ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪ್ಲೇ ಆಫ್ ಸುತ್ತಿಗೆ ಅರ್ಹತೆ ಪಡೆದುಕೊಳ್ಳುವಲ್ಲಿ ಲೀಗ್ ಹಂತದ ಅಂತಿಮ ಸಮಯದ ವೇಳೆ ಯಶಸ್ವಿಯಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ ಆಫ್ ಸುತ್ತಿನಲ್ಲಿ ತಾನಾಡಿದ ಮೊದಲನೇ ಪಂದ್ಯದಲ್ಲಿ ಗೆಲುವನ್ನು ಸಾಧಿಸಿತು. ಹೌದು, ಕಳೆದ ಬುಧವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ 14 ರನ್ಗಳ ಭರ್ಜರಿ ಜಯವನ್ನು ಸಾಧಿಸಿದ ಫಾಫ್ ಡು ಪ್ಲೆಸಿಸ್ ಬಳಗ ಇದೀಗ ಎರಡನೇ ಕ್ವಾಲಿಫೈಯರ್ ಪಂದ್ಯವನ್ನು ಆಡುವ ಅವಕಾಶವನ್ನು ಪಡೆದುಕೊಂಡಿದೆ.
ಇನ್ನು ಈ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಎದುರಾಳಿಯಾಗಿರುವುದು ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್. ಟೂರ್ನಿಯ ಲೀಗ್ ಹಂತದ ಮುಕ್ತಾಯದ ವೇಳೆಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದ ರಾಜಸ್ಥಾನ್ ರಾಯಲ್ಸ್ ಪ್ಲೇ ಆಫ್ ಸುತ್ತಿನಲ್ಲಿ ಒಂದನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಕಣಕ್ಕಿಳಿದಿತ್ತು. ಹಾಗೂ ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುಜರಾತ್ ಟೈಟನ್ಸ್ 7 ವಿಕೆಟ್ಗಳ ಭರ್ಜರಿ ಗೆಲುವನ್ನು ಸಾಧಿಸಿತ್ತು. ಹೀಗೆ ಗುಜರಾತ್ ಟೈಟನ್ಸ್ ವಿರುದ್ಧ ಸೋತ ರಾಜಸ್ಥಾನ್ ರಾಯಲ್ಸ್ ಇಂದು ( ಮೇ 27 ) ನಡೆಯಲಿರುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿ ಮತ್ತೆ ಟೈಟನ್ಸ್ ವಿರುದ್ಧ ಕಣಕ್ಕಿಳಿಸುವ ಯೋಜನೆಯಲ್ಲಿದೆ.
ಇತ್ತ ಕಳೆದೆರಡು ಪಂದ್ಯಗಳಲ್ಲಿ ಗುಜರಾತ್ ಟೈಟನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆದ್ದಿರುವ ಹುಮ್ಮಸ್ಸಿನಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ರಾಜಸ್ತಾನ್ ರಾಯಲ್ಸ್ ಮಣಿಸಿ ಫೈನಲ್ ಪಂದ್ಯಕ್ಕೆ ಲಗ್ಗೆ ಇಡುವ ಉದ್ದೇಶದಲ್ಲಿದೆ. ಇನ್ನು ಈ ಪಂದ್ಯ ಬಹಳ ಮಹತ್ವದ್ದಾಗಿರುವುದರಿಂದ ಎರಡೂ ತಂಡಗಳು ಬಲಿಷ್ಠ ಆಡುವ ಬಳಗಗಳೊಂದಿಗೆ ಕಣಕ್ಕಿಳಿಯಲಿದ್ದು, ಸ್ಫೋಟಕ ಬ್ಯಾಟ್ಸ್ಮನ್ಗಳಿಂದ ಕೂಡಿರುವ ರಾಜಸ್ಥಾನ್ ರಾಯಲ್ಸ್ ತಂಡವನ್ನು ಕಟ್ಟಿಹಾಕಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಳ್ಳೆಯ ಯೋಜನೆಯನ್ನು ಹೆಣೆಯಬೇಕಿದೆ. ಅದರಲ್ಲಿಯೂ ಈ ಒಬ್ಬ ಆಟಗಾರನ ವಿಕೆಟ್ ಪಡೆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿನ ಹಾದಿ ಸುಲಭವಾಗಲಿದೆ ಎಂದು ಹೇಳಬಹುದಾಗಿದ್ದು, ಈ ಕುರಿತಾದ ಮತ್ತಷ್ಟು ವಿವರ ಕೆಳಕಂಡಂತಿದೆ ಓದಿ..
ಗೆಲುವು ಸುಲಭವಾಗಲು ಈತನ ವಿಕೆಟ್ ಮೊದಲು ಪಡೆಯಬೇಕು
ರಾಯಲ್ ಚಾಲೆಂಜರ್ಸ್ ಬೆಂಗಳೂರು ರಾಯಸ್ತಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಗೆಲುವಿನ ಹಾದಿಯನ್ನು ಸುಲಭ ಮಾಡಿಕೊಳ್ಳಲು ಎದುರಾಳಿ ತಂಡದ ಬಲಿಷ್ಠ ಆಟಗಾರ ಜೋಸ್ ಬಟ್ಲರ್ ಅವರ ವಿಕೆಟ್ನ್ನು ಮೊದಲು ಪಡೆದುಕೊಳ್ಳಬೇಕಿದೆ. ಟೂರ್ನಿಯಲ್ಲಿ ಅಬ್ಬರಿಸಿ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಜೋಸ್ ಬಟ್ಲರ್ ಕಣದಲ್ಲಿದ್ದಷ್ಟು ಸೋಲಿನ ಭೀತಿ ಹೆಚ್ಚಿರಲಿದ್ದು, ಬಟ್ಲರ್ ವಿಕೆಟ್ ಪಡೆದರೆ ಗೆಲುವಿನ ಹಾದಿ ಸುಲಭವಾಗುವುದರ ಜೊತೆಗೆ ಎದುರಾಳಿ ತಂಡದ ಉಳಿದ ಆಟಗಾರರ ಮೇಲೆ ಒತ್ತಡವನ್ನು ಹೇರಬಹುದಾಗಿದೆ. ಅದರಲ್ಲಿಯೂ ರಾಜಸ್ತಾನ್ ರಾಯಲ್ಸ್ ಒಂದುವೇಳೆ ಚೇಸಿಂಗ್ ಮಾಡಿದರೆ ಮೊದಲು ಬಟ್ಲರ್ ಅವರ ವಿಕೆಟ್ ಪಡೆಯುವತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲರ್ಗಳು ಕಡ್ಡಾಯವಾಗಿ ಚಿಂತಿಸಬೇಕಿದೆ.
ಲೀಗ್ ಹಂತದಲ್ಲಿ ಆರ್ಸಿಬಿ ವಿರುದ್ಧ ಅಬ್ಬರಿಸಿದ್ದ ಬಟ್ಲರ್
ಇನ್ನು ಈ ಬಾರಿಯ ಟೂರ್ನಿಯ ಲೀಗ್ ಹಂತದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು 2 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದವು. ಈ ಪೈಕಿ ಮೊದಲ ಪಂದ್ಯದಲ್ಲಿ ಜೋಸ್ ಬಟ್ಲರ್ 47 ಎಸೆತಗಳಲ್ಲಿ 70 ರನ್ ಚಚ್ಚಿ ಅಬ್ಬರಿಸಿದ್ದರು. 148.44 ಸ್ಟ್ರೈಕ್ ರೇಟ್ ಜತೆಗೆ ಬ್ಯಾಟ್ ಬೀಸಿದ್ದ ಬಟ್ಲರ್ ಯಾವುದೇ ಫೋರ್ ಬಾರಿಸದೇ ಇದ್ದರೂ 6 ಸಿಕ್ಸರ್ ಸಿಡಿಸಿ ಅಜೇಯರಾಗಿ ಉಳಿದಿದ್ದರು.
ಇವತ್ತು ಈ ಆಟಗಾರನ ವಿಕೆಟ್ ಬೇಗ ಪಡ್ಕೊಂಡ್ರೆ RCB ಫೈನಲ್ ಗೇರೋದು ಗ್ಯಾರೆಂಟಿ | #cricket | Oneindia Kannada
ರಾಯಲ್ ಚಾಲೆಂಜರ್ಸ್ ವಿರುದ್ಧ ಬಟ್ಲರ್ ಐಪಿಎಲ್ ಒಟ್ಟು ರನ್ಗಳು
ಇನ್ನು ಐಪಿಎಲ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 11 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಜೋಸ್ ಬಟ್ಲರ್ 209 ಎಸೆತಗಳಲ್ಲಿ 306 ರನ್ ಬಾರಿಸಿದ್ದಾರೆ. ಬಟ್ಲರ್ ಅವರ ಈ ರನ್ 16 ಸಿಕ್ಸರ್ ಮತ್ತು 24 ಬೌಂಡರಿಗಳನ್ನು ಒಳಗೊಂಡಿದೆ.