ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

LSG vs KKR: ಕೊನೆಯ ಎಸೆತದಲ್ಲಿ ಲಕ್ನೋಗೆ ಒಲಿದ ವಿಜಯಲಕ್ಷ್ಮಿ; ಕೆಕೆಆರ್ ಟೂರ್ನಿಯಿಂದ ಔಟ್

IPL 2022: Lucknow Super Giants Pull Off Last Ball Thriller Against Kolkata Knight Riders, Enter Play-offs

ಲಕ್ನೋ ಸೂಪರ್ ಜೈಂಟ್ಸ್ ಆರಂಭಿಕ ಕ್ವಿಂಟನ್ ಡಿ ಕಾಕ್ ಅವರ ಅಮೋಘ ಶತಕ ಹಾಗೂ ನಾಯಕ ಕೆಎಲ್ ರಾಹುಲ್ ಅವರೊಂದಿಗಿನ ದಾಖಲೆಯ ದ್ವಿಶತಕ ಜೊತೆಯಾಟದ ಸಹಾಯದಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಕೊನೆಯ ಎಸೆತದಲ್ಲಿ ರೋಚಕವಾಗಿ ಎರಡು ರನ್‌ಗಳಿಂದ ಸೋಲಿಸಿತು. ಇದರಿಂದ ಬುಧವಾರ ನವಿ ಮುಂಬೈನಲ್ಲಿ ತಮ್ಮ ಪ್ಲೇ-ಆಫ್ ಸ್ಥಾನವನ್ನು ಭದ್ರಪಡಿಸಿಕೊಂಡ ಎರಡನೇ ತಂಡವೆನಿಸಿಕೊಂಡಿತು.

ಕ್ವಿಂಟನ್ ಡಿ ಕಾಕ್ 70 ಎಸೆತಗಳಲ್ಲಿ ಅಜೇಯ 140 ರನ್ ಗಳಿಸುವ ಮೂಲಕ ಬ್ಯಾಟಿಂಗ್ ಮಾಸ್ಟರ್‌ಕ್ಲಾಸ್ ಪ್ರದರ್ಶನ ನೀಡಿದರು ಮತ್ತು ಕೆಎಲ್ ರಾಹುಲ್ (51 ಎಸೆತಗಳಲ್ಲಿ ಔಟಾಗದೆ 68 ರನ್) ನೆರವಿನಿಂದ LSG ವಿಕೆಟ್ ನಷ್ಟವಿಲ್ಲದೆ 210 ಬೃಹತ್ ಮೊತ್ತ ಗಳಿಸಿತು. ಇದು IPL ಇತಿಹಾಸದಲ್ಲಿ ಅತ್ಯಧಿಕ ಆರಂಭಿಕ ಸ್ಟ್ಯಾಂಡ್ ಆಗಿದೆ.

8 ವಿಕೆಟ್‌ಗೆ 208 ರನ್ ಗಳಿಸಿ ವಿರೋಚಿತ ಸೋಲು

8 ವಿಕೆಟ್‌ಗೆ 208 ರನ್ ಗಳಿಸಿ ವಿರೋಚಿತ ಸೋಲು

ಇದು ಕಠಿಣ ಚೇಸ್ ಆಗಿತ್ತು ಆದರೆ ನಿತೀಶ್ ರಾಣಾ (42) ಮತ್ತು ನಾಯಕ ಶ್ರೇಯಸ್ ಅಯ್ಯರ್ (50) ಮೂಲಕ ಕೆಕೆಆರ್ ಕೊನೆಯವರೆಗೂ ಆಟವನ್ನು ಕೊಂಡೊಯ್ದರು. ಇವರು ಔಟಾದ ನಂತರ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಗೆ ಗೆಲುವಿನ ಹಾದಿಗೆ ತರುವುದು ತುಂಬಾ ದೊಡ್ಡ ಕೆಲಸವಾಗಿತ್ತು. ಕೊನೆಗೆ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 208 ರನ್ ಗಳಿಸಿ ವಿರೋಚಿತ ಸೋಲನುಭವಿಸಿತು.

ಮಧ್ಯಮ ಓವರ್‌ಗಳಲ್ಲಿ ಕೆಕೆಆರ್ ಕಥೆ ಮುಗಿತು ಎಂದುಕೊಂಡಿರುವಾಗಲೇ, ಸುನಿಲ್ ನರೈನ್ (ಔಟಾಗದೆ 21) ಮತ್ತು ರಿಂಕು ಸಿಂಗ್ (15 ಎಸೆತಗಳಲ್ಲಿ 40 ರನ್) ಡಗ್ ಔಟ್‌ನ ಭರವಸೆಯನ್ನು ಪುನರ್‌ಸ್ಥಾಪಿಸಲು ಪ್ರಯತ್ನಿಸಿದರು. ಮೈದಾನದ ಸುತ್ತಲೂ ಬೌಂಡರಿ, ಸಿಕ್ಸರ್ ಮೂಲಕ ಎಲ್‌ಎಸ್‌ಜಿ ಬೌಲರ್‌ಗಳನ್ನು ದಂಡಿಸಿದರು.

ಕೊನೆ ಎಸೆತದಲ್ಲಿ ಉಮೇಶ್ ಯಾದವ್ ಕ್ಲೀನ್ ಬೌಲ್ಡ್

ಕೊನೆ ಎಸೆತದಲ್ಲಿ ಉಮೇಶ್ ಯಾದವ್ ಕ್ಲೀನ್ ಬೌಲ್ಡ್

ಕೊನೆಯ ಎರಡು ಓವರ್‌ಗಳಲ್ಲಿ ಕೆಕೆಆರ್‌ಗೆ 38 ರನ್‌ಗಳ ಅಗತ್ಯವಿತ್ತು ಮತ್ತು ಅವರಿಬ್ಬರೂ ಅಂತಿಮ ಓವರ್‌ನಲ್ಲಿ 21 ರನ್‌ಗೆ ಇಳಿಸಿದರು. ಕೊನೆಯ ಓವರ್‌ನ ಕೊನೆಯ ಮೂರು ಎಸೆತಗಳಲ್ಲಿ ಐದು ರನ್‌ಗಳು ಬೇಕಾಗುವ ಹಾಗೆ ಮಾಡಿದರು. ಆದರೆ ಎಲ್‌ಎಸ್‌ಜಿಯನ್ನು ಮತ್ತೆ ಆಟಕ್ಕೆ ತರಲು ಎವಿನ್ ಲೆವಿಸ್‌ನಿಂದ ವಿಶೇಷವಾದ ಒನ್ ಹ್ಯಾಂಡ್ ಕ್ಯಾಚ್‌ಗೆ ರಿಂಕು ಸಿಂಗ್ ಔಟಾದರು.

ಅಂತಿಮ ಬಾಲ್‌ನಲ್ಲಿ ಮೂರು ರನ್‌ಗಳ ಅಗತ್ಯವಿದ್ದಾಗ, ಮಾರ್ಕಸ್ ಸ್ಟೊಯಿನಿಸ್ ಯಾರ್ಕರ್‌ನಲ್ಲಿ ಉಮೇಶ್ ಯಾದವ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಲಕ್ನೋ ವಿಜಯ ಸಾಧಿಸಿತು, ಅಷ್ಟೇ ಅಲ್ಲದೇ ಪ್ಲೇಆಫ್‌ಗೆ ಪ್ರವೇಶ ಪಡೆಯಿತು.ಇನ್ನು ಈ ರೋಚಕ ಸೋಲಿನಿಂದ ಕೆಕೆಆರ್ ತಂಡ ಅಧಿಕೃತವಾಗಿ ಐಪಿಎಲ್ 2022 ಸ್ಪರ್ಧೆಯಿಂದ ನಿರ್ಗಮಿಸಿತು.

ಕ್ವಿಂಟನ್ ಡಿ ಕಾಕ್ ಅವರ ಸುಂಟರಗಾಳಿ ಇನ್ನಿಂಗ್ಸ್‌

ಕ್ವಿಂಟನ್ ಡಿ ಕಾಕ್ ಅವರ ಸುಂಟರಗಾಳಿ ಇನ್ನಿಂಗ್ಸ್‌

ಇದಕ್ಕೂ ಮೊದಲು, ದಕ್ಷಿಣ ಆಫ್ರಿಕಾದ ಆಟಗಾರ ಡಿ ಕಾಕ್ ಅವರ ಸುಂಟರಗಾಳಿ ಇನ್ನಿಂಗ್ಸ್‌ನಲ್ಲಿ 10 ಸಿಕ್ಸರ್‌ಗಳು ಮತ್ತು ಬೌಂಡರಿಗಳನ್ನು ಹೊಡೆದರೆ, ನಾಯಕ ರಾಹುಲ್ ತಮ್ಮ 51 ಎಸೆತಗಳಲ್ಲಿ ನಾಲ್ಕು ಸಿಕ್ಸರ್‌ಗಳು ಮತ್ತು ಮೂರು ಬೌಂಡರಿಗಳನ್ನು ಗಳಿಸಿ ಔಟಾಗದೆ 68 ರನ್ ಗಳಿಸಿದರು. ಮೂರನೇ ಓವರ್‌ನಲ್ಲಿ ಉಮೇಶ್ ಯಾದವ್ ಎಸೆತದಲ್ಲಿ ಡಿ ಕಾಕ್ ಅವರ ಕ್ಯಾಚ್‌ನ್ನು ಅಭಿಜಿತ್ ತೋಮರ್ ಕೈಬಿಟ್ಟರು. ಈ ಋತುವಿನ ವೈಯಕ್ತಿಕ ಗರಿಷ್ಠ ಸ್ಕೋರ್ ಗಳಿಸುವ ಮೂಲಕ ಕೆಕೆಆರ್‌ಗೆ ಭಾರಿ ಹಿನ್ನಡೆ ಮಾಡಿದರು.

Umran Malik ಭಾರತಕ್ಕಿಂತ ಪಾಕಿಸ್ತಾನದಲ್ಲಿದ್ದಿದ್ರೆ ಎಂಥ ಅದೃಷ್ಟ ಒಲಿಯುತ್ತಿತ್ತು ಗೊತ್ತಾ? | Oneindia Kannada
ಸತತ ಐದನೇ ಬಾರಿ ಟೂರ್ನಿಯಲ್ಲಿ 500ಕ್ಕೂ ಹೆಚ್ಚು ರನ್

ಸತತ ಐದನೇ ಬಾರಿ ಟೂರ್ನಿಯಲ್ಲಿ 500ಕ್ಕೂ ಹೆಚ್ಚು ರನ್

ಒಂದು ಕಡೆ ಡಿ ಕಾಕ್ ಅಬ್ಬರದ ಬ್ಯಾಟಿಂಗ್ ಮೂಲಕ ಶತಕ ಗಳಿಸಿದರೆ, ಮತ್ತೊಂದು ಕಡೆ ನಾಯಕ ಕೆಎಲ್ ರಾಹುಲ್ ಜೊತೆಯಾಟಗಾರನ ಆಟದ ಸೊಬಗನ್ನು ನಿಬ್ಬೆರಗಾಗಿ ವೀಕ್ಷಿಸಿದರು. ನಾಯಕನಿಗೆ ಸ್ಲಾಗ್ ಓವರ್‌ಗಳಲ್ಲಿ ಹೆಚ್ಚಿನ ಕೆಲಸವಿರಲಿಲ್ಲ, ಆದರೆ ಅವರು ಋತುವಿನ ಮೂರನೇ ಅರ್ಧಶತಕವನ್ನು ಕೆಲವು ಅದ್ಭುತ ಸ್ಟ್ರೋಕ್‌ಗಳನ್ನು ಆಡಿದರು.

ರಾಹುಲ್ ಸತತ ಐದನೇ ಋತುವಿನ ಟೂರ್ನಿಯಲ್ಲಿ 500ಕ್ಕೂ ಹೆಚ್ಚು ರನ್ ಪೂರೈಸಿದರು. ಕೆಕೆಆರ್ ಬೌಲರ್‌ಗಳು ಕೊನೆಯ ಐದು ಓವರ್‌ಗಳಲ್ಲಿ 88 ರನ್‌ಗಳನ್ನು ಬಿಟ್ಟುಕೊಟ್ಟರು. ಟೀಮ್ ಸೌಥಿ ಮತ್ತು ಆಂಡ್ರೆ ರಸೆಲ್ ಅತ್ಯಂತ ದುಬಾರಿ ಬೌಲರ್‌ಗಳಾದರು.

Story first published: Thursday, May 19, 2022, 19:06 [IST]
Other articles published on May 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X