ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2022: ಮೆಗಾ ಆಕ್ಷನ್ ಎಲ್ಲಿ? ಯಾವಾಗ?: ಅಧಿಕೃತ ಮಾಹಿತಿ ನೀಡಿದ ಐಪಿಎಲ್ ಆಡಳಿತ ಮಂಡಳಿ

IPL 2022: Mega Auction in Bengaluru date also announced: IPL Governing Council confirms

ಐಪಿಎಲ್ 2022ರ ಆವೃತ್ತಿಗೂ ಮುನ್ನ ಮಹಾ ಹರಾಜು ಪ್ರಕ್ರಿಯೆ ನಡೆಯಲಿದ್ದು ಈ ಪ್ರಕ್ರಿಯೆ ಬಗ್ಗೆ ಐಪಿಎಲ್‌ನ ಆಡಳಿತ ಮಂಡಳಿ ಇಂದು ಮಹತ್ವದ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿದೆ. ಈ ಬಾರಿಯ ಐಪಿಎಲ್ ಮಹಾ ಹರಾಜು ಎಲ್ಲಿ ಹಾಗೂ ಯಾವಾಗ ನಡೆಯಲಿದೆ ಎಂಬ ಬಗ್ಗೆ ಸಾಕಷ್ಟು ಗೊಂದಲಗಳು ಇತ್ತು. ಈ ಎಲ್ಲಾ ಗೊಂದಲಗಳಿಗೆ ಐಪಿಎಲ್ ಆಟಳಿತ ಮಂಡಳಿ ತೆರೆ ಎಳೆದಿದೆ.

15ನೇ ಆವೃತ್ತಿಯ ಐಪಿಎಲ್‌ಗೂ ಮುನ್ನ ನಡೆಯುವ ಮಹಾ ಹರಾಜು ಪ್ರಕ್ರಿಯೆ ಈಗಾಗಲೇ ವರದಿಯಾಗಿರುವಂತೆ ಬೆಂಗಳೂರಿನಲ್ಲಿಯೇ ನಡೆಸಲು ನಿರ್ಧರಿಸಲಾಗಿದೆ. ಫೆಬ್ರವರಿ ತಿಂಗಳ 12 ಹಾಗೂ 13ನೇ ತಾರೀಕಿನಂದು ಈ ಮಹಾ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಬಗ್ಗೆ ಸ್ವತಃ ಐಪಿಎಲ್‌ನ ಆಡಳಿತ ಮಂಡಳಿ ಮಾಹಿತಿ ನೀಡಿದೆ.

ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ

ಇನ್ನು ಮುಂಬರುವ ಐಪಿಎಲ್ ಆವೃತ್ತಿಗೆ ಹೊಸ ಎರಡು ಫ್ರಾಂಚೈಸಿಗಳು ಸಸೇರ್ಪಡೆಯಾಗುತ್ತಿದೆ. ಹೀಗಾಗಿ ಟೂರ್ನಿಯಲ್ಲಿ ಭಾಗಿಯಾಗುವ ತಂಡಗಳ ಸಂಖ್ಯೆ 10ಕ್ಕೆ ಏರಿಕೆಯಾಗಲಿದೆ. ಲಕ್ನೋ ಫ್ರಾಂಚೈಸಿಯನ್ನು ಆರ್‌ಪಿಎಸ್‌ಜಿ ಗ್ರೂಪ್ 7090 ಕೋಟಿ ರೂಪಾಯಿಗೆ ಖರೀದಿಸಿದರೆ ಸಿವಿಸಿ ಕ್ಯಾಪಿಟಲ್ ಅಹ್ಮದಾಬಾದ್ ಫ್ರಾಂಚೈಸಿಯನ್ನು 5,625 ಕೋಟಿ ರೂಪಾಯಿಗೆ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಸದ್ಯ ಈ ಎರಡು ತಂಡಗಳು ಕೂಡ ಹರಾಜು ಪ್ರಕ್ರಿಯೆಗೆ ಮುನ್ನ ತಲಾ ಮೂವರು ಆಟಗಾರರನ್ನು ತಂಡಕ್ಕೆ ಸೇರ್ಪಡೆಗೊಳಿಸಲು ಅವಕಾಶವನ್ನು ಹೊಂದಿದ್ದು ಈ ಬಗ್ಗೆ ಎರಡು ಹಿಸ ಫ್ರಾಂಚೈಸಿಗಳು ಈಗಾಗಲೇ ಕಾರ್ಯನಿರತವಾಗಿದೆ. ಇನ್ನು ಉಳಿದ 8 ಫ್ರಾಂಚೈಸಿಗಳು ಹಿಂದಿನ ಆವೃತ್ತಿಯಲ್ಲಿದ್ದ ಆಟಗಾರರ ಪೈಕಿ ಗರಿಷ್ಠ ನಾಲ್ವರು ಆಟಗಾರನ್ನು ಉಳಿಸಿಕೊಳ್ಳುವ ಅವಕಾಶವನ್ನು ನೀಡಲಾಗಿತ್ತು. ಉಳಿದ ಆಟಗಾರರು ಹರಾಜು ಪಟ್ಟಿಗೆ ಬಿಡುಗಡೆಯಾಗಿದ್ದರು. ಹೀಗೆ ಬಿಡುಗಡೆಯಾದ ಆಟಗಾರರ ಪೈಕಿ ತಲಾ ಮೂರು ಆಟಗಾರರನ್ನು ಎರಡು ತಂಡಗಳು ಹರಾಜಿಗೆ ಮುನ್ನವೇ ಫ್ರಾಂಚೈಸಿಗೆ ಸೇರಿಸಿಕೊಳ್ಳುವ ಅವಕಾಶ ನೀಡಲಾಗಿದೆ.

ಐಪಿಎಲ್ ಆಯೋಜನೆಯ ತಾಣದ ಬಗ್ಗೆ ನಿರ್ಧಾರವಾಗಿಲ್ಲ: ಇನ್ನು ಮಂಗಳವಾರ ಐಪಿಎಲ್ ಆಡಳಿತ ಮಂಡಳಿಯ ಸಭೆ ನಡೆದಿದ್ದು ಈ ಸಭೆಯಲ್ಲಿ ಈ ಬಾರಿಯ ಐಪಿಎಲ್ ಟೂರ್ನಿ ನಡೆಸುವ ತಾಣಗಳ ಬಗ್ಗೆ ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎನ್ನಲಾಗಿದೆ. ದೇಶದಲ್ಲಿ ಕೊರೊನಾವೈರಸ್‌ನ ಮೂರನೇ ಅಲೆ ಈಗಾಗಲೇ ಆರಂಭವಾಗಿದ್ದು ಈ ಹಿನ್ನೆಲೆಯಲ್ಲಿ ಮಾರ್ಚ್ ತಿಂಗಳಲ್ಲಿ ಮತ್ತೊಮ್ಮೆ ಆಡಳಿತ ಮಂಡಳಿ ಸಭೆ ಸೇರಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಈಗಿನ ಮಾಹಿತಿಯ ಪ್ರಕಾರ ಮಹಾರಾಷ್ಟ್ರದಲ್ಲಿಯೇ ಸಂಪೂರ್ಣ ಐಪಿಎಲ್ ಆಯೋಜಿಸುವ ಬಗ್ಗೆ ಬಿಸಿಸಿಐ ಒಲವು ಹೊಂದಿದೆ ಎನ್ನಲಾಗಿದೆ. ಆದರೆ ಮುಂದಿನ ದಿನಗಳಲ್ಲಿ ದೇಶದಲ್ಲಿ ಕೋವಿಡ್ ಪರಿಸ್ಥಿತಿಯನ್ನು ಅವಲೋಕಿಸಿದ ಬಳಿಕ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಬಾಂಗ್ಲಾ ವಿರುದ್ಧ ಸೇಡು ತೀರಿಸಿಕೊಂಡ ನ್ಯೂಜಿಲೆಂಡ್: ಇನ್ನಿಂಗ್ಸ್ ಸೇರಿದಂತೆ 117 ರನ್‌ಗಳ ಬೃಹತ್ ಗೆಲುವುಬಾಂಗ್ಲಾ ವಿರುದ್ಧ ಸೇಡು ತೀರಿಸಿಕೊಂಡ ನ್ಯೂಜಿಲೆಂಡ್: ಇನ್ನಿಂಗ್ಸ್ ಸೇರಿದಂತೆ 117 ರನ್‌ಗಳ ಬೃಹತ್ ಗೆಲುವು

IPL ನಿಂದ‌ ಚೀನಾ ಕಂಪನಿ ವಿವೋ ಗೆ ಗೇಟ್ ಪಾಸ್:ಇನ್ಮುಂದೆ Tata IPL | Oneindia Kannada

ಟೈಟಲ್ ಸ್ಪಾನ್ಸರ್ ಟಾಟಾ ಗ್ರೂಫ್ ತೆಕ್ಕೆಗೆ: ಇನ್ನು 2022ರ ಆವೃತ್ತಿಯಿಂದ ಐಪಿಎಲ್ ಟೈಟಲ್ ಸ್ಪಾನ್ಸರ್‌ಶಿಪ್ ಟಾಟಾ ಗ್ರೂಫ್ ಪಾಲಾಗಿದೆ ಎಂದು ಐಪಿಎಲ್ ಮುಖ್ಯಸ್ಥ ಬ್ರಿಜೇಶ್ ಪಟೇಲ್ ತಿಳಿಸಿದ್ದಾರೆ. ಗವರ್ನಿಂಗ್ ಕೌನ್ಸಿಂಗ್ ಸಭೆ ಮುಕ್ತಾಯದ ಬಳಿಕ ಬ್ರಿಜೇಶ್ ಪಟೇಲ್ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಕಳೆದ ಆವೃತ್ತಿಯವರೆಗೆ ಈ ಟೈಟಲ್ ಸ್ಪಾನ್ಸರ್‌ಶಿಪ್ ಚೀನಾ ಮೂಲದ ಕಂಪನಿಯಾದ ವಿವೋ ಬಳಿಯಿತ್ತು.

Story first published: Wednesday, January 12, 2022, 10:42 [IST]
Other articles published on Jan 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X