ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಚೆನ್ನೈ ವಿರುದ್ಧ ಗೆದ್ದದ್ದು ರಾಜಸ್ಥಾನ್; ದೊಡ್ಡ ಹೊಡೆತ ಬಿದ್ದದ್ದು ಕೆಎಲ್ ರಾಹುಲ್ ಪಡೆಗೆ!

IPL 2022: Points table, Orange cap and purple cap updated lists after CSK vs RR game

ಪ್ರಸ್ತುತ ಜರುಗುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಭಾನುವಾರ ನಡೆಯಲಿರುವ ಪಂಜಾಬ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಪಂದ್ಯದ ಮೂಲಕ ಮುಕ್ತಾಯಗೊಳ್ಳಲಿದೆ. ಇನ್ನು ಶನಿವಾರ ನಡೆಯಲಿರುವ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಿನ ಪಂದ್ಯದ ಫಲಿತಾಂಶ ಈ ಬಾರಿಯ ಟೂರ್ನಿಯಲ್ಲಿ ಪ್ಲೇ ಆಫ್ ಸುತ್ತಿಗೆ ಪ್ರವೇಶ ಪಡೆದುಕೊಳ್ಳಲಿರುವ ನಾಲ್ಕನೇ ತಂಡ ಯಾವುದು ಎಂಬುದನ್ನು ತೆರೆದಿಡಲಿದ್ದು, ಈಗಾಗಲೇ ಯಶಸ್ವಿಯಾಗಿ 3 ತಂಡಗಳು ಪ್ಲೇ ಆಫ್ ಸುತ್ತಿಗೆ ಅರ್ಹತೆಯನ್ನು ಪಡೆದುಕೊಂಡಿವೆ.

ಡೆಲ್ಲಿ ಸೋತರೆ ಆರ್‌ಸಿಬಿ ಪ್ಲೇಆಫ್‌ಗೆ; ಮುಂಬೈ vs ಡೆಲ್ಲಿ ಪಂದ್ಯಗಳಲ್ಲಿ ಹೆಚ್ಚು ಗೆದ್ದ ಬಲಿಷ್ಠ ತಂಡ ಯಾವುದು?ಡೆಲ್ಲಿ ಸೋತರೆ ಆರ್‌ಸಿಬಿ ಪ್ಲೇಆಫ್‌ಗೆ; ಮುಂಬೈ vs ಡೆಲ್ಲಿ ಪಂದ್ಯಗಳಲ್ಲಿ ಹೆಚ್ಚು ಗೆದ್ದ ಬಲಿಷ್ಠ ತಂಡ ಯಾವುದು?

ಮೊದಲಿಗೆ ಟೂರ್ನಿಯಲ್ಲಿ ಯಶಸ್ವಿ ಪಯಣವನ್ನು ಸಾಗಿಸಿರುವ ಗುಜರಾತ್ ಟೈಟನ್ಸ್ ಅಧಿಕೃತವಾಗಿ ಪ್ಲೇ ಆಫ್ ಸುತ್ತಿಗೆ ಪ್ರವೇಶವನ್ನು ಪಡೆದುಕೊಂಡಿತು ಹಾಗೂ ನಂತರ ಲಕ್ನೋ ಸೂಪರ್ ಜೈಂಟ್ಸ್ ಪ್ಲೇ ಆಫ್ ಸುತ್ತಿಗೆ ಪ್ರವೇಶ ಪಡೆದುಕೊಂಡ ಎರಡನೇ ತಂಡ ಎನಿಸಿಕೊಂಡಿತು. ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿರುವ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ಪ್ಲೇ ಆಫ್ ಸುತ್ತಿಗೆ ಆರ್ಹತೆಯನ್ನು ಪಡೆದುಕೊಂಡಿರುವ ಮೂರನೇ ತಂಡ ಎನಿಸಿಕೊಂಡಿದೆ.

DC vs MI Playing 11: ಪಂದ್ಯದಲ್ಲಿ ಗೆಲ್ಲಲು ನಿಮ್ಮ ಡ್ರೀಮ್ ಟೀಮ್ ಹೀಗಿರಲಿ; ಈತನಿಗೆ ನಾಯಕತ್ವ ನೀಡಿDC vs MI Playing 11: ಪಂದ್ಯದಲ್ಲಿ ಗೆಲ್ಲಲು ನಿಮ್ಮ ಡ್ರೀಮ್ ಟೀಮ್ ಹೀಗಿರಲಿ; ಈತನಿಗೆ ನಾಯಕತ್ವ ನೀಡಿ

ಹೌದು, ಶುಕ್ರವಾರ ಮುಂಬೈನ ಬ್ರಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಯಶಸ್ವಿ ಜೈಸ್ವಾಲ್ ಆಕರ್ಷಕ ಅರ್ಧಶತಕ ಹಾಗೂ ರವಿಚಂದ್ರನ್ ಅಶ್ವಿನ್ ಸ್ಫೋಟಕ ಆಟದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ 5 ವಿಕೆಟ್‍ಗಳ ಜಯ ಸಾಧಿಸಿದ್ದು, ಪ್ಲೇ ಆಫ್ ಟಿಕೆಟ್ ಪಡೆದುಕೊಂಡಿದೆ. ಇನ್ನು ಈ ಪಂದ್ಯದ ಫಲಿತಾಂಶ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆಯನ್ನೇ ಮಾಡಿದ್ದು, ಕೆಎಲ್ ರಾಹುಲ್ ಪಡೆಗೆ ತೀವ್ರ ಹಿನ್ನಡೆಯುಂಟಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವಿನ ಪಂದ್ಯ ಮುಕ್ತಾಯಗೊಂಡ ನಂತರ ಅಂಕಪಟ್ಟಿಯಲ್ಲಿ ಆದ ಬದಲಾವಣೆ, ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ ಪಟ್ಟಿ ಹೇಗಿದೆ ಎಂಬುದರ ಕುರಿತಾದ ವಿವರ ಈ ಕೆಳಕಂಡಂತಿದೆ ಓದಿ..

ರಾಜಸ್ಥಾನ್ ಗೆಲುವು ಕೆಎಲ್ ರಾಹುಲ್ ಪಡೆಗೆ ಹಿನ್ನಡೆ!

ರಾಜಸ್ಥಾನ್ ಗೆಲುವು ಕೆಎಲ್ ರಾಹುಲ್ ಪಡೆಗೆ ಹಿನ್ನಡೆ!

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಜಯ ಸಾಧಿಸಿದ ರಾಜಸ್ಥಾನ್ ರಾಯಲ್ಸ್ ಒಟ್ಟಾರೆ 18 ಅಂಕಗಳನ್ನು ಸಂಪಾದಿಸಿತು. ಟೂರ್ನಿಯಲ್ಲಿ ತನ್ನ ಎಲ್ಲಾ ಪಂದ್ಯಗಳನ್ನು ಆಡಿ ಮುಗಿಸಿರುವ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ಕೂಡ 18 ಅಂಕಗಳನ್ನೇ ಪಡೆದುಕೊಂಡಿದೆ. ಆದರೆ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕಿಂತ ರಾಜಸ್ಥಾನ್ ರಾಯಲ್ಸ್ ತಂಡದ ನೆಟ್ ರನ್ ರೇಟ್ ಅಧಿಕವಾಗಿರುವ ಕಾರಣ ರಾಜಸ್ಥಾನ್ ರಾಯಲ್ಸ್ ದ್ವಿತೀಯ ಸ್ಥಾನಕ್ಕೆ ಏರಿಕೆ ಕಂಡಿದ್ದು ಲಕ್ನೋ ಸೂಪರ್ ಜೈಂಟ್ಸ್ ಮೂರನೇ ಸ್ಥಾನಕ್ಕೆ ಕುಸಿದಿದೆ. ಈ ಮೂಲಕ ಸರಿಸಮನಾದ ಗೆಲುವನ್ನು ಸಾಧಿಸಿದ್ದರೂ ಸಹ ನೆಟ್ ರನ್ ರೇಟ್ ಕೊರತೆ ಅನುಭವಿಸಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಭಾರಿ ಹೊಡೆತ ಬಿದ್ದಿದ್ದು, ಕ್ವಾಲಿಫೈಯರ್ ಪಂದ್ಯದ ಅರ್ಹತೆ ಕಳೆದುಕೊಂಡು ಎಲಿಮಿನೇಟರ್ ಪಂದ್ಯ ಆಡಬೇಕಾಗಿ ಬಂದಿದೆ. ಹೀಗಾಗಿ ಲಕ್ನೋ ಸೂಪರ್ ಜೈಂಟ್ಸ್ ಪ್ಲೇ ಆಫ್ ಸುತ್ತಿನಲ್ಲಿ ಫೈನಲ್ ಪಂದ್ಯಕ್ಕೆ ತಲುಪಲು 2 ಪಂದ್ಯಗಳನ್ನು ಆಡುವ ಅವಕಾಶವನ್ನು ಕೈ ತಪ್ಪಿಸಿಕೊಂಡಿದೆ.

ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ ಪಟ್ಟಿ ಹೀಗಿದೆ

ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ ಪಟ್ಟಿ ಹೀಗಿದೆ

ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯ ಮುಕ್ತಾಯವಾದ ನಂತರ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ರಾಜಸ್ತಾನ್ ರಾಯಲ್ಸ್ ತಂಡದ ಜೋಸ್ ಬಟ್ಲರ್ 629 ರನ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, 537 ರನ್ ಕಲೆಹಾಕಿರುವ ಕೆಎಲ್ ರಾಹುಲ್ ದ್ವಿತೀಯ ಸ್ಥಾನದಲ್ಲಿದ್ದಾರೆ ಹಾಗೂ 502 ರನ್ ಬಾರಿಸಿರುವ ಕ್ವಿಂಟನ್ ಡಿಕಾಕ್ ತೃತೀಯ ಸ್ಥಾನದಲ್ಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 2 ವಿಕೆಟ್ ಪಡೆದ ಯುಜುವೇಂದ್ರ ಚಾಹಲ್ ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ಟೂರ್ನಿಯಲ್ಲಿ ಚಹಾಲ್ ಇದುವರೆಗೂ 26 ವಿಕೆಟ್ ಪಡೆದು ಅಗ್ರ ಸ್ಥಾನದಲ್ಲಿದ್ದರೆ, 24 ವಿಕೆಟ್ ಕಬಳಿಸಿರುವ ವನಿಂದು ಹಸರಂಗ ದ್ವಿತೀಯ ಸ್ಥಾನ ಹಾಗೂ ಕಗಿಸೋ ರಬಾಡ 22 ವಿಕೆಟ್ ಪಡೆದು ತೃತೀಯ ಸ್ಥಾನದಲ್ಲಿದ್ದಾರೆ.

ಚೆನ್ನೈ ಬಿಟ್ಟು ಎಲ್ಲೂ ಹೋಗಲ್ಲ ನಾನು! | Oneindia Kannada
ಎಲಿಮಿನೇಟರ್ ಪಂದ್ಯದಲ್ಲಿ ಸೆಣಸಾಡಲಿದೆ ಲಕ್ನೋ ಸೂಪರ್ ಜೈಂಟ್ಸ್

ಎಲಿಮಿನೇಟರ್ ಪಂದ್ಯದಲ್ಲಿ ಸೆಣಸಾಡಲಿದೆ ಲಕ್ನೋ ಸೂಪರ್ ಜೈಂಟ್ಸ್

ಇನ್ನು ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆದುಕೊಳ್ಳುವಲ್ಲಿ ನೆಟ್ ರನ್ ರೇಟ್ ಅಭಾವದಿಂದ ವಿಫಲವಾಗಿರುವ ಲಕ್ನೋ ಸೂಪರ್ ಜೈಂಟ್ಸ್ ಮೇ 25ರ ಬುಧವಾರದಂದು ನಡೆಯಲಿರುವ ಎಲಿಮಿನೇಟರ್ ಪಂದ್ಯಕ್ಕೆ ಪ್ರವೇಶ ಪಡೆದುಕೊಂಡಿದೆ. ಪ್ಲೇ ಆಫ್ ಸುತ್ತಿಗೆ ಪ್ರವೇಶ ಪಡೆದುಕೊಳ್ಳಲಿರುವ ನಾಲ್ಕನೇ ತಂಡದ ಜತೆ ಲಕ್ನೋ ಸೂಪರ್ ಜೈಂಟ್ಸ್ ಈ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಹಾಗೂ ಈ ಪಂದ್ಯದಲ್ಲಿ ಗೆದ್ದರೆ ಲಕ್ನೋ ಸೂಪರ್ ಜೈಂಟ್ಸ್ ಕ್ವಾಲಿಫೈಯರ್ 2 ಸುತ್ತಿಗೆ ಪ್ರವೇಶ ಪಡೆದುಕೊಳ್ಳಲಿದ್ದು ಕ್ವಾಲಿಫೈಯರ್ 1 ಸುತ್ತಿನಲ್ಲಿ ಸೋತು ಬರುವ ತಂಡದ ಜತೆಗೆ ಸೆಣಸಾಟ ನಡೆಸಲಿದೆ. ಒಂದುವೇಳೆ ಸೋತರೆ ಟೂರ್ನಿಯಿಂದ ಹೊರ ಬೀಳಲಿದೆ.

Story first published: Saturday, May 21, 2022, 14:05 [IST]
Other articles published on May 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X