ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಲ್ಲಾ IPL ಸೀಸನ್‌ಗಳಲ್ಲಿ 'ಆರೆಂಜ್ ಕ್ಯಾಪ್' ಗೆದ್ದ ಬ್ಯಾಟ್ಸ್‌ಮನ್‌ಗಳು

IPL 2022: Orange Cap Winners List From 2008 To 2022

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಸೀಸನ್‌ನಲ್ಲಿ ಹೊಸ ತಂಡ ಗುಜರಾತ್ ಟೈಟನ್ಸ್ ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಪಟ್ಟಕ್ಕೇರಿದೆ. ರಾಜಸ್ತಾನ ರಾಯಲ್ಸ್ ವಿರುದ್ಧ ಫೈನಲ್ ಪಂದ್ಯದಲ್ಲಿ ಏಳು ವಿಕೆಟ್‌ಗಳ ಅಮೋಘ ಗೆಲುವು ಸಾಧಿಸಿದ ನಂತರ ಈ ವರ್ಷದ ಐಪಿಎಲ್ ಅಭಿಯಾನದಲ್ಲಿ ಯಾರೂ ಊಹಿಸದ ರೀತಿಯಲ್ಲಿ ಗುಜರಾತ್ ಪ್ರಶಸ್ತಿ ಗೆದ್ದು ಬೀಗಿದೆ.

ಬ್ಯಾಟಿಂಗ್ ಹಾಗೂ ಬೌಲಿಂಗ್‌ ಎರಡರಲ್ಲೂ ಮಿಂಚಿದ ಗುಜರಾತ್ ಟೈಟನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು. ರಾಜಸ್ತಾನ ಪರ ಇಡೀ ಸೀಸನ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಜಾಸ್ ಬಟ್ಲರ್‌ಗೆ ಆರೆಂಜ್ ಕ್ಯಾಪ್ ಪ್ರಶಸ್ತಿ ಒಲಿದು ಬಂದರೆ, ಅದೇ ತಂಡದ ಸ್ಪಿನ್ನರ್ ಯುಜ್ವೇಂದ್ರ ಚಹಾಲ್‌ಗೆ ಪರ್ಪಲ್ ಕ್ಯಾಪ್ ಮುಡಿಗೇರಿದೆ.

ಈ ಐಪಿಎಲ್ ಋತುವಿನಲ್ಲಿ ಬಟ್ಲರ್ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ಪ್ರದರ್ಶಿಸಿದರು. ಐಪಿಎಲ್‌ನ 15ನೇ ಸೀಸನ್‌ನಲ್ಲಿ 17 ಪಂದ್ಯಗಳಿಂದ 863 ರನ್‌ಗಳನ್ನು ಗಳಿಸಿ ಆರೆಂಜ್ ಕ್ಯಾಪ್ ಗೆದ್ದುಕೊಂಡಿದ್ದಾರೆ. ಅವರ ಅಮೋಘ ಪ್ರದರ್ಶನಕ್ಕಾಗಿ ಅವರು ಮ್ಯಾನ್ ಆಫ್‌ ದಿ ಸಿರೀಸ್ ಎಂದು ಆಯ್ಕೆಯಾಗಿದ್ದಾರೆ.

ಐಪಿಎಲ್‌ನ ಆರೆಂಜ್ ಕ್ಯಾಪ್‌ನ ಎಲ್ಲಾ ವಿಜೇತರ ಪಟ್ಟಿ

ಐಪಿಎಲ್‌ನ ಆರೆಂಜ್ ಕ್ಯಾಪ್‌ನ ಎಲ್ಲಾ ವಿಜೇತರ ಪಟ್ಟಿ

1. ಶಾನ್ ಮಾರ್ಷ್ (2008)- (ಕಿಂಗ್ಸ್ XI ಪಂಜಾಬ್)- 616 ರನ್- ಐಪಿಎಲ್ 2008
ಐಪಿಎಲ್‌ನ ಉದ್ಘಾಟನಾ ಆವೃತ್ತಿಯಲ್ಲಿ ಕಿಂಗ್ಸ್ XI ಪಂಜಾಬ್ ಪರ ಆಸ್ಟ್ರೇಲಿಯಾದ ಶಾನ್ ಮಾರ್ಷ್ 616 ರನ್ ಗಳಿಸಿ ಟಿ20 ಐಪಿಎಲ್ ಲೀಗ್‌ನ ಇತಿಹಾಸದಲ್ಲಿ ಮೊದಲ ಆರೆಂಜ್ ಕ್ಯಾಪ್ ಗೆದ್ದಿರುವ ದಾಖಲೆ ಅವರ ಹೆಸರಿನಲ್ಲಿದೆ.

2. ಮ್ಯಾಥ್ಯೂ ಹೇಡನ್ (2009)- ಐಪಿಎಲ್ 2009ರ ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಆರಂಭಿಕ ಮ್ಯಾಥ್ಯೂ ಹೇಡನ್ ಅಗ್ರ ಸ್ಥಾನ ಪಡೆದಿದ್ದರು. 2009ರ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಮ್ಯಾಥ್ಯೂ ಹೇಡನ್ 572 ರನ್ ಗಳಿಸಿದ್ದರು.

3. ಸಚಿನ್ ತೆಂಡೂಲ್ಕರ್ (2010)- ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಐಪಿಎಲ್ 2010ರ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿ ಅತಿ ಹೆಚ್ಚು ಅಂದರೆ 618 ರನ್ ಗಳಿಸಿದ ನಂತರ ಆರೆಂಜ್ ಕ್ಯಾಪ್ ಪಡೆದರು.

ಕ್ರಿಸ್ ಗೇಲ್ (2012)

ಕ್ರಿಸ್ ಗೇಲ್ (2012)

4. ಕ್ರಿಸ್ ಗೇಲ್ (2011)- ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದ ಕ್ರಿಸ್ ಗೇಲ್ 608 ರನ್ ಬಾರಿಸಿದ್ದರು. ಐಪಿಎಲ್ ಆವೃತ್ತಿಯಲ್ಲಿ ಗೇಲ್ ತಮ್ಮ ಮೊದಲ ಆರೆಂಜ್ ಕ್ಯಾಪ್ ಗೆದ್ದಿದ್ದರು ಮತ್ತು ಆ ವರ್ಷ ಆರ್‌ಸಿಬಿ ತಂಡ ಐಪಿಎಲ್ ಫೈನಲ್‌ಗೇರಿತ್ತು.

5. ಕ್ರಿಸ್ ಗೇಲ್ (2012)- ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿ 733 ರನ್ ಗಳಿಸಿದ್ದ ವೆಸ್ಟ್ ಇಂಡೀಸ್ ಆಲ್‌ರೌಂಡರ್ ಕ್ರಿಸ್ ಗೇಲ್ ಐಪಿಎಲ್ 2012ರಲ್ಲಿ 733 ರನ್ ಪೇರಿಸಿ ಐಪಿಎಲ್‌ನಲ್ಲಿ ಸತತ ಎರಡನೇ ಬಾರಿಗೆ ಆರೆಂಜ್ ಕ್ಯಾಪ್ ಗೆದ್ದರು.

6. ಮೈಕಲ್ ಹಸ್ಸಿ (2013)- ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದ ಮೈಕಲ್ ಹಸ್ಸಿ 52.35 ರ ಅದ್ಭುತ ಸರಾಸರಿಯಲ್ಲಿ 733 ರನ್ ಸಿಡಿಸಿದ್ದರು. ಹೀಗಾಗಿ 2013ರಲ್ಲಿ ಮೈಕಲ್ ಹಸ್ಸಿ ಆರೆಂಜ್ ಕ್ಯಾಪ್ ವಿಜೇತರಾಗಿದ್ದರು.

ವಿರಾಟ್ ಕೊಹ್ಲಿ (2016)

ವಿರಾಟ್ ಕೊಹ್ಲಿ (2016)

7. ರಾಬಿನ್ ಉತ್ತಪ್ಪ (2014)- ಕನ್ನಡಿಗ ರಾಬಿನ್ ಉತ್ತಪ್ಪ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ಪರ ಬ್ಯಾಟಿಂಗ್‌ನಲ್ಲಿ ಕೆಲವು ಅದ್ಭುತ ಪ್ರದರ್ಶನ ನೀಡಿದ್ದರು ಮತ್ತು ಐಪಿಎಲ್‌ನ 2014ರ ಋತುವಿನಲ್ಲಿ 660 ರನ್ ಗಳಿಸಿ ಆರೆಂಜ್ ಕ್ಯಾಪ್ ಅನ್ನು ಪಡೆದರು. ರಾಬಿನ್ ಉತ್ತಪ್ಪ ಅವರ ಬ್ಯಾಟಿಂಗ್ ಪರಾಕ್ರಮವು ಕೆಕೆಆರ್ ಫ್ರಾಂಚೈಸಿ ತಮ್ಮ ಎರಡನೇ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲಲು ಸಹಾಯ ಮಾಡಿತು.

8. ಡೇವಿಡ್ ವಾರ್ನರ್ (2015)- ಸನ್ ರೈಸರ್ಸ್ ಹೈದರಾಬಾದ್ ಪರ 2015ರ ಐಪಿಎಲ್ ಸೀಸನ್ ಆಸೀಸ್ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್‌ಗೆ ಸ್ಮರಣೀಯ ಪ್ರವಾಸವಾಗಿತ್ತು. ಐಪಿಎಲ್ ಎಂಟನೇ ಸೀಸನ್‌ನಲ್ಲಿ ಅವರು ತಮ್ಮ ಮೊದಲ ಆರೆಂಜ್ ಕ್ಯಾಪ್ ಗೆದ್ದರು ಮತ್ತು ಆ ಋತುವಿನಲ್ಲಿ ವಾರ್ನರ್ 562 ರನ್ ಗಳಿಸಿದ್ದರು.

9. ವಿರಾಟ್ ಕೊಹ್ಲಿ (2016)- 'ಕಿಂಗ್ ಕೊಹ್ಲಿ' 2016ರಲ್ಲಿ ಐಪಿಎಲ್ ಅದ್ಬುತವಾದ ಋತುವನ್ನು ಹೊಂದಿದ್ದರು. ವಿರಾಟ್ ಕೊಹ್ಲಿ 973 ರನ್‌ಗಳನ್ನು ದಾಖಲಿಸಿದ್ದರು. ಈ ಮೂಲಕ ಐಪಿಎಲ್‌ನ ಒಂದು ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾದರು. ನಾಲ್ಕು ಶತಕಗಳು ಮತ್ತು ಏಳು ಅರ್ಧ ಶತಕಗಳೊಂದಿಗೆ ವಿರಾಟ್ ಕೊಹ್ಲಿ, ಆರೆಂಜ್ ಕ್ಯಾಪ್ ಗೆದ್ದರು. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಎಂಟು ರನ್‌ಗಳ ಸೋಲನ್ನು ಅನುಭವಿಸಬೇಕಾಯಿತು.

ಡೇವಿಡ್ ವಾರ್ನರ್ (2019)

ಡೇವಿಡ್ ವಾರ್ನರ್ (2019)

10. ಡೇವಿಡ್ ವಾರ್ನರ್ (2017)- (ಸನ್ ರೈಸರ್ಸ್ ಹೈದರಾಬಾದ್ ಪರ ಐಪಿಎಲ್ 2017ರ ಋತುವಿನಲ್ಲಿ ಒಟ್ಟು 641 ರನ್ ಗಳಿಸಿದ ನಂತರ ಡೇವಿಡ್ ವಾರ್ನರ್ ಮತ್ತೊಮ್ಮೆ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದರು.

11. ಕೇನ್ ವಿಲಿಯಮ್ಸನ್ (2018)- ಸನ್ ರೈಸರ್ಸ್ ಹೈದರಾಬಾದ್ ಪರ ಐಪಿಎಲ್ 2018ರಲ್ಲಿ, ಕೇನ್ ವಿಲಿಯಮ್ಸನ್ 52.50ರ ಸರಾಸರಿಯಲ್ಲಿ 735 ರನ್ ಗಳಿಸಿ, ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಗಳಿಸಿದರು. ಆ ಆವೃತ್ತಿಯ ಐಪಿಎಲ್‌ನಲ್ಲಿ ವಿಲಿಯಮ್ಸನ್ ಎಂಟು ಅರ್ಧಶತಕಗಳನ್ನು ಗಳಿಸಿದ್ದರು.

12. ಡೇವಿಡ್ ವಾರ್ನರ್ (2019)- ಸನ್ ರೈಸರ್ಸ್ ಹೈದರಾಬಾದ್ ಪರ ಆಡಿದ್ದ ಡೇವಿಡ್ ವಾರ್ನರ್, 2019ರ ಐಪಿಎಲ್ ಆವೃತ್ತಿಯಲ್ಲಿ ಆರೆಂಜ್ ಕ್ಯಾಪ್ ಗೆಲ್ಲಲು ಆಸೀಸ್ ಓಪನರ್ 69.20 ಸರಾಸರಿಯಲ್ಲಿ 692 ರನ್ ಗಳಿಸಿದ್ದರು. ಆ ಋತುವಿನಲ್ಲಿ ಅವರ ಸ್ಟ್ರೈಕ್ ರೇಟ್ 143.87 ಆಗಿತ್ತು.

IPL ಮೈದಾನಗಳ ಸಿಬ್ಬಂದಿಗೆ 1.25 ಕೋಟಿ ರೂ. ಘೋಷಿಸಿದ BCCI | #Cricket | Oneindia Kannada
ರುತುರಾಜ್ ಗಾಯಕ್ವಾಡ್ (2021)

ರುತುರಾಜ್ ಗಾಯಕ್ವಾಡ್ (2021)

13. ಕೆಎಲ್ ರಾಹುಲ್ (2020)- ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿದ್ದ ಕನ್ನಡಿಗ ಕೆಎಲ್ ರಾಹುಲ್ 670 ರನ್ ಗಳಿಸಿ 2020ರ ಐಪಿಎಲ್‌ನ ಆರೆಂಜ್ ಕ್ಯಾಪ್ ವಿಜೇತರಾಗಿದ್ದರು. ಅಂದಿನ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಕೆಎಲ್ ರಾಹುಲ್ ಐಪಿಎಲ್ 13ನೇ ಆವೃತ್ತಿಯಲ್ಲಿ 670 ರನ್ ಗಳಿಸಿದ್ದರು.

14. ರುತುರಾಜ್ ಗಾಯಕ್ವಾಡ್ (2021)- ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದ ರುತುರಾಜ್ ಗಾಯಕ್ವಾಡ್ 2021ರಲ್ಲಿ 635 ರನ್ ಬಾರಿಸಿದ್ದರು. ಮಹಾರಾಷ್ಟ್ರ ಮೂಲದ ಕ್ರಿಕೆಟಿಗ 45.36 ಸರಾಸರಿಯಲ್ಲಿ ಒಟ್ಟು 635 ರನ್ ಗಳಿಸಿದ್ದರು. ಅವರು ಸಿಎಸ್‌ಕೆ ನಾಲ್ಕನೇ ಐಪಿಎಲ್ ಪ್ರಶಸ್ತಿ ವಿಜೇತರಾಗುವುದರಲ್ಲಿ ಪ್ರಮುಖ ಪಾತ್ರ ವಹಿಸಿದರು.

15. ಜೋಸ್ ಬಟ್ಲರ್ (2022): ರಾಜಸ್ಥಾನ್ ರಾಯಲ್ಸ್ ಪರ ಆಡಿದ ಜೋಸ್ ಬಟ್ಲರ್, ಎರಡನೇ ಅತ್ಯಧಿಕ 863 ರನ್ ಗಳಿಸಿ ತಮ್ಮ ತಂಡವನ್ನು ರನ್ನರ್ಅಪ್ ಸ್ಥಾನದಲ್ಲಿ ನಿಲ್ಲಿಸಿದರು. ಅವರು ನಾಲ್ಕು ಅರ್ಧ ಶತಕಗಳ ಜೊತೆಗೆ ನಾಲ್ಕು ಶತಕಗಳನ್ನು ಗಳಿಸಿ 863 ರನ್ ಗಳಿಸಿದರು. ಅವರ ಸ್ಟ್ರೈಕ್ ರೇಟ್ ಕೂಡ 149.05 ಆಗಿತ್ತು.

Story first published: Wednesday, June 1, 2022, 10:23 [IST]
Other articles published on Jun 1, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X