ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

RCB vs RR: ಹೆಡ್‌ ಟು ಹೆಡ್‌, ಸಂಭಾವ್ಯ ಪ್ಲೇಯಿಂಗ್ 11, ಪಿಚ್ ಪ್ರೆಡಿಕ್ಷನ್

RCB vs RR

ಕಳೆದ ಪಂದ್ಯದಲ್ಲಿ ಎಸ್‌ಆರ್‌ಎಚ್‌ ವಿರುದ್ಧ ಹೀನಾಯ ಸೋಲು ಕಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮುಂದಿನ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ ವಿರುದ್ಧ ಕಾದಾಟ ನಡೆಸಲಿದೆ.

ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್‌, ಪುಣೆಯಲ್ಲಿ ನಡೆಯಲಿರುವ ಐಪಿಎಲ್ 2022ರ 15ನೇ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಆರ್‌ಆರ್ ಮುಖಾಮುಖಿಯಾಗಲಿದ್ದು, ಪ್ರಸಕ್ತ ಸೀಸನ್‌ನಲ್ಲಿ ಐದು ಪಂದ್ಯಗಳನ್ನ ಗೆದ್ದಿರುವ ಉಭಯ ತಂಡಗಳ ಹಣಾಹಣಿ ಜೋರಾಗಿದೆ.

ಕಳೆದ ಪಂದ್ಯದ ಮುಖಾಮುಖಿಯಲ್ಲಿ ಮೇಲುಗೈ ಸಾಧಿಸಿರುವ ಆರ್‌ಸಿಬಿ

ಕಳೆದ ಪಂದ್ಯದ ಮುಖಾಮುಖಿಯಲ್ಲಿ ಮೇಲುಗೈ ಸಾಧಿಸಿರುವ ಆರ್‌ಸಿಬಿ

ಐಪಿಎಲ್ 15ನೇ ಆವೃತ್ತಿಯಲ್ಲಿ ಕಳೆದ ಬಾರಿಯ ಮುಖಾಮುಖಿಯಲ್ಲಿ ಆರ್ಆರ್ ವಿರುದ್ಧ ಫಾಫ್ ಡುಪ್ಲೆಸಿಸ್ ಪಡೆ 4 ವಿಕೆಟ್‌ಗಳ ರೋಚಕ ಗೆಲುವನ್ನ ಸಾಧಿಸಿದೆ. ಆದ್ರೆ ಪ್ರಸಕ್ತ ಆವೃತ್ತಿಯಲ್ಲಿ ಫಾರ್ಮ್ ಅನ್ನು ಆಧರಿಸಿದ್ರೆ, ಪಿಂಕ್ ಜೆರ್ಸಿ ತಂಡ ಆರ್ಆರ್‌ ಪಂದ್ಯದಲ್ಲಿ ಫೇವರಿಟ್ ಎನಿಸಿಕೊಂಡಿದೆ.

ಏಕೆಂದರೆ ಆರ್‌ಸಿಬಿ ಕಳೆದ ಪಂದ್ಯದಲ್ಲಿ ಎಸ್‌ಆರ್‌ಎಚ್‌ ವಿರುದ್ಧ ಭಾರೀ ಕಳಪೆ ಆಟವಾಡುವ ಮೂಲಕ ಐಪಿಎಲ್‌ನಲ್ಲಿ ಎರಡನೇ ಕನಿಷ್ಠ ಮೊತ್ತವನ್ನ ದಾಖಲಿಸಿತು. ಕೇವಲ 68 ರನ್‌ ಕಲೆಹಾಕಿದ ಆರ್‌ಸಿಬಿ ಮೊತ್ತವನ್ನ ಕೇನ್ ವಿಲಿಯಮ್ಸನ್ ಪಡೆ ಕೇವಲ 8 ಓವರ್‌ಗಳೊಳಗೆ ತಲುಪಿತು.

ಉತ್ತಮ ಪ್ರದರ್ಶನ ನೀಡಿ ಗೆಲುವು ತಂದುಕೊಡಬಲ್ಲ ಈ ಮೂವರನ್ನು ಆರ್‌ಸಿಬಿ ಒಮ್ಮೆಯೂ ಕಣಕ್ಕಿಳಿಸಿಲ್ಲ!

ಕೊಹ್ಲಿ ಬ್ಯಾಕ್ ಟು ಬ್ಯಾಕ್ ಗೋಲ್ಡನ್ ಡಕ್

ಕೊಹ್ಲಿ ಬ್ಯಾಕ್ ಟು ಬ್ಯಾಕ್ ಗೋಲ್ಡನ್ ಡಕ್

ಆರ್‌ಸಿಬಿ ಪ್ರಮುಖ ಬ್ಯಾಟರ್‌, ಮಾಜಿ ನಾಯಕ ವಿರಾಟ್ ಕೊಹ್ಲಿ ಫಾರ್ಮ್ ವೈಫಲ್ಯ ತಂಡವನ್ನ ಚಿಂತೆಗೀಡು ಮಾಡಿದೆ. ಕೊಹ್ಲಿ ಕಳೆದ ಎರಡು ಪಂದ್ಯದಲ್ಲಿ ಗೋಲ್ಡನ್ ಡಕೌಟ್ ಆಗಿರುವುದು ದೊಡ್ಡ ಫಾರ್ಮ್ ವೈಫಲ್ಯವನ್ನ ಎದ್ದು ತೋರಿಸುತ್ತಿದೆ.

ಇದರ ಜೊತೆಗೆ ಓಪನರ್ ಅನುಜ್ ರಾವತ್‌ ಕ್ಲಿಕ್ ಆಗದೇ ಇರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ನಾಯಕ ಫಾಫ್ ಡುಪ್ಲೆಸಿಸ್‌ಗೆ ಉತ್ತಮ ಜೊತೆಯಾಟ ಸಿಗದೇ ಆರ್‌ಸಿಬಿ ಉತ್ತಮ ಆರಂಭ ಪಡೆಯಲು ವಿಫಲವಾಗಿದೆ.

ವಿಶ್ವಕಪ್ ತಂಡದ ಕನಸು ಕಾಣುತ್ತಿರುವ ಡಿಕೆಗೆ ಐಪಿಎಲ್‌ನಲ್ಲಿ ಅಬ್ಬರಿಸುತ್ತಿರುವ ಈತನೆದುರು ಅವಕಾಶ ಕಷ್ಟ!

ಶಬಾಜ್ ಅಹ್ಮದ್, ದಿನೇಶ್ ಕಾರ್ತಿಕ್‌ ಉತ್ತಮ ಬ್ಯಾಟಿಂಗ್

ಶಬಾಜ್ ಅಹ್ಮದ್, ದಿನೇಶ್ ಕಾರ್ತಿಕ್‌ ಉತ್ತಮ ಬ್ಯಾಟಿಂಗ್

ಆರ್‌ಸಿಬಿ ಪರ ಈ ಸೀಸನ್‌ನಲ್ಲಿ ಉತ್ತಮ ಆಟವಾಡುತ್ತಿರುವುದು ಶಬಾಜ್ ಅಹ್ಮದ್ ಹಾಗೂ ದಿನೇಶ್ ಕಾರ್ತಿಕ್ ಆಗಿದ್ದಾರೆ. ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಈ ಬ್ಯಾಟರ್‌ಗಳ ಕೊಡುಗೆ ಅಪಾರ.

ಇದ ಜೊತೆಗೆ ಬೌಲಿಂಗ್‌ನಲ್ಲಿ ಆಸಿಸ್ ವೇಗಿ ಜೋಶ್ ಹೇಜಲ್‌ವುಡ್ ತಮ್ಮ ಲೈನ್ ಅಂಡ್ ಲೆಂತ್ ಮೂಲಕ ಎದುರಾಳಿಯನ್ನ ಕಾಡಬಲ್ಲರು. ವಹಿಂದು ಹಸರಂಗ, ಹರ್ಷಲ್ ಪಟೇಲ್ ಹಾಗೂ ಮೊಹಮ್ಮದ್ ಸಿರಾಜ್ ಕೂಡ ಉತ್ತಮ ಲಯದಲ್ಲಿದ್ದಾರೆ.

ರಾಜಸ್ತಾನ್ ಪರ ಅಬ್ಬರಿಸುತ್ತಿರುವ ಜೋಸ್ ಬಟ್ಲರ್

ರಾಜಸ್ತಾನ್ ಪರ ಅಬ್ಬರಿಸುತ್ತಿರುವ ಜೋಸ್ ಬಟ್ಲರ್

ಟೂರ್ನಿಯಲ್ಲಿ ಅಮೋಘ ಫಾರ್ಮ್‌ನಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಜೋಸ್ ಬಟ್ಲರ್ ಮೂರು ಶತಕದ ಮೂಲಕ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 7 ಪಂದ್ಯಗಳಲ್ಲಿ ಬಟ್ಲರ್ 491 ರನ್‌ಗಳಿಸಿದ್ದಾರೆ. ಇದರಲ್ಲಿ ಮೂರು ಶತಕ ಹಾಗೂ ಎರಡು ಅರ್ಧ ಶತಕ ಸೇರಿದೆ.

ಬಟ್ಲರ್ ಜೊತೆಗೆ ಸಂಜು ಸ್ಯಾಮ್ಸನ್, ಶಿಮ್ರಾನ್ ಹೆಟ್ಮೆಯರ್ ಅಬ್ಬರ ಕೂಡ ಇದೆ. ಆರೆಂಜ್ ಕ್ಯಾಪ್ ಜೊತೆಗೆ ಪರ್ಪಲ್ ಕ್ಯಾಪ್ ಹೊಂದಿರುವ ಈ ತಂಡದಲ್ಲಿ ಯುಜವೇಂದ್ರ ಚಹಾಲ್ ಅಸ್ತ್ರವಿದೆ. ಚಹಾಲ್ ಈಗಾಗಲೇ 18 ವಿಕೆಟ್ ಉರುಳಿಸಿದ್ದು, ನವದೀಪ್ ಸೈನಿ, ಕುಲ್‌ದೀಪ್ ಸೇನ್, ಓಬೆ ಮೆಕಾಯ್‌ನಂತಹ ಬೌಲರ್‌ಗಳಿದ್ದಾರೆ.

IPL 2022: ಈ ಮೂವರಿಗೆ ಆಡುವ ಅವಕಾಶ ನೀಡಿದ್ದರೆ ಮುಂಬೈ ಸತತ 8 ಸೋಲು ಕಾಣುತ್ತಾ ಇರಲಿಲ್ಲ!

ಡೆಡ್‌ ಟು ಹೆಡ್ ರೆಕಾರ್ಡ್

ಡೆಡ್‌ ಟು ಹೆಡ್ ರೆಕಾರ್ಡ್

ಉಭಯ ತಂಡಗಳು ಐಪಿಎಲ್‌ನಲ್ಲಿ 26 ಬಾರಿ ಮುಖಾಮುಖಿಯಾಗಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು 13 ಬಾರಿ ಪಂದ್ಯ ಗೆದ್ದರೆ, ರಾಜಸ್ತಾನ್ ರಾಯಲ್ಸ್‌ 10 ಪಂದ್ಯ ಗೆಲುವು ಸಾಧಿಸಿದೆ. 3 ಪಂದ್ಯಗಳಲ್ಲಿ ಯಾವುದೇ ಫಲಿತಾಂಶವಿಲ್ಲ.

ಪಿಚ್ ಕಂಡೀಷನ್

ಪಿಚ್ ಕಂಡೀಷನ್

ಎಂಸಿಎ ಸ್ಟೇಡಿಯಂನಲ್ಲಿ ಪ್ರಸಕ್ತ ಸೀಸನ್‌ನಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ ಇದುವರೆಗೆ 176 ರನ್ ಆಗಿದೆ. ಟ್ರ್ಯಾಕ್ ಒಟ್ಟಾರೆಯಾಗಿ ಬ್ಯಾಟ್ ಮಾಡಲು ಉತ್ತಮವಾಗಿದ್ದರೂ, ಇದು ವೇಗಿಗಳಿಗೆ ಸ್ವಲ್ಪ ವೇಗ ಮತ್ತು ಬೌನ್ಸ್‌ನೊಂದಿಗೆ ಗಣನೀಯ ಸಹಾಯವನ್ನು ಒದಗಿಸುತ್ತದೆ. ಮತ್ತೊಂದೆಡೆ, ಈ ಪಿಚ್‌ನಲ್ಲಿ ಉತ್ತಮ ಪ್ರದರ್ಶನ ನೀಡಬೇಕಾದರೆ ಸ್ಪಿನ್ನರ್‌ಗಳು ನಿಖರವಾದ ಬೌಲಿಂಗ್ ಮಾಡಬೇಕು. ಇಬ್ಬನಿ ಅಂಶ ಪರಿಣಾಮ ಬೀರುವ ಕಾರಣ, ಟಾಸ್ ಗೆದ್ದ ನಾಯಕನು ಬೌಲಿಂಗ್ ಅನ್ನು ಆಯ್ಕೆ ಮಾಡಬೇಕು.

RCB ವಿರುದ್ಧ ಸೇಡು ತೀರಿಸಿಕೊಳ್ಳೋದಕ್ಕೆ ರಾಜಸ್ತಾನ್ ರಾಯಲ್ಸ್ ಮಾಸ್ಟರ್ ಪ್ಲ್ಯಾನ್ | Oneindia Kannada
ಸಂಭಾವ್ಯ ಪ್ಲೇಯಿಂಗ್ 11

ಸಂಭಾವ್ಯ ಪ್ಲೇಯಿಂಗ್ 11

ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್/ಮಹಿಪಾಲ್ ಲೊಮ್ರೋರ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಸುಯಶ್ ಪ್ರಭುದೇಸಾಯಿ, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹೇಜಲ್‌ವುಡ್, ಮೊಹಮ್ಮದ್ ಸಿರಾಜ್

ರಾಜಸ್ತಾನ್ ರಾಯಲ್ಸ್‌
ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್ (ನಾಯಕ ಮತ್ತು ವಿಕೆಟ್ ಕೀಪರ್), ಶಿಮ್ರೋನ್ ಹೆಟ್ಮೆಯರ್, ಕರುಣ್ ನಾಯರ್/ ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಓಬೇದ್ ಮೆಕಾಯ್/ನವದೀಪ್ ಸೈನಿ, ಯುಜವೇಂದ್ರ ಚಹಾಲ್

Story first published: Tuesday, April 26, 2022, 18:21 [IST]
Other articles published on Apr 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X