ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಫೈನಲ್ ವೀಕ್ಷಿಸಲಿದ್ದಾರೆಯೇ ಪ್ರಧಾನಿ ಮೋದಿ? ಸ್ಟೇಡಿಯಂ ಸುತ್ತ ಬಿಗಿ ಬಂದೋಬಸ್ತ್‌

Narendra modi

ಐಪಿಎಲ್ 15ನೇ ಸೀಸನ್‌ನ ಅಂತಿಮ ಪ್ರಶಸ್ತಿ ಸುತ್ತಿನ ಕದನಕ್ಕೆ ಕೌಂಟ್‌ಡೌನ್ ಶುರುವಾಗಿದೆ. ರಾಜಸ್ತಾನ್ ರಾಯಲ್ಸ್ ಹಾಗೂ ಗುಜರಾತ್ ಟೈಟನ್ಸ್‌ ಈ ಸೀಸನ್‌ನ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯಾವಳಿ ನಡೆಯಲಿದೆ. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ 1 ಲಕ್ಷ 20 ಸಾವಿರ ಅಭಿಮಾನಿಗಳು ಮೈದಾನದಲ್ಲಿ ಪಂದ್ಯ ವೀಕ್ಷಿಸಲಿದ್ದಾರೆ. ಈಗಾಗಲೇ ಸಂಪೂರ್ಣ ಟಿಕೆಟ್ ಮಾರಾಟ ಆಗಿದ್ದು, ಅಂತಿಮ ವ್ಯವಸ್ಥೆ ಮಾಡಲಾಗುತ್ತಿದೆ.

ಈ ಪರಿಸ್ಥಿತಿಯಲ್ಲಿ ಇಂದು ಏಕಾಏಕಿ ಅಹಮದಾಬಾದ್ ನಗರದಾದ್ಯಂತ ಪೊಲೀಸರು ಕೇಂದ್ರೀಕರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ಪಾಲ್ಗೊಳ್ಳುವ ನಿರೀಕ್ಷೆಯಿದೆ. 17 ಡಿಜಿಪಿಗಳು, 4 ಡಿಐಜಿಗಳು, 28 ಎಸಿಪಿಗಳು, 51 ಇನ್ಸ್‌ಪೆಕ್ಟರ್‌ಗಳು, 268 ಸಬ್ ಇನ್‌ಸ್ಪೆಕ್ಟರ್‌ಗಳು, 5000 ಗಾರ್ಡ್‌ಗಳು ಮತ್ತು 1000 ಅರೆಸೇನಾ ಸಿಬ್ಬಂದಿ ಸೆಕ್ಯುರಿಟಿಯಲ್ಲಿದ್ದಾರೆ.

ಫೈನಲ್ ಆರಂಭಕ್ಕೂ ಮುನ್ನ ಸಮಾರೋಪ ಸಮಾರಂಭ ಏರ್ಪಡಿಸಲಾಗಿದೆ. ಇದರಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಮತ್ತು ಸಂಗೀತ ದಿಗ್ಗಜ ಎ.ಆರ್. ರೆಹಮಾನ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಅಷ್ಟೇ ಅಲ್ಲ ಹಾಲಿವುಡ್ ಸೆಲೆಬ್ರಿಟಿಗಳು ಕೂಡ ಫೈನಲ್ ನಲ್ಲಿ ಭಾಗವಹಿಸಲಿದ್ದಾರೆ.

ಈ ಪಂದ್ಯವನ್ನು ಯಾರು ಗೆಲ್ಲುತ್ತಾರೆ ಎಂಬುದು ಊಹಿಸಲಾಗದಷ್ಟು ಕಷ್ಟ. ಏಕೆಂದರೆ ಗುಜರಾತ್ ತಂಡ ಸತತ ಗೆಲುವಿನೊಂದಿಗೆ ಫೈನಲ್ ಗೆ ಬಂದಿದೆ. ಕ್ವಾಲಿಫೈಯರ್ ಒಂದರಲ್ಲಿ ರಾಜಸ್ಥಾನ ಸೋತರೂ ಕಮ್ ಬ್ಯಾಕ್ ನೀಡಿರುವುದರಿಂದ ನಿರೀಕ್ಷೆ ಹೆಚ್ಚಿದೆ.

Story first published: Sunday, May 29, 2022, 0:12 [IST]
Other articles published on May 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X