IPL 2022 ರಿಟೆನ್ಷನ್: ಮುಂಬೈ ತಂಡದಿಂದ ಸ್ಟಾರ್ ಆಟಗಾರ ಔಟ್; ಈ 4 ಆಟಗಾರರು ಸೇಫ್

ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮುವುದರ ಮೂಲಕ ಐದನೇ ಬಾರಿಗೆ ಚಾಂಪಿಯನ್ ಆಗಿ ಬೀಗಿದ್ದ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಈ ಬಾರಿ ನಡೆದ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡುವುದರ ಮೂಲಕ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿತ್ತು. ಈ ಮೂಲಕ ಪ್ಲೇ ಆಫ್ ಸುತ್ತಿಗೂ ಪ್ರವೇಶ ಪಡೆದುಕೊಳ್ಳಲಾಗದೇ ಮಂಕಾಗಿದ್ದ ಮುಂಬೈ ಇಂಡಿಯನ್ಸ್ ತಂಡದ ಕಳಪೆ ಪ್ರದರ್ಶನಕ್ಕೆ ತಂಡದ ಸ್ಟಾರ್ ಆಟಗಾರರು ಕೂಡ ಕಾರಣಕರ್ತರಾಗಿದ್ದರು.

ಕೆಎಲ್ ರಾಹುಲ್‌ ಅಲಭ್ಯತೆ ಕುರಿತು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದ ಅಜಿಂಕ್ಯಾ ರಹಾನೆಕೆಎಲ್ ರಾಹುಲ್‌ ಅಲಭ್ಯತೆ ಕುರಿತು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದ ಅಜಿಂಕ್ಯಾ ರಹಾನೆ

ಇನ್ನು ಮುಂದಿನ ವರ್ಷ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 2 ಹೊಸ ತಂಡಗಳು ಸೇರ್ಪಡೆಯಾಗುತ್ತಿದ್ದು ಇದಕ್ಕೂ ಮುನ್ನ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಹೌದು, ಮುಂದಿನ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 10 ತಂಡಗಳು ಕಣಕ್ಕಿಳಿಯಲಿದ್ದು, ಇದಕ್ಕೂ ಮುಂಚೆ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಹೀಗಾಗಿ ಅಸ್ತಿತ್ವದಲ್ಲಿರುವ ತಂಡಗಳು 4 ಆಟಗಾರರನ್ನು ಉಳಿಸಿಕೊಂಡು ಉಳಿದ ತಂಡದ ಎಲ್ಲ ಆಟಗಾರರನ್ನು ಹರಾಜಿಗೆ ಕಳುಹಿಸಬೇಕಾಗಿದೆ. ಈಗಾಗಲೇ ಅಸ್ತಿತ್ವದಲ್ಲಿರುವ ತಂಡಗಳು ಯಾವ ಆಟಗಾರರನ್ನು ಉಳಿಸಿಕೊಂಡು ಯಾವ ಆಟಗಾರರನ್ನು ತಂಡದಿಂದ ಮೆಗಾ ಹರಾಜಿಗೆ ಬಿಡಲಿವೆ ಎಂಬ ಲೆಕ್ಕಾಚಾರಗಳು ಆರಂಭವಾಗಿವೆ.

ಮುಂಬರುವ ಐಪಿಎಲ್ ಟೂರ್ನಿ ಆರಂಭವಾಗುವ ಮುನ್ನ ನಡೆಯಲಿರುವ ಆಟಗಾರರ ಹರಾಜು ಪ್ರಕ್ರಿಯೆ ಕ್ರಿಕೆಟ್ ಪ್ರೇಕ್ಷಕರಲ್ಲಿ ಕುತೂಹಲವನ್ನು ಹುಟ್ಟು ಹಾಕಿದ್ದರೆ, ಫ್ರಾಂಚೈಸಿ ಮಾಲೀಕರಲ್ಲಿ ಯಾವ ಆಟಗಾರರನ್ನು ಉಳಿಸಿಕೊಳ್ಳಬೇಕು ಮತ್ತು ಯಾವ ಆಟಗಾರರನ್ನು ತಂಡದಿಂದ ಹೊರ ಹಾಕಬೇಕು ಎನ್ನುವ ತಲೆನೋವು ಶುರುವಾಗಿದೆ. ಅದರಲ್ಲಿಯೂ ಹಲವಾರು ವರ್ಷಗಳಿಂದ ಆಟಗಾರರನ್ನು ಹೆಚ್ಚು ಬದಲಾಯಿಸದೇ ಇರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳಿಗೆ ಇದು ತುಸು ಹೆಚ್ಚಿನ ತಲೆನೋವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು.

ಭಾರತ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯಬಹುದಾದ ಬಲಿಷ್ಠ ನ್ಯೂಜಿಲೆಂಡ್‌ ತಂಡಭಾರತ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯಬಹುದಾದ ಬಲಿಷ್ಠ ನ್ಯೂಜಿಲೆಂಡ್‌ ತಂಡ

ಹೌದು, ಮುಂಬೈ ಇಂಡಿಯನ್ಸ್ ತಂಡ ಹಲವಾರು ವರ್ಷಗಳಿಂದ ಆಟಗಾರರನ್ನು ಬಿಟ್ಟುಕೊಡದೇ ತಂಡದಲ್ಲಿಯೇ ಉಳಿಸಿಕೊಂಡು ಬಂದಿತ್ತು. ಹೀಗಾಗಿ ತಂಡದ ಗೆಲುವಿಗಾಗಿ ಹಲವಾರು ವರ್ಷಗಳಿಂದ ಶ್ರಮಿಸಿದ ಬಹುತೇಕ ಆಟಗಾರರನ್ನು ಈ ಬಾರಿಯ ಹರಾಜಿನಲ್ಲಿ ಬಿಟ್ಟುಕೊಡಬೇಕಾಗಿದ್ದು ಇದಕ್ಕೂ ಮುನ್ನ ಯಾವ 4 ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲಿದ್ದೇವೆ ಎಂಬ ಮಾಹಿತಿಯನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ತಿಳಿಸಬೇಕಿದೆ. ಮೂಲಗಳ ಪ್ರಕಾರ ಈ ಕೆಳಕಂಡ 4 ಆಟಗಾರರನ್ನು ಮುಂಬೈ ಇಂಡಿಯನ್ಸ್ ತಂಡ ರಿಟೇನ್ ಮಾಡಿಕೊಳ್ಳಲಿದ್ದು, ತಂಡದ ಪ್ರಮುಖ ಆಟಗಾರನೋರ್ವನನ್ನು ಕೈಬಿಡಲಾಗುತ್ತದೆ ಎನ್ನಲಾಗುತ್ತಿದೆ

ಈ 4 ಆಟಗಾರರಿಗೆ ಮಣೆ ಹಾಕಲಿದೆ ಮುಂಬೈ ಇಂಡಿಯನ್ಸ್

ಈ 4 ಆಟಗಾರರಿಗೆ ಮಣೆ ಹಾಕಲಿದೆ ಮುಂಬೈ ಇಂಡಿಯನ್ಸ್

ಮೂಲಗಳ ಪ್ರಕಾರ ಮುಂಬೈ ಇಂಡಿಯನ್ಸ್ ತನ್ನ ನಾಯಕ ರೋಹಿತ್ ಶರ್ಮ, ಪ್ರಮುಖ ಬೌಲರ್ ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್ ಮತ್ತು ಪವರ್ ಹಿಟ್ಟರ್ ಕೀರನ್ ಪೊಲಾರ್ಡ್ ಈ 4 ಆಟಗಾರರನ್ನು ಈ ಬಾರಿಯ ಮೆಗಾ ಹರಾಜಿಗೂ ಮುನ್ನ ಉಳಿಸಿಕೊಳ್ಳಲಿದ್ದು, ಉಳಿದ ಎಲ್ಲಾ ಆಟಗಾರರನ್ನೂ ತಂಡದಿಂದ ಕೈಬಿಡಲಾಗುತ್ತದೆ ಎನ್ನಲಾಗುತ್ತಿದೆ.

ಹಾರ್ದಿಕ್ ಪಾಂಡ್ಯ ಹೊರ ಬೀಳಲಿದ್ದಾರೆ

ಹಾರ್ದಿಕ್ ಪಾಂಡ್ಯ ಹೊರ ಬೀಳಲಿದ್ದಾರೆ

ವರದಿಯ ಪ್ರಕಾರ ಈ ಮೇಲ್ಕಂಡ ನಾಲ್ವರು ಆಟಗಾರರನ್ನು ಮುಂಬೈ ಇಂಡಿಯನ್ಸ್ ತಂಡ ಮೆಗಾ ಹರಾಜಿಗೂ ಮುನ್ನ ರಿಟೈನ್ ಮಾಡಿಕೊಳ್ಳಲಿದ್ದು, ತಂಡದ ಪ್ರಮುಖ ಆಲ್ ರೌಂಡರ್ ಆಗಿ ಹಲವಾರು ಆವೃತ್ತಿಗಳಲ್ಲಿ ಮಿಂಚಿದ್ದ ಹಾರ್ದಿಕ್ ಪಾಂಡ್ಯರನ್ನು ಕೈಬಿಡಲಾಗುವುದು ಎನ್ನಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ತೀವ್ರ ಗಾಯದ ಸಮಸ್ಯೆಗೊಳಗಾಗಿ ಫಾರ್ಮ್ ಕಳೆದುಕೊಂಡಿರುವ ಹಾರ್ದಿಕ್ ಪಾಂಡ್ಯ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಯಲ್ಲಿಯೂ ಕೂಡ ಹೇಳಿಕೊಳ್ಳುವ ದೊಡ್ಡ ಪ್ರದರ್ಶನವನ್ನು ನೀಡುವಲ್ಲಿ ವಿಫಲವಾದರು. ಅಷ್ಟೇ ಅಲ್ಲದೆ ಟೂರ್ನಿಯಲ್ಲಿನ ಯಾವುದೇ ಪಂದ್ಯದಲ್ಲಿಯೂ ಕೂಡ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡಲೇ ಇಲ್ಲ.

KL Rahul ಹಾಗು Pandya ಇಬ್ಬರು ಮುಂದಿನ IPLಗೆ ಹೊಸ ತಂಡ ಸೇರಲಿದ್ದಾರೆ | Oneindia Kannada
ಹಾರ್ದಿಕ್ ಪಾಂಡ್ಯ ಐಪಿಎಲ್ ಅಂಕಿ ಅಂಶ

ಹಾರ್ದಿಕ್ ಪಾಂಡ್ಯ ಐಪಿಎಲ್ ಅಂಕಿ ಅಂಶ

ಹಾರ್ದಿಕ್ ಪಾಂಡ್ಯ ಇದುವರೆಗೂ ಒಟ್ಟು 92 ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು 1476 ರನ್ ಕಲೆಹಾಕಿದ್ದಾರೆ. 4 ಅರ್ಧಶತಕಗಳನ್ನು ಸಿಡಿಸಿರುವ ಹಾರ್ದಿಕ್ ಪಾಂಡ್ಯ ಗಳಿಸಿರುವ ಅತ್ಯಧಿಕ ರನ್ 91. ಅಷ್ಟೇ ಅಲ್ಲದೆ ಆಲ್ ರೌಂಡರ್ ಆಟಗಾರನಾಗಿರುವ ಹಾರ್ದಿಕ್ ಪಾಂಡ್ಯ 42 ವಿಕೆಟ್‍ಗಳನ್ನೂ ಕೂಡ ಪಡೆದಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Wednesday, November 24, 2021, 23:24 [IST]
Other articles published on Nov 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X