ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: CSK vs RR: ಪ್ರಮುಖ ಮೈಲಿಗಲ್ಲುಗಳ ಮೇಲೆ ಧೋನಿ, ಬಟ್ಲರ್, ಸಂಜು, ಅಶ್ವಿನ್ ಕಣ್ಣು!

IPL 2022: match 68, CSK vs RR: players records and approaching milestones

ಇಂಡಿಯನ್ ಪ್ರೀಮಿಯರ್ ಲೀಗ್‌ನ 15ನೇ ಆವೃತ್ತಿಯ 68ನೇ ಪಂದ್ಯ ಶುಕ್ರವಾರ ನಡೆಯಲಿದೆ. ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಮಡಗಳು ಮುಖಾಮುಖಿಯಾಗಲಿದೆ. ಪ್ಲೇಆಫ್ ಹಂತಕ್ಕೆ ಟಿಕೆಟ್ ಖಚಿತಪಡಿಸಿಕೊಳ್ಳಬೇಕಾದರೆ ರಾಜಸ್ಥಾನ್ ರಾಯಲ್ಸ್ ತಂಡ ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಬೇಕಿದೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಕಾರಣ ಯಾವುದೇ ಒತ್ತಡವಿಲ್ಲದೆ ಆಡುವ ಅವಕಾಶವಿದೆ.

ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಈವರೆಗೆ 25 ಬಾರಿ ಮುಖಾಮುಖಿಯಾಗಿದ್ದು ಇದರಲ್ಲಿ 15 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಸಿಎಸ್‌ಕೆ ಮೇಲುಗೈ ಸಾಧಿಸಿದೆ. ಆರ್‌ಆರ್ 10 ಪಂದ್ಯಗಳಲ್ಲಿ ಮಾತ್ರ ಗೆದ್ದಿದೆ.

IPL 2022ರ ಪ್ಲೇಆಫ್ ಅರ್ಹತೆ ಸನ್ನಿವೇಶ ಹೇಗಿದೆ?; DC ವಿರುದ್ಧ MI ಗೆಲ್ಲಲು RCB ಅಭಿಮಾನಿಗಳ ಪ್ರಾರ್ಥನೆIPL 2022ರ ಪ್ಲೇಆಫ್ ಅರ್ಹತೆ ಸನ್ನಿವೇಶ ಹೇಗಿದೆ?; DC ವಿರುದ್ಧ MI ಗೆಲ್ಲಲು RCB ಅಭಿಮಾನಿಗಳ ಪ್ರಾರ್ಥನೆ

ಇನ್ನು ಇಂದು ನಡೆಯಲಿರುವ ಈ ಎರಡು ತಂಡಗಳ ಮುಖಾಮುಖಿ ಎರಡು ತಂಡಗಳಿಗೂ ಲೀಗ್ ಹಂತದ ಅಂತಿಮ ಪಂದ್ಯವಾಗಿದೆ. ಅದರಲ್ಲೂ ಸಿಎಸ್‌ಕೆಗೆ ಈ ಆವೃತ್ತಿ ಈ ಪಂದ್ಯದೊಂದಿಗೆ ಅಂತ್ಯವಾಗಲಿದೆ. ಈ ಸೆಣೆಸಾಟದಲ್ಲಿ ಎರಡು ತಂಡಗಳ ಕೆಲ ಆಟಗಾರರು ಮೈಲಿಗಲ್ಲು ಸಾಧಿಸುವ ಅವಕಾಶ ಹೊಂದಿದ್ದಾರೆ.

* ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಆರ್‌ಆರ್ ಪರವಾಗಿ 3000 ರನ್ ಪೂರ್ಣಗೊಳಿಸುವ ಅವಕಾಶವಿದೆ. ಆದರೆ ಅದಕ್ಕಾಗಿ ಈ ಪಂದ್ಯದಲ್ಲಿ ಸಂಜು 58 ರನ್‌ಗಳನ್ನು ಗಳಿಸಬೇಕಿದೆ. ಆರ್‌ಆರ್ ಪರವಾಗಿ ಅಜಿಂಕ್ಯ ರಹಾನೆ ಮಾತ್ರವೇ ಈ ಮೈಲಿಗಲ್ಲು ತಲುಪಿದ್ದು ಈ ಸಾಧನೆ ಮಾಡಿದ ಎರಡನೇ ಬ್ಯಾಟ್ಸ್‌ಮನ್ ಸಂಜು ಎನಿಸಿಕೊಳ್ಳಲಿದ್ದಾರೆ.

* ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಜೋಸ್ ಬಟ್ಲರ್ ಟಿ20 ಕ್ರಿಕೆಟ್‌ನಲ್ಲಿ 350 ಬೌಂಡರಿ ಗಳಿಸಿದ ಆಟಗಾರರ ಪಟ್ಟಿಗೆ ಸೇರ್ಪಡೆಯಾಗುವ ಅವಕಾಶವಿದೆ. ಅದಕ್ಕಾಗಿ ಈ ಪಂದ್ಯದಲ್ಲಿ ಬಟ್ಲರ್ 4 ಬೌಂಡರಿಗಳನ್ನು ಸಿಡಿಸಬೇಕಿದೆ.

* ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಜೋಸ್ ಬಟ್ಲರ್ ಟಿ20 ಮಾದರಿಯಲ್ಲಿ 8000 ರನ್‌ಗಳಿಸಿದ ಆಟಗಾರ ಎನಿಸಿಕೊಳ್ಳುವ ಅವಕಾಶವಿದೆ. ಈ ಸಾಧನೆಗೆ 38 ರನ್ ಗಳಿಸುವ ಅಗತ್ಯವಿದೆ.

ಕಿಂಗ್ ಇಸ್ ಬ್ಯಾಕ್: ಫಾರ್ಮ್‌ಗೆ ಮರಳಿದ ವಿರಾಟ್ ಕೊಹ್ಲಿ; ಟ್ವಿಟ್ಟರ್‌ನಲ್ಲಿ ಶ್ಲಾಘಿಸಿದ ಮಾಜಿ ಆಟಗಾರರುಕಿಂಗ್ ಇಸ್ ಬ್ಯಾಕ್: ಫಾರ್ಮ್‌ಗೆ ಮರಳಿದ ವಿರಾಟ್ ಕೊಹ್ಲಿ; ಟ್ವಿಟ್ಟರ್‌ನಲ್ಲಿ ಶ್ಲಾಘಿಸಿದ ಮಾಜಿ ಆಟಗಾರರು

* ರಾಜಸ್ಥಾನ್ ರಾಯಲ್ಸ್ ತಂಡದ ಅನುಭವಿ ಆಟಗಾರ ಆರ್ ಅಶ್ವಿನ್ ಸಿಎಸ್‌ಕೆ ವಿರುದ್ಧಧ ಪಂದ್ಯದಲ್ಲಿ ಒಂದು ಬೌಂಡರಿ ಗಳಿಸಿದರೆ ಐಪಿಎಲ್‌ನಲ್ಲಿ ಅಶ್ವಿನ್ ಅವರ 50ನೇ ಬೌಂಡರಿ ಸಿಡಿಸಿದಂತಾಗುತ್ತದೆ

* ಐಪಿಎಲ್‌ನಲ್ಲಿ 5000 ರನ್ ಪೂರೈಸಲು ಸಿಎಸ್‌ಕೆ ನಾಯಕ ಎಂಎಸ್ ಧೋನಿಗೆ ಇನ್ನೂ 48 ರನ್‌ಗಳ ಅಗತ್ಯವಿದೆ

* ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಐಪಿಎಲ್‌ನಲ್ಲಿ 350 ಬೌಂಡರಿಗಳನ್ನು ಗಳಿಸಿದ ಆಟಗಾರ ಎನಿಸುವ ಅವಕಾಶವಿದೆ. ಇದಕ್ಕಾಗಿ ಈ ಪಂದ್ಯದಲ್ಲಿ 5 ಬೌಂಡರಿಗಳನ್ನು ಧೋನಿ ಸಿಡಿಸಬೇಕಿದೆ.

* ಐಪಿಎಲ್‌ನಲ್ಲಿ 350 ಬೌಂಡರಿಗಳ ಗಡಿ ತಲುಪಲು ಸಿಎಸ್‌ಕೆ ಅನುಭವಿ ಬ್ಯಾಟರ್ ಅಂಬಾಟಿ ರಾಯುಡುಗೆ ಇನ್ನೂ 1 ಬೌಂಡರಿಯ ಅಗತ್ಯವಿದೆ.

* ಚೆನ್ನೈ ಸೂಪರ್ ಕಿಂಗ್ಸ್ ತಂಟದ ಆಟಗಾರ ರಾಬಿನ್ ಉತ್ತಪ್ಪ ಐಪಿಎಲ್‌ನಲ್ಲಿ 5000 ರನ್‌ ಗಳಿಸಿದ ಆಟಗಾರರ ಪಟ್ಟಿಗೆ ಸೇರ್ಪಡೆಯಾಗುವ ಅವಕಾಶವಿದೆ. ಇದಕ್ಕಾಗಿ ಉತ್ತಪ್ಪ ಇಂದಿನ ಪಂದ್ಯದಲ್ಲಿ 48 ರನ್‌ಗಳನ್ನು ಗಳಿಸುವ ಅವಶ್ಯಕತೆಯಿದೆ.

ರೋಹಿತ್ ಶರ್ಮಾ ನೀಡಿದ ಈ ಹೇಳಿಕೆಯಿಂದ ರೊಚ್ಚಿಗೆದ್ದ RCB ಅಭಿಮಾನಿಗಳು | Oneindia Kannada

* ರಾಜಸ್ಥಾನ್ ರಾಯಲ್ಸ್ ತಂಡದ ಸ್ಪಿನ್ನರ್ ಆರ್ ಅಶ್ವಿನ್ ವಿಕೆಟ್ ಟೇಕರ್‌ಗಳ ಪಟ್ಟಿಯಲ್ಲಿ ಪಿಯೂಷ್ ಚಾವ್ಲಾ ಅವರನ್ನು ಹಿಂದಿಕ್ಕಲು ಇನ್ನೂ 3 ವಿಕೆಟ್‌ಗಳ ಅಗತ್ಯವಿದೆ. ಅಶ್ವಿನ್ 155 ವಿಕೆಟ್‌ಗಳನ್ನು ಹೊಂದಿದ್ದು ಚಾವ್ಲಾ 157 ವಿಕೆಟ್‌ಗಳನ್ನು ಗಳಿಸಿದ್ದಾರೆ.
* ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಅಮಿತ್ ಮಿಶ್ರಾ ಅವರನ್ನು ಹಿಂದಿಕ್ಕಲು ಆರ್‌ಆರ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್‌ಗೆ ಉತ್ತಮ ಅವಕಾಶವಿದೆ. ಇದಕ್ಕಾಗಿ ಚಾಹಲ್ ಈ ಪಂದ್ಯದಲ್ಲಿ 4 ವಿಕೆಟ್‌ಗಳನ್ನು ಪಡೆಯಬೇಕಿದೆ. ಐಪಿಎಲ್‌ನಲ್ಲಿ ಚಹಾಲ್ 163 ಮತ್ತು ಮಿಶ್ರಾ 166 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ.

Story first published: Friday, May 20, 2022, 13:14 [IST]
Other articles published on May 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X