ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2022: ಈ ತಾಣದಲ್ಲಿಯೇ ಟೂರ್ನಿ ಬಹುತೇಕ ನಿಶ್ಚಿತ: ಫೆಬ್ರವರಿಯಲ್ಲಿ ಘೋಷಣೆ

IPL 2022: Mumbai will host 15th Season of IPL, official announcement on February

ಕೊರೊನಾವೈರಸ್‌ನ ಕಾರಣದಿಂದಾಗಿ ಈ ಬಾರಿಯ ಐಪಿಎಲ್ ತಾಣದ ಬಗೆಗಿನ ಗೊಂದಲ ಮುಂದುವರಿದಿದೆ. ಭಾರತದಲ್ಲಿ ಒಮೈಕ್ರಾನ್ ರೂಪಾಂತರಿಯ ಅಬ್ಬರ ಹೆಚ್ಚಾಗಿರುವ ಕಾರಣ ವಿದೇಶದಲ್ಲಿ ನಡೆಸುವುದು ಸೂಕ್ತ ಎಂಬ ಅಭಿಪ್ರಾಯಗಳು ವ್ಯಕ್ತವಾಗಿತ್ತು. ಆದರೆ ಇದೀಗ ಭಾರತದಲ್ಲಿಯೇ ಐಪಿಎಲ್ ಟೂರ್ನಿಯನ್ನು ಆಯೋಜೊಸುವ ನಿರ್ಧಾರವನ್ನು ಬಿಸಿಸಿಐ ಪ್ರಕಟಿಸುವ ಸಾಧ್ಯತೆ ದಟ್ಟವಾಗಿದೆ. ಅದರಲ್ಲೂ ಐಪಿಎಲ್ 15ನೇ ಆವೃತ್ತಿಯ ಸಂಪೂರ್ಣ ಪಂದ್ಯಗಳು ಮುಂಬೈನಲ್ಲಿಯೇ ಆಯೋಜನೆಯಾಗುವ ಸಾಧ್ಯತೆ ಹೆಚ್ಚಾಗಿದೆ.

ಬಿಸಿಸಿಐ ಪದಾಧಿಕಾರಿಗಳು ಈ ವಿಚಾರವಾಗಿ ಚರ್ಚಿಸಲು ಗುರುವಾರ ಸಬೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಐಪಿಎಲ್ ಅನ್ನು ಸಂಪೂರ್ಣವಾಗಿ ಮುಂಬೈನಲ್ಲಿ ಆಯೋಜಿಸುವುದು ಉತ್ತಮ ಪರಿಹಾರವಾಗಿದೆ ಎಂದು ಒಮ್ಮತಕ್ಕೆ ಬರಲಾಗಿದೆ ಎಂದು ವರದಿಯಾಗಿದೆ. ಫೆಬ್ರವರಿ 20 ರಂದು ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳಲಿದೆ.

ಭಾರತದ ಮಧ್ಯಮ ಕ್ರಮಾಂಕದ ಸಮಸ್ಯೆಗೆ ಈತನೇ ಪರಿಹಾರ: ದಿನೇಶ್ ಕಾರ್ತಿಕ್ ಹೀಗಂದಿದ್ದು ಯಾರ ಬಗ್ಗೆ?ಭಾರತದ ಮಧ್ಯಮ ಕ್ರಮಾಂಕದ ಸಮಸ್ಯೆಗೆ ಈತನೇ ಪರಿಹಾರ: ದಿನೇಶ್ ಕಾರ್ತಿಕ್ ಹೀಗಂದಿದ್ದು ಯಾರ ಬಗ್ಗೆ?

ದಿ ಟೆಲಿಗ್ರಾಫ್ ವರದಿಯ ಪ್ರಕಾರ ಮುಂಬೈ ಮತ್ತು ಸುತ್ತಮುತ್ತಲಿನ 3 ತಾಣಗಳಲ್ಲಿ ಐಪಿಎಲ್‌ನ ಎಲ್ಲಾ ಪಂದ್ಯಗಳನ್ನು ಆಯೋಜಿಸಲು ಸಾಧ್ಯವಾಗುವ ಕಾರಣದಿಂದಾಗಿ ಮಂಡಳಿಯು ಮುಂಬೈಯನ್ನು ಐಪಿಎಲ್ ನಡೆಸಲು ಉತ್ತಮ ತಾಣ ಎಂದು ನಿರ್ಧರಿಸಿದೆ ಎನ್ನಲಾಗಿದೆ.

"ನಾವು ಇಲ್ಲಿಯವರೆಗೆ ಮುಂಬೈ ಹೊರತುಪಡಿಸಿ ಬೇರೆ ಸ್ಥಳದ ಬಗ್ಗೆ ಯೋಚಿಸುತ್ತಿಲ್ಲ. ಕೊರೊನಾವೈರಸ್‌ನ ಮೂರನೇ ಅಲೆಯ ಪ್ರಭಾವ ಕಡಿಮೆಯಾಗುತ್ತಿದೆ. ಹೀಗಾಗಿ ಟೂರ್ನಿಯನ್ನು ವಿದೇಶದಲ್ಲಿ ಆಯೋಜಿಸುವ ಅಗತ್ಯವಿಲ್ಲ" ಎಂದು ಬಿಸಿಸಿಐನ ಮೂಲಗಳ ಹೇಳಿಕೆಯನ್ನು ಉಲ್ಲೇಖಿಸಿ ಟೆಲಿಗ್ರಾಫ್ ವರದಿ ಮಾಡಿದೆ.

ಭಾರತ vs ವೆಸ್ಟ್ ಇಂಡೀಸ್ ಏಕದಿನ: ತಂಡದಿಂದ ಹೊರಬಿದ್ದ ಕೆಎಲ್ ರಾಹುಲ್; ಕಾರಣವೇನು?ಭಾರತ vs ವೆಸ್ಟ್ ಇಂಡೀಸ್ ಏಕದಿನ: ತಂಡದಿಂದ ಹೊರಬಿದ್ದ ಕೆಎಲ್ ರಾಹುಲ್; ಕಾರಣವೇನು?

Sachin Tendulkarಗೆ DRS ಇದ್ದಿದ್ದರೆ ಕಥೆಯೇ ಬೇರೆ ಆಗುತ್ತಿತ್ತು | Oneindia Kannada

ಬಿಸಿಸಿಐ ತನ್ನ ಇತ್ತೀಚಿನ ಅಧಿಕೃತ ಹೇಳಿಕೆಯಲ್ಲಿ ಐಪಿಎಲ್ ಮಾರ್ಚ್ 27 ರಂದು ಆರಂಬವಾಗಲಿದೆ ಎಂದು ತಿಳಿಸಿದೆ. ಭಾರತದಲ್ಲಿಯೇ ಐಪಿಎಲ್ ಅನ್ನು ಆಯೋಜಿಸಲು ಮಂಡಳಿ ಮತ್ತು ಫ್ರಾಂಚೈಸಿಗಳು ಉತ್ಸುಕವಾಗಿವೆ ಎಂದು ಬಿಸಿಸಿಐನ ಕಾರ್ಯದರ್ಶಿ ಜಯ್ ಶಾ ಕಳೆದ ವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ಅದೇ ಹಿನ್ನಲೆಯಲ್ಲಿ ಭಾರತದಲ್ಲಿ ಪ್ರಸ್ತುತ ಕೋವಿಡ್-19 ಪರಿಸ್ಥಿತಿಯನ್ನು ಗಮನಿಸಿ ಬಿಸಿಸಿಐ ಪದಾಧಿಕಾರಿಗಳು ಮುಂಬೈನಲ್ಲಿ ಐಪಿಎಲ್‌ನ ಸಂಪೂರ್ಣ ಋತುವನ್ನು ಆಯೋಜಿಸಲು ಒಪ್ಪಿಗೆಯನ್ನು ನೀಡಿದ್ದಾರೆ.

Story first published: Friday, February 4, 2022, 18:31 [IST]
Other articles published on Feb 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X