳು ಕೂಡ ಸೇರ್ಪಡೆಗೊಳಿಸಿದ್ದು ಇದರಲ್ಲಿ ಲಕ್ನೋ ಫ್ರಾಂಚೈಸಿ ತನ್ನ ತಂಡದ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಿದೆ.

ನೂತನ ಐಪಿಎಲ್ ಫ್ರಾಂಚೈಸಿ ಲಕ್ನೋ ತನ್ನ ತಂಡಕ್ಕೆ "ಲಕ್ನೋ ಸೂಪರ್ ಜೈಂಟ್ಸ್" ಎಂದು ಘೋಷಿಸಿದೆ. ಮುಂದಿನ ತಿಂಗಳು ನಡೆಯಲಿರುವ ಹರಾಜು ಪ್ರಕ್ರಿಯೆಗೂ ಮುನ್ನ ಲಕ್ನೋ ಪ್ರಾಂಚೈಸಿ ಈ ಹೆಸರನ್ನು ಅಧಿಕರತವಾಗಿ ಘೋಷಿಸಿದೆ. ಆರ್‌ಪಿಜಿಎಸ್ ಗ್ರೂಪ್ ಮಾಲೀಕತ್ವದ ಲಕ್ನೋ ಫ್ರಾಂಚೈಸಿ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರ ಅಭಿಪ್ರಾಯವನ್ನು ಕೇಳಿತ್ತು. ಇದೀಗ ಸಾಮಾಜಿಕ ಜಾಲತಾಣದಲ್ಲಿಯೇ ತನ್ನ ತಂಡದ ಹೆಸರನ್ನು ಬಹಿರಂಗಪಡಿಸಿದೆ.

4 ಪಂದ್ಯಗಳಲ್ಲಿ ಹೀನಾಯ ಸೋಲು: ರಾಹುಲ್‌ ನಾಯಕತ್ವದ ಬಗ್ಗೆ ತುಟಿಬಿಚ್ಚಿದ ಕೋಚ್ ದ್ರಾವಿಡ್ ಹೇಳಿದ್ದಿಷ್ಟು4 ಪಂದ್ಯಗಳಲ್ಲಿ ಹೀನಾಯ ಸೋಲು: ರಾಹುಲ್‌ ನಾಯಕತ್ವದ ಬಗ್ಗೆ ತುಟಿಬಿಚ್ಚಿದ ಕೋಚ್ ದ್ರಾವಿಡ್ ಹೇಳಿದ್ದಿಷ್ಟು

'ನಾಮ್ ಬನಾವೋ ನಾಮ್ ಕಾಮಾವೋ' ಸ್ಪರ್ಧೆಯಲ್ಲಿ ಭಾಗಿಯಾಗುವ ಮೂಲಕ ನೀವು ನೀಡಿದ ಅಗಾಧ ಪ್ರತಿಕ್ರಿಯೆಗಾಗಿ ತುಂಬಾ ಧನ್ಯವಾದಗಳು. ಲಕ್ಷಗಟ್ಟಲೆ ಜನರು ಪ್ರತಿಕ್ರಿಯಿಸಿದ್ದಾರೆ, ಅದರ ಆಧಾರದ ಮೇಲೆ ಲಕ್ನೋ ಐಪಿಎಲ್ ತಂಡಕ್ಕೆ ಹೆಸರನ್ನು ಆಯ್ಕೆ ಮಾಡಲು ನಮಗೆ ತುಂಬಾ ಸಂತೋಷವಾಗುತ್ತಿದೆ' ಎಂದು ಪ್ರಾಂಚೈಸಿಯ ಮಾಲೀಕ ಸಂಜೀವ್ ಗೋಯೆಂಕಾ ವಿಡಿಯೋ ಸಂದೇಶದಲ್ಲಿ ತಂಡದ ಹೆಸರು ಘೋಷಿಸಿದ್ದಾರೆ.

"ನಿಮ್ಮೆಲ್ಲರ ಅಭಿಪ್ರಾಯದ ಆಧಾರದಲ್ಲಿ ನಾವು ತಂಡದ ಹೆಸರನ್ನು ಲಕ್ನೋ ಸೂಪರ್ ಜೈಂಟ್ಸ್ ಎಂದು ಆಯ್ಕೆ ಮಾಡಿದ್ದೇವೆ. ನಿಮ್ಮೆಲ್ಲರ ಪ್ರತಿಕ್ರಿಯೆಗೆ ಹಾಗೂ ಪ್ರೀತಿಗೆ ತುಂಬಾ ಧನ್ಯವಾದಗಳು. ಭವಿಷ್ಯದಲ್ಲಿಯೂ ನಿಮ್ಮ ಆಶಿರ್ವಾದ ನಮ್ಮ ತಂಡದ ಮೇಲಿರಲಿ" ಎಂದು ತಂಡಕ್ಕೆ ಹೆಸರು ಸೂಚಿಸಿದವರಿಗೆ ಧನ್ಯವಾದವನ್ನು ತಿಳಿಸಿದ್ದಾರೆ. ಲಕ್ನೋ ಫ್ರಾಂಚೈಸಿ ತನ್ನ ತಂಡಕ್ಕೆ ಹೆಸರು ನಿರ್ಧರಿಸುವ ಸಲುವಾಗಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವನ್ನು ಮಾಡಿತ್ತು.

6 ಎಸೆತಗಳಲ್ಲಿ 28 ರನ್, 1 ರನ್‌ನಿಂದ ಇಂಗ್ಲೆಂಡ್‌ಗೆ ಮಣಿದ ವಿಂಡೀಸ್: ರೋಚಕ ಟಿ20 ಪಂದ್ಯಕ್ಕೆ ಸಾಕ್ಷಿಯಾದ ಕ್ರಿಕೆಟ್ ಜಗತ್ತು6 ಎಸೆತಗಳಲ್ಲಿ 28 ರನ್, 1 ರನ್‌ನಿಂದ ಇಂಗ್ಲೆಂಡ್‌ಗೆ ಮಣಿದ ವಿಂಡೀಸ್: ರೋಚಕ ಟಿ20 ಪಂದ್ಯಕ್ಕೆ ಸಾಕ್ಷಿಯಾದ ಕ್ರಿಕೆಟ್ ಜಗತ್ತು

ಇನ್ನು ಲಕ್ನೋ ಫ್ರಾಂಚೈಸಿ ಇದಕ್ಕೂ ಮುನ್ನ ತನ್ನ ತಂಡಕ್ಕೆ ಸೇರ್ಪಡೆಯಾಗುತ್ತಿರುವ ಮೂವರು ಆಟಗಾರರನ್ನು ಅಂತಿಮಗೊಳಿಸಿದೆ. ಕೆಎಲ್ ರಾಹುಲ್ ಲಕ್ನೋ ತಂಡದ ನಾಯಕನಾಗಿರಲಿದ್ದಾರೆ ಎಂದು ಕುಡ ಪ್ರಾಂಚೈಸಿ ಈಗಾಗಲೇ ಅಧಿಕೃತವಾಗಿ ಘೋಷಣೆ ಮಾಡಿದೆ. ಕೆಎಲ್ ರಾಹುಲ್ ಹೊರತುಪಡಿಸಿ ಆಸ್ಟ್ರೇಲಿಯಾದ ಆಲ್‌ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಹಾಗೂ ಭಾರತದ ಯುವ ಆಟಗಾರ ರವಿ ಬಿಷ್ಣೋಯ್ ಅವರನ್ನು ಸೇರ್ಪಡೆಗೊಳಿಸಿದೆ. ಕೆಎಲ್ ರಾಹುಲ್ ದಾಖಲೆ ಮೊತ್ತ 17 ಕೋಟಿಗೆ ಲಕ್ನೋ ತಂಡದ ಪಾಲಾದರೆ ಮಾರ್ಕಸ್ ಸ್ಟೋಯ್ನಿಸ್ 11 ಕೋಟಿ ಹಾಗೂ ರವಿ ಬಿಷ್ಣೋಯ್ 4 ಕೋಟಿಗೆ ಸೇರ್ಪಡೆಯಾಗಿದ್ದಾರೆ.

ಪಾಕ್ ಬೌಲರ್ ಶಾಹಿನ್ ಅಫ್ರಿದಿಗೆ ಗೆ ಭಾರತದ ಸೋಲಿನಿಂದ ಅನಿಸಿದ್ದೇನು? | Oneindia Kannada

Story first published: Friday, February 4, 2022, 18:35 [IST]
Other articles published on Feb 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X