ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

RCB vs RR 2ನೇ ಕ್ವಾಲಿಫೈಯರ್: ಇದು ರಣ ರೋಚಕ ಕದನವಾಗಲಿದೆ ಎಂದ ಭಾರತದ ಮಾಜಿ ಕೋಚ್!

IPL 2022 Qualifier 2: It will be a battle of Royals says Ravi Shastri on match between RCB and RR

ಐಪಿಎಲ್ 15ನೇ ಆವೃತ್ತಿಯಲ್ಲಿ ಇನ್ನು ಕೇವಲ ಎರಡು ಪಂದ್ಯಗಳು ಮಾತ್ರವೇ ಬಾಕಿ ಉಳಿದಿದೆ. ಈಗಾಗಲೇ ಫೈನಲ್ ಹಂತಕ್ಕೆ ಪ್ರವೇಶ ಪಡೆದಿರುವ ಗುಜರಾತ್ ಟೈಟನ್ಸ್ ಹಾಗೂ ಎರಡನೇ ಕ್ವಾಲಿಫೈಯರ್‌ನಲ್ಲಿ ಮುಖಾಮುಖಿಯಾಗಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮಾತ್ರವೇ ಈ ಸ್ಪರ್ಧೆಯಲ್ಲಿ ಸದ್ಯ ಉಳಿದುಕೊಂಡಿದೆ. ಶುಕ್ರವಾರ ಈ ಟೂರ್ನಿಯಲ್ಲಿ ಮತ್ತೊಂದು ಮಹತ್ವದ ಪಂದ್ಯ ನಡೆಯಲಿದ್ದು ಈ ಪೊಂದ್ಯದಲ್ಲಿ ಗೆದ್ದ ತಂಡ ಫೈನಲ್ ಪಂದ್ಯವನ್ನಾಡಲು ಅರ್ಹತೆಯನ್ನು ಗಳಿಸಲಿದೆ.

ರಾಜಸ್ಥಾನ್ ರಾಯಲ್ಸ್ ಹಾಗೂ ಆರ್‌ಸಿಬಿ ತಂಡಗಳು ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಖಾಮುಖಿಯಾಗಲು ಸಜ್ಜಾಗಿದೆ. ಅಹ್ಮದಾಬಾದ್‌ನ ಮೊಟೇರಾ ಕ್ರೀಡಾಂಗಣದಲ್ಲಿ ಈ ಮಹತ್ವದ ಪಂದ್ಯ ನಡೆಯಲಿದ್ದು ಎಲ್ಲರ ಕುತೂಹಲ ಈಗ ಈ ಪಂದ್ಯದ ಮೇಲೆ ನೆಟ್ಟಿದೆ. ಈ ಮಹತ್ವದ ಪಂದ್ಯದ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಕೋಚ್ ರವಿ ಶಾಸ್ತ್ರಿ ಪ್ರತಿಕ್ರಿಯೆ ನೀಡಿದ್ದು ಆರ್‌ಸಿಬಿ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವಿನ ಈ ಕದನ ರಣರೋಚಕ ಕದನವಾಗಲಿದೆ ಎಂದಿದ್ದಾರೆ. ಇದಕ್ಕೆ ಕಾರಣವನ್ನು ಕೂಡ ಹೇಳಿದ್ದಾರೆ ರವಿ ಶಾಸ್ತ್ರಿ.

ಎರಡು ತಂಡಗಳಿಗೂ ಟ್ರೋಫಿ ಗೆಲ್ಲಬೇಕಿದೆ

ಎರಡು ತಂಡಗಳಿಗೂ ಟ್ರೋಫಿ ಗೆಲ್ಲಬೇಕಿದೆ

ಐಪಿಎಲ್ ಇತಿಹಾಸದಲ್ಲಿ ಆರ್‌ಸಿಬಿ ತಂಡ ಈವರೆಗೂ ಒಂದು ಬಾರಿಯೂ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಮೂರು ಬಾರಿ ಫೈನಲ್‌ಗೆ ಪ್ರವೇಶಸಿದ್ದರೂ ಒಂದು ಬಾರಿಯೂ ಚಾಂಪಿಯನ್ ಪಟ್ಟಕ್ಕೇರಲು ವಿಫಲವಾಗಿದೆ. ಹೀಗಾಗಿ ಕಳೆದ 14 ಆವೃತ್ತಿಗಳಲ್ಲಿ ಅಸಾಧ್ಯವಾಗಿರುವುದನ್ನು ಆರ್‌ಸಿಬಿ ಈ ಬಾರಿ ಸಾಧಿಸಲು ಹೊರಟಿದೆ. ಮತ್ತೊಂದೆಡೆ ರಾಜಸ್ಥಾನ್ ರಾಯಲ್ಸ್ ತಂಡ ಕೂಡ ಚೊಚ್ಚಲ ಐಪಿಎಲ್ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ಬಳಿಕ ಮತ್ತೊಮ್ಮೆ ಆ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಆರ್‌ಆರ್ ತಂಡ ಕೂಡ 13 ವರ್ಷಗಳ ಟ್ರೋಫಿಯ ಬರವನ್ನು ನೀಗಿಸಲು ಪಣತೊಟ್ಟಿದೆ. ಈ ಕಾರಣದಿಂಧಾಗಿಯೇ ಈ ಪಂದ್ಯ ಅತ್ಯಂತ ರೋಚಕವಾಗಿ ಸಾಗಲಿದೆ ಎಂದಿದ್ದಾರೆ ರವಿ ಶಾಸ್ತ್ರಿ.

ಇದು ರಾಯಲ್ಸ್‌ಗಳ ಕದನ ಎಂದ ಶಾಸ್ತ್ರಿ

ಇದು ರಾಯಲ್ಸ್‌ಗಳ ಕದನ ಎಂದ ಶಾಸ್ತ್ರಿ

"ಆರ್‌ಸಿಬಿ ಟ್ರೋಫಿ ಗೆಲುವಿಗಾಗಿ 14 ವರ್ಷಗಳಿಂದ ಕಾಯುತ್ತಿದೆ. ಮತ್ತೊಂದೆಡೆ ರಾಜಸ್ಥಾನ್ ರಾಯಲ್ಸ್ ಮೊದಲ ಆವೃತ್ತಿಯಲ್ಲಿ ಟ್ರೋಫಿ ಗೆದ್ದ ನಂತರ 13 ಆವೃತ್ತಿಗಳಲ್ಲಿ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಹೀಗಾಗಿ ಒಟ್ಟಾರೆ ಎರಡು ತಂಡಗಳನ್ನು ಸೇರಿಸಿದರೆ ಒಟ್ಟು 27 ವರ್ಷಗಳಾಗುತ್ತವೆ. ಹೀಗಾಗಿ ಎರಡೂ ತಂಡಗಳು ಕೂಡ ಟ್ರೋಫಿಯನ್ನು ಗೆಲ್ಲೇಬೇಕೆಂದು ಕಾದಾಡಲಿದೆ. ಆ ಕಾರಣದಿಂದಾಗಿ ಇದು ರಾಯಲ್ಸ್‌ಗಳ ಕದನವಾಗಲಿದ್ದು ಗೆಲ್ಲುವ ಆ ಒಂದು ತಂಡಕ್ಕಾಗಿ ಕಾಯೋಣ" ಎಂದಿದ್ದಾರೆ ರವಿ ಶಾಸ್ತ್ರಿ.

ಗೆಲುವಿನ ಆತ್ಮವಿಶ್ವಾಸದಲ್ಲಿ ಫಾಫ್ ಪಡೆ

ಗೆಲುವಿನ ಆತ್ಮವಿಶ್ವಾಸದಲ್ಲಿ ಫಾಫ್ ಪಡೆ

ಇನ್ನು ಈ ಪಂದ್ಯಕ್ಕೆ ಮುನ್ನ ರಾಜಸ್ಥಾನ್ ರಾಯಲ್ಸ್ ತಂಡ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಿ ಸೋಲಿನೊಂದಿಗೆ ಎರಡನೇ ಕ್ವಾಲಿಫೈರ್‌ನಲ್ಲಿ ಮತ್ತೊಂದು ಅವಕಾಶವನ್ನು ಗಿಟ್ಟಿಸಿಕೊಂಡಿದೆ. ಮತ್ತೊಂದೆಡೆ ಆರ್‌ಸಿಬಿ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಭರ್ಜರಿ ಸೋಲಿನ ರುಚಿ ತೋರಿಸುವಲ್ಲಿ ಯಶಸ್ವಿಯಾಗಿದ್ದು ತಂಡದ ಆತ್ಮ ವಿಶ್ವಾಸ ಹೆಚ್ಚಾಗಿದೆ. ಹೀಗಾಗಿ ಮತ್ತೊಂದು ಗೆಲುವಿಗಾಗಿ ಆರ್‌ಸಿಬಿ ಪಡೆ ಉತ್ಸಾಹದಿಂದ ಸಜ್ಜಾಗಿದೆ.

KGF ಮತ್ತು ರಜತ್ ಕಟ್ಟಿಹಾಕೋಕೆ ರಾಜಸ್ತಾನ್ ರಣತಂತ್ರ:ಗೆದ್ದೋರು ಪೈನಲ್,ಸೋತೋರು ಮನೆಗೆ | Oneindia Kannada
ಸ್ಕ್ವಾಡ್‌ಗಳು ಹೀಗಿದೆ

ಸ್ಕ್ವಾಡ್‌ಗಳು ಹೀಗಿದೆ

ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್ (ನಾಯಕ), ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಶಿಮ್ರಾನ್ ಹೆಟ್ಮೆಯರ್, ದೇವದತ್ ಪಡಿಕ್ಕಲ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಹಾಲ್, ರಿಯಾನ್ ಪರಾಗ್, ಕೆಸಿ ಕಾರಿಯಪ್ಪ, ನವದೀಪ್ ಸೈನಿ, ಓಬೇದ್ ಮೆಕಾಯ್, ಅನುನಯ್ ಸಿಂಗ್, ಕುಲದೀಪ್ ಸೇನ್, ಕರುಣ್ ನಾಯರ್, ಧ್ರುವ್ ಜುರೆಲ್, ತೇಜಸ್ ಬರೋಕಾ, ಕುಲದೀಪ್ ಯಾದವ್, ಶುಭಂ ಗರ್ವಾಲ್, ಜೇಮ್ಸ್ ನೀಶಮ್, ನಾಥನ್ ಕೌಲ್ಟರ್-ನೈಲ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಡೇರಿಲ್ ಮಿಚೆಲ್

ಆರ್‌ಸಿಬಿ: ಫಾಫ್ ಡು ಪ್ಲೆಸಿಸ್ (ನಾಯಕ), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ರಜತ್ ಪಾಟಿದಾರ್, ಅನುಜ್ ರಾವತ್, ವಿರಾಟ್ ಕೊಹ್ಲಿ, ಶೆರ್ಫೇನ್ ರುದರ್‌ಫೋರ್ಡ್, ಚಾಮ ವಿ ಮಿಲಿಂದ್, ಶಹಬಾಜ್ ಅಹ್ಮದ್, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಆಕಾಶ್ ದೀಪ್, ಸಿದ್ದಾರ್ಥ್ ಕೌಲ್, ಕರ್ಣ್ ಶರ್ಮಾ, ಡೇವಿಡ್ ವಿಲ್ಲಿ, ಜೋಶ್ ಹೇಜಲ್‌ವುಡ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್, ಸುಯಶ್ ಪ್ರಭುದೇಸಾಯಿ, ಅನೀಶ್ವರ್ ಗೌತಮ್

Story first published: Friday, May 27, 2022, 14:32 [IST]
Other articles published on May 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X