ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ವಿರಾಟ್ ಕೊಹ್ಲಿಗಾಗಿ ಪಂಜಾಬ್ ಕಿಂಗ್ಸ್ ಹಾಕಿದ ಇನ್‌ಸ್ಟಾಗ್ರಾಂ ಪೋಸ್ಟ್ ವೈರಲ್

IPL 2022: Punjab Kings Instagram Post For Virat Kohli Is Massive Viral

ಶುಕ್ರವಾರ ರಾತ್ರಿ ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 54 ರನ್‌ಗಳಿಂದ ಸೋಲಿಸಿದ ಪಂಜಾಬ್ ಕಿಂಗ್ಸ್, ಐಪಿಎಲ್ 2022ರ ಪ್ಲೇಆಫ್‌ಗಳಿಗೆ ಅರ್ಹತೆ ಪಡೆಯುವ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಆರ್‌ಸಿಬಿ ವಿರುದ್ಧದ ದೊಡ್ಡ ಗೆಲುವು ಪಂಜಾಬ್ ಕಿಂಗ್ಸ್‌ನ ನಿವ್ವಳ ರನ್-ರೇಟ್‌ ಹೆಚ್ಚಾಗಿದೆ. ಜಾನಿ ಬೈರ್‌ಸ್ಟೋವ್ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ ಅವರು ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದರೆ, ಕಗಿಸೊ ರಬಾಡ ಬೌಲಿಂಗ್‌ನಲ್ಲಿ ಮಿಂಚಿದರು. ಮೈದಾನದ ಒಳಗಿನ ಪ್ರದರ್ಶನದ ಹೊರತಾಗಿಯೂ, ಪಂಜಾಬ್ ಕಿಂಗ್ಸ್ ಮೈದಾನದ ಆಚೆಗೆ ಕ್ರಿಕೆಟ್ ಪ್ರೇಮಿಗಳ ಹೃದಯಗಳನ್ನು ಗೆಲ್ಲುತ್ತಿದೆ. ವಿರಾಟ್ ಕೊಹ್ಲಿ ಫಾರ್ಮ್‌ಗಾಗಿ ಹಾಕಿರುವ ಅವರ ಪೋಸ್ಟ್ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗುತ್ತಿದೆ.

ಪಂಜಾಬ್ ಕಿಂಗ್ಸ್ ಮತ್ತು ಆರ್‌ಸಿಬಿ ಪಂದ್ಯದ ಎರಡನೇ ಇನ್ನಿಂಗ್ಸ್‌ನ ಆರಂಭದಲ್ಲಿ ವಿರಾಟ್ ಕೊಹ್ಲಿ ಉತ್ತಮ ಶಾಟ್‌ಗಳನ್ನು ಬಾರಿಸಿದ್ದರಿಂದ ಪಂಜಾಬ್ ಕಿಂಗ್ಸ್ ಬೌಲರ್‌ಗಳು ಸ್ವಲ್ಪ ಆರಂಭಿಕ ಒತ್ತಡಕ್ಕೆ ಒಳಗಾದರು. ಆದರೆ, ಆರ್‌ಸಿಬಿಯ ಈ ಸ್ಟಾರ್ ಬ್ಯಾಟರ್‌ನನ್ನು ಕಗಿಸೋ ರಬಾಡ 14 ಎಸೆತಗಳಲ್ಲಿ 20 ರನ್ ಗಳಿಸಿದಾಗ ವಿಕೆಟ್ ಪಡೆದರು.

IPL 2022: Punjab Kings Instagram Post For Virat Kohli Is Massive Viral

ಐಪಿಎಲ್ 2022ರಲ್ಲಿ ಬ್ಯಾಟ್‌ನೊಂದಿಗೆ ವಿರಾಟ್ ಕೊಹ್ಲಿಯ ಕಳಪೆ ಆಟ ಮತ್ತೆ ಮುಂದುವರೆಯಿತು, ಆದರೆ ಪಂಜಾಬ್ ಕಿಂಗ್ಸ್ ಸ್ಟಾರ್ ಬ್ಯಾಟರ್‌ಗೆ ಕೆಲವು ಸಾಂತ್ವನದ ಮಾತುಗಳನ್ನು ಹೇಳಿದೆ.

'ವಿರಾಟ್ ಕೊಹ್ಲಿ, ನಾವು ಸಹ ಅದನ್ನು ಅನುಭವಿಸಿದ್ದೇವೆ. ಅದೃಷ್ಟವು ಶೀಘ್ರದಲ್ಲೇ ನಿಮ್ಮ ಕಡೆಗೆ ತಿರುಗುತ್ತದೆ ಎಂದು ಭಾವಿಸುತ್ತೇವೆ,' ಎಂದು ಪಂಜಾಬ್ ಕಿಂಗ್ಸ್ ಇನ್‌ಸ್ಟಾಗ್ರಾಂನಲ್ಲಿ ಹತಾಶೆಗೊಂಡ ಕೊಹ್ಲಿಯ ಚಿತ್ರದೊಂದಿಗೆ ಶೀರ್ಷಿಕೆ ಬರೆದುಕೊಂಡಿದ್ದಾರೆ.

ಕಳಪೆ ಫಾರ್ಮ್ ನಡುವೆಯೂ IPLನಲ್ಲಿ ಮತ್ತೊಂದು ದಾಖಲೆ ಬರೆದ ರನ್ ಮಷಿನ್ಕಳಪೆ ಫಾರ್ಮ್ ನಡುವೆಯೂ IPLನಲ್ಲಿ ಮತ್ತೊಂದು ದಾಖಲೆ ಬರೆದ ರನ್ ಮಷಿನ್

ಈ ಪೋಸ್ಟ್ 1,45,000ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದ್ದು, ಅಲ್ಲದೇ ಈ ಪೋಸ್ಟ್‌ಗೆ ಅನೇಕರು ಪಂಜಾಬ್ ಕಿಂಗ್ಸ್ ಅನ್ನು ಶ್ಲಾಘಿಸಿದ್ದು, 'ನಿಮ್ಮ ಪೋಸ್ಟ್ ಶ್ಲಾಘನೆಗೆ ಅರ್ಹ' ಎಂದು ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರು ಬರೆದಿದ್ದಾರೆ.

"ನಾನು ಪಂಜಾಬ್ ಗೆಲ್ಲಲು ಬಯಸುತ್ತೇನೆ... ಆದರೆ, ವಿರಾಟ್ ಕೊಹ್ಲಿ ಹೋರಾಟವನ್ನು ನೋಡುವುದು ನೋವುಂಟು ಮಾಡುತ್ತದೆ. ಮುಂಬರುವ ಪಂದ್ಯಗಳಲ್ಲಿ ಮತ್ತು ವಿಶೇಷವಾಗಿ ವಿಶ್ವಕಪ್‌ನಲ್ಲಿ ಅದೃಷ್ಟ ಅವರನ್ನು ಬೆಂಬಲಿಸುತ್ತದೆ ಎಂದು ನಾನು ನಂಬಿದ್ದೇನೆ," ಎಂದು ಮತ್ತೊಬ್ಬರು ಬರೆದಿದ್ದಾರೆ.

ಪಂಜಾಬ್ ಕಿಂಗ್ಸ್ ಪೋಸ್ಟ್‌ಗೆ 'ಎಷ್ಟು ಸಿಹಿ ಗೆಸ್ಚರ್, ಅವರು ಶೀಘ್ರದಲ್ಲೇ ಹಿಂತಿರುಗುತ್ತಾರೆ ಎಂದು ಭಾವಿಸುತ್ತೇವೆ' ಎಂದು ಇನ್ನೊಬ್ಬ ಇನ್‌ಸ್ಟಾಗ್ರಾಂ ಬಳಕೆದಾರರು ಹೇಳಿದರು. 'ನಾನು ಆರ್‌ಸಿಬಿ ಅಭಿಮಾನಿ, ಆದರೆ ಪಂಜಾಬ್ ಹೃದಯವನ್ನು ಗೆದ್ದಿದೆ' ಎಂದು ಮತ್ತೊಬ್ಬ ಅಭಿಮಾನಿ ಬರೆದಿದ್ದಾರೆ.

ಶುಕ್ರವಾರ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 209 ರನ್ ಗಳಿಸಿತು. ಜಾನಿ ಬೈರ್‌ಸ್ಟೋ 29 ಎಸೆತಗಳಲ್ಲಿ 66 ರನ್ ಸಿಡಿಸಿದರೆ, ಲಿಯಾಮ್ ಲಿವಿಂಗ್‌ಸ್ಟೋನ್ ಕೇವಲ 42 ಎಸೆತಗಳಲ್ಲಿ 70 ರನ್ ಗಳಿಸಿದರು. ಆರ್‌ಸಿಬಿ ಪರ ಹರ್ಷಲ್ ಪಟೇಲ್ 4 ವಿಕೆಟ್ ಪಡೆದರೆ, ವನಿಂದು ಹಸರಂಗ 2 ವಿಕೆಟ್ ಪಡೆದರು.

210 ರನ್‌ಗಳ ಗುರಿ ಬೆನ್ನತ್ತಿದ ಆರ್‌ಸಿಬಿಯ ಕೆಲವು ಬ್ಯಾಟರ್‌ಗಳು ಆರಂಭದಲ್ಲಿ ಅಬ್ಬರಿಸುವ ಮುನ್ಸೂಚನೆ ಕೊಟ್ಟರು. ಆದರೆ ಎರಡು ವಿಕೆಟ್ ಬಿದ್ದ ನಂತರ ಅಲ್ಲಿಂದ ಕಿಕ್ ಮಾಡಲು ವಿಫಲರಾದರು. ಅಂತಿಮವಾಗಿ, ಗ್ಲೆನ್ ಮ್ಯಾಕ್ಸ್‌ವೆಲ್ 22 ಎಸೆತಗಳಲ್ಲಿ 35 ರನ್ ಗಳಿಸುವ ಮೂಲಕ ಗರಿಷ್ಠ ಸ್ಕೋರರ್ ಆಗಿದ್ದು, ಆರ್‌ಸಿಬಿ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 155 ರನ್‌ಗಳಿಗೆ ಸೀಮಿತವಾಯಿತು.

Story first published: Saturday, May 14, 2022, 17:23 [IST]
Other articles published on May 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X