ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾಯಕತ್ವದ ಚರ್ಚೆಯಲ್ಲಿ ಈತನ ಹೆಸರನ್ನು ಮರೆಯಬೇಡಿ: ರವಿ ಶಾಸ್ತ್ರಿ ಮನಗೆದ್ದ ಯುವ ನಾಯಕ ಯಾರು?

IPL 2022: Ravi Shastri praises Hardik Pandya’s captaincy said he is the candidate of next india captaincy

ಈ ಬಾರಿಯ ಐಪಿಎಲ್‌ನಲ್ಲಿ ಸಾಕಷ್ಟು ಯುವ ಪ್ರತಿಭೆಗಳು ಅದ್ಭುತ ಪ್ರದರ್ಶನ ನೀಡುವ ಮೂಲಕ ಅಭಿಮಾನಿಗಳ ಮನಗೆಲ್ಲುತ್ತಿದ್ದಾರೆ. ಆಟಗಾರರಾಗಿ ಮಾತ್ರವಲ್ಲದೆ ಕೆಲವರು ಇದೇ ಮೊದಲ ಬಾರಿಗೆ ಐಪಿಎಲ್ ತಂಡವೊಂದರ ನಾಯಕತ್ವದ ಜವಾಬ್ಧಾರಿಯನ್ನು ವಹಿಸಿಕೊಂಡಿದ್ದು ಅವರಿಂದಲೂ ಉತ್ತಮ ಪ್ರದರ್ಶನಗಳು ವ್ಯಕ್ತವಾಗುತ್ತಿದೆ. ಇದರಲ್ಲಿ ಓರ್ವ ಯುವ ನಾಯಕನ ಪ್ರದರ್ಶನದ ಬಗ್ಗೆ ಟೀಮ್ ಇಂಡಿಯಾದ ಮಾಜಿ ಕೋಚ್ ಹಾಗೂ ಹಾಲಿ ಕಾಮೆಂಟೇಟರ್ ರವಿ ಶಾಸ್ತ್ರಿ ವಿಶೇಷ ಮೆಚ್ಚಿಗೆಯ ಮಾತುಗಳನ್ನಾಡಿದ್ದಾರೆ.

ಟೀಮ್ ಇಂಡಿಯಾದ ಭವಿಷ್ಯದ ನಾಯಕತ್ವದ ಬಗ್ಗೆ ಆಗಾಗ ಚರ್ಚೆಗಳು ನಡೆಯುತ್ತಿರುತ್ತದೆ. ಮುಂದಿನ ನಾಯಕ ಯಾರು ಎಂಬ ಕುರಿತಾಗಿ ಅಭಿಮಾನಿಗಳು ಹಾಗೂ ಕ್ರಿಕೆಟ್ ಪಂಡಿತರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುತ್ತಾರೆ. ಇಂಥಾ ಚರ್ಚೆಗಳು ಬಂದಾಗ ಕೆಲ ಆಟಗಾರರ ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತದೆ. ಈಗ ಮಾಜಿ ಕೋಚ್ ರವಿ ಶಾಸ್ತ್ರಿ ಮತ್ತೋರ್ವ ಆಟಗಾರನ ಹೆಸರನ್ನು ಈ ನಾಯಕತ್ವದ ಚರ್ಚೆಗೆ ಸೇರ್ಪಡೆಗೊಳಿಸಬೇಕು ಎಂದಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ನಾಯಕನಾಗಿ ಅದ್ಭುತವಾಗಿ ಮುನ್ನಡೆಸುತ್ತಿರುವ ಓರ್ವ ಕ್ರಿಕೆಟಿಗನನ್ನು ರವಿ ಶಾಸ್ತ್ರಿ ಉಲ್ಲೇಖಿಸಿದ್ದಾರೆ. ಮಾತ್ರವಲ್ಲದೆ ಐಪಿಎಲ್‌ನಲ್ಲಿ ಈ ಆಟಗಾರ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿರುವ ಬಗ್ಗೆ ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.

RR vs LSG: ಇದ್ದಕ್ಕಿದ್ದಂತೆ ಕ್ರೀಸ್ ಬಿಟ್ಟು ತೆರಳಿದ ಅಶ್ವಿನ್: ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲು!RR vs LSG: ಇದ್ದಕ್ಕಿದ್ದಂತೆ ಕ್ರೀಸ್ ಬಿಟ್ಟು ತೆರಳಿದ ಅಶ್ವಿನ್: ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲು!

ಹಾಗಾದರೆ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಮಾಜಿ ಕೋಚ್ ರವಿ ಶಾಸ್ತ್ರಿ ಪ್ರಶಂಸಿಸಿರುವ ಆ ಯುವ ನಾಯಕ ಯಾರು? ಮುಂದೆ ಓದಿ..

ಈ ಬಾರಿಯ ಅಜೇಯ ತಂಡವನ್ನು ಮುನ್ನಡೆಸುತ್ತಿರುವ ನಾಯಕ

ಈ ಬಾರಿಯ ಅಜೇಯ ತಂಡವನ್ನು ಮುನ್ನಡೆಸುತ್ತಿರುವ ನಾಯಕ

ಈ ಬಾರಿಯ ಐಪಿಎಲ್‌ನಲ್ಲಿ ಈವರೆಗೆ ಆಡಿರುವ ಪಂದ್ಯಗಳಲ್ಲಿ ಒಂದು ತಂಡವನ್ನು ಬಿಟ್ಟು ಮತ್ತೆಲ್ಲಾ ತಂಡಗಳು ಕೂಡ ಕನಿಷ್ಠ ಒಂದು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಅಜೇಯವಾಗುಳಿದಿರುವ ಆ ಒಂದು ತಂಡವೆಂದರೆ ಗುಜರಾತ್ ಟೈಟನ್ಸ್. ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡ ಮಾತ್ರವೇ ಈ ಬಾರಿಯ ಟೂರ್ನಿಯಲ್ಲಿ ಒಂದೂ ಸೋಲು ಕಾಣದ ತಂಡವೆನಿಸಿದೆ. ಈ ತಂಡವನ್ನು ಮುನ್ನಡೆಸುತ್ತಿರುವ ರೀತಿಗೆ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ ಮಾಜಿ ಕೋಚ್ ರವಿ ಶಾಸ್ತ್ರಿ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹೆಚ್ಚು ನಿರೀಕ್ಷೆಯಿಲ್ಲದ ತಂಡ

ಹೆಚ್ಚು ನಿರೀಕ್ಷೆಯಿಲ್ಲದ ತಂಡ

ಈ ಬಾರಿಯ ಐಪಿಎಲ್‌ಗೆ ಹೊಸದಾಗಿ ಸೇರ್ಪಡೆಯಾಗಿರುವ ಎರಡು ತಂಡಗಳ ಪೈಕಿ ಗುಜರಾತ್ ಟೈಟನ್ಸ್ ಕೂಡ ಒಂದು. ಆದರೆ ಟೂರ್ನಿಯ ಆರಂಭಕ್ಕೂ ಮುನ್ನ ಗುಜರಾತ್ ಟೈಟನ್ಸ್ ತಂಡವನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಟೂರ್ನಿ ಆರಂಭವಾಗಿ ಎರಡು ವಾರಗಳು ಕಳೆದಿದ್ದು ಈಗ ಚಿತ್ರಣವೇ ಬದಲಾಗಿದೆ. ಗುಜರಾತ್ ಟೈಟನ್ಸ್ ತಂಡ ಈವರೆಗೆ ಆಡಿರುವ ಮೂರು ಪಂದ್ಯಗಳ ಪೈಕಿ ಒಂದರಲ್ಲಿಯೂ ಸೋಲು ಅನುಭವಿಸಿಲ್ಲ. ಹೀಗಾಗಿ ಇತರ ಎಲ್ಲಾ ತಂಡಗಳು ಸೋಲಿಸಲು ಬಯಸುತ್ತಿರುವ ತಂಡವಾಗಿ ಬದಲಾಗಿದೆ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್. ಅಲ್ಲದೆ ನಾಯಕ ಹಾರ್ದಿಕ್ ಪಾಂಡ್ಯ ಕೂಡ ಉತ್ತಮ ಫಾರ್ಮ್‌ನಲ್ಲಿದ್ದಾರೆ.

ಮುಂದಿನ ನಾಯಕತ್ವದ ಸ್ಪರ್ಧೆಗೆ ಹಾರ್ದಿಕ್ ಎಂಟ್ರಿ!

ಮುಂದಿನ ನಾಯಕತ್ವದ ಸ್ಪರ್ಧೆಗೆ ಹಾರ್ದಿಕ್ ಎಂಟ್ರಿ!

ಹಾರ್ದಿಕ್ ಪಾಂಡ್ಯ ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಮುನ್ನಡೆಸುತ್ತಿರುವ ರೀತಿಗೆ ರವಿ ಶಾಸ್ತ್ರಿ ಮನಸೋತಿದ್ದಾರೆ. ಭಾರತ ತಂಡದ ಮುಂದಿನ ನಾಯಕತ್ವದ ಸ್ಪರ್ಧೆಯಲ್ಲಿ ಹಾರ್ದಿಕ್ ಪಾಂಡ್ಯ ಕೂಡ ಎಂಟ್ರಿಕೊಟ್ಟಿದ್ದಾರೆ ಎಂದು ರವಿ ಶಾಸ್ತ್ರಿ ಹೇಳಿದ್ದಾರೆ. "ಈ ಐಪಿಎಲ್ ಆವೃತ್ತಿಗೆ ಕೆಎಲ್ ರಾಹುಲ್, ಶ್ರೇಯಸ್ ಐಯ್ಯರ್, ರಿಷಭ್ ಪಂತ್ ಅವರಂತಾ ಯುವ ನಾಯಕರ ಬಗ್ಗೆ ಚರ್ಚೆಗಳು ನಡೆದಿದೆ. ಈ ಪಟ್ಟಿಗೆ ಹಾರ್ದಿಕ್ ಪಾಂಡ್ಯ ಅವರನ್ನು ಕೂಡ ಸೇರಿಸಿ. ಈ ಹುಡುಗನನ್ನು ಈ ಪಟ್ಟಿಯಿಂದ ಹೊರಗಿಡಬೇಡಿ. ಈತ ಭಾರತ ತಂಡವನ್ನು ಮುನ್ನಡೆಸಬಲ್ಲರು" ಎಂದು ರವಿ ಶಾಸ್ತ್ರಿ ಹಾರ್ದಿಕ್ ಪಾಂಡ್ಯ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ.

ಆತನ ಪ್ರದರ್ಶನ ಎಲ್ಲವನ್ನೂ ಹೇಳುತ್ತೆ

ಆತನ ಪ್ರದರ್ಶನ ಎಲ್ಲವನ್ನೂ ಹೇಳುತ್ತೆ

"ಆತ ಹೊಸ ಚೆಂಡಿನಿಂದಿಗೆ ಬೌಲಿಂಗ್ ದಾಳಿ ನಡೆಸುತ್ತಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುತ್ತಿದ್ದಾರೆ. ಆತ ಫಿಟ್ ಆಗಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ. ಆತನ ಮನಸ್ಸಿನಲ್ಲಿ ಬಹಳಷ್ಟು ಸ್ಪಷ್ಟತೆಯಿದೆ. ಇದರಿಂದಾಗಿ ಆತ ಚಾಣಾಕ್ಷ ಎಂಬುದು ಅರಿವಾಗುತ್ತದೆ. ಆತನ ಮೇಲಿರುವ ಆತನ ಬದ್ಧತೆ ಆತನನ್ನು ಉತ್ತಮ ನಾಯಕನನ್ನಾಗಿಸುತ್ತದೆ" ಎಂದಿದ್ದಾರೆ ರವಿಶಾಸ್ತ್ರಿ

Umran ಜೊತೆಗೆ ನೆಡೆದ ಘಟನೆ ಬಗ್ಗೆ Pandya ಮಾತು | Oneindia Kannada

Story first published: Tuesday, April 12, 2022, 9:51 [IST]
Other articles published on Apr 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X