IPL 2022: ರಶೀದ್ ಖಾನ್ ಬಹುದೊಡ್ಡ ವಿಕೆಟ್ ಟೇಕರ್ ಅಲ್ಲ ಎಂದ ಬ್ರಿಯಾನ್ ಲಾರಾ

ಅಫ್ಘಾನಿಸ್ತಾನದ ಕ್ರಿಕೆಟ್ ಸೂಪರ್‌ಸ್ಟಾರ್ ರಶೀದ್ ಖಾನ್ ತಮ್ಮ ಸ್ಪಿನ್ ಮೂಲಕ ವಿಶ್ವದ ಟಿ20 ಲೀಗ್‌ಗಳಲ್ಲಿ ಮಿಂಚನ್ನ ಹರಿಸುತ್ತಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರಶೀದ್ ಅಫ್ಘಾನಿಸ್ತಾನ ಬಹುಮುಖ್ಯ ಪ್ಲೇಯರ್ ಆಗಿದ್ದಾರೆ.

ಕಳೆದ ಶನಿವಾರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ರಶೀದ್ ಖಾನ್ 4 ಓವರ್‌ಗಳಲ್ಲಿ 2/22 ಪ್ರದರ್ಶನದೊಂದಿಗೆ ಐಪಿಎಲ್‌ನಲ್ಲಿ 100 ವಿಕೆಟ್ ಪಡೆದ 16 ನೇ ಬೌಲರ್ ಎನಿಸಿಕೊಂಡರು. ರಶೀದ್ ಖಾನ್ 2017 ರಿಂದ 2021 ರವರೆಗೆ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡಿದ್ದರು. ತಮ್ಮ ಅದ್ಭುತ ಬೌಲಿಂಗ್‌ನಿಂದ ಸೂಪರ್‌ಸ್ಟಾರ್ ಆದರು. ಸನ್ ರೈಸರ್ಸ್ ಪರ ಆಡಿದ 5 ಸೀಸನ್ ಗಳಲ್ಲಿ ರಶೀದ್ 76 ಪಂದ್ಯಗಳಲ್ಲಿ 93 ವಿಕೆಟ್ ಕಬಳಿಸಿದ್ದಾರೆ. 2022ರಲ್ಲಿ ಸನ್ ರೈಸರ್ಸ್ ರಶೀದ್ ಅವರನ್ನು ಬಿಡುಗಡೆ ಮಾಡಿದ ಬಳಿಕ, ಗುಜರಾತ್ ಟೈಟಾನ್ಸ್ ಅವರನ್ನು 15 ಕೋಟಿ ರೂ.ಗೆ ಖರೀದಿಸಿತು.

ರಶೀದ್ ಖಾನ್ ಗ್ರೇಟ್ ವಿಕೆಟ್ ಟೇಕರ್ ಅಲ್ಲ

ರಶೀದ್ ಖಾನ್ ಗ್ರೇಟ್ ವಿಕೆಟ್ ಟೇಕರ್ ಅಲ್ಲ

ರಶೀದ್ ಖಾನ್ ಅಂಕಿ ಅಂಶಗಳು ಅವರು ಎಂತಹ ಬೌಲರ್ ಎಂದು ಸಾಭೀತುಪಡಿಸುತ್ತದೆ. ಹೀಗಿರುವಾಗ ವೆಸ್ಟ್ ಇಂಡೀಸ್ ಬ್ಯಾಟಿಂಗ್ ದಿಗ್ಗಜ ಹಾಗೂ ಆರ್‌ಎಸ್‌ಎಚ್ ಬ್ಯಾಟಿಂಗ್ ಕೋಚ್ ಬ್ರಿಯಾನ್ ಲಾರಾ ರಶೀದ್ ಖಾನ್ ಅತ್ಯುತ್ತಮ ವಿಕೆಟ್ ಟೇಕರ್ ಅಲ್ಲ ಎಂದು ಹೇಳಿಕೆ ನೀಡುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.

RCB vs RR: ಹೆಡ್‌ ಟು ಹೆಡ್‌, ಸಂಭಾವ್ಯ ಪ್ಲೇಯಿಂಗ್ 11, ಪಿಚ್ ಪ್ರೆಡಿಕ್ಷನ್

ರಶೀದ್ ಖಾನ್‌ಗೆ ಡಿಫೆಂಡ್ ಮಾಡುವವರೇ ಹೆಚ್ಚು

ರಶೀದ್ ಖಾನ್‌ಗೆ ಡಿಫೆಂಡ್ ಮಾಡುವವರೇ ಹೆಚ್ಚು

ಎದುರಾಳಿ ತಂಡವು ರಶೀದ್ ಖಾನ್ ಬೌಲಿಂಗ್ ಹೆಚ್ಚು ಡಿಫೆನ್ಸ್ ಮಾಡಿಕೊಳ್ಳಲು ಮುಂದಾಗುವುದೇ ಹೊರತು, ವಿಕೆಟ್ ನೀಡುವುದು ಬಹಳ ಕಡಿಮೆ. ಅವರ ಬಗ್ಗೆ ನನಗೆ ಗೌರವವಿದೆ. ಆದ್ರೆ ರಶೀದ್ ಖಾನ್ ಅತ್ಯುತ್ತಮ ವಿಕೆಟ್ ಟೇಕರ್ ಅಲ್ಲ ಎನ್ನುವುದು ಲಾರಾ ಅಭಿಪ್ರಾಯವಾಗಿದೆ.

'ಆರ್ಥಿಕವಾಗಿ ಪ್ರತಿ ಓವರ್‌ಗೆ ಕೇವಲ 5-6 ರನ್ ನೀಡುವುದು ನಿಜವಾಗಿಯೂ ಅದ್ಭುತವಾಗಿದೆ. ರಶೀದ್ ವಿಷಯದಲ್ಲಿ ಎಕಾನಮಿ ತುಂಬಾ ಚೆನ್ನಾಗಿದೆ. ಆದರೆ ಮೊದಲ 6 ಓವರ್‌ಗಳಲ್ಲಿ ಉತ್ತಮವಾಗಿ ಸ್ಪಿನ್ ಮಾಡುವ ವಾಷಿಂಗ್ಟನ್ ಸುಂದರ್ ನಮ್ಮೊಂದಿಗಿರುವಾಗ, ರಶೀದ್ ಖಾನ್ ಬಹುದೊಡ್ಡ ಬೌಲರ್ ಎಂದು ನಾನು ಭಾವಿಸುವುದಿಲ್ಲ. ಗಾಯಗೊಂಡವರ ಬದಲಿಗೆ ಸುಚಿತ್ ಬಂದರು ಅವರೂ ಮಿಂಚುತ್ತಿದ್ದಾರೆ'' ಎಂದು ಲಾರಾ ಹೇಳಿದ್ದಾರೆ.

ವಿಶ್ವಕಪ್ ತಂಡದ ಕನಸು ಕಾಣುತ್ತಿರುವ ಡಿಕೆಗೆ ಐಪಿಎಲ್‌ನಲ್ಲಿ ಅಬ್ಬರಿಸುತ್ತಿರುವ ಈತನೆದುರು ಅವಕಾಶ ಕಷ್ಟ!

ರಶೀದ್‌ ಇದ್ದಿದ್ರೆ, ಏಳಕ್ಕೆ ಏಳು ಪಂದ್ಯದಲ್ಲಿ ಗೆಲುವು!

ರಶೀದ್‌ ಇದ್ದಿದ್ರೆ, ಏಳಕ್ಕೆ ಏಳು ಪಂದ್ಯದಲ್ಲಿ ಗೆಲುವು!

''ರಶೀದ್ ಖಾನ್ ಈ ಬಾರಿ ಎಸ್‌ಆರ್ಎಚ್ ಪರ ಇಲ್ಲದೇ ಇರಬಹುದು ಆದ್ರೆ , ನಮ್ಮಲ್ಲೂ ಶ್ರೇಯಸ್ ಗೋಪಾಲ್ ಇದ್ದಾರೆ. ಈವರೆಗೆ ಒಂದೇ ಒಂದು ಪಂದ್ಯ ಆಡದಿದ್ದರೂ.. ಐಪಿಎಲ್‌ನಲ್ಲಿ ಹ್ಯಾಟ್ರಿಕ್‌ ಸಾಧನೆ ಮಾಡಿದ್ದನ್ನು ಮರೆಯಬಾರದು. ಐಪಿಎಲ್‌ನಲ್ಲಿ ನಮ್ಮ ಶಕ್ತಿಯನ್ನು ವಿಸ್ತರಿಸಲು ನಮ್ಮ ಮೀಸಲು ಬೆಂಚ್‌ನಲ್ಲಿ ಇನ್ನೂ ಸಮರ್ಥ ಆಟಗಾರರಿದ್ದಾರೆ. ಇದಕ್ಕಾಗಿಯೇ ರಶೀದ್ ಇಲ್ಲದೆ ನಾವು ಹೆಚ್ಚು ಚಿಂತಿಸಬೇಕಾಗಿಲ್ಲ. ರಶೀದ್ ಖಾನ್ ತಂಡದ ಸದಸ್ಯನಾಗಿದ್ದರೆ ನನಗೆ ಸಂತೋಷವಾಗುತ್ತಿತ್ತು. ಅವರಿದ್ದರೆ ನಾವು ಏಳು ಪಂದ್ಯಗಳಲ್ಲಿ ಏಳರಲ್ಲಿ ಗೆಲ್ಲುತ್ತಿದ್ದೆವು" ಎಂದು ಲಾರಾ ಹೇಳಿದರು.

IPL 2022: ಕೆ.ಎಲ್ ರಾಹುಲ್ 4ನೇ IPL ಶತಕ, ಅತಿ ಹೆಚ್ಚಿನ ಶತಕ ಯಾರ ಹೆಸರಲ್ಲಿದೆ?

ಪಂಜಾಬ್ ವಿರುದ್ಧ ಚೆನ್ನೈಗೆ ಹೀನಾಯ ಸೋಲು:IPL ಟೂರ್ನಿಯಿಂದ ಬಹುತೇಕ ಔಟ್ | Oneindia Kannada
ವೇಗದ 100 ವಿಕೆಟ್ ಪಡೆದ ಮೂರನೇ ಬೌಲರ್

ವೇಗದ 100 ವಿಕೆಟ್ ಪಡೆದ ಮೂರನೇ ಬೌಲರ್

ಗುಜರಾತ್ ಟೈಟಾನ್ಸ್ ಪರ ಆಡುತ್ತಿರುವ ರಶೀದ್ ಖಾನ್, ಡ್ವೇನ್ ಬ್ರಾವೋ (179 ವಿಕೆಟ್, 158 ಪಂದ್ಯಗಳು), ಲಸಿತ್ ಮಾಲಿಂಗ (170 ವಿಕೆಟ್, 122 ಪಂದ್ಯಗಳು) ಮತ್ತು ಸುನಿಲ್ ನರೈನ್ (149 ವಿಕೆಟ್, 142 ಪಂದ್ಯಗಳು) ನಂತರ ಐಪಿಎಲ್‌ನಲ್ಲಿ 100 ವಿಕೆಟ್ ಪಡೆದ ನಾಲ್ಕನೇ ವಿದೇಶಿ ಆಟಗಾರ ಎನಿಸಿಕೊಂಡರು.

ಇದರ ಜೊತೆಗೆ ಅಮಿತ್ ಮಿಶ್ರಾ, ಆಶಿಶ್ ನೆಹ್ರಾ ಅವರೊಂದಿಗೆ ಐಪಿಎಲ್‌ನಲ್ಲಿ ಮೂರನೇ ಅತಿವೇಗದ (83 ಪಂದ್ಯಗಳಲ್ಲಿ) 100 ವಿಕೆಟ್ ಪಡೆದರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, April 25, 2022, 18:15 [IST]
Other articles published on Apr 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X