ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: RCB vs GT: ನಿರ್ಣಾಯಕ ಪಂದ್ಯದಲ್ಲಿ ಮಹತ್ವದ ದಾಖಲೆ ಮೇಲೆ ಕಣ್ಣಿಟ್ಟ ಕೊಹ್ಲಿ, ಹಾರ್ದಿಕ್, ಮ್ಯಾಕ್ಸ್‌ವೆಲ್

IPL 2022: match 67, RCB vs GT: players records and approaching milestones

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುರುವಾರ ಮಹತ್ವದ ತನ್ನ ಲೀಗ್ ಹಂತದ ಅಂತಿಮ ಪಂದ್ಯವನ್ನು ಆಡಲಿದೆ. ಈ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡ ಆರ್‌ಸಿಬಿಗೆ ಮುಖಾಮುಖಿಯಾಗಿದ್ದು ಜಿಟಿಗೂ ಇದು ಲೀಗ್ ಹಂತದ ಕೊನೆಯ ಪಂದ್ಯ. ಆದರೆ ಪ್ಲೇಆಫ್ ಹಂತಕ್ಕೆ ಈಗಾಗಲೇ ಅರ್ಹತೆಯನ್ನು ಗಳಿಸಿಕೊಂಡಿರುವ ಗುಜರಾತ್ ಟೈಟನ್ಸ್ ತಂಡಕ್ಕಿಂತ ಆರ್‌ಸಿಬಿ ತಂಡಕ್ಕೆ ಈ ಪಂದ್ಯ ಅತ್ಯಂತ ಮಹತ್ವದ ಪಂದ್ಯವಾಗಿದ್ದು ಇಲ್ಲಿ ಗೆಲುವು ಸಾಧಿಸಿದರೆ ಮಾತ್ರವೇ ಮುಂದಿನ ಹಂತಕ್ಕೇರುವ ಅವಕಾಶ ದೊರೆಯಲಿದೆ.

ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಹಾಗೂ ಜಿಟಿ ತಂಡಗಳು ಈಗಾಗಲೇ ಒಂದು ಬಾರಿ ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡ 6 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಇನ್ನು ಆರ್‌ಸಿಬಿ ತಂಡ ಅಂಕಪಟ್ಟಿಯಲ್ಲಿ ಪ್ರಸ್ತುತ ಐದನೇ ಸ್ಥಾನದಲ್ಲಿದ್ದು ಜಿಟಿ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ.

ಡೋಪಿಂಗ್ ಉಲ್ಲಂಘನೆ; ಐಸಿಸಿಯಿಂದ 9 ತಿಂಗಳು ಅಮಾನತಾದ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ಡೋಪಿಂಗ್ ಉಲ್ಲಂಘನೆ; ಐಸಿಸಿಯಿಂದ 9 ತಿಂಗಳು ಅಮಾನತಾದ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್

ಇನ್ನು ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ತಂಡದ ಆಟಗಾರರು ಕೆಲ ಮೈಲುಗಲ್ಲುಗಳನ್ನು ಸಾಧಿಸುವ ಅವಕಾಶ ಹೊಂದಿದ್ದಾರೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

* ಆರ್‌ಸಿಬಿ ತಂಡದ ಅನುಭವಿ ಆಟಗಾರ ವಿರಾಟ್ ಕೋಹ್ಲಿ ರಾಯಲ್ ಚಾಲೆಂಜರ್ಸ್ ಪರವಾಗಿ 7000 ರನ್ ಪೂರ್ಣಗೊಳಿಸುವ ಅವಕಾಶ ಹೊಂದಿದ್ದಾರೆ. ಇದಕ್ಕಾಗಿ ಈ ಪಂದ್ಯದಲ್ಲಿ ಕೊಹ್ಲಿ 57 ರನ್ ಗಳಿಸಬೇಕಿದೆ.

* ಆರ್‌ಸಿಬಿ ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್‌ಗೆ ಬೆಂಗಳೂರು ತಂಡದ ಪರವಾಗಿ 50 ವಿಕೆಟ್‌ಗಳನ್ನು ಪೂರೈಸಲು ಇನ್ನು 2 ವಿಕೆಟ್‌ಗಳ ಅಗತ್ಯವಿದೆ. ಈ ಮೂಲಕ ಈ ಸಾಧನೆ ಮಾಡಿದ ನಾಲ್ಕನೇ ಬೌಲರ್ ಎನಿಸಿಕೊಳ್ಳಲಿದ್ದಾರೆ. ಇದಕ್ಕೂ ಮುನ್ನ ಆರ್ ವಿನಯ್ ಕುಮಾರ್, ಯುಜ್ವೇಂದ್ರ ಚಹಾಲ್ ಮತ್ತು ಹರ್ಷಲ್ ಪಟೇಲ್ ಆರ್‌ಸಿಬಿ ಪರವಾಗಿ ಈ ಸಾಧನೆ ಮಾಡಿದ್ದಾರೆ.

* ಆರ್‌ಸಿಬಿಯ ಆಸ್ಟ್ರೇಲಿಯಾದ ವೇಗಿ ಜೋಶ್ ಹ್ಯಾಜಲ್‌ವುಡ್‌ ಒಟ್ಟಾರೆ ಟಿ20 ಮಾದರಿಯಲ್ಲಿ 100 ವಿಕೆಟ್‌ಗಳನ್ನು ಪೂರೈಸಲು ಇನ್ನೂ 1 ವಿಕೆಟ್ ಅಗತ್ಯವಿದೆ.

* RCB ಆಲ್‌ರೌಂಡರ್ ಹರ್ಷಲ್ ಪಟೇಲ್‌ಗೆ T20 ಕ್ರಿಕೆಟ್‌ನಲ್ಲಿ 1000 ರನ್ ಪೂರ್ಣಗೊಳಿಸಲು 8 ರನ್‌ಗಳನ್ನು ಗಳಿಸಬೇಕಿದೆ.

* ಐಪಿಎಲ್‌ನಲ್ಲಿ 50 ಸಿಕ್ಸರ್‌ಗಳನ್ನು ಪೂರ್ಣಗೊಳಿಸಲು ಜಿಟಿ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಇನ್ನೂ 5 ಸಿಕ್ಸರ್‌ಗಳನ್ನು ಬಾರಿಸಬೇಕಿದೆ.

* ಆರ್‌ಸಿಬಿ ತಂಡದ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್ ಐಪಿಎಲ್‌ನಲ್ಲಿ 200 ಬೌಂಡರಿಗಳನ್ನು ಪೂರೈಸುವ ಅವಕಾಶ ಹೊಂದಿದ್ದಾರೆ. ಇದಕ್ಕಾಗಿ ಜಿಟಿ ವಿರುದ್ಧಧ ಪಂದ್ಯದಲ್ಲಿ ಅವರು 9 ಬೌಂಡರಿಗಳನ್ನು ಬಾರಿಸಬೇಕಿದೆ.
* ಗುಜರಾತ್ ಟೈಟನ್ಸ್ ತಂಡದ ನಾಯಕ ಮತ್ತು ವೇಗಿ ಹಾರ್ದಿಕ್ ಪಾಂಡ್ಯ ಐಪಿಎಲ್‌ನಲ್ಲಿ 50 ವಿಕೆಟ್‌ಗಳನ್ನು ಪೂರೈಸಲು ಇನ್ನು 4 ವಿಕೆಟ್‌ಗಳನ್ನು ಕಬಳಿಸಬೇಕಿದೆ.

* ಜಿಟಿ ವೇಗಿ ಮೊಹಮ್ಮದ್ ಶಮಿ ಐಪಿಎಲ್‌ನಲ್ಲಿ 100 ವಿಕೆಟ್ ಗಳಿಸಿದ ಆಟಗಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಇನ್ನು ಕೇವಲ 3 ವಿಕೆಟ್‌ಗಳ ಅಗತ್ಯವಿದೆ.

IPL 2022: MI vs SRH ಪಂದ್ಯದ ನಂತರ ಪಾಯಿಂಟ್ಸ್ ಟೇಬಲ್; ಆರ್‌ಸಿಬಿ ಫ್ಯಾನ್ಸ್‌ಗೆ ನಿರಾಸೆIPL 2022: MI vs SRH ಪಂದ್ಯದ ನಂತರ ಪಾಯಿಂಟ್ಸ್ ಟೇಬಲ್; ಆರ್‌ಸಿಬಿ ಫ್ಯಾನ್ಸ್‌ಗೆ ನಿರಾಸೆ

* ಗುಜರಾತ್ ತಂಡದ ಬ್ಯಾಟರ್ ಡೇವಿಡ್ ಮಿಲ್ಲರ್ ಈ ಐಪಿಎಲ್ ಟೂರ್ನಿಯಲ್ಲಿ 350 ರನ್ ಪೂರ್ಣಗೊಳಿಸಲು ಇನ್ನೂ 3 ರನ್ ಅಗತ್ಯವಿದೆ. ಆರು ಆವೃತ್ತಿಗಳ ನಂತರ ಈ ಮೈಲಿಗಲ್ಲನ್ನು ದಾಟಲಿದ್ದಾರೆ ಮಿಲ್ಲರ್. ಐಪಿಎಲ್ 2015ರಲ್ಲಿ ಪಂಜಾಬ್ ಕಿಂಗ್ಸ್ ಪರ ಕೊನೆಯ ಬಾರಿ 350ಕ್ಕೂ ಹೆಚ್ಚು ರನ್ ಗಳಿಸಿದ್ದರು. ಈ ಬಾರಿಯ ಆವೃತ್ತಿ ಈವರೆಗಿನ ಪಂದ್ಯಗಳಲ್ಲಿ ಮಿಲ್ಲರ್ 57ರ ಸರಾಸರಿಯಲ್ಲಿ 347 ರನ್‌ಗಳನ್ನು ಗಳಿಸಿದ್ದು 136ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ. ಇದರಲ್ಲಿ ಒಂದು ಅರ್ಧಶತಕವನ್ನು ಗಳಿಸಿದ್ದಾರೆ.

* ಜಿಟಿ ವೇಗಿ ಅಲ್ಜಾರಿ ಜೋಸೆಫ್ ಒಟ್ಟಾರೆ ಟಿ20 ಪಂದ್ಯಗಳಲ್ಲಿ 50 ವಿಕೆಟ್‌ಗಳನ್ನು ಪೂರೈಸಲು ಇನ್ನೂ 2 ವಿಕೆಟ್‌ಗಳ ಅಗತ್ಯವಿದೆ.

Story first published: Thursday, May 19, 2022, 10:05 [IST]
Other articles published on May 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X