ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಅಂಕಪಟ್ಟಿಯಲ್ಲಿ ಮೇಲೇರಿದ ಲಕ್ನೋ, ಆರೆಂಜ್ ಹಾಗೂ ಪರ್ಪಲ್ ಕ್ಯಾಪ್ ರೇಸ್‌

IPL 2022

ಐಪಿಎಲ್ 2022ರ ಸೀಸನ್‌ನ 37ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಬೊಂಬಾಟ್ ಗೆಲುವನ್ನ ಪಡೆಯುವ ಮೂಲಕ, ಮುಂಬೈ ಇಂಡಿಯನ್ಸ್‌ಗೆ ಮತ್ತಷ್ಟು ಆಘಾತ ನೀಡಿದೆ. ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್‌ಜೈಂಟ್ಸ್ ನೀಡಿದ 169 ರನ್‌ಗಳ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್‌ ಬ್ಯಾಟಿಂಗ್ ವೈಫಳ್ಯ ಅನುಭವಿಸಿ ಕೇವಲ 132 ರನ್ ಕಲೆಹಾಕಿತು.

ನಾಯಕ ರೋಹಿತ್ ಶರ್ಮಾ ಸ್ಫೋಟಕ ಆರಂಭ ನೀಡಿದಾದ್ರೂ, ಉಳಿದ ಬ್ಯಾಟ್ಸ್‌ಮನ್‌ಗಳ ಕೆಟ್ಟ ಹೊಡೆತದಿಂದಾಗಿ ಮುಂಬೈ ಭಾರೀ ಬೆಲೆ ತೆತ್ತಿದೆ. 36 ರನ್‌ಗಳಿಂದ ಗೆದ್ದು ಬೀಗಿದ ಲಕ್ನೋ ಸೂಪರ್ ಜೈಂಟ್ಸ್ ಪಾಯಿಂಟ್ಸ್ ಪಟ್ಟಿಯಲ್ಲಿ ಏರಿಕೆ ಕಂಡಿದೆ.

ಹಾಗಾದರೆ ಈ ಪಂದ್ಯದ ಬಳಿಕ ಆರ್‌ಆರ್ ಅಂಕಪಟ್ಟಿಯಲ್ಲಿ ಯಾವ ಸ್ಥಾನದಲ್ಲಿದೆ. ಪರ್ಪಲ್ ಕ್ಯಾಪ್ ಪಟ್ಟಿ ಹಾಗೂ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಆಗಿರುವ ಬದಲಾವಣೆಗಳು ಏನು? ಮುಂದೆ ಓದಿ..

ಪಾಯಿಂಟ್ಸ್ ಟೇಬಲ್

ಪಾಯಿಂಟ್ಸ್ ಟೇಬಲ್

ಈ ಪಂದ್ಯದಲ್ಲಿ ಜಯ ಸಾಧಿಸಿದ ಲಕ್ನೋ ಸೂಪರ್‌ಜೈಂಟ್ಸ್‌ ತಂಡ ಅಂಕ ಪಟ್ಟಿಯಲ್ಲಿ ಏರಿಕೆ ಕಂಡಿದ್ದು ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ಲಕ್ನೋ ಸೂಪರ್ ಜೈಂಟ್ಸ್ 8 ಪಂದ್ಯಗಳಲ್ಲಿ 5 ಗೆಲುವು ಮತ್ತು 3 ಸೋಲಿನ ಮೂಲಕ ಒಟ್ಟು 10 ಪಾಯಿಂಟ್ಸ್ ಪಡೆದಿದೆ.

ಮೊದಲ ಮೂರು ಸ್ಥಾನದಲ್ಲಿ ಗುಜರಾತ್ ಟೈಟನ್ಸ್ 12 ಪಾಯಿಂಟ್ಸ್, ಸನ್‌ರೈಸರ್ಸ್ ಹೈದ್ರಾಬಾದ್ 10, ರಾಜಸ್ತಾನ್ ರಾಯಲ್ಸ್ 10 ಪಾಯಿಂಟ್ಸ್ ಮೂಲಕ ನೆಟ್‌ರನ್‌ರೇಟ್‌ನಲ್ಲಿ ಲಕ್ನೋಗಿಂತ ಮುಂದಿದೆ. ಇನ್ನು 10 ಪಾಯಿಂಟ್ಸ್ ಹೊಂದಿದರುವ ಆರ್‌ಸಿಬಿ ನೆಟ್‌ ರನ್‌ರೇಟ್‌ನಲ್ಲಿ ಹಿಂದಿದ್ದು ಐದನೇ ಸ್ಥಾನಕ್ಕೆ ಕುಸಿದಿದೆ.

LSG vs MI: ಮತ್ತೆ ಸೋತ ಮುಂಬೈ ಇಂಡಿಯನ್ಸ್, ಲಕ್ನೋಗೆ ಬೊಂಬಾಟ್ ಗೆಲುವು

ಆರೆಂಜ್ ಕ್ಯಾಪ್

ಆರೆಂಜ್ ಕ್ಯಾಪ್

ಟೂರ್ನಿಯಲ್ಲಿ ಅಮೋಘ ಫಾರ್ಮ್‌ನಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಜೋಸ್ ಬಟ್ಲರ್ ಮೂರು ಶತಕದ ಮೂಲಕ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 7 ಪಂದ್ಯಗಳಲ್ಲಿ ಬಟ್ಲರ್ 491 ರನ್‌ಗಳಿಸಿದ್ದಾರೆ. ಇದರಲ್ಲಿ ಮೂರು ಶತಕ ಹಾಗೂ ಎರಡು ಅರ್ಧ ಶತಕ ಸೇರಿದೆ. ಎರಡನೇ ಸ್ಥಾನದಲ್ಲಿ ಕೆ.ಎಲ್ ರಾಹುಲ್ ಇದ್ದು 368 ರನ್‌ಗಳಿಸಿದ್ದಾರೆ. ಹಾರ್ದಿಕ್ ಪಾಂಡ್ಯ 295 ರನ್‌ಗಳೊಂದಿಗೆ 3ನೇ ಸ್ಥಾನಕ್ಕೇರಿದ್ದಾರೆ. 255 ರನ್‌ಗಳಿಸಿರುವ ಫಾಫ್ ಡು ಪ್ಲೆಸಿಸ್ 5ನೇ ಸ್ಥಾನದಲ್ಲಿದ್ದಾರೆ.

IPL 2022: ಕೆ.ಎಲ್ ರಾಹುಲ್ 4ನೇ IPL ಶತಕ, ಅತಿ ಹೆಚ್ಚಿನ ಶತಕ ಯಾರ ಹೆಸರಲ್ಲಿದೆ?

ಈ ಮೂವರು ಇದ್ದಿದ್ರೆ ಮುಂಬೈನ ಕಟ್ಟಿಹಾಕೋಕೆ ಆಗ್ತಾನೆ‌ ಇರ್ಲಿಲ್ಲ | Oneindia Kannada
ಪರ್ಪಲ್ ಕ್ಯಾಪ್‌

ಪರ್ಪಲ್ ಕ್ಯಾಪ್‌

ಇನ್ನು ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗೆ ನೀಡುವ ಪರ್ಪಲ್ ಕ್ಯಾಪ್ ಕೂಡ ಆರ್‌ಆರ್ ಆಟಗಾರನ ಬಳಿಯೇ ಉಳಿದುಕೊಂಡಿದೆ. ಯುಜುವೇಂದ್ರ ಚಾಹಲ್ ಈ ಪಟ್ಟಿಯಲ್ಲಿ ಮುನ್ನಡೆ ಸಾಧಿಸಿದ್ದಾರೆ. ಚಾಹಲ್ ಒಟ್ಟು 18 ವಿಕೆಟ್‌ಗಳನ್ನು ಸಂಪಾದಿಸಿದ್ದು ಈ ಪಟ್ಟಿಯಲ್ಲಿಯೂ ಆರ್‌ಆರ್ ಆಟಗಾರ ಎಲ್ಲರಿಗಿಂತ ಮುಂದಿದ್ದಾನೆ. ಎರಡನೇ ಸ್ಥಾನದಲ್ಲಿರುವ ಟಿ. ನಟರಾಜನ್ 15 ವಿಕೆಟ್ ಸಂಪಾದಿಸಿದ್ದು, ಕುಲ್‌ದೀಪ್ ಯಾದವ್ 13 ವಿಕೆಟ್ ಪಡೆದಿದ್ದಾರೆ. ಡ್ವೇನ್‌ ಬ್ರಾವೋ 12, ಉಮೇಶ್ ಯಾದವ್ , ಖಲೀಲ್ ಅಹ್ಮದ್ ಅವೇಶ್ ಖಾನ್, ವಹಿಂದು ಹಸರಂಗ ನಂತರದ ಸ್ಥಾನದಲ್ಲಿದ್ದಾರೆ.

Story first published: Monday, April 25, 2022, 0:06 [IST]
Other articles published on Apr 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X