ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಾಜಸ್ತಾನ್ ರಾಯಲ್ಸ್‌ಗೆ ''ಅಶ್ವಿನ್'' ಅವರದ್ದೇ ದೊಡ್ಡ ಸಮಸ್ಯೆ ಎಂದ ಸಂಜಯ್ ಮಂಜ್ರೇಕರ್

R Ashwin

ರಾಜಸ್ಥಾನ್‌ ರಾಯಲ್ಸ್ ತಂಡಕ್ಕೆ ರವಿಚಂದ್ರನ್ ಅಶ್ವಿನ್‌ ಅವರದ್ದೇ ದೊಡ್ಡ ಸಮಸ್ಯೆ ಎಂದು ಭಾರತ ತಂಡದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಹೇಳಿದ್ದಾರೆ. ಐಪಿಎಲ್ ಸರಣಿಯ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಇಂದು ಆರ್‌ಸಿಬಿ ಮತ್ತು ರಾಜಸ್ತಾನ ಮುಖಾಮುಖಿಯಾಗಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾತ್ರಿ 7.30ಕ್ಕೆ ನಡೆಯಲಿರುವ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ ನಾಯಕತ್ವದ ರಾಜಸ್ತಾನ್ ರಾಯಲ್ಸ್‌ ಮತ್ತು ಫಾಫ್ ಡುಪ್ಲೆಸಿಸ್ ಮುಂದಾಳತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತೊಡೆತಟ್ಟಲಿವೆ.

ಸಂಜು ಸ್ಯಾಮ್ಸನ್ ತಪ್ಪುಗಳನ್ನ ತಿದ್ದುಕೊಳ್ಳಬೇಕಿದೆ

ಸಂಜು ಸ್ಯಾಮ್ಸನ್ ತಪ್ಪುಗಳನ್ನ ತಿದ್ದುಕೊಳ್ಳಬೇಕಿದೆ

ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ವಿರುದ್ಧ ರಾಜಸ್ಥಾನ 7 ವಿಕೆಟ್‌ಗಳಿಂದ ಸೋತಿತ್ತು. ಹಾಗಾಗಿ ಇಂದಿನ ಪಂದ್ಯದಲ್ಲಿ ತಿರುಗೇಟು ನೀಡಿದರೆ ಮಾತ್ರ ಫೈನಲ್‌ಗೆ ಹೋಗಬಹುದು. ಇದಕ್ಕಾಗಿ ಕ್ಯಾಪ್ಟನ್ ಸಂಜು ಸ್ಯಾಮ್ಸನ್ ಮಾಡಿದ ತಪ್ಪು, ಸಮಸ್ಯೆಗಳನ್ನು ಪತ್ತೆ ಹಚ್ಚಿ ತಿದ್ದಿಕೊಳ್ಳಬೇಕಿದೆ ಎಂದು ಸಂಜಯ್ ಮಂಜ್ರೇಕರ್ ಸಲಹೆ ನೀಡಿದ್ದಾರೆ.

ರಾಜಸ್ತಾನ್‌ಗೆ ಅಶ್ವಿನ್ ದೊಡ್ಡ ಸಮಸ್ಯೆ ಎಂದ ಮಂಜ್ರೇಕರ್

ರಾಜಸ್ತಾನ್‌ಗೆ ಅಶ್ವಿನ್ ದೊಡ್ಡ ಸಮಸ್ಯೆ ಎಂದ ಮಂಜ್ರೇಕರ್

ಈ ಸಂದರ್ಭದಲ್ಲಿ ಸಂಜಯ್ ಮಂಜ್ರೇಕರ್ ಅವರು ರಾಜಸ್ಥಾನ ತಂಡದ ಪ್ರಮುಖ ಸಮಸ್ಯೆ ಅಶ್ವಿನ್ ಎಂದು ಹೇಳಿದ್ದಾರೆ. ಈ ಬಗ್ಗೆ ಮಾತನಾಡುತ್ತಾ, ಅಶ್ವಿನ್ ಯಾವಾಗಲೂ ಅನೇಕ ರೂಪಾಂತರಗಳನ್ನು ಪ್ರಯತ್ನಿಸುತ್ತಿದ್ದಾರೆ. ಚೆಂಡಿನ ಪರವಾಗಿ ಮತ್ತು ಪಿಚ್‌ನ ಹೊರಗೆ ಬ್ಯಾಟಿಂಗ್‌ನಲ್ಲಿ ಅಶ್ವಿನ್ ಅವರ ಹೊಸ ಪ್ರಯತ್ನಗಳು ರನ್‌ಗಳನ್ನು ಒದಗಿಸುತ್ತವೆ. ಅಶ್ವಿನ್ ಈ ಪ್ರಯೋಗ ಮಾಡುವುದು ತಪ್ಪಲ್ಲ, ಆದ್ರೆ ಪ್ರಮುಖ ಪಂದ್ಯಗಳಲ್ಲಿ ಪರೀಕ್ಷೆ ನಡೆಸುತ್ತಿದ್ದಾರೆ. ಮೊದಲು ಅವರನ್ನು ಸರಿಪಡಿಸಿ ಎಂದು ಮಂಜ್ರೇಕರ್ ಬುದ್ದಿವಾದ ಹೇಳಿದ್ದಾರೆ.

IPL 2022: ಈ 5 ಪ್ಲೇಯರ್ಸ್ ಮುಂದಿನ ಸೀಸನ್‌ನಲ್ಲಿ ತಂಡ ಬದಲಾಯಿಸೋದು ಗ್ಯಾರೆಂಟಿ , ಕಾರಣ ತಿಳಿಯಿರಿ

ಗುಜರಾತ್ ವಿರುದ್ಧ ಸೋಲಿಗೆ ಅಶ್ವಿನ್ ಕೂಡ ಕಾರಣ!

ಗುಜರಾತ್ ವಿರುದ್ಧ ಸೋಲಿಗೆ ಅಶ್ವಿನ್ ಕೂಡ ಕಾರಣ!

ಅವರು ಹೇಳಿದಂತೆ, ಮೊದಲ ಕ್ವಾಲಿಫೈಯರ್‌ನಲ್ಲಿ ರಾಜಸ್ತಾನ್ ರಾಯಲ್ಸ್ ಸೋಲಿಗೆ ಪ್ರಮುಖ ಕಾರಣಗಳಲ್ಲಿ ಒಬ್ಬ ರವಿಚಂದ್ರನ್ ಅಶ್ವಿನ್. ಗುಜರಾತ್ ವಿರುದ್ಧ 40 ರನ್ ನೀಡಿ ಒಂದೇ ಒಂದು ವಿಕೆಟ್ ಪಡೆಯಲಿಲ್ಲ. ಇಷ್ಟು ರನ್‌ಗಳು ಬರಲು ಕಾರಣವೆಂದರೆ ವಿನೂತನ ಪ್ರಯತ್ನಗಳು ಎಂದು ತೋರುತ್ತದೆ. ಆದಾಗ್ಯೂ, ಅಶ್ವಿನ್ ಅವರ ಪ್ರಯತ್ನವು ಕಾಲಕಾಲಕ್ಕೆ ಕೈಕೊಟ್ಟಿದೆ ಎಂಬುದು ಗಮನಾರ್ಹ.

ಟೆಸ್ಟ್‌ vs ಟಿ20: ಟೆಸ್ಟ್ ಕ್ರಿಕೆಟ್‌ ಅಲ್ಟಿಮೇಟ್‌ ಕ್ರಿಕೆಟ್‌ ಎಂದ ವೀರೇಂದ್ರ ಸೆಹ್ವಾಗ್‌

ಡೆತ್‌ ಓವರ್‌ಗಳಿಗೆ ಟ್ರೆಂಟ್ ಬೋಲ್ಟ್‌ ಬೇಡ!

ಡೆತ್‌ ಓವರ್‌ಗಳಿಗೆ ಟ್ರೆಂಟ್ ಬೋಲ್ಟ್‌ ಬೇಡ!

ತನ್ನ ಮಾತನ್ನು ಮುಂದುವರಿಸಿದ ಮಂಜ್ರೇಕರ್, ಡೆತ್ ಓವರ್‌ಗಳು ರಾಜಸ್ಥಾನಕ್ಕೆ ಒಳ್ಳೆಯದಾಗಿ ಕಂಡುಬಂದಿಲ್ಲ. ಅದ್ರಲ್ಲೂ ಟ್ರೆಂಟ್ ಬೋಲ್ಟ್‌ಗೆ ಡೆತ್ ಓವರ್ ಬೌಲಿಂಗ್ ನೀಡಿದಾಗಲೆಲ್ಲಾ ಆರ್ಆರ್ ಎಡವಿದೆ. ಹೀಗಾಗಿ ಪವರ್‌ಪ್ಲೇನಲ್ಲಿ ಯಾರು ಚೆನ್ನಾಗಿ ಎಸೆಯಬಹುದು ಎಂದು ಗುರುತಿಸಿ ಅವರಿಗೆ ಅವಕಾಶ ನೀಡಿ. ಬೋಲ್ಟ್ ಅವರನ್ನು ಸರಿಯಾದ ಓವರ್‌ಗಳಲ್ಲಿ ಬಳಸಿ ಎಂದಿದ್ದಾರೆ.

ಇನ್ನು ಡೆತ್ ಓವರ್‌ಗಳಲ್ಲಿ ಪ್ರಸಿದ್ಧ ಕೃಷ್ಣ, ಒಬೆದ್ ಮೆಕಾಯ್ ಅವರನ್ನು ಬಳಸುವುದರಿಂದ ಬೋಲ್ಟ್ ಅನ್ನು ಮುಂಚಿತವಾಗಿ ಬಳಸಬೇಕು. ಇಲ್ಲದಿದ್ದರೆ, ಆರ್‌ಸಿಬಿ ಗೆಲ್ಲುವ ಉತ್ತಮ ಅವಕಾಶವಿದೆ ಎಂದು ಮಂಜ್ರೇಕರ್ ಹೇಳಿದರು.

Story first published: Friday, May 27, 2022, 19:09 [IST]
Other articles published on May 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X