ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

RCB VS RR: ಮತ್ತೊಮ್ಮೆ ಮುಗ್ಗರಿಸಿದ ಆರ್‌ಸಿಬಿ, ಕೊಹ್ಲಿ, ಮ್ಯಾಕ್ಸ್‌ವೆಲ್ ಫ್ಲಾಪ್ ಶೋ

RR vs RCB

ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನಡೆದ ಆರ್‌ಸಿಬಿ ಮತ್ತು ರಾಜಸ್ತಾನ್ ರಾಯಲ್ಸ್ ನಡುವಿನ ಪಂದ್ಯದಲ್ಲಿ, ಆರ್‌ಸಿಬಿ ಕೆಟ್ಟ ಬ್ಯಾಟಿಂಗ್ ಪ್ರದರ್ಶನ ಮುಂದುವರಿದಿದೆ. ಬೌಲರ್‌ಗಳ ಉತ್ತಮ ಪ್ರದರ್ಶನ ನಡುವೆ ಸ್ಟಾರ್ ಬ್ಯಾಟರ್‌ಗಳ ವೈಫಲ್ಯದಿಂದ ಆರ್‌ಸಿಬಿ ಸತತ ಎರಡು ಪಂದ್ಯ ಸೋತಿದೆ.

ರಾಜಸ್ತಾನ್ ನೀಡಿದ 145 ರನ್‌ಗಳ ಗುರಿ ಬೆನ್ನತ್ತಿದ ಆರ್‌ಸಿಬಿ ಮತ್ತೊಮ್ಮೆ ಆರಂಭಿಕ ಜೊತೆಯಾಟವಿಲ್ಲದೆ ಎಡವಿತು. ಪದೇ ಪದೇ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಫಾರ್ಮ್ ವೈಫಲ್ಯ ಎದುರಿಸುತ್ತಿದ್ದ ವಿರಾಟ್ ಕೊಹ್ಲಿ, ಓಪನಿಂಗ್ ಬ್ಯಾಟಿಂಗ್ ಇಳಿದ್ರೂ ಸಹ ಮತ್ತದೇ ಫ್ಲಾಪ್ ಶೋ ಮುಂದುವರಿಯಿತು. ಕೇವಲ 9ರನ್‌ಗೆ ಕೊಹ್ಲಿ ಪ್ರಸಿದ್ಧ ಕೃಷ್ಣಗೆ ವಿಕೆಟ್ ಒಪ್ಪಿಸಿದ್ರು.

ಆರ್‌ಸಿಬಿ ಬ್ಯಾಟಿಂಗ್ ವೈಫಲ್ಯ ಮತ್ತೊಮ್ಮೆ ಬಹಿರಂಗ

ಆರ್‌ಸಿಬಿ ಬ್ಯಾಟಿಂಗ್ ವೈಫಲ್ಯ ಮತ್ತೊಮ್ಮೆ ಬಹಿರಂಗ

ವಿರಾಟ್ ಕೊಹ್ಲಿ 9ರನ್‌ಗೆ ನಿರ್ಗಮನದ ಬಳಿಕ ಜವಾಬ್ದಾರಿಯುತ ಆಟವಾಡುತ್ತಿದ್ದ ನಾಯಕ ಫಾಫ್ ಡುಪ್ಲೆಸಿಸ್ 3 ಬೌಂಡರಿ ಮತ್ತು 1 ಸಿಕ್ಸರ್ ಕಲೆಹಾಕಿದ್ದರು. ಆದ್ರೆ ರಾಜಸ್ತಾನ್ ಬೌಲರ್‌ಗಳೆದುರು ಡುಪ್ಲೆಸಿಸ್ ಆಟ ನಡೆಯಲಿಲ್ಲ. ಕುಲ್‌ದೀಪ್ ಸೇನ್ ಬೌಲಿಂಗ್‌ನಲ್ಲಿ ಬೇಗನೆ ಔಟಾದ್ರು. ಇದ್ರ ಬೆನ್ನಲ್ಲೇ ಗ್ಲೆನ್ ಮ್ಯಾಕ್ಸ್‌ವೆಲ್ ಗೋಲ್ಡನ್ ಡಕೌಟ್ ಆಗಿದ್ದು ಆರ್‌ಸಿಬಿಗೆ ನುಂಗಲಾರದ ತುತ್ತಾಯಿತು.

ಸುಯಾಶ್ ಪ್ರಭುದೇಸಾಯಿ ಹಾಗೂ ಶಬಾಜ್ ಅಹ್ಮದ್ ವಿಕೆಟ್ ಪಡೆಯುವಲ್ಲಿ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಯಶಸ್ವಿಯಾದ್ರು. ಇದ್ರ ಜೊತೆಗೆ ಆರ್‌ಸಿಬಿಯನ್ನ ಗೆಲುವಿನ ದಡ ತಲುಪಿಸಬೇಕಿದ್ದ ದಿನೇಶ್ ಕಾರ್ತಿಕ್ ರನೌಟ್‌ ಆರು ರನ್‌ಗಳಿಸಿದ್ದಾಗ ರನೌಟ್‌ ಆಗಿದ್ದು ಆರ್‌ಸಿಬಿ ಹೋರಾಟಕ್ಕೆ ತೆರೆ ಎಳೆಯಿತು.

ಕೊನೆಯಲ್ಲಿ ವಹಿಂದು ಹಸರಂಗ 18, ಹರ್ಷಲ್ ಪಟೇಲ್ 8 ರನ್‌ಗಳಿಸಿ ಕೊನೆಯಲ್ಲಿ ವಿಕೆಟ್ ಒಪ್ಪಿಸಿದ್ರು. ಅಂತಿಮವಾಗಿ ಫಾಫ್ ಡುಪ್ಲೆಸಿಸ್ 19.3 ಓವರ್‌ಗಳಲ್ಲಿ ಕೇವಲ 115 ರನ್‌ಗಳಿಗೆ ಆಲೌಟ್ ಆಗಿದ್ದು, ರಾಜಸ್ತಾನ್ ರಾಯಲ್ಸ್ 29ರನ್‌ಗಳಿಂದ ಪಂದ್ಯವನ್ನ ಗೆದ್ದು ಬೀಗಿದೆ.

ರಾಜಸ್ತಾನ್ ರಾಯಲ್ಸ್ ಪರ ಕುಲ್‌ದೀಪ್ ಸೇನ್ 4 ವಿಕೆಟ್, ರವಿಚಂದ್ರನ್ ಅಶ್ವಿನ್ 3, ಪ್ರಸಿದ್ಧ ಕೃಷ್ಣ 2 ವಿಕೆಟ್ ಪಡೆಯುವ ಮೂಲಕ ಮಿಂಚಿದ್ರು.

IPL 2022: CSK 6ನೇ ಪಂದ್ಯ ಸೋತ ಬಳಿಕ, ಯಾವ ತಂಡಕ್ಕೆ ಪ್ಲೇ ಆಫ್‌ ತಲುಪುವ ಅವಕಾಶ ಹೆಚ್ಚಿದೆ?

ಆರಂಭದಲ್ಲಿ ಪ್ರಮುಖ ವಿಕೆಟ್ ಕಳೆದುಕೊಂಡಿದ್ದ ರಾಜಸ್ತಾನ್

ಆರಂಭದಲ್ಲಿ ಪ್ರಮುಖ ವಿಕೆಟ್ ಕಳೆದುಕೊಂಡಿದ್ದ ರಾಜಸ್ತಾನ್

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ತಾನ್ ರಾಯಲ್ಸ್‌ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿತು. ಮೊಹಮ್ಮದ್ ಸಿರಾಜ್ ಉತ್ತಮ ಬೌಲಿಂಗ್ ದಾಳಿಗೆ ಎಡವಿದ ದೇವದತ್ ಪಡಿಕ್ಕಲ್ 7ರನ್‌ಗಳಿಸಿದ್ದಾಗ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ರು.

ಮೂರನೇ ಕ್ರಮಾಂಕದಲ್ಲಿ ಬಡ್ತಿ ಪಡೆದ ರವಿಚಂದ್ರನ್ ಅಶ್ವಿನ್ 4 ಬೌಂಡರಿ ಮೂಲಕ ತಂಡವನ್ನ ಆರಂಭಿಕ ಆಘಾತದಿಂದ ಮೇಲೆತ್ತುವ ಪ್ರಯತ್ನ ನಡೆಸಿದ್ರು. ಆದ್ರೆ ಸಿರಾಜ್ ಎರಡನೇ ಓವರ್‌ನಲ್ಲಿ ಕಾಟನ್ ಬೌಲ್ಡ್‌ ಆಗಿ ಪೆವಿಲಿಯನ್ ಮರಳಿದ್ರು. ಇದ್ರ ಬೆನ್ನಲ್ಲೇ ರಾಜಸ್ಥಾನ್‌ಗೆ ಬಹುದೊಡ್ಡ ಹೊಡೆತ ಬಿತ್ತು.

ಇನ್‌ಫಾರ್ಮ್ ಬ್ಯಾಟ್ಸ್‌ಮನ್, ಮೂರು ಶತಕ ಸಿಡಿಸಿರುವ ಜಾಸ್‌ ಬಟ್ಲರ್‌, ಆರ್‌ಸಿಬಿ ಟಾಪ್ ಬೌಲರ್ ಜೋಶ್ ಹೇಜಲ್‌ವುಡ್‌ನ ಮೊದಲ ಎಸೆತದಲ್ಲಿ ವಿಕೆಟ್ ಒಪ್ಪಿಸಿದ್ದು ತಂಡಕ್ಕೆ ನುಂಗಲಾರದ ತುತ್ತಾಯಿತು. ಎರಡು ವಿಕೆಟ್ ಪಡೆದಿದ್ದ ಸಿರಾಜ್ ಹಿಡಿದ ಉತ್ತಮ ಕ್ಯಾಚ್‌ನಿಂದಾಗಿ ಬಟ್ಲರ್ ಪೆವಿಲಿಯನ್‌ಗೆ ಸೇರಿದ್ರು.

ಕ್ಯಾಪ್ಟನ್ ಸಂಜು ಸ್ಯಾಮ್ಸನ್ ತಂಡವನ್ನ ಮೇಲೆತ್ತುವ ಪ್ರಯತ್ನ ನಡೆಸಿದ್ರು. ಆದ್ರೆ ಪ್ರಯೋಗಾತ್ಮಕ ಶಾಟ್‌ಗೆ ಮುಂದಾದ ವಿಕೆಟ್ ಕೀಪರ್ ಬ್ಯಾಟರ್ ಸ್ಯಾಮ್ಸನ್‌ 21 ಎಸೆತಗಳಲ್ಲಿ 27 ರನ್‌ ಕಲೆಹಾಕುವ ಮೂಲಕ ವಿಕೆಟ್ ಒಪ್ಪಿಸಿದ್ರು. ಡೆರಿಲ್ ಮಿಚೆಲ್ ಆಟಕ್ಕೆ (16) ಹೇಜಲ್‌ವುಡ್ ಮುಕ್ತಾಯ ಹಾಡಿದ್ರು.

ಆತನ ಬಗ್ಗೆ ಯಾರೂ ಮಾತನಾಡುತ್ತಿಲ್ಲ: ಭಾರತದ ಅನುಭವಿ ಆಟಗಾರನ ಬಗ್ಗೆ ಚೋಪ್ರ ಪ್ರಶಂಸೆ

Riyan Parag ಕೈ ಕುಲುಕೋದಕ್ಕೂ Harshal Patelಗೆ ಇಷ್ಟ ಇಲ್ಲ | Oneindia Kannada
ಅಬ್ಬರಿಸಿದ ರಿಯಾನ್ ಪರಾಗ್

ಅಬ್ಬರಿಸಿದ ರಿಯಾನ್ ಪರಾಗ್

ಕೆಳ ಕ್ರಮಾಂಕದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದ ರಿಯಾನ್ ಪರಾಗ್‌ 29 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿಸುವ ಮೂಲಕ ತಂಡದ ಸ್ಕೋರನ್ನು 140ರ ಗಡಿದಾಟಿಸಿದ್ರು. ಐಪಿಎಲ್‌ನಲ್ಲಿ ವೈಯಕ್ತಿಕ ಗರಿಷ್ಠ ಮೊತ್ತವನ್ನ ದಾಖಲಿಸಿದ ಪರಾಗ್ , ಹರ್ಷಲ್ ಪಟೇಲ್ ಮಾಡಿದ ಕೊನೆಯ ಓವರ್‌ನಲ್ಲಿ 18ರನ್ ಸಿಡಿಸಿದ್ರು.

31 ಎಸೆತಗಳಲ್ಲಿ 56 ರನ್ ಕಲೆಹಾಕಿದ ರಿಯಾನ್ ಪರಾಗ್‌ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ ಮತ್ತು 4 ಅಮೋಘ ಸಿಕ್ಸರ್‌ಗಳಿದ್ದವು. ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ ರಾಜಸ್ತಾನ್ 8 ವಿಕೆಟ್ ನಷ್ಟಕ್ಕೆ 145 ರನ್ ಕಲೆಹಾಕಿದೆ.

ಆರ್‌ಸಿಬಿ ಪರ ಮೊಹಮ್ಮದ್ ಸಿರಾಜ್, ಜೋಶ್ ಹೇಜಲ್‌ವುಡ್‌, ವಹಿಂದು ಹಸರಂಗ ತಲಾ 2 ವಿಕೆಟ್ ಪಡೆದರು. ಹರ್ಷಲ್ ಪಟೇಲ್ 1 ವಿಕೆಟ್ ಪಡೆದಿದ್ದಾರೆ.

ಆರ್‌ಸಿಬಿ ವಿರುದ್ಧ ಈ ಗೆಲುವಿನ ಜೊತೆಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ರಾಜಸ್ತಾನ್ ರಾಯಲ್ಸ್‌ ಅಗ್ರಸ್ಥಾನಕ್ಕೇರಿದೆ. ಅರ್ಧಶತಕದ ಜೊತೆಗೆ 4 ಕ್ಯಾಚ್‌ಗಳನ್ನ ಹಿಡಿದ ರಿಯಾನ್‌ ಪರಾಗ್‌ಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿ ಒಲಿದುಬಂದಿದೆ.

Story first published: Wednesday, April 27, 2022, 9:41 [IST]
Other articles published on Apr 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X