
ಪಾಯಿಂಟ್ಸ್ ಟೇಬಲ್
ಈ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ ಐದು ವಿಕೆಟ್ಗಳ ಗೆಲುವಿನ ಬಳಿಕ ಮುಂಬೈ ಇಂಡಿಯನ್ಸ್ 6 ಪಾಯಿಂಟ್ಸ್ನೊಂದಿಗೆ ಕೊನೆಯ ಸ್ಥಾನದಲ್ಲಿಯೇ ಉಳಿದುಕೊಂಡಿದೆ. ಮುಂಬೈ ಆಡಿದ 12ರಲ್ಲಿ ಮೂರು ಗೆಲುವು ಮತ್ತು 9 ಪಂದ್ಯ ಸೋತಿದೆ.
ಮೊದಲ ಮೂರು ಸ್ಥಾನದಲ್ಲಿ ಗುಜರಾತ್ ಬಳಿಕ ಲಕ್ನೋ (16) ರಾಜಸ್ತಾನ್ ರಾಯಲ್ಸ್ 14 ಪಾಯಿಂಟ್ಸ್ನೊಂದಿಗಿದ್ದು, ಆರ್ಸಿಬಿ ನಾಲ್ಕು ಹಾಗೂ ನಂತರದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ರನ್ರೇಟ್ ಮೂಲಕ ಐದನೇ ಸ್ಥಾನ ಅಲಂಕರಿಸಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಜಡೇಜಾ ಔಟ್?: ಉತ್ತರ ಕೊಟ್ಟ ಸಿಎಸ್ಕೆ ಸಿಇಒ ಹೇಳಿದ್ದಿಷ್ಟು

ಆರೆಂಜ್ ಕ್ಯಾಪ್
ಟೂರ್ನಿಯಲ್ಲಿ ಅಮೋಘ ಫಾರ್ಮ್ನಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಜೋಸ್ ಬಟ್ಲರ್ ಮೂರು ಶತಕದ ಮೂಲಕ ಅತಿ ಹೆಚ್ಚು ರನ್ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 12 ಪಂದ್ಯಗಳಲ್ಲಿ ಬಟ್ಲರ್ 625 ರನ್ಗಳಿಸಿದ್ದಾರೆ. ಇದರಲ್ಲಿ ಮೂರು ಶತಕ ಹಾಗೂ ಮೂರು ಅರ್ಧ ಶತಕ ಸೇರಿದೆ. ಎರಡನೇ ಸ್ಥಾನದಲ್ಲಿ ಕೆ.ಎಲ್ ರಾಹುಲ್ ಇದ್ದು 459 ರನ್ಗಳಿಸಿದ್ದಾರೆ. ನಂತರದಲ್ಲಿ ಡೇವಿಡ್ ವಾರ್ನರ್ 427 ರನ್, ಫಾಫ್ ಡುಪ್ಲೆಸಿಸ್ 389 ರನ್, ಶುಭಮನ್ ಗಿಲ್ 384 ರನ್ ಕಲೆಹಾಕಿದ್ದಾರೆ.
ಬಹುಶಃ CSK ಜೊತೆಗಿನ ರವೀಂದ್ರ ಜಡೇಜಾ ಸಂಬಂಧ ಮುಗಿಯಿತು: ಮೈಕಲ್ ವಾನ್

ಪರ್ಪಲ್ ಕ್ಯಾಪ್
ಇನ್ನು ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಗೆ ನೀಡುವ ಪರ್ಪಲ್ ಕ್ಯಾಪ್ ಕೂಡ ಆರ್ಆರ್ ಆಟಗಾರನ ಬಳಿಯೇ ಉಳಿದುಕೊಂಡಿದೆ. ಯುಜುವೇಂದ್ರ ಚಾಹಲ್ ಈ ಪಟ್ಟಿಯಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಚಾಹಲ್ ಒಟ್ಟು 23 ವಿಕೆಟ್ಗಳನ್ನು ಸಂಪಾದಿಸಿದ್ದು ಈ ಪಟ್ಟಿಯಲ್ಲಿಯೂ ಆರ್ಆರ್ ಆಟಗಾರ ಎಲ್ಲರಿಗಿಂತ ಮುಂದಿದ್ದಾನೆ.
ಇವರ ನಂತರದ ಸ್ಥಾನದಲ್ಲಿ ಆರ್ಸಿಬಿ ಸ್ಪಿನ್ನರ್ ವಹಿಂದು ಹಸರಂಗ ಕೇವಲ ಒಂದು ವಿಕೆಟ್ ಅಂತರದಲ್ಲಿ ಹಿಂದುಳಿದಿದ್ದಾರೆ. ಹಸರಂಗ ಕಳೆದ ಸನ್ರೈಸರ್ಸ್ ಹೈದ್ರಾಬಾದ್ ವಿರುದ್ಧದ ಪಂದ್ಯದಲ್ಲಿ ಐದು ವಿಕೆಟ್ ಪಡೆಯುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಲ್ಲದೆ, ಸೀಸನ್ನ ಪರ್ಪಲ್ ಕ್ಯಾಪ್ ರೇಸ್ನಲ್ಲಿ ಎರಡನೇ ಸ್ಥಾನಕ್ಕೆ ಜಿಗಿದ್ದಿದ್ದಾರೆ. 12 ಪಂದ್ಯಗಳಲ್ಲಿ ಈ ಲಂಕಾ ಸ್ಪಿನ್ನರ್ 21 ವಿಕೆಟ್ ಕಬಳಿಸಿದ್ದಾರೆ.
ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ನ ಕುಲ್ದೀಪ್ ಯಾದವ್ (18), ಪಂಜಾಬ್ ಕಿಂಗ್ಸ್ನ ಕಗಿಸೊ ರಬಾಡ (18) ವಿಕೆಟ್ಗಳ ಮೂಲಕ ನಂತರದ ಸ್ಥಾನ ಪಡೆದಿದ್ದಾರೆ.