ಐಪಿಎಲ್ 2022 ರಿಟೆನ್ಷನ್: ಆರ್‌ಸಿಬಿಯಿಂದ ಪ್ರಮುಖ ಬ್ಯಾಟ್ಸ್‌ಮನ್‌ ಹೊರಕ್ಕೆ; ಈ 4 ಆಟಗಾರರು ಸೇಫ್

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನು ನೀಡುವುದರ ಮೂಲಕ ಕ್ವಾಲಿಫೈಯರ್ ಸುತ್ತಿಗೆ ಆರ್ಹತೆಯನ್ನು ಪಡೆದುಕೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಲಿಮಿನೇಟರ್ ಹಂತದಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸೋಲುವುದರ ಮೂಲಕ ಈ ಬಾರಿಯೂ ಕೂಡ ತನ್ನ ಟ್ರೋಫಿ ಎತ್ತಿ ಹಿಡಿಯುವ ಕನಸನ್ನು ನನಸು ಮಾಡಿಕೊಳ್ಳಲಾಗದೇ ನಿರಾಸೆ ಅನುಭವಿಸಿತು.

ಭಾರತ vs ನ್ಯೂಜಿಲೆಂಡ್‌: ಮತ್ತೊಮ್ಮೆ ವಿಫಲರಾದ ಪೂಜಾರ, ರಹಾನೆ; ಇವರ ಕಥೆ ಇಷ್ಟೇ ಎಂದ ನೆಟ್ಟಿಗರುಭಾರತ vs ನ್ಯೂಜಿಲೆಂಡ್‌: ಮತ್ತೊಮ್ಮೆ ವಿಫಲರಾದ ಪೂಜಾರ, ರಹಾನೆ; ಇವರ ಕಥೆ ಇಷ್ಟೇ ಎಂದ ನೆಟ್ಟಿಗರು

ದುರಾದೃಷ್ಟವಶಾತ್ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟ್ರೋಫಿ ಎತ್ತಿ ಹಿಡಿಯಬೇಕೆಂಬ ಹಲವಾರು ಆಟಗಾರರ ಮತ್ತು ಸಹಸ್ರಾರು ಅಭಿಮಾನಿಗಳ ಕನಸು ಕೊನೆಗೂ ನನಸಾಗಲೇ ಇಲ್ಲ. ಹೌದು, ಯುಎಇಯಲ್ಲಿ ಐಪಿಎಲ್ ಪುನರಾರಂಭವಾಗುವ ಮುನ್ನವೇ ವಿಶೇಷ ಪ್ರಕಟಣೆಯೊಂದನ್ನು ಹೊರಡಿಸಿದ್ದ ವಿರಾಟ್ ಕೊಹ್ಲಿ ಈ ಬಾರಿಯ ಐಪಿಎಲ್ ಟೂರ್ನಿ ಮುಗಿದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವದಿಂದ ಕೆಳಗಿಳಿಯಲಿದ್ದೇನೆ ಎಂದಿದ್ದರು. ಹೀಗಾಗಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಆಡಿದ ಅಂತಿಮ ಟೂರ್ನಿ ಇದಾಗಿತ್ತು ಮತ್ತು ಇತ್ತೀಚೆಗಷ್ಟೇ ನಿವೃತ್ತಿ ನೀಡಿದ ಎಬಿ ಡಿವಿಲಿಯರ್ಸ್ ಜೊತೆ ಆಡಿದ ಅಂತಿಮ ಐಪಿಎಲ್ ಟೂರ್ನಿಯೂ ಕೂಡ ಇದಾಗಿದೆ.

IPL 2022 ರಿಟೆನ್ಷನ್: ಮುಂಬೈ ತಂಡದಿಂದ ಸ್ಟಾರ್ ಆಟಗಾರ ಔಟ್; ಈ 4 ಆಟಗಾರರು ಸೇಫ್IPL 2022 ರಿಟೆನ್ಷನ್: ಮುಂಬೈ ತಂಡದಿಂದ ಸ್ಟಾರ್ ಆಟಗಾರ ಔಟ್; ಈ 4 ಆಟಗಾರರು ಸೇಫ್

ಒಂದೆಡೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿದ ಅಂತಿಮ ಐಪಿಎಲ್ ಟೂರ್ನಿ ಇದಾದರೆ, ಮತ್ತೊಂದೆಡೆ ಮುಂದಿನ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಆಟಗಾರರ ಮೆಗಾ ಹರಾಜು ನಡೆಯುವ ಕಾರಣದಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹಲವಾರು ಆಟಗಾರರು ಬೆಂಗಳೂರು ತಂಡವನ್ನು ಪ್ರತಿನಿಧಿಸಿದ ಅಂತಿಮ ಟೂರ್ನಿ ಕೂಡ ಇದಾಗಿದೆ. ಹೌದು, ಡಿಸೆಂಬರ್ ಅಥವಾ ಜನವರಿ ತಿಂಗಳಿನಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದ್ದು ಬಿಸಿಸಿಐ ನಿಯಮದ ಪ್ರಕಾರ ಫ್ರಾಂಚೈಸಿಯೊಂದು 4 ಆಟಗಾರರನ್ನು ಉಳಿಸಿಕೊಂಡು ಉಳಿದ ಆಟಗಾರರನ್ನು ತಂಡದಿಂದ ಹೊರ ಹಾಕ ಬೇಕಾಗಿದೆ. ಹೀಗಾಗಿ ಫ್ರಾಂಚೈಸಿಯ ಮಾಲೀಕರಿಗೆ ಯಾವ ಆಟಗಾರರನ್ನು ಉಳಿಸಿಕೊಳ್ಳಬೇಕು ಮತ್ತು ಯಾರನ್ನು ಹೊರಹಾಕಬೇಕು ಎಂಬ ತಲೆನೋವು ಹೆಚ್ಚಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಲೀಕರು ಈ ಕೆಳಕಂಡ 4 ಆಟಗಾರರಿಗೆ ಮಣೆ ಹಾಕಲಿದ್ದಾರೆ ಎನ್ನಲಾಗುತ್ತಿದೆ..

ರಾಯಲ್ ಚಾಲೆಂಜರ್ಸ್ ಬೆಂಗಳೂರು ರಿಟೈನ್ ಮಾಡಲಿರುವ ಆಟಗಾರರ ಸಂಭಾವ್ಯ ಪಟ್ಟಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ರಿಟೈನ್ ಮಾಡಲಿರುವ ಆಟಗಾರರ ಸಂಭಾವ್ಯ ಪಟ್ಟಿ

ಮೂಲಗಳ ಪ್ರಕಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಯಜುವೇಂದ್ರ ಚಾಹಲ್ ಮತ್ತು ಹರ್ಷಲ್ ಪಟೇಲ್ ಅವರನ್ನು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ತಂಡದಲ್ಲಿಯೇ ಉಳಿಸಿಕೊಳ್ಳಲಿದೆ ಎನ್ನಲಾಗುತ್ತಿದೆ. ವಿರಾಟ್ ಕೊಹ್ಲಿ ನಾಯಕತ್ವವನ್ನು ತ್ಯಜಿಸಿದ್ದರೂ ಸಹ ಆಟಗಾರನಾಗಿ ಕೊನೆಯವರೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿಯೇ ಆಡುತ್ತೇನೆ ಎಂಬ ಹೇಳಿಕೆಯನ್ನು ನೀಡಿದ್ದರು. ಹೀಗಾಗಿ ವಿರಾಟ್ ಕೊಹ್ಲಿ ಅವರನ್ನು ಉಳಿಸಿಕೊಳ್ಳುವುದು ಬಹುತೇಕ ಖಚಿತವಾಗಿದ್ದು, ಈ ಬಾರಿಯ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಹರ್ಷಲ್ ಪಟೇಲ್ ಮತ್ತು ತಂಡದ ಪರ ಹಲವಾರು ವರ್ಷಗಳಿಂದ ಉತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ಯುಜುವೇಂದ್ರ ಚಾಹಲ್ ಅವರಿಗೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮಣೆ ಹಾಕುವುದು ಬಹುತೇಕ ಖಚಿತ.

ದೇವದತ್ ಪಡಿಕ್ಕಲ್ ಹೊರಬೀಳುವ ಸಾಧ್ಯತೆ

ದೇವದತ್ ಪಡಿಕ್ಕಲ್ ಹೊರಬೀಳುವ ಸಾಧ್ಯತೆ

ಬಿಸಿಸಿಐ ನಿಮಯದ ಪ್ರಕಾರ ಗರಿಷ್ಠ 4 ಆಟಗಾರರನ್ನು ಮಾತ್ರ ತಂಡದಲ್ಲಿ ಉಳಿಸಿಕೊಳ್ಳಲು ಅನುಮತಿಯಿದ್ದು, ಈ ಮೇಲ್ಕಂಡ 4 ಆಟಗಾರರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉಳಿಸಿಕೊಂಡರೆ ಯುವ ಆಟಗಾರ ದೇವದತ್ ಪಡಿಕ್ಕಲ್ ತಂಡದಿಂದ ಹೊರಗುಳಿದು ಮೆಗಾ ಹರಾಜಿನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಬೇಕಾಗುತ್ತದೆ. ಯುವ ಆಟಗಾರನಾದರೂ ಸಹ ಗ್ಲೆನ್ ಮ್ಯಾಕ್ಸ್‌ವೆಲ್, ಹರ್ಷಲ್ ಪಟೇಲ್ ಮತ್ತು ಯಜುವೇಂದ್ರ ಚಾಹಲ್ ಅವರನ್ನು ಕಡೆಗಣಿಸಿ ದೇವದತ್ ಪಡಿಕ್ಕಲ್ ಅವರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಣೆ ಹಾಕುವುದು ಅನುಮಾನವೇ ಸರಿ.

ದೇವದತ್ ಪಡಿಕ್ಕಲ್ ಐಪಿಎಲ್ ಅಂಕಿ ಅಂಶ

ದೇವದತ್ ಪಡಿಕ್ಕಲ್ ಐಪಿಎಲ್ ಅಂಕಿ ಅಂಶ

2020ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಪದಾರ್ಪಣೆ ಮಾಡಿದ ದೇವದತ್ ಪಡಿಕ್ಕಲ್ ಆಡಿರುವ ಎರಡೂ ಆವೃತ್ತಿಗಳಲ್ಲಿಯೂ 400 ರನ್ ಗಡಿ ದಾಟಿದ್ದಾರೆ. 2020ರ ಐಪಿಎಲ್ ಟೂರ್ನಿಯಲ್ಲಿ 15 ಪಂದ್ಯಗಳನ್ನಾಡಿ 473 ರನ್ ಕಲೆ ಹಾಕಿದ್ದ ದೇವದತ್ ಪಡಿಕ್ಕಲ್, 2021 ಐಪಿಎಲ್ ಆವೃತ್ತಿಯಲ್ಲಿ 14 ಪಂದ್ಯಗಳನ್ನಾಡಿ 411 ರನ್ ಕಲೆಹಾಕಿದ್ದರು. ಹೀಗೆ ಒಟ್ಟು 29 ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳನ್ನಾಡಿರುವ ದೇವದತ್ ಪಡಿಕ್ಕಲ್ ಒಟ್ಟು 884 ರನ್ ಕಲೆಹಾಕಿದ್ದಾರೆ ಹಾಗೂ 1 ಅಜೇಯ ಶತಕವನ್ನು ಕೂಡ ಬಾರಿಸಿದ್ದಾರೆ.

Team India ಮೊದಲನೇ ದಿನದಾಟದಲ್ಲಿ ಹೆಚ್ಚು ಸದ್ದು ಮಾಡಿದ್ದು ಈತನೇ | Oneindia Kannada

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, November 25, 2021, 23:39 [IST]
Other articles published on Nov 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X