IPL 2022: ಕೆ.ಎಲ್ ರಾಹುಲ್ 4ನೇ IPL ಶತಕ, ಅತಿ ಹೆಚ್ಚಿನ ಶತಕ ಯಾರ ಹೆಸರಲ್ಲಿದೆ?

ಇಂಡಿಯನ್ ಪ್ರೀಮಿಯರ್ ಲೀಗ್ 2022ನೇ ಸೀಸನ್‌ನಲ್ಲಿ ಶತಕ ಮೇಲೆ ಶತಕ ದಾಖಲಾಗುತ್ತಿದೆ. ಒಂದೆಡೆ ರಾಜಸ್ತಾನ್ ರಾಯಲ್ಸ್ ಓಪನರ್ ಜಾಸ್ ಬಟ್ಲರ್‌ ಪ್ರಸಕ್ತ ಸೀಸನ್‌ನಲ್ಲಿ ಮೂರು ಶತಕ ದಾಖಲಿಸಿ ಅಬ್ಬರಿಸಿದ್ದಾರೆ. ಇದ್ರ ಬೆನಲ್ಲೇ ಇಂದು ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ ತಂಡದ ನಾಯಕ ಕೆ.ಎಲ್ ರಾಹುಲ್ ಎರಡನೇ ಶತಕ ದಾಖಲಿಸಿದ್ದಾರೆ.

ಐಪಿಎಲ್‌ನಲ್ಲಿ ಘಟಾನುಘಟಿ ಪ್ಲೇಯರ್‌ಗಳೇ ಬಂದು ಹೋಗಿದ್ದಾರೆ. ಅನೇಕರು ಈಗ ಐಪಿಎಲ್‌ನಲ್ಲಿ ಉಳಿದಿಲ್ಲವಾದ್ರೂ, ಅವರ ಹೆಸರು ಮಾತ್ರ ರೆಕಾರ್ಡ್ ಬುಕ್‌ನಲ್ಲಿ ಶಾಶ್ವತವಾಗಿ ಉಳಿದಿದೆ. ವಿಂಡೀಸ್ ದೈತ್ಯ ಕ್ರಿಸ್‌ಗೇಲ್, ಆಸ್ಟ್ರೇಲಿಯಾ ಸೂಪರ್ ಸ್ಟಾರ್ ಶೇನ್ ವ್ಯಾಟ್ಸ್‌ ಹೀಗೆ ಅನೇಕ ದಿಗ್ಗಜ ಆಟಗಾರರು ಈ ಐಪಿಎಲ್ ಮಹಾಜಾತ್ರೆಯಲ್ಲಿ ಭಾಗವಹಿಸಿ ತಮ್ಮ ಇನ್ನಿಂಗ್ಸ್‌ ಮುಗಿಸಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ಇದುವರೆಗೂ ಅತಿ ಹೆಚ್ಚು ಶತಕ ದಾಖಲಿಸಿದವರ ಕುರಿತು ನೋಡುವುದಾದ್ರೆ ಕ್ರಿಸ್‌ಗೇಲ್ ಎಲ್ಲರಗಿಂತ ಮುಂದಿದ್ದಾರೆ. ಎಷ್ಟು ಇನ್ನಿಂಗ್ಸ್‌ನಲ್ಲಿ ಗೇಲ್ ಎಷ್ಟು ಶತಕ ಹೊಡೆದ್ರು, ಅವರ ರೆಕಾರ್ಡ್‌ ಹಿಂದೆ ಯಾರಿದ್ದಾರೆ ಎಂಬುದನ್ನ ಮುಂದೆ ತಿಳಿಯಿರಿ.

ಐಪಿಎಲ್‌ನಲ್ಲಿ ಕ್ರಿಸ್‌ಗೇಲ್ ಆರು ಶತಕದ ದಾಖಲೆ

ಐಪಿಎಲ್‌ನಲ್ಲಿ ಕ್ರಿಸ್‌ಗೇಲ್ ಆರು ಶತಕದ ದಾಖಲೆ

ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್‌ಗೇಲ್ ಐಪಿಎಲ್‌ನಲ್ಲಿ ಬಹು ಸೀಸನ್‌ಗಳನ್ನ ಆರ್‌ಸಿಬಿಯಲ್ಲಿ ಕಳೆದಿದ್ದಾರೆ. ಕೊನೆಯ ಸೀಸನ್‌ಗಳನ್ನ ಪಂಜಾಬ್ ಕಿಂಗ್ಸ್‌ ಪರ ಆಡಿದ್ರು. ಐಪಿಎಲ್ 2022ರ ಸೀಸನ್‌ನಲ್ಲಿ ಅನ್‌ಸೋಲ್ಡ್ ಮುಖಭಂಗ ಆಗಬಾರದೆಂದು ಹರಾಜಿನಿಂದ ಹೊರಗುಳಿದಿದ್ದರು.

ಕ್ರಿಸ್‌ಗೇಲ್ ಐಪಿಎಲ್ ಇತಿಹಾಸದಲ್ಲಿ ಒಟ್ಟು 141 ಇನ್ನಿಂಗ್ಸ್‌ಗಳಲ್ಲಿ 6 ಶತಕ ಸಿಡಿಸಿದ ದಾಖಲೆ ಹೊಂದಿದ್ದು, ಮತ್ತೆ ಯಾವೆಲ್ಲ ಬ್ಯಾಟರ್ಸ್ ಎಷ್ಟು ಶತಕ ಮುಟ್ಟಿದ್ದಾರೆ ಎಂಬುದನ್ನ ಈ ಕೆಳಗೆ ತಿಳಿಯಬಹುದು.

ಕ್ರಿಸ್‌ಗೇಲ್ 6 ಶತಕ (141 ಇನ್ನಿಂಗ್ಸ್‌)

ವಿರಾಟ್ ಕೊಹ್ಲಿ 5 ಶತಕ (207 ಇನ್ನಿಂಗ್ಸ್‌)

ಜಾಸ್ ಬಟ್ಲರ್ 4 ಶತಕ (71 ಇನ್ನಿಂಗ್ಸ್‌)

ಕೆ.ಎಲ್. ರಾಹುಲ್ 4 ಶತಕ (93 ಇನ್ನಿಂಗ್ಸ್‌)

ಶೇನ್ ವ್ಯಾಟ್ಸನ್ 4 ಶತಕ (141 ಇನ್ನಿಂಗ್ಸ್‌)

ಡೇವಿಡ್ ವಾರ್ನರ್ 4 ಶತಕ (155 ಇನ್ನಿಂಗ್ಸ್‌)

IPL 2022: ತಂಡಗಳು ಪ್ಲೇ ಆಫ್ ತಲುಪಲು ಎಷ್ಟು ಪಾಯಿಂಟ್ಸ್ ಬೇಕು?

ಕೊಹ್ಲಿ ದಾಖಲೆ ಬಳಿಯಲ್ಲಿ ಕೆ.ಎಲ್ ರಾಹುಲ್, ಜಾಸ್ ಬಟ್ಲರ್

ಕೊಹ್ಲಿ ದಾಖಲೆ ಬಳಿಯಲ್ಲಿ ಕೆ.ಎಲ್ ರಾಹುಲ್, ಜಾಸ್ ಬಟ್ಲರ್

ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕ ದಾಖಲಿಸಿದ ಭಾರತೀಯ ಬ್ಯಾಟ್ಸ್‌ಮನ್ ಆಗಿದ್ದಾರೆ. ವಿರಾಟ್ ಕೊಹ್ಲಿ 2016ರ ಐಪಿಎಲ್‌ ಸೀಸನ್‌ನಲ್ಲಿ ನಾಲ್ಕು ಶತಕ ಸಿಡಿಸಿದ ದಾಖಲೆ ಮಾಡಿದ್ದರು. ಈ ಬಾರಿ ಜಾಸ್ ಬಟ್ಲರ್ ಮೂರು ಶತಕ ಸಿಡಿಸಿ ಕೊಹ್ಲಿ ದಾಖಲೆ ಮುರಿಯಲು ರೆಡಿಯಾಗಿದ್ದಾರೆ.

ಐಪಿಎಲ್‌ನಲ್ಲಿ ಜಾಸ್ ಬಟ್ಲರ್ ಮತ್ತು ಕೆ.ಎಲ್ ರಾಹುಲ್ ತಲಾ ನಾಲ್ಕು ಶತಕ ಕಲೆಹಾಕಿದ್ದು ಕೊಹ್ಲಿ ದಾಖಲೆ ಸರಿಗಟ್ಟಲು ಇನ್ನೊಂದ ಶತಕ ಬಾಕಿ ಉಳಿದಿದೆ.

IPL 2022: ಒಂದು ಪಂದ್ಯಕ್ಕೆ ಅಂಪೈರ್ಸ್ ಸ್ಯಾಲರಿ ಎಷ್ಟು, ತಪ್ಪು ನಿರ್ಣಯಕ್ಕೆ ದಂಡ ವಿಧಿಸುವುದಿಲ್ವಾ?

8 ನೇ ಪಂದ್ಯದಲ್ಲಿ ಸೋತು IPL ಟೂರ್ನಿಯಿಂದ ಹೊರಬಿದ್ದ ಮುಂಬೈ ಇಂಡಿಯನ್ಸ್ | Oneindia Kannada
ಟ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ದಾಖಲಿಸಿದ ಭಾರತದ ಬ್ಯಾಟರ್ಸ್‌

ಟ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ದಾಖಲಿಸಿದ ಭಾರತದ ಬ್ಯಾಟರ್ಸ್‌

ಟಿ20 ಕ್ರಿಕೆಟ್‌ (ಅಂತರಾಷ್ಟ್ರೀಯ, ಐಪಿಎಲ್, ದೇಶೀಯ)ನಲ್ಲಿ ಅತಿ ಹೆಚ್ಚು ಶತಕ ದಾಖಲಿಸಿದ ಕೀರ್ತಿಗೆ ಮುಂಬೈ ಇಂಡಿಯನ್ಸ್ ಹಾಗೂ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮುಂದಿದ್ದರು. ಚುಟುಕು ಕ್ರಿಕೆಟ್‌ನಲ್ಲಿ ಆರು ಶತಕ ದಾಖಲಿಸಿರುವ ರೋಹಿತ್ ಶರ್ಮಾ ದಾಖಲೆಯನ್ನ ಕನ್ನಡಿಗ ಕೆ.ಎಲ್ ರಾಹುಲ್ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲೇ ಸರಿಗಟ್ಟಿರುವುದು ವಿಶೇಷ.

ಈ ಬಾರಿಯ ಐಪಿಎಲ್ ಸೀಸನ್‌ನಲ್ಲಿ ಮುಂಬೈ ವಿರುದ್ಧವೇ ಎರಡನೇ ಶತಕ ದಾಖಲಿಸಿದ ಕೆ.ಎಲ್ ರಾಹುಲ್, ಒಟ್ಟಾರೆ ಟಿ20ಯಲ್ಲಿ ಆರು ಶತಕ ದಾಖಲಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಇವರ ನಂತರದ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಐದು ಶತಕ ದಾಖಲಿಸಿದ್ದಾರೆ. ಮಿಸ್ಟರ್ ಐಪಿಎಲ್ ಸುರೇಶ್ ರೈನಾ 4 ಶತಕ ಹೊಂದಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Sunday, April 24, 2022, 22:33 [IST]
Other articles published on Apr 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X