ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

MI vs DC: ಟಿಮ್ ಡೇವಿಡ್ ವಿರುದ್ಧ DRS ತೆಗೆದುಕೊಳ್ಳದಿರಲು ಕಾರಣ ತಿಳಿಸಿದ ರಿಷಭ್ ಪಂತ್

IPL 2022: MI vs DC: Rishabh Pant Reveals Why Not Taken DRS Against Tim David

ಶನಿವಾರ ನಡೆದ ಐಪಿಎಲ್ 2022ರ 15ನೇ ಋತುವಿನ 69ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 5 ವಿಕೆಟ್‌ಗಳ ಅಂತರದಿಂದ ಸೋಲಿಸಿತು.

ಇದರಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್ 2022ರ ಪ್ಲೇಆಫ್‌ಗೆ ಪ್ರವೇಶಿಸದೆ ನಿರಾಸೆ ಅನುಭವಿಸಿತು. ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ನಂತರ ಜಸ್ಪ್ರೀತ್ ಬುಮ್ರಾ ಪ್ರಮುಖ ಮೂರು ವಿಕೆಟ್ ಪಡೆದಿದ್ದು, ದೆಹಲಿಯನ್ನು 20 ಓವರ್‌ಗಳಲ್ಲಿ 159/7ಕ್ಕೆ ನಿರ್ಬಂಧಿಸಲು ಸಹಾಯ ಮಾಡಿತು. ರೋವ್‌ಮನ್ ಪೊವೆಲ್ ಅವರು 43 ರನ್ ಗಳಿಸುವುದರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಪರ ಗರಿಷ್ಠ ಸ್ಕೋರ್ ಮಾಡಿದರು.

IPL 2022: ಪ್ಲೇಆಫ್, ಕ್ವಾಲಿಫೈಯರ್ ಪಂದ್ಯಗಳ ದಿನಾಂಕ, ಸ್ಥಳ; ಆರ್‌ಸಿಬಿಗೆ ಎದುರಾಳಿ ಯಾರು?IPL 2022: ಪ್ಲೇಆಫ್, ಕ್ವಾಲಿಫೈಯರ್ ಪಂದ್ಯಗಳ ದಿನಾಂಕ, ಸ್ಥಳ; ಆರ್‌ಸಿಬಿಗೆ ಎದುರಾಳಿ ಯಾರು?

ನಂತರ ಮುಂಬೈ ಇಂಡಿಯನ್ಸ್ ಪರ ಇಶಾನ್ ಕಿಶನ್ ಅವರ 48 ಮತ್ತು ಟಿಮ್ ಡೇವಿಡ್ ಅವರ ಅದ್ಭುತ 11 ಎಸೆತಗಳಲ್ಲಿ 34 ರನ್ ಚಚ್ಚಿದ ನಂತರ ಮುಂಬೈ ಇಂಡಿಯನ್ಸ್ ರೋಚಕವಾಗಿ ಗೆಲ್ಲಲು ನೆರವಾಯಿತು.

ಮುಂಬೈ ಬ್ಯಾಟಿಂಗ್ ಇನ್ನಿಂಗ್ಸ್‌ನ 15ನೇ ಓವರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಆನ್-ಫೀಲ್ಡ್ ಅಂಪೈರ್ ನಿರ್ಧಾರವನ್ನು ಮರುಪರಿಶೀಲನೆ ಹೋಗದಿರಲು ನಿರ್ಧರಿಸಿದ ಕಾರಣ ಪಂದ್ಯವು ನಿರ್ಣಾಯಕ ಕ್ಷಣಕ್ಕೆ ಸಾಕ್ಷಿಯಾಯಿತು.

IPL 2022: MI vs DC: Rishabh Pant Reveals Why Not Taken DRS Against Tim David

ಮುಂಬೈ ಇಂಡಿಯನ್ಸ್‌ನ ಬಿಗ್-ಹಿಟ್ಟರ್ ಟಿಮ್ ಡೇವಿಡ್ ಅವರು ಶಾರ್ದೂಲ್ ಠಾಕೂರ್ ಅವರ ಬೌಲಿಂಗ್‌ನಲ್ಲಿ ಎದುರಿಸಿದ ಮೊದಲ ಎಸೆತ ಎಡ್ಜ್ ಆಗಿ ಕೀಪರ್ ರಿಷಭ್ ಪಂತ್ ಕೈ ಸೇರಿತ್ತು. ಆದರೆ ಮೈದಾನದಲ್ಲಿದ್ದ ಅಂಪೈರ್ ಔಟ್ ನೀಡಲಿಲ್ಲ. ಎರಡು ರೀವಿವ್ಸ್ ಇಟ್ಟುಕೊಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಪಂತ್ ಡಿಆರ್ಎಸ್ ತೆಗೆದುಕೊಳ್ಳುತ್ತಾರೆ ಎಂದು ನಿರೀಕ್ಷಿಸಿದ್ದರು. ಏಕೆಂದರೆ ಅವರೇ ಸ್ಟಂಪ್‌ಗಳ ಹಿಂದಿನಿಂದ ಅಬ್ಬರದಿಂದ ಮನವಿ ಮಾಡಿದ್ದರು.

ಆದರೆ ಬೌಲರ್ ಮತ್ತು ಅವರ ಸಹ ಆಟಗಾರರೊಂದಿಗೆ ಸಂಕ್ಷಿಪ್ತ ಮಾತುಕತೆಯ ನಂತರ, ರಿಷಭ್ ಪಂತ್ ರೀವಿವ್ ತೆಗೆದುಕೊಳ್ಳಲು ನಿರ್ಧರಿಸಿದರು. ಆದರೆ ನಂತರ ಬಾಲ್ ಟ್ರ್ಯಾಕ್ ಗಮನಿಸಿದಾಗ ಬಾಲ್ ಬ್ಯಾಟ್‌ಗೆ ಅಲ್ಟ್ರಾಎಡ್ಜ್ ಆಗಿದ್ದು ಸ್ಪಷ್ಟವಾಗಿತ್ತು. ನಂತರ ರಿಷಭ್ ಪಂತ್ ಅವರು ರೀವಿವ್ ತೆಗೆದುಕೊಳ್ಳದೇ ದೊಡ್ಡ ತಪ್ಪು ಮಾಡಿದೆನೆಂದುಕೊಂಡರು.

ನಂತರ ಟಿಮ್ ಡೇವಿಡ್ ಅವಕಾಶ ಸದುಪಯೋಗ ಪಡಿಸಿಕೊಂಡು ಕಡಿಮೆ ಎಸೆತಗಳಲ್ಲಿ 34 ನಿರ್ಣಾಯಕ ರನ್‌ಗಳನ್ನು ಗಳಿಸಿದರು ಮತ್ತು ಮುಂಬೈನ 5 ವಿಕೆಟ್‌ಗಳ ಜಯಕ್ಕೆ ಕಾರಣರಾದರು. ಆ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ಲೇಆಫ್ ಕನಸು ನುಚ್ಚುನೂರು ಮಾಡಿತು.

IPL 2022: MI vs DC: Rishabh Pant Reveals Why Not Taken DRS Against Tim David

ಪಂದ್ಯದ ನಂತರ ನಿರುತ್ಸಾಹಗೊಂಡಿದ್ದ ರಿಷಭ್ ಪಂತ್ ಟಿಮ್ ಡೇವಿಡ್ ವಿಕೆಟ್ ಬಗ್ಗೆ ಏಕೆ ರೀವಿವ್ ತೆಗೆದುಕೊಳ್ಳಲಿಲ್ಲ ಎಂಬುದನ್ನು ಬಹಿರಂಗಪಡಿಸಿದರು.

"ಏನೋ ಆಗಿದೆ ಎಂದು ನಾನು ಭಾವಿಸಿದೆ, ಆದರೆ 30 ಯಾರ್ಡ್ ಸರ್ಕಲ್‌ನಲ್ಲಿ ನಿಂತಿದ್ದ ಎಲ್ಲರಿಗೂ ಸಾಕಷ್ಟು ಮನವರಿಕೆಯಾಗಲಿಲ್ಲ, ಗೊಂದಲದಲ್ಲಿದೆವು. ಆದ್ದರಿಂದ ನಾನು ಅವರನ್ನು "ಮರುಪರಿಶೀಲನೆಗೆ ಹೋಗಬೇಕೇ' ಎಂದು ಕೇಳುತ್ತಿದ್ದೆ ಹೀಗಾಗಿ ಕೊನೆಯಲ್ಲಿ ನಾನು ಮರುಪರಿಶೀಲನೆ ತೆಗೆದುಕೊಳ್ಳಲಿಲ್ಲ," ಎಂದು ಪಂತ್ ಹೇಳಿದರು.

ಡೆಲ್ಲಿ ಕ್ಯಾಪಿಟಲ್ಸ್ ಈವರೆಗೆ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲ. ಆದರೆ ಈ ತಂಡವು ಕಳೆದ ಮೂರು ಸೀಸನ್‌ಗಳಲ್ಲಿ ಸತತವಾಗಿ ಪ್ಲೇಆಫ್ ತಲುಪಿತ್ತು. ಆದರೆ ಈ ಬಾರಿ ಹಾಗಾಗಲಿಲ್ಲ.

Story first published: Sunday, May 22, 2022, 10:02 [IST]
Other articles published on May 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X