ಕ್ವಾಲಿಫೈಯರ್‌ನಲ್ಲಿ ಸೋಲು: ಟ್ರೋಲ್ ಆದ RCB ಕಟ್ಟಾ ಅಭಿಮಾನಿಗಳು

RCB fans

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶುಕ್ರವಾರ ರಾಜಸ್ಥಾನ್ ರಾಯಲ್ಸ್ ಹಾಗೂ ರಾಯಲ್‌ ಚಾಲೆಂಜರ್ಸ್‌ ನಡುವಿನ ಪಂದ್ಯದಲ್ಲಿ ಆರ್‌ಸಿಬಿ ಮುಗ್ಗರಿಸಿದ ಮೇಲೆ ಆರ್‌ಸಿಬಿ ಕಟ್ಟಾ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ಗೆ ಒಳಗಾಗಿದ್ದಾರೆ.

ಜೋಸ್‌ ಬಟ್ಲರ್ ಅಬ್ಬರದ ಶತಕ ಸಿಡಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇತಿಶ್ರೀ ಹಾಡಿದ್ರು. 60 ಎಸೆತಗಳಲ್ಲಿ 10 ಬೌಂಡರಿ ಮತ್ತು 6 ಸಿಕ್ಸರ್‌ಗಳೊಂದಿಗೆ ಅಜೇಯ 106 ರನ್ ಕಲೆಹಾಕಿದ ಜೋಶ್ ಬಟ್ಲರ್‌ ಆಟದಿಂದಾಗಿ ರಾಜಸ್ತಾನ್ ರಾಯಲ್ಸ್ 7 ವಿಕೆಟ್‌ಗಳ ಜಯ ಸಾಧಿಸಿತು. ಇದ್ರ ಬೆನ್ನಲ್ಲೇ ಐಪಿಎಲ್‌ನಲ್ಲಿ ಒಂದು ಬಾರಿಯೂ ಪ್ರಶಸ್ತಿ ಗೆಲ್ಲದ ಆರ್‌ಸಿಬಿಯ ಬಹುಕಾಲದ ಕನಸು ನನಸಾಗಬಹುದು ಎಂದುಕೊಂಡಿದ್ದ ಜನರು ಟ್ರೋಲ್‌ಗೆ ಒಳಗಾಗಿದ್ದಾರೆ.

ಐಪಿಎಲ್‌ನಲ್ಲಿ ಜನಪ್ರಿಯ ತಂಡವಾಗಿರುವ ಆರ್‌ಸಿಬಿ ಪ್ರತಿ ವರ್ಷ ಹೇಳುತ್ತಿರುವ ಮಾತು ಈ ಸಲ ಕಪ್ ನಮ್ ದೇ. ಇನ್ನು ಕೆಲವರು ವಿರಾಟ್ ಕೊಹ್ಲಿ, ಚೋಕ್ಲಿ ಎಂಬ ಅಡಿಬರಹದೊಂದಿಗೆ ಪೋಸ್ಟ್ ಮಾಡುತ್ತಿದ್ದಾರೆ. ಇದರೊಂದಿಗೆ, ಈ ಟ್ಯಾಗ್ ಲೈನ್‌ಗಳು ಚೆನ್ನಾಗಿ ಟ್ರೆಂಡಿಂಗ್ ಆಗಿವೆ. ಇಷ್ಟೆಲ್ಲಾ ಟ್ರೋಲ್ ಗಳನ್ನು ಅತ್ತ ಆರ್‌ಸಿಬಿ ಗೆಲ್ಲುವವರೆಗೂ ನಾನು ಮದುವೆಯಾಗುವುದಿಲ್ಲ ಎಂಬ ಪ್ಲೆಕಾರ್ಡ್ ಪೋಸ್ಟ್ ಹಿಡಿದಿದ್ದ ಅಭಿಮಾನಿಯನ್ನ ಸಹ ಬಿಟ್ಟಿಲ್ಲ. ಈ ಪೋಸ್ಟ್‌ನಲ್ಲಿ ಹೆಚ್ಚಿನ ಮೀಮ್‌ಗಳನ್ನು ಮಾಡುವುದರ ಜೊತೆಗೆ, ನೆಟಿಜನ್‌ಗಳು ಕಾಮೆಂಟ್‌ಗಳಿಂದ ಮುಳುಗಿದ್ದಾರೆ.

ಆರ್‌ಸಿಬಿಯ ಕಟ್ಟಾ ಅಭಿಮಾನಿಯಾಗಿರುವ ಅಭಿಮಾನಿಯೊಬ್ಬರು, ಆರ್‌ಸಿಬಿ ಪ್ರಶಸ್ತಿ ಗೆಲ್ಲುವವರೆಗೂ ಮದುವೆಯಾಗುವುದಿಲ್ಲ ಎಂದು ಪ್ಲೆಕಾರ್ಡ್‌ ತೋರಿಸಿದ್ದರು. ಇದನ್ನು ಸಾಕಷ್ಟು ಮಂದಿ ರೀಟ್ವೀಟ್ ಮಾಡಿ ತಮ್ಮದೇ ಆದ ಕಾಮೆಂಟ್‌ಗಳನ್ನು ಹಾಕುತ್ತಿದ್ದು, ಈ ಪೋಸ್ಟ್ ಅನ್ನು ಟ್ರೋಲ್ ಮಾಡುತ್ತಿದ್ದಾರೆ. ಈ ಬಾರಿಯೂ ಆರ್‌ಸಿಬಿ ಟ್ರೋಫಿ ಗೆಲ್ಲಲು ಸಾಧ್ಯವಾಗದೆ ಆಕೆಯ ಮದುವೆಯ ಇನ್ನೊಂದು ವರ್ಷ ಮಿಸ್ ಆಗುವುದು ಸಹಜ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

ಇನ್ನು ಕೆಲವರು ಆಕೆ ಉದ್ದೇಶಪೂರ್ವಕವಾಗಿ ಪೋಸ್ಟ್ ಹಾಕಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಹೇಗಿದ್ದರೂ ಆರ್‌ಸಿಬಿ ಗೆಲ್ಲುತ್ತಿಲ್ಲ, ಆ ಆಂಟಿ ಕೂಡ ಮದುವೆಯಾಗುತ್ತಿಲ್ಲ. ಏಕೆಂದರೆ ಆರ್‌ಸಿಬಿ ಹೇಗಿದ್ದರೂ ಗೆಲ್ಲುವುದಿಲ್ಲ ಎಂದು ಅತ್ತ ಪ್ಲೆಕಾರ್ಡ್ ಹಾಕುತ್ತಿದ್ದಾರೆ. ಇನ್ನು ಕೆಲವರು ಆಕೆ ಒಂಟಿ ಎಂದು ಫಿಕ್ಸ್ ಆಗಿದ್ದರಿಂದ ಪ್ಲೇಕಾರ್ಡ್ ಪ್ರದರ್ಶಿಸಲಾಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಆಕೆ ಆರ್‌ಸಿಬಿ ಗೆಲ್ಲುತ್ತದೆ ಎಂದು ಕಾದು ಕಾದು ವಯಸ್ಸಾಗಿದೆ, ಹೀಗಾಗಿಯೇ ಮದುವೆಯಾಗಲ್ಲ ಎಂಬ ಪ್ಲೇಕಾರ್ಡ್‌ ತೋರಿಸುತ್ತದೆ ಎಂಬುದು ಕೆಲವರ ಹೇಳಿಕೆ.

ಈ ಮಟ್ಟಿಗೆ ಹಲವಾರು ಮೀಮ್ಸ್ ಕೂಡ ಮಾಡಲಾಗಿದೆ. ಇನ್ನು ಕೆಲವರು ಬಾಲಿವುಡ್‌ನ ಸಲ್ಮಾನ್ ಖಾನ್‌ನಂತಹ RCB ಅಭಿಮಾನಿ, ಆಂಟಿ ಶಾಶ್ವತವಾಗಿ ಸಿಂಗಲ್ ಆಗಿ ಉಳಿಯುತ್ತಾರೆ ಎಂದು ಹೇಳುವ ಮೂಲಕ ಕಾಲೆಳೆದಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Saturday, May 28, 2022, 17:48 [IST]
Other articles published on May 28, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X