ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

LSG vs MI: ಮತ್ತೆ ಸೋತ ಮುಂಬೈ ಇಂಡಿಯನ್ಸ್, ಲಕ್ನೋಗೆ ಬೊಂಬಾಟ್ ಗೆಲುವು

LSG VS MI
8 ನೇ ಪಂದ್ಯದಲ್ಲಿ ಸೋತು IPL ಟೂರ್ನಿಯಿಂದ ಹೊರಬಿದ್ದ ಮುಂಬೈ ಇಂಡಿಯನ್ಸ್ | Oneindia Kannada

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ಪ್ರಸಕ್ತ ಸೀಸನ್‌ನಲ್ಲಿ ಮತ್ತೊಂದು ಸೋಲನ್ನ ಕಂಡಿದ್ದು, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮುಗ್ಗರಿಸಿದೆ. ಕೆ.ಎಲ್ ರಾಹುಲ್ ಬೊಂಬಾಟ್ ಶತಕದ ನೆರವಿನಿಂದ ಲಕ್ನೋ 36ರನ್‌ಗಳಿಂದ ಗೆದ್ದು ಬೀಗಿದೆ.

ಲಕ್ನೋ ಸೂಪರ್‌ಜೈಂಟ್ಸ್ ನೀಡಿದ 169 ರನ್‌ಗಳ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್‌ ಪರ ನಾಯಕ ರೋಹಿತ್ ಶರ್ಮಾ ಸ್ಫೋಟಕ ಆರಂಭ ನೀಡಿದಾದ್ರೂ, ಮತ್ತೊಂದೆಡೆ ಇಶಾನ್ ಕಿಶನ್ ರನ್‌ ಗಳಿಸಲು ತಿಣುಕಾಡಿದ್ರು.

20 ಎಸೆತಗಳಲ್ಲಿ ಕೇವಲ 8 ರನ್ ಕಲೆಹಾಕಿದ ಇಶಾನ್ ಕಿಶನ್ ವಿಕೆಟ್ ಪತನದ ಬಳಿಕ ಮುಂಬೈ ಇಂಡಿಯನ್ಸ್‌ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಪರೇಡ್ ನಡೆಸಿದ್ರು. ಡೆವಾಲ್ಡ್ ಬ್ರೆವಿಸ್ ಕೇವಲ 3ರನ್‌ಗೆ ಮೊಹ್ಸಿನ್ ಖಾನ್‌ಗೆ ವಿಕೆಟ್ ಒಪ್ಪಿಸಿದ ಬಳಿಕ, ನಾಯಕ ರೋಹಿತ್ ಶರ್ಮಾ 39ರನ್‌ಗೆ ತನ್ನ ಮಾಜಿ ಟೀಂ ಮೇಟ್ ಕೃನಾಲ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದ್ರು.

ಮುಂಬೈನ ಇನ್‌ಫಾರ್ಮ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಆಯುಷ್ ಬದೋನಿಗೆ ಕೇವಲ 7ರನ್‌ಗೆ ಔಟಾದ್ರು. ತಿಲಕ್ ವರ್ಮಾ 38ರನ್‌ಗಳ ಕೊಡುಗೆ ನೀಡಿದ್ರೆ, ಆಲ್‌ರೌಂಡರ್ ಪೊಲಾರ್ಡ್ 19 ರನ್‌ಗಳಿಸಿದ್ರು ಸಹ ತಂಡವನ್ನ ಗೆಲುವಿನ ದಡ ತಲುಪಿಸಲು ಸಾಧ್ಯವಾಗಲಿಲ್ಲ.

ನಿಗದಿತ 20 ಓವರ್‌ಗಳಲ್ಲಿ ಮುಂಬೈ ಇಂಡಿಯನ್ಸ್ 8 ವಿಕೆಟ್ ನಷ್ಟಕ್ಕೆ 132ರನ್‌ಗಳಿಸಲು ಶಕ್ತವಾಯಿತು. ಈ ಮೂಲಕ ಮುಂಬೈ ಇಂಡಿಯನ್ಸ್‌ ಸತತ ಎಂಟು ಪಂದ್ಯಗಳನ್ನ ಸೋಲುಗಳನ್ನ ಕಾಣುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಯಾರೂ ಕಾಣದ ರೀತಿಯ ಸೋಲನ್ನ ಕಂಡಿದೆ.

ಮತ್ತೊಂದೆಡೆ ಲಕ್ನೋ ಸೂಪರ್ ಜೈಂಟ್ಸ್‌ 36ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಲಕ್ನೋ ಪರ ಕೃನಾಲ್ ಪಾಂಡ್ಯ 3, ರವಿ ಬಿಷ್ಣೋಯಿ ಹಾಗೂ ಆಯುಷ್ ಬದೋನಿ, ಜೇಸನ್ ಹೋಲ್ಡರ್, ಮೊಹ್ಸಿನ್ ಖಾನ್ ತಲಾ 1 ವಿಕೆಟ್ ಪಡೆದರು.

ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಪರ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿಕಾಕ್ 10 ರನ್‌ಗೆ ಜಸ್ಪ್ರೀತ್‌ ಬುಮ್ರಾಗೆ ವಿಕೆಟ್ ಒಪ್ಪಿಸಿದ್ರು. ಬಳಿಕ ಎರಡನೇ ವಿಕೆಟ್‌ಗೆ ಜೊತೆಯಾದ ನಾಯಕ ಕೆ.ಎಲ್ ರಾಹುಲ್ ಮತ್ತು ಮನೀಶ್ ಪಾಂಡೆಗೆ ತಾಳ್ಮೆಯಿಂದ ಇನ್ನಿಂಗ್ಸ್ ಕಟ್ಟಿದ್ರು.

ಕೆ.ಎಲ್ ರಾಹುಲ್ ಅಬ್ಬರದ ಆಟವಾಡಿದ್ರೆ, ಮನೀಶ್ ಪಾಂಡೆ 22 ಎಸೆತಗಳಲ್ಲಿ 22 ರನ್ ಕಲೆಹಾಕಿ ಕಿರಾನ್ ಪೊಲಾರ್ಡ್‌ ಬೌಲಿಂಗ್‌ನಲ್ಲಿ ಔಟಾದ್ರೆ, ಇದ್ರ ಬೆನ್ನಲ್ಲೇ ಲಕ್ನೋ ಎರಡು ಪ್ರಮುಖ ವಿಕೆಟ್ ಕಳೆದುಕೊಂಡಿತು. ಮಾರ್ಕಸ್ ಸ್ಟೋಯ್ನಿಸ್ 0, ಕೃನಾಲ್‌ ಪಾಂಡ್ಯ 1ರನ್‌ಗೆ ಬೇಗನೆ ವಿಕೆಟ್ ಒಪ್ಪಿಸಿದ್ರು.

ದೀಪಕ್ ಹೂಡ ಆಟ ಕೂಡ 10 ರನ್‌ಗೆ ಮುಕ್ತಾಯವಾಯಿತು. ಆದ್ರೆ ಕೆ.ಎಲ್ ರಾಹುಲ್ ನಾಯಕನ ಆಟವಾಡುವ ಮೂಲಕ ಅಬ್ಬರಿಸಿದ್ರು. ಕೇವಲ 61 ಎಸೆತಗಳಲ್ಲಿ ಕೆ.ಎಲ್ ರಾಹುಲ್ ಪ್ರಸಕ್ತ ಸೀಸನ್‌ನಲ್ಲಿ ಎರಡನೇ ಶತಕ ಹಾಗೂ ಒಟ್ಟಾರೆ ಐಪಿಎಲ್‌ನಲ್ಲಿ ನಾಲ್ಕನೇ ಶತಕ ಸಿಡಿಸಿದ ಸಾಧನೆ ಮಾಡಿದ್ರು. ಇನ್ನು ವಿಶೇಷ ಅಂದ್ರೆ ಮುಂಬೈ ಇಂಡಿಯನ್ಸ್ ವಿರುದ್ಧವೇ ರಾಹುಲ್ ಎರಡನೇ ಶತಕ ದಾಖಲಿಸಿದ್ದಾರೆ.

ಕೊನೆಯಲ್ಲಿ ಯುವ ಬ್ಯಾಟರ್ ಆಯುಷ್ ಬದೋನಿ 14 ರನ್‌ಗಳ ಕೊಡುಗೆ ಜೊತೆಗೆ ಕೆ.ಎಲ್ ರಾಹುಲ್ 62 ಎಸೆತಗಳಲ್ಲಿ ಅಜೇಯ 103 ರನ್ ಕಲೆಹಾಕಿದರು. ಲಕ್ನೋ ಸೂಪರ್ ಜೈಂಟ್ಸ್‌ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 168 ರನ್ ಕಲೆಹಾಕುವಷ್ಟು ಶಕ್ತವಾಯಿತು. ಕೊನೆಯ ಎರಡು ಎಸೆತಗಳಲ್ಲಿ ಜೇಸನ್‌ ಹೋಲ್ಡರ್ ರನ್ ಕಲೆಹಾಕಲು ವಿಫಲರಾದರು.

Story first published: Monday, April 25, 2022, 10:12 [IST]
Other articles published on Apr 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X