IPL 2022: ಕ್ವಾಲಿಫೈಯರ್ 1 ಪಂದ್ಯ ನಿಗದಿ, ಗುಜರಾತ್ ಜೊತೆ ಸೆಣಸಾಡಲಿದೆ ಈ ತಂಡ; ಇಲ್ಲಿದೆ ವಿವರ

ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದಲ್ಲಿ ಇನ್ನೆರಡು ಪಂದ್ಯಗಳು ಮಾತ್ರ ಬಾಕಿ ಉಳಿದುಕೊಂಡಿದ್ದು, ನಿನ್ನೆ ( ಮೇ 20 ) ಮುಂಬೈನ ಬ್ರಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಜಯ ಸಾಧಿಸುವುದರ ಮೂಲಕ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿಕೆ ಕಂಡು ಪ್ಲೇ ಆಫ್ ಸುತ್ತಿಗೆ ಅಧಿಕೃತ ಪ್ರವೇಶವನ್ನು ಪಡೆದುಕೊಂಡಿತು. ಹಾಗೂ ಈ ಗೆಲುವಿನ ಮೂಲಕ ಗುಜರಾತ್ ಟೈಟನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಂತರ ಪ್ಲೇ ಆಫ್ ಪ್ರವೇಶಿಸಿದ ಮೂರನೇ ತಂಡ ಎಂದೆನಿಕೊಂಡಿತು.

RR vs CSK: ಜಡೇಜಾ, ರೋಹಿತ್ ದಾಖಲೆ ಮುರಿದು ಹೊಸ ಇತಿಹಾಸ ನಿರ್ಮಿಸಿದ ರಿಯಾನ್ ಪರಾಗ್!RR vs CSK: ಜಡೇಜಾ, ರೋಹಿತ್ ದಾಖಲೆ ಮುರಿದು ಹೊಸ ಇತಿಹಾಸ ನಿರ್ಮಿಸಿದ ರಿಯಾನ್ ಪರಾಗ್!

ಇನ್ನು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಣಕ್ಕೆ ಇಳಿಯುವುದಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿತ್ತು ಹಾಗೂ ಗುಜರಾತ್ ಟೈಟನ್ಸ್ ಅಗ್ರಸ್ಥಾನ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದವು. ಈ ಪಂದ್ಯದಲ್ಲಿ ಗೆಲುವು ಸಾಧಿಸಿದ ರಾಜಸ್ಥಾನ್ ರಾಯಲ್ಸ್ 18 ಅಂಕಗಳನ್ನು ಮುಟ್ಟುವುದರ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಅಂಕಗಳಲ್ಲಿ ಸರಿದೂಗಿಸಿತು.

CSK vs RR: ಆಪದ್ಬಾಂಧವನಾದ ಅಶ್ವಿನ್, ಮಿಂಚಿದ ಜೈಸ್ವಾಲ್; ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆದ್ದ ರಾಜಸ್ಥಾನ್CSK vs RR: ಆಪದ್ಬಾಂಧವನಾದ ಅಶ್ವಿನ್, ಮಿಂಚಿದ ಜೈಸ್ವಾಲ್; ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆದ್ದ ರಾಜಸ್ಥಾನ್

ಹೀಗೆ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಜಸ್ತಾನ್ ರಾಯಲ್ಸ್ ಎರಡೂ ತಂಡಗಳೂ ತಲಾ 18 ಅಂಕಗಳನ್ನು ಪಡೆದುಕೊಂಡಿದ್ದರೂ ಸಹ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕಿಂತ ರಾಜಸ್ಥಾನ್ ರಾಯಲ್ಸ್ ತಂಡದ ನೆಟ್ ರನ್ ರೇಟ್ ಅಧಿಕವಿರುವ ಕಾರಣ ಸಂಜು ಸ್ಯಾಮ್ಸನ್ ಪಡೆ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮೂರನೇ ಸ್ಥಾನಕ್ಕೆ ತಳ್ಳಿ ಎರಡನೇ ಸ್ಥಾನ ಪಡೆದು ಕ್ವಾಲಿಫೈಯರ್ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ. ಇನ್ನು ಈ ಪಂದ್ಯ ಮುಕ್ತಾಯವಾದ ನಂತರ 3 ತಂಡಗಳು ಪ್ಲೇ ಆಫ್ ಪ್ರವೇಶಿಸುವಲ್ಲಿ ಯಶಸ್ವಿಯಾದ ಕಾರಣ ಪ್ಲೇ ಆಫ್ ಸುತ್ತಿನ ಪಂದ್ಯವೊಂದು ನಿಗದಿಯಾಗಿದೆ. ಈ ಕುರಿತಾದ ಮತ್ತಷ್ಟು ಮಾಹಿತಿ ಮುಂದೆ ಇದೆ ಓದಿ..

ಕ್ವಾಲಿಫೈಯರ್ 1 ಪಂದ್ಯ ನಿಗದಿ

ಕ್ವಾಲಿಫೈಯರ್ 1 ಪಂದ್ಯ ನಿಗದಿ

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವಿನ ಫಲಿತಾಂಶ ಹೊರಬಿದ್ದ ನಂತರ ಅಂಕಪಟ್ಟಿಯಲ್ಲಿ ಗುಜರಾತ್ ಟೈಟನ್ಸ್ ಅಗ್ರಸ್ಥಾನ, ರಾಜಸ್ತಾನ್ ರಾಯಲ್ಸ್ ದ್ವಿತೀಯ ಸ್ಥಾನ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತೃತೀಯ ಸ್ಥಾನಗಳನ್ನು ಪಡೆದುಕೊಂಡಿದ್ದು, ಟಾಪ್ 2 ಸ್ಥಾನಗಳನ್ನು ಪಡೆದುಕೊಂಡಿರುವ ಗುಜರಾತ್ ಟೈಟನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಕ್ವಾಲಿಫೈಯರ್ 1 ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಇತ್ತಂಡಗಳ ನಡುವಿನ ಈ ಪಂದ್ಯ ಮೇ 24ರ ಮಂಗಳವಾರದಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಈ ಪಂದ್ಯದಲ್ಲಿ ಗೆದ್ದವರು ಫೈನಲ್‌ಗೆ, ಸೋತವರಿಗೆ ಮತ್ತೊಂದು ಅವಕಾಶ

ಈ ಪಂದ್ಯದಲ್ಲಿ ಗೆದ್ದವರು ಫೈನಲ್‌ಗೆ, ಸೋತವರಿಗೆ ಮತ್ತೊಂದು ಅವಕಾಶ

ಹೌದು, ಅಂಕಪಟ್ಟಿಯಲ್ಲಿ ಟಾಪ್ 2 ಸ್ಥಾನಗಳನ್ನು ಪಡೆದುಕೊಳ್ಳುವ ತಂಡಗಳಿಗೆ ಪ್ಲೇ ಆಫ್ ಸುತ್ತಿನಲ್ಲಿ 2 ಅವಕಾಶಗಳು ಲಭಿಸಲಿವೆ. ಗುಜರಾತ್ ಟೈಟನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವಿನ ಈ ಕ್ವಾಲಿಫೈಯರ್ 1 ಪಂದ್ಯದಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆದುಕೊಳ್ಳಲಿದ್ದರೆ, ಸೋಲುವ ತಂಡ ಎಲಿಮಿನೇಟರ್ ಸುತ್ತಿನಲ್ಲಿ ಗೆದ್ದು ಬರುವ ತಂಡದ ಜತೆ ಕ್ವಾಲಿಫೈಯರ್ 2 ಪಂದ್ಯವನ್ನು ಆಡಲಿದೆ.

ರೋಹಿತ್ ಪಡೆನ ಎದುರಿಸೊಕೆ ನಾವ್ ರೆಡಿ!! | OneIndia Kannada
2018ರ ನಂತರ ಮೊದಲ ಬಾರಿಗೆ ಪ್ಲೇ ಆಫ್ ಪ್ರವೇಶಿಸಿದ ರಾಜಸ್ಥಾನ್ ರಾಯಲ್ಸ್

2018ರ ನಂತರ ಮೊದಲ ಬಾರಿಗೆ ಪ್ಲೇ ಆಫ್ ಪ್ರವೇಶಿಸಿದ ರಾಜಸ್ಥಾನ್ ರಾಯಲ್ಸ್

ಈ ಬಾರಿ ಪ್ಲೇ ಆಫ್ ಸುತ್ತಿಗೆ ಲಗ್ಗೆ ಇಟ್ಟಿರುವ ರಾಜಸ್ಥಾನ್ ರಾಯಲ್ಸ್ ಬರೋಬ್ಬರಿ 4 ವರ್ಷಗಳ ನಂತರ ಈ ಮೈಲಿಗಲ್ಲನ್ನು ಮುಟ್ಟಿದೆ. 2018ರಲ್ಲಿ ಪ್ಲೇ ಆಫ್ ಸುತ್ತಿಗೆ ಪ್ರವೇಶವನ್ನು ಪಡೆದುಕೊಂಡಿದ್ದ ರಾಜಸ್ಥಾನ್ ರಾಯಲ್ಸ್ ನಂತರ ನಡೆದ ಎಲ್ಲಾ ಐಪಿಎಲ್ ಆವೃತ್ತಿಗಳಲ್ಲಿಯೂ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದು ವಿಫಲವಾಗಿತ್ತು. ಆದರೆ ಈ ಬಾರಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಗಿಟ್ಟಿಸಿಕೊಳ್ಳುವುದರ ಮೂಲಕ ಕ್ವಾಲಿಫೈಯರ್ 1 ಪಂದ್ಯಕ್ಕೆ ಲಗ್ಗೆಯಿಟ್ಟು ಉತ್ತಮ ಸಾಧನೆ ಮಾಡಿದೆ.

For Quick Alerts
ALLOW NOTIFICATIONS
For Daily Alerts
Story first published: Saturday, May 21, 2022, 7:56 [IST]
Other articles published on May 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X