CSK vs RR: ಆಪದ್ಬಾಂಧವನಾದ ಅಶ್ವಿನ್, ಮಿಂಚಿದ ಜೈಸ್ವಾಲ್; ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆದ್ದ ರಾಜಸ್ಥಾನ್

ಸದ್ಯ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತ ಮುಕ್ತಾಯದ ಸನಿಹಕ್ಕೆ ಬಂದಿದ್ದು, ಇಂದು ( ಮೇ 20 ) ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 5 ವಿಕೆಟ್‍ಗಳ ಜಯ ಸಾಧಿಸಿ ಪ್ಲೇ ಆಫ್ ಸುತ್ತಿಗೆ ಲಗ್ಗೆ ಇಟ್ಟಿದೆ.

ಮುಂಬೈ ಗೆದ್ದರೆ ಆರ್‌ಸಿಬಿ ಪ್ಲೇಆಫ್‌ಗೆ; ಡೆಲ್ಲಿ ಸೋಲಿಸಿ ಎಂದು ರೋಹಿತ್ ಪಡೆಗೆ ಮನವಿ ಇಟ್ಟ ಕೊಹ್ಲಿ!ಮುಂಬೈ ಗೆದ್ದರೆ ಆರ್‌ಸಿಬಿ ಪ್ಲೇಆಫ್‌ಗೆ; ಡೆಲ್ಲಿ ಸೋಲಿಸಿ ಎಂದು ರೋಹಿತ್ ಪಡೆಗೆ ಮನವಿ ಇಟ್ಟ ಕೊಹ್ಲಿ!

ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಮೊದಲು ಬ್ಯಾಟಿಂಗ್ ಮಾಡುವ ಆಯ್ಕೆಯನ್ನು ಆರಿಸಿಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 150 ರನ್ ಕಲೆಹಾಕಿ ಎದುರಾಳಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 151 ರನ್‌ಗಳ ಸಾಧಾರಣ ಗುರಿಯನ್ನು ನೀಡಿತು. ಇನ್ನು ಈ ಗುರಿಯನ್ನು ಬೆನ್ನತ್ತುವಲ್ಲಿ ಕೊನೆ ಹಂತದಲ್ಲಿ ಯಶಸ್ವಿಯಾದ ರಾಜಸ್ಥಾನ್ ರಾಯಲ್ಸ್ 19.4 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 151 ರನ್ ಕಲೆಹಾಕಿ 5 ವಿಕೆಟ್‍ಗಳ ಜಯ ಸಾಧಿಸುವುದರ ಮೂಲಕ 18 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿಕೆ ಕಂಡಿದ್ದು, ಕ್ವಾಲಿಫೈಯರ್ ಪಂದ್ಯ ಆಡುವುದನ್ನು ಖಚಿತಪಡಿಸಿಕೊಂಡಿದೆ.

ಚೆನ್ನೈ ಸೂಪರ್ ಕಿಂಗ್ಸ್ ನೀಡಿದ 151 ರನ್ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕರಾಗಿ ಯಶಸ್ವಿ ಜೈಸ್ವಾಲ್ ಮತ್ತು ಜೋಸ್ ಬಟ್ಲರ್ ಕಣಕ್ಕಿಳಿದರು. ಬಟ್ಲರ್ 2 ರನ್ ಗಳಿಸಿ ಔಟ್ ಆಗಿ ನಿರಾಸೆ ಮೂಡಿಸಿದರೆ ಯಶಸ್ವಿ ಜೈಸ್ವಾಲ್ 44 ಎಸೆತಗಳಲ್ಲಿ 59 ರನ್ ಕಲೆಹಾಕಿ ಜವಾಬ್ದಾರಿಯುತ ಆಟವನ್ನಾಡಿದರು. ಇನ್ನುಳಿದಂತೆ ನಾಯಕ ಸಂಜು ಸ್ಯಾಮ್ಸನ್ 15 ರನ್, ದೇವದತ್ ಪಡಿಕ್ಕಲ್ 3 ರನ್, ಶಿಮ್ರಾನ್ ಹೆಟ್ಮಾಯೆರ್ 6 ರನ್ ಕಲೆ ಹಾಕಿದರೆ, ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರವಿಚಂದ್ರನ್ ಅಶ್ವಿನ್ 23 ಎಸೆತಗಳಲ್ಲಿ 40 ರನ್ ಬಾರಿಸಿ ತಂಡಕ್ಕೆ ಆಪತ್ಬಾಂಧವರಾದರು ಹಾಗೂ ರಿಯಾನ್ ಪರಾಗ್ 10 ಎಸೆತಗಳಲ್ಲಿ 10 ರನ್ ಕಲೆಹಾಕಿ ಅಜೇಯರಾಗಿ ಉಳಿದರು.

RR vs CSK: ಜಡೇಜಾ, ರೋಹಿತ್ ದಾಖಲೆ ಮುರಿದು ಹೊಸ ಇತಿಹಾಸ ನಿರ್ಮಿಸಿದ ರಿಯಾನ್ ಪರಾಗ್!RR vs CSK: ಜಡೇಜಾ, ರೋಹಿತ್ ದಾಖಲೆ ಮುರಿದು ಹೊಸ ಇತಿಹಾಸ ನಿರ್ಮಿಸಿದ ರಿಯಾನ್ ಪರಾಗ್!

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಪ್ರಶಾಂತ್ ಸೋಲಂಕಿ 2 ವಿಕೆಟ್ ಪಡೆದರೆ, ಮೊಯಿನ್ ಅಲಿ, ಮಿಚೆಲ್ ಸ್ಯಾಂಟ್ನರ್ ಮತ್ತು ಸಿಮರ್ ಜೀತ್ ಸಿಂಗ್ ತಲಾ ಒಂದೊಂದು ವಿಕೆಟ್ ಪಡೆದರು.

ಚೆನ್ನೈ ಸೂಪರ್ ಕಿಂಗ್ಸ್ ಇನ್ನಿಂಗ್ಸ್:

ರೋಹಿತ್ ಪಡೆನ ಎದುರಿಸೊಕೆ ನಾವ್ ರೆಡಿ!! | OneIndia Kannada

ಚೆನ್ನೈ ಸೂಪರ್ ಕಿಂಗ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ರುತುರಾಜ್ ಗಾಯಕ್ವಾಡ್ ಮತ್ತು ಡಿವೋನ್ ಕಾನ್ವೆ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ರುತುರಾಜ್ ಗಾಯಕ್ವಾಡ್ 2 ರನ್ ಗಳಿಸಿ ಔಟ್ ಆದರೆ, ಡಿವೋನ್ ಕಾನ್ವೆ 16 ರನ್ ಗಳಿಸಿದರು. ಪಂದ್ಯದ ಮೊದಲ ಓವರ್‌ನ ಅಂತಿಮ ಎಸೆತದಲ್ಲಿ ರುತುರಾಜ್ ಗಾಯಕ್ವಾಡ್ ಔಟ್ ಆದ ನಂತರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮೊಯಿನ್ ಅಲಿ 57 ಎಸೆತೆಗಳಲ್ಲಿ 93 ರನ್ ಬಾರಿಸಿ ಅಬ್ಬರಿಸಿದರು. ಹೀಗೆ ಸ್ಪೋಟಕ ಆಡವಾಡಿದ ಮೊಯಿನ್ ಅಲಿ ಹೊರತುಪಡಿಸಿ ತಂಡದ ಉಳಿದ ಯಾವುದೇ ಆಟಗಾರರೂ ಸಹ ಹೇಳಿಕೊಳ್ಳುವಂತ ಪ್ರದರ್ಶನ ನೀಡಲಿಲ್ಲ. ಇನ್ನುಳಿದಂತೆ ಎನ್ ಜಗದೀಶನ್ 1 ರನ್ ಕಲೆಹಾಕಿದರೆ, ಅಂಬಟಿ ರಾಯುಡು 3 ರನ್, ಎಂಎಸ್ ಧೋನಿ 28 ಎಸೆತಗಳಲ್ಲಿ 26 ರನ್, ಮಿಚೆಲ್ ಸ್ಯಾಂಟ್ನರ್ ಅಜೇಯ 1 ರನ್ ಮತ್ತು ಸಿಮರ್‌ಜೀತ್ ಸಿಂಗ್ ಅಜೇಯ 3 ರನ್ ಕಲೆಹಾಕಿದರು.

For Quick Alerts
ALLOW NOTIFICATIONS
For Daily Alerts
Story first published: Friday, May 20, 2022, 23:34 [IST]
Other articles published on May 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X