ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: 10ರಿಂದ 15ಕೋಟಿ ಪಡೆದ ಆಟಗಾರರು ಫ್ಲಾಪ್; ಕೋಟಿ ಕೋಟಿ ಪಡೆದು ಮಕಾಡೆ ಮಲಗಿದವರ ಪಟ್ಟಿ ಇಲ್ಲಿದೆ

IPL 2022: Most of the players who got more than 10 crores in the season are failed to perform well

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಪ್ರವೇಶ ಪಡೆದುಕೊಂಡ ಕಾರಣ ಟೂರ್ನಿಯ ಆರಂಭಕ್ಕೂ ಮುನ್ನ ಆಟಗಾರರ ಮೆಗಾ ಹರಾಜು ಪ್ರಕ್ರಿಯೆಯನ್ನು ನಡೆಸಲಾಯಿತು. ಅಸ್ತಿತ್ವದಲ್ಲಿದ್ದ ತಂಡಗಳು ತಮಗೆ ಬೇಕಾದ ಗರಿಷ್ಠ 4 ಆಟಗಾರರನ್ನು ಉಳಿಸಿಕೊಂಡು ಉಳಿದ ಆಟಗಾರರನ್ನು ಹರಾಜಿಗೆ ಕೈಬಿಟ್ಟರು.

IPL 2022: ನಾನು ದ್ರಾವಿಡ್ ಮತ್ತು ಧೋನಿ ರೀತಿ ಅಲ್ಲ: ಸಂಜು ಸ್ಯಾಮ್ಸನ್IPL 2022: ನಾನು ದ್ರಾವಿಡ್ ಮತ್ತು ಧೋನಿ ರೀತಿ ಅಲ್ಲ: ಸಂಜು ಸ್ಯಾಮ್ಸನ್

ಹೀಗೆ ತಮ್ಮ ಹಳೆ ತಂಡಗಳಿಂದ ರಿಟೈನ್ ಆಗದೆ ಹೊರಬಿದ್ದ ಹಲವು ಆಟಗಾರರು ಮೆಗಾ ಹರಾಜಿನಲ್ಲಿ ಒಳ್ಳೆಯ ಮೊತ್ತಕ್ಕೆ ಬೇರೆ ತಂಡಗಳಿಗೆ ಬಿಕರಿಯಾದರೆ, ಇನ್ನೂ ಕೆಲ ಕ್ರಿಕೆಟಿಗರನ್ನು ಹಳೆಯ ತಂಡಗಳೇ ಮತ್ತೆ ದೊಡ್ಡ ಮೊತ್ತಕ್ಕೆ ಖರೀದಿಸಿದವು. ಈ ಪೈಕಿ ಅತಿ ದೊಡ್ಡ ಮೊತ್ತಕ್ಕೆ ಬಿಕರಿಯಾದ ಆಟಗಾರ ಎನಿಸಿಕೊಂಡದ್ದು ಇಶಾನ್ ಕಿಶನ್. ಇಶಾನ್ ಕಿಶನ್ ಅವರನ್ನು ರಿಟೈನ್ ಮಾಡಿಕೊಳ್ಳದೇ ಕೈಬಿಟ್ಟಿದ್ದ ಮುಂಬೈ ಇಂಡಿಯನ್ಸ್ ಇತರೆ ತಂಡಗಳ ಜತೆ ಜಿದ್ದಾಜಿದ್ದಿಯ ಬಿಡ್ಡಿಂಗ್ ನಡೆಸಿ ಮೆಗಾ ಹರಾಜಿನಲ್ಲಿ ಬರೋಬ್ಬರಿ 15.25 ಕೋಟಿಗೆ ಖರೀದಿ ಮಾಡಿ ಮತ್ತೆ ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

IPL 2022: ವೇಗದ ಶತಕ, ಅರ್ಧಶತಕ, ಹೆಚ್ಚು ಸಿಕ್ಸ್ ಬಾರಿಸಿದ್ದು ಇವರೇ; ಚೆನ್ನೈ, ಮುಂಬೈ ಆಟಗಾರರೇ ಇಲ್ಲ!IPL 2022: ವೇಗದ ಶತಕ, ಅರ್ಧಶತಕ, ಹೆಚ್ಚು ಸಿಕ್ಸ್ ಬಾರಿಸಿದ್ದು ಇವರೇ; ಚೆನ್ನೈ, ಮುಂಬೈ ಆಟಗಾರರೇ ಇಲ್ಲ!

ಆದರೆ ಇಶಾನ್ ಕಿಶನ್ ತಾನು ಪಡೆದ ಈ ಬೃಹತ್ ಮೊತ್ತಕ್ಕೆ ತಕ್ಕದಾದ ಆಟವನ್ನು ಆಡುವಲ್ಲಿ ಯಶಸ್ವಿಯಾಗಲಿಲ್ಲ. ಟೂರ್ನಿಯುದ್ದಕ್ಕೂ ಮುಗ್ಗರಿಸಿದ ಇಶಾನ್ ಕಿಶನ್ ಕೋಟಿ ಕೋಟಿ ಹಣ ಪಡೆದು ಕಳಪೆ ಪ್ರದರ್ಶನ ನೀಡಿದ ಆಟಗಾರರ ಪಟ್ಟಿಯಲ್ಲಿ ಟಾಪ್ ಎಂದೇ ಹೇಳಬಹುದು. ಹೀಗೆ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ 10ರಿಂದ 15 ಕೋಟಿ ರೂಪಾಯಿಗಳವರೆಗೆ ಹಣ ಪಡೆದ ಆಟಗಾರರ ಪ್ರದರ್ಶನ ಹೇಗಿತ್ತು ಎಂಬುದರ ಕುರಿತಾದ ವಿವರ ಮುಂದೆ ಇದೆ ಓದಿ.

11ಕ್ಕೂ ಹೆಚ್ಚು ಕೋಟಿ ಪಡೆದವರು ಮತ್ತು ಅವರ ಪ್ರದರ್ಶನ

11ಕ್ಕೂ ಹೆಚ್ಚು ಕೋಟಿ ಪಡೆದವರು ಮತ್ತು ಅವರ ಪ್ರದರ್ಶನ

ಈ ಬಾರಿಯ ಐಪಿಎಲ್ ಹರಾಜಿನಲ್ಲಿ 15.25 ಕೋಟಿ ಪಡೆದ ಇಶಾನ್ ಕಿಶನ್ 14 ಪಂದ್ಯಗಳನ್ನಾಡಿ 418 ರನ್ ಗಳಿಸಿದರು. 3 ಅರ್ಧಶತಕಗಳನ್ನು ಬಾರಿಸಿದ ಇಶಾನ್ ಕಿಶನ್ ಸಾಧಾರಣ ಮೊತ್ತ ಕಲೆ ಹಾಕಿದ್ದಾರೆಯೇ ಹೊರತು ತಂಡಕ್ಕೆ ತಿರುವು ನೀಡಿ ಪಂದ್ಯ ಗೆಲ್ಲಿಸಿಕೊಡುವ ರೀತಿಯ ಪ್ರದರ್ಶನವನ್ನು ನೀಡುವಲ್ಲಿ ವಿಫಲರಾಗಿ ಮಕಾಡೆ ಮಲಗಿದರು. ಇಶಾನ್ ಕಿಶನ್ ಸ್ಟ್ರೈಕ್ ರೇಟ್ 120.11.


14 ಕೋಟಿ ಪಡೆದು ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗಿದ್ದ ದೀಪಕ್ ಚಹರ್ ಟೂರ್ನಿಯಲ್ಲಿ ಪಂದ್ಯವನ್ನಾಡದೇ ಹೊರಬಿದ್ದು ನಿರಾಸೆ ಮೂಡಿಸಿದರು.


12.25 ಕೋಟಿಗೆ ಕೋಲ್ಕತ್ತ ನೈಟ್ ರೈಡರ್ಸ್ ಪಾಲಾಗಿ ನಾಯಕತ್ವವನ್ನು ಸ್ವೀಕರಿಸಿದ್ದ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಮತ್ತು ನಾಯಕತ್ವ ಎರಡರಲ್ಲಿಯೂ ವಿಫಲರಾದರು ಎನ್ನಬಹುದು. 14 ಪಂದ್ಯಗಳನ್ನಾಡಿದ ಶ್ರೇಯಸ್ ಅಯ್ಯರ್ 3 ಅರ್ಧಶತಕ ಸಹಿತ 401 ರನ್ ಕಲೆಹಾಕುವಲ್ಲಿ ಮಾತ್ರ ಯಶಸ್ವಿಯಾದರು. ನಾಯಕನಾಗಿ 14 ಪಂದ್ಯಗಳಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸಿದ ಶ್ರೇಯಸ್ ಅಯ್ಯರ್ 6 ಪಂದ್ಯಗಳಲ್ಲಿ ಜಯ ಮತ್ತು 8 ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದರು. ಹೀಗೆ ತಾವು ಪಡೆದುಕೊಂಡ ಹಣಕ್ಕೆ ತಕ್ಕುದಾದ ಪ್ರದರ್ಶನ ನೀಡುವಲ್ಲಿ ಶ್ರೇಯಸ್ ಅಯ್ಯರ್ ವಿಫಲರಾದರು. ಶ್ರೇಯಸ್ ಅಯ್ಯರ್ ಸ್ಟ್ರೈಕ್ ರೇಟ್ 134.56

ಈ ಬಾರಿಯ ಮೆಗಾ ಹರಾಜಿನಲ್ಲಿ 11.5 ಕೋಟಿಗೆ ಪಂಜಾಬ್ ಕಿಂಗ್ಸ್ ಪಾಲಾದ ಲಿಯಾಮ್ ಲಿವಿಂಗ್ ಸ್ಟನ್ ತಾವು ಪಡೆದ ಹಣಕ್ಕೆ ಸರಿಯಾದ ನ್ಯಾಯ ಒದಗಿಸಿದರು ಎನ್ನಬಹುದು. 14 ಪಂದ್ಯಗಳನ್ನಾಡಿದ ಅವರು 4 ಅರ್ಧಶತಕ ಸಹಿತ 439 ರನ್ ಕಲೆಹಾಕಿದ್ದು, ಬರೋಬ್ಬರಿ 182.08 ಸ್ಟ್ರೈಕ್ ರೇಟ್ ನೊಂದಿಗೆ ಬ್ಯಾಟ್ ಬೀಸಿದ್ದಾರೆ. ಇವರ ಈ ಸ್ಟ್ರೈಕ್ ರೇಟ್ ಟೂರ್ನಿಯಲ್ಲಿ ಕಣಕ್ಕಿಳಿದಿದ್ದ ಹಲವಾರು ಸ್ಫೋಟಕ ಆಟಗಾರರಿಗಿಂತ ಹೆಚ್ಚಿದೆ. ಇನ್ನು 12 ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡಿದ ಲಿಯಾಮ್ ಲಿವಿಂಗ್ ಸ್ಟನ್ 6 ವಿಕೆಟ್‍ಗಳನ್ನೂ ಸಹ ಪಡೆದಿದ್ದಾರೆ.

10.75 ಕೋಟಿ ಪಡೆದ ನಾಲ್ವರ ಪ್ರದರ್ಶನ

10.75 ಕೋಟಿ ಪಡೆದ ನಾಲ್ವರ ಪ್ರದರ್ಶನ

ವನಿಂದು ಹಸರಂಗ ಈ ಬಾರಿ 10.75 ಕೋಟಿ ಪಡೆದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾದರು. ಟೂರ್ನಿಯಲ್ಲಿ ಒಟ್ಟು 26 ವಿಕೆಟ್ ಪಡೆದ ವನಿಂದು ಹಸರಂಗ 7.54ರ ಎಕಾನಮಿಯಲ್ಲಿ ಬೌಲಿಂಗ್ ಮಾಡಿ ತಾವು ಪಡೆದ ಹಣಕ್ಕೆ ನ್ಯಾಯ ಒದಗಿಸಿದ್ದಾರೆ. ವನಿಂದು ಹಸರಂಗ ಈ ಬಾರಿಯ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಎನಿಸಿಕೊಂಡಿದ್ದಾರೆ.


ಶಾರ್ದೂಲ್ ಠಾಕೂರ್ ಕೂಡ ಈ ಬಾರಿ 10.75 ಕೋಟಿ ಪಡೆದು ಡೆಲ್ಲಿ ಕ್ಯಾಪಿಟಲ್ಸ್ ಪಾಲಾದರು. ಟೂರ್ನಿಯಲ್ಲಿ ಕೇವಲ 15 ವಿಕೆಟ್ ಪಡೆದ ಶಾರ್ದೂಲ್ ಠಾಕೂರ್ 9.78 ಎಕಾನಮಿಯಲ್ಲಿ ಬೌಲಿಂಗ್ ಮಾಡಿ ದುಬಾರಿಯಾದರು.

ಕಳೆದ ಬಾರಿಯ ಟೂರ್ನಿಯಲ್ಲಿ ಅಬ್ಬರಿಸಿದ್ದ ಹರ್ಷಲ್ ಪಟೇಲ್ 10.75 ಕೋಟಿ ಪಡೆದು ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿದರು. ಈ ಬಾರಿ ಕೆಲ ವೈಯಕ್ತಿಕ ಸಮಸ್ಯೆಗಳಿಂದ ಟೂರ್ನಿಯಲ್ಲಿ ಮಂಕಾದ ಹರ್ಷಲ್ ಪಟೇಲ್ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಲಿಲ್ಲ. ಒಟ್ಟು 19 ವಿಕೆಟ್ ಪಡೆದ ಹರ್ಷಲ್ ಪಟೇಲ್ 7.66ರ ಎಕಾನಮಿ ದರದಲ್ಲಿ ಬೌಲಿಂಗ್ ಮಾಡಿದರು. ಆದರೆ ಹರ್ಷಲ್ ಪಟೇಲ್ ಮಹತ್ವದ ಪಂದ್ಯಗಳಲ್ಲಿ ಅದರಲ್ಲಿಯೂ ಡೆತ್ ಓವರ್‌ಗಳಲ್ಲಿ ನೀಡಿದ ಪ್ರದರ್ಶನ ತಂಡಕ್ಕೆ ಅತ್ಯಮೂಲ್ಯವಾಗಿತ್ತು.


ಕಳೆದ ಬಾರಿಯ ಐಪಿಎಲ್ ಆವೃತ್ತಿಯ ಫ್ಲಾಪ್ ಆಟಗಾರ ನಿಕೋಲಸ್ ಪೂರನ್ ಈ ಬಾರಿ 10.75 ಕೋಟಿಗೆ ಸನ್ ರೈಸರ್ಸ್ ಹೈದರಬಾದ್ ಪಾಲಾದರು. ಇಷ್ಟು ಮೊತ್ತಕ್ಕೆ ಈತನನ್ನು ಖರೀದಿಸಿದ್ದಕ್ಕೆ ಕ್ರಿಕೆಟ್ ಅಭಿಮಾನಿಗಳು ಬಾಯಿಯ ಮೇಲೆ ಬೆರಳಿಟ್ಟುಕೊಂಡಿದ್ದರು. ಆದರೆ ಟೂರ್ನಿಯ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆಯನ್ನು ಹುಟ್ಟು ಹಾಕಿದ್ದ ಪೂರನ್ ಟೂರ್ನಿಯುದ್ದಕ್ಕೂ ಮಿಂಚುವಲ್ಲಿ ಯಶಸ್ವಿಯಾಗಲಿಲ್ಲ. ಪಡೆದ ಮೊತ್ತಕ್ಕೆ ತಕ್ಕನಾದ ಆಟ ಆಡುವಲ್ಲಿ ಪೂರನ್ ವಿಫಲರಾದರು. ಪೂರನ್ ಟೂರ್ನಿಯಲ್ಲಿ ಕೇವಲ 306 ರನ್ ಬಾರಿಸಿದರು.

IPL 2022ನಲ್ಲಿ ಅತಿ ಹೆಚ್ಚು ಬಾರಿ Duck out ಆದವರು | #Cricket | OneIndia Kannada
10 ಕೋಟಿ ಪಡೆದವರ ಪ್ರದರ್ಶನ

10 ಕೋಟಿ ಪಡೆದವರ ಪ್ರದರ್ಶನ

ಗುಜರಾತ್ ಟೈಟನ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದರೂ ತಂಡದ ಬೌಲರ್ ಲಾಕಿ ಫರ್ಗ್ಯುಸನ್ ಸಾಧಾರಣ ಪ್ರದರ್ಶನವನ್ನೇ ನೀಡಿದರು. ಹರಾಜಿನಲ್ಲಿ 10 ಕೋಟಿ ಪಡೆದಿದ್ದ ಲಾಕಿ ಫರ್ಗ್ಯುಸನ್ 8.95 ಎಕಾನಮಿ ದರದಲ್ಲಿ 12 ವಿಕೆಟ್ ಪಡೆದರು.

10 ಕೋಟಿ ಪಡೆದ ಮತ್ತೋರ್ವ ಬೌಲರ್ ಆವೇಶ್ ಖಾನ್ ಈ ಬಾರಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಕಣಕ್ಕಿಳಿದರು. 8.72 ಎಕಾನಮಿ ದರದಲ್ಲಿ ಬೌಲಿಂಗ್ ಮಾಡಿದ ಅವೇಶ್ ಖಾನ್ 18 ವಿಕೆಟ್ ಪಡೆದರು.

ಕನ್ನಡಿಗ ಪ್ರಸಿದ್ಧ್ ಕೃಷ್ಣ 10 ಕೋಟಿ ಪಡೆಯುವುದರ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡದ ಪಾಲಾದರು. 8.28 ಎಕಾನಮಿ ದರದಲ್ಲಿ ಬೌಲಿಂಗ್ ಮಾಡಿದ ಪ್ರಸಿದ್ಧ ಕೃಷ್ಣ 19 ವಿಕೆಟ್ ಪಡೆದರು. ತಂಡದ ನಿರ್ಣಾಯಕ ಪಂದ್ಯಗಳಲ್ಲಿ ಕೆಲವೊಮ್ಮೆ ಉತ್ತಮ ಪ್ರದರ್ಶನ ನೀಡಿದರೆ ಮತ್ತೊಮ್ಮೆ ಹೆಚ್ಚು ರನ್ ನೀಡಿ ಕಳಪೆ ಪ್ರದರ್ಶನವನ್ನು ಕೂಡ ಪ್ರಸಿದ್ಧ್ ಕೃಷ್ಣ ನೀಡಿದ್ದಾರೆ.

Story first published: Wednesday, June 1, 2022, 13:41 [IST]
Other articles published on Jun 1, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X