ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಅಂಕಪಟ್ಟಿಯಲ್ಲಿ ಜಿಗಿದ ಪಂಜಾಬ್, 9ನೇ ಸ್ಥಾನದಲ್ಲೇ ಉಳಿದ CSK, ಆರೆಂಜ್ ಮತ್ತು ಪರ್ಪಲ್ ಕ್ಯಾಪ್‌

PBKS vs CSK

ಐಪಿಎಲ್ 2022ರ ಸೀಸನ್‌ನ 38ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 11 ರನ್‌ಗಳ ರೋಚಕ ಗೆಲುವು ದಾಖಲಿಸಿದ್ದು, ಈ ಮೂಲಕ ಸಿಎಸ್‌ಕೆಗೆ ಮತ್ತಷ್ಟು ಆಘಾತ ನೀಡಿದೆ. ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ನೀಡಿದ್ದ 188 ರನ್‌ಗಳ ಗುರಿ ಬೆನ್ನತ್ತಿದ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್‌ ಪರ ಟಾಪ್ ಆರ್ಡರ್ ಬ್ಯಾಟಿಂಗ್ ವೈಫಲ್ಯದಿಂದ ಮುಗ್ಗರಿಸಿತು.

ಟಾಪ್ ಆರ್ಡರ್ ವೈಫಲ್ಯದ ನಡುವೆ ಅಂಬಟಿ ರಾಯುಡು ಸ್ಪೋಟಕ ಆಟವಾಡುವ ಮಿಂಚಿದ್ರು. 39 ಎಸೆತಗಳಲ್ಲಿ 78 ರನ್ ಚಚ್ಚಿದ ರಾಯುಡು ಇನ್ನಿಂಗ್ಸ್‌ನಲ್ಲಿ ಆರು ಸಿಕ್ಸರ್ ಮತ್ತು ಏಳು ಅಮೋಘ ಬೌಂಡರಿಗಳಿದ್ದವು. ರಾಯುಡು ವಿಕೆಟ್ ಪತನದ ಬಳಿಕ ಗೆಲುವಿನ ದಡ ತಲುಪಿಸುವಲ್ಲಿ ನಾಯಕ ರವೀಂದ್ರ ಜಡೇಜಾ ವಿಫಲರಾದ್ರು. ಧೋನಿ ಕೂಡ ಕೊನೆಯ ಓವರ್‌ ಮ್ಯಾಜಿಕ್ ಮಾಡದ ಪರಿಣಾಮ ಸಿಎಸ್‌ಕೆ ಮತ್ತೊಂದು ಪಂದ್ಯ ಸೋತು ಪ್ಲೇ ಆಫ್ ಕನಸನ್ನು ಬಹುತೇಕ ಕೈ ಬಿಟ್ಟಿದೆ.

ಹಾಗಾದರೆ ಈ ಪಂದ್ಯದ ಬಳಿಕ ಪಂಜಾಬ್ ಕಿಂಗ್ಸ್‌ ಅಂಕಪಟ್ಟಿಯಲ್ಲಿ ಯಾವ ಸ್ಥಾನದಲ್ಲಿದೆ. ಪರ್ಪಲ್ ಕ್ಯಾಪ್ ಪಟ್ಟಿ ಹಾಗೂ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಆಗಿರುವ ಬದಲಾವಣೆಗಳು ಏನು? ಮುಂದೆ ಓದಿ..

ಪಾಯಿಂಟ್ಸ್ ಟೇಬಲ್

ಪಾಯಿಂಟ್ಸ್ ಟೇಬಲ್

ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ 11ರನ್ ಗಳಿಂದ ಗೆಲ್ಲುವ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ಎಂಟನೇ ಸ್ಥಾನದಿಂದ ಆರನೇ ಸ್ಥಾನಕ್ಕೆ ಜಿಗಿದಿದೆ. ಪಂಜಾಬ್ ಕಿಂಗ್ಸ್ 8 ಪಂದ್ಯಗಳಲ್ಲಿ 4 ಗೆಲುವು ಮತ್ತು 4 ಸೋಲುಗಳ ಮೂಲಕ ಒಟ್ಟು 8 ಪಾಯಿಂಟ್ಸ್ ಕಲೆಹಾಕಿದೆ. ಆದ್ರೆ ನೆಟ್‌ ರನ್‌ರೇಟ್‌ನಲ್ಲಿ -0.419 ಹೊಂದಿದೆ.

ಮೊದಲ ಮೂರು ಸ್ಥಾನದಲ್ಲಿ ಗುಜರಾತ್ ಟೈಟನ್ಸ್ 12 ಪಾಯಿಂಟ್ಸ್, ಸನ್‌ರೈಸರ್ಸ್ ಹೈದ್ರಾಬಾದ್ 10, ರಾಜಸ್ತಾನ್ ರಾಯಲ್ಸ್ 10 ಪಾಯಿಂಟ್ಸ್ ಮೂಲಕ ನೆಟ್‌ರನ್‌ರೇಟ್‌ನಲ್ಲಿ ಲಕ್ನೋಗಿಂತ ಮುಂದಿದೆ. ಇನ್ನು 10 ಪಾಯಿಂಟ್ಸ್ ಹೊಂದಿದರುವ ಆರ್‌ಸಿಬಿ ನೆಟ್‌ ರನ್‌ರೇಟ್‌ನಲ್ಲಿ ಹಿಂದಿದ್ದು ಐದನೇ ಸ್ಥಾನಕ್ಕೆ ಕುಸಿದಿದೆ.

ವಿಶ್ವಕಪ್ ತಂಡದ ಕನಸು ಕಾಣುತ್ತಿರುವ ಡಿಕೆಗೆ ಐಪಿಎಲ್‌ನಲ್ಲಿ ಅಬ್ಬರಿಸುತ್ತಿರುವ ಈತನೆದುರು ಅವಕಾಶ ಕಷ್ಟ!

ಆರೆಂಜ್ ಕ್ಯಾಪ್

ಆರೆಂಜ್ ಕ್ಯಾಪ್

ಟೂರ್ನಿಯಲ್ಲಿ ಅಮೋಘ ಫಾರ್ಮ್‌ನಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಜೋಸ್ ಬಟ್ಲರ್ ಮೂರು ಶತಕದ ಮೂಲಕ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 7 ಪಂದ್ಯಗಳಲ್ಲಿ ಬಟ್ಲರ್ 491 ರನ್‌ಗಳಿಸಿದ್ದಾರೆ. ಇದರಲ್ಲಿ ಮೂರು ಶತಕ ಹಾಗೂ ಎರಡು ಅರ್ಧ ಶತಕ ಸೇರಿದೆ. ಎರಡನೇ ಸ್ಥಾನದಲ್ಲಿ ಕೆ.ಎಲ್ ರಾಹುಲ್ ಇದ್ದು 368 ರನ್‌ಗಳಿಸಿದ್ದಾರೆ. ಶಿಖರ್ ಧವನ್ 302 ರನ್‌ಗಳ ಮೂಲಕ ಸ್ಥಾನಕ್ಕೇರಿದ್ದಾರೆ. ಹಾರ್ದಿಕ್ ಪಾಂಡ್ಯ 295 ರನ್‌ಗಳೊಂದಿಗೆ 4ನೇ ಸ್ಥಾನ ಹಾಗೂ 272 ರನ್‌ಗಳಿಸಿರುವ ತಿಲಕ್ ವರ್ಮಾ ಐದನೇ ಸ್ಥಾನ ಪಡೆದಿದ್ದಾರೆ.

IPL 2022: ರಶೀದ್ ಖಾನ್ ಬಹುದೊಡ್ಡ ವಿಕೆಟ್ ಟೇಕರ್ ಅಲ್ಲ ಎಂದ ಬ್ರಿಯಾನ್ ಲಾರಾ

ಪಂಜಾಬ್ ವಿರುದ್ಧ ಚೆನ್ನೈಗೆ ಹೀನಾಯ ಸೋಲು:IPL ಟೂರ್ನಿಯಿಂದ ಬಹುತೇಕ ಔಟ್ | Oneindia Kannada
ಪರ್ಪಲ್ ಕ್ಯಾಪ್‌

ಪರ್ಪಲ್ ಕ್ಯಾಪ್‌

ಇನ್ನು ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗೆ ನೀಡುವ ಪರ್ಪಲ್ ಕ್ಯಾಪ್ ಕೂಡ ಆರ್‌ಆರ್ ಆಟಗಾರನ ಬಳಿಯೇ ಉಳಿದುಕೊಂಡಿದೆ. ಯುಜುವೇಂದ್ರ ಚಾಹಲ್ ಈ ಪಟ್ಟಿಯಲ್ಲಿ ಮುನ್ನಡೆ ಸಾಧಿಸಿದ್ದಾರೆ. ಚಾಹಲ್ ಒಟ್ಟು 18 ವಿಕೆಟ್‌ಗಳನ್ನು ಸಂಪಾದಿಸಿದ್ದು ಈ ಪಟ್ಟಿಯಲ್ಲಿಯೂ ಆರ್‌ಆರ್ ಆಟಗಾರ ಎಲ್ಲರಿಗಿಂತ ಮುಂದಿದ್ದಾನೆ. ಎರಡನೇ ಸ್ಥಾನದಲ್ಲಿರುವ ಟಿ. ನಟರಾಜನ್ 15 ವಿಕೆಟ್ ಸಂಪಾದಿಸಿದ್ದು, ಡ್ವೇನ್‌ ಬ್ರಾವೋ 14, ಕುಲ್‌ದೀಪ್ ಯಾದವ್ 13 ವಿಕೆಟ್ ಪಡೆದಿದ್ದಾರೆ. ಉಮೇಶ್ ಯಾದವ್ , ಖಲೀಲ್ ಅಹ್ಮದ್ ಅವೇಶ್ ಖಾನ್, ವಹಿಂದು ಹಸರಂಗ ನಂತರದ ಸ್ಥಾನದಲ್ಲಿದ್ದಾರೆ.

Story first published: Tuesday, April 26, 2022, 0:09 [IST]
Other articles published on Apr 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X