ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2022 ರಿಟೆನ್ಷನ್ ಬಳಿಕ ಯಾವ ಫ್ರಾಂಚೈಸಿ ಬಳಿ ಎಷ್ಟು ಹಣ ಉಳಿದಿದೆ ಗೊತ್ತಾ?

IPL 2022: Remaining Purse details of All 8 IPL teams after retention

ನವೆಂಬರ್‌ 30ರ ರಾತ್ರಿ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಸಲುವಾಗಿ ಆಟಗಾರರ ರಿಟೆನ್ಷನ್ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಅಸ್ತಿತ್ವದಲ್ಲಿರುವ 8 ಐಪಿಎಲ್ ಫ್ರಾಂಚೈಸಿಗಳು ತಮಗೆ ಬೇಕಾದ ತಮ್ಮ ತಂಡದ ಆಟಗಾರರನ್ನು ರಿಟೇನ್ ಮಾಡಿಕೊಳ್ಳುವ ಮೂಲಕ ಉಳಿದ ಆಟಗಾರರನ್ನು ಹರಾಜಿಗೆ ಬಿಡುಗಡೆಗೊಳಿಸಿದವು.

ಹೌದು, ಮುಂದಿನ ವರ್ಷ ನಡೆಯಲಿರುವ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನೂತನ ತಂಡಗಳಾದ ಲಖನೌ ಮತ್ತು ಅಹ್ಮದಾಬಾದ್ ಕೂಡ ಭಾಗವಹಿಸುವುದರಿಂದ ಒಟ್ಟು 10 ತಂಡಗಳ ನಡುವೆ ಟ್ರೋಫಿಗಾಗಿ ಹಣಾಹಣಿ ನಡೆಯಲಿದೆ. ಹೀಗಾಗಿ ಮುಂದಿನ ಐಪಿಎಲ್ ಆವೃತ್ತಿ ಆರಂಭಕ್ಕೂ ಮುನ್ನ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಜರುಗಲಿದ್ದು ಇದಕ್ಕೂ ಮುನ್ನ ಬಿಸಿಸಿಐ ಸದ್ಯ ಅಸ್ತಿತ್ವದಲ್ಲಿರುವ ತಂಡಗಳಿಗೆ 4 ಆಟಗಾರರನ್ನು ರಿಟೇನ್ ಮಾಡಿಕೊಳ್ಳುವ ಅವಕಾಶವನ್ನು ನೀಡಿತ್ತು.

ದೊಡ್ಡ ಮೊತ್ತ ಪಡೆಯುತ್ತಿದ್ದ ಧೋನಿಗೆ ಈ ಸಲ ಕಡಿಮೆ ಮೊತ್ತ ಸಿಕ್ಕಿದ್ದಕ್ಕೆ ಕಾರಣ ಆ ಒಬ್ಬ ಆಟಗಾರ!ದೊಡ್ಡ ಮೊತ್ತ ಪಡೆಯುತ್ತಿದ್ದ ಧೋನಿಗೆ ಈ ಸಲ ಕಡಿಮೆ ಮೊತ್ತ ಸಿಕ್ಕಿದ್ದಕ್ಕೆ ಕಾರಣ ಆ ಒಬ್ಬ ಆಟಗಾರ!

ವಿವಿಧ ಫ್ರಾಂಚೈಸಿಗಳು ಯಾವ ಆಟಗಾರರನ್ನು ಉಳಿಸಿಕೊಳ್ಳಲಿವೆ ಎಂಬ ವಿವರವನ್ನು ನವೆಂಬರ್ 30ರೊಳಗೆ ಸಲ್ಲಿಸಬೇಕು ಎಂದು ಬಿಸಿಸಿಐ ಗಡುವು ನೀಡಿತ್ತು. ಅದರಂತೆಯೇ ಎಲ್ಲಾ ತಂಡಗಳು ಕೂಡ ಸಮಯದೊಳಗೆ ತಾವು ಉಳಿಸಿಕೊಳ್ಳಲು ಇಚ್ಛಿಸುವ ಆಟಗಾರರ ವಿವರವನ್ನು ಬಿಸಿಸಿಐಗೆ ಸಲ್ಲಿಸಿದ್ದವು. ಹೀಗೆ ನವೆಂಬರ್‌ 30ರ ಸಂಜೆ ನಡೆದ ವಿಶೇಷ ಕಾರ್ಯಕ್ರಮವೊಂದರಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ ಐಪಿಎಲ್ ಫ್ರಾಂಚೈಸಿಗಳು ಯಾವ ಯಾವ ಆಟಗಾರರನ್ನು ಉಳಿಸಿಕೊಂಡಿವೆ ಎಂಬ ವಿಷಯ ಬಹಿರಂಗವಾಯಿತು.

ಇನ್ನು ಈ ರಿಟೆನ್ಷನ್ ಪ್ರಕ್ರಿಯೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ರವೀಂದ್ರ ಜಡೇಜಾ, ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ 16 ಕೋಟಿ ಪಡೆಯುವುದರ ಮೂಲಕ ಈ ಬಾರಿಯ ಐಪಿಎಲ್ ರಿಟೆನ್ಷನ್ ಪ್ರಕ್ರಿಯೆಯಲ್ಲಿ ಅತಿ ದೊಡ್ಡ ಮೊತ್ತ ಪಡೆದ ಆಟಗಾರರು ಎನಿಸಿಕೊಂಡರು. ಹಾಗೂ ಕೆಲ ಫ್ರಾಂಚೈಸಿಗಳು ನಾಲ್ವರು ಆಟಗಾರರನ್ನು ಉಳಿಸಿಕೊಂಡರೆ, ಇನ್ನೂ ಕೆಲವೊಂದಿಷ್ಟು ಫ್ರಾಂಚೈಸಿಗಳು ಮೂವರು ಆಟಗಾರರನ್ನು ರಿಟೈನ್ ಮಾಡಿಕೊಂಡವು ಮತ್ತು ಪಂಜಾಬ್ ಕಿಂಗ್ಸ್ ಮಾತ್ರ ಕೇವಲ ಇಬ್ಬರು ಆಟಗಾರರನ್ನು ರಿಟೈನ್ ಮಾಡಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿತು.

ರಾಹುಲ್ ಪಂಜಾಬ್ ಕಿಂಗ್ಸ್ ತಂಡವನ್ನು ಬಿಟ್ಟದ್ದು ನೀತಿಗೆಟ್ಟ ಕೆಲಸ ಎಂದು ಕಿಡಿಕಾರಿದ ಮಾಲೀಕರು!ರಾಹುಲ್ ಪಂಜಾಬ್ ಕಿಂಗ್ಸ್ ತಂಡವನ್ನು ಬಿಟ್ಟದ್ದು ನೀತಿಗೆಟ್ಟ ಕೆಲಸ ಎಂದು ಕಿಡಿಕಾರಿದ ಮಾಲೀಕರು!

ಹೀಗೆ ಎಲ್ಲಾ ತಂಡಗಳು ತಮ್ಮ ಇಚ್ಛೆಯಂತೆ ಆಟಗಾರರನ್ನು ರಿಟೈನ್ ಮಾಡಿಕೊಂಡ ನಂತರ ತಮ್ಮ ಪರ್ಸ್ ನಲ್ಲಿ ಎಷ್ಟು ಮೊತ್ತ ಬಾಕಿ ಉಳಿಸಿಕೊಂಡಿವೆ ಎಂಬುದರ ಮಾಹಿತಿ ಈ ಕೆಳಕಂಡಂತಿದೆ ಓದಿ.

ಫ್ರಾಂಚೈಸಿಗಳ ಬಳಿ ಉಳಿದಿರುವ ಮೊತ್ತ

ಫ್ರಾಂಚೈಸಿಗಳ ಬಳಿ ಉಳಿದಿರುವ ಮೊತ್ತ

ರಿಟೆನ್ಷನ್ ಪ್ರಕ್ರಿಯೆ ಮುಗಿದ ನಂತರ ಅಸ್ತಿತ್ವದಲ್ಲಿರುವ ಎಲ್ಲ 8 ಫ್ರಾಂಚೈಸಿಗಳ ಬಳಿ ಉಳಿದಿರುವ ಮೊತ್ತದ ವಿವರ ಈ ಕೆಳಕಂಡಂತಿದೆ..

ರಾಯಲ್ ಚಾಲೆಂಜರ್ಸ್ ಬೆಂಗಳೂರು - 57 ಕೋಟಿ ರೂ

ಡೆಲ್ಲಿ ಕ್ಯಾಪಿಟಲ್ಸ್ - 47.5 ಕೋಟಿ ರೂ

ಕೋಲ್ಕತ್ತಾ ನೈಟ್ ರೈಡರ್ಸ್ - 48 ಕೋಟಿ ರೂ

ಚೆನ್ನೈ ಸೂಪರ್ ಕಿಂಗ್ಸ್ - 48 ಕೋಟಿ ರೂ

ಸನ್ ರೈಸರ್ಸ್ ಹೈದರಾಬಾದ್ - 68 ಕೋಟಿ ರೂ

ರಾಜಸ್ಥಾನ್ ರಾಯಲ್ಸ್ - 62 ಕೋಟಿ ರೂ

ಪಂಜಾಬ್ ಕಿಂಗ್ಸ್ - 72 ಕೋಟಿ ರೂ

ಮುಂಬೈ ಇಂಡಿಯನ್ಸ್ - 48 ಕೋಟಿ ರೂ

ಅತಿ ಹೆಚ್ಚು ಉಳಿತಾಯ ಮಾಡಿದ ಪಂಜಾಬ್ ಕಿಂಗ್ಸ್

ಅತಿ ಹೆಚ್ಚು ಉಳಿತಾಯ ಮಾಡಿದ ಪಂಜಾಬ್ ಕಿಂಗ್ಸ್

ಕೆಎಲ್ ರಾಹುಲ್ ಮತ್ತು ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯ ನಡುವೆ ಗೊಂದಲಗಳು ಉಂಟಾದ ಕಾರಣದಿಂದಾಗಿ ಪಂಜಾಬ್ ಕಿಂಗ್ಸ್ ಕೆಎಲ್ ರಾಹುಲ್ ಅವರನ್ನು ರೀಟೈನ್ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ. ಹೀಗಾಗಿ ಮಯಾಂಕ್ ಅಗರ್ವಾಲ್ ಮತ್ತು ಅರ್ಷ್ ದೀಪ್ ಸಿಂಗ್ ಈ ಇಬ್ಬರು ಆಟಗಾರರನ್ನು ಮಾತ್ರ ಪಂಜಾಬ್ ಕಿಂಗ್ಸ್ ರಿಟೈನ್ ಮಾಡಿಕೊಂಡಿದ್ದು ತಮ್ಮ ಬಳಿ ಇನ್ನೂ 72 ಕೋಟಿ ರೂ ಉಳಿಸಿಕೊಂಡಿದ್ದು ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಉಳಿದ ಇತರೆ ಅಸ್ತಿತ್ವದಲ್ಲಿರುವ ತಂಡಗಳಿಗಿಂತ ಹೆಚ್ಚಿನ ಅನುಕೂಲವನ್ನು ಹೊಂದಿರಲಿದೆ.

ಕಡಿಮೆ ಉಳಿತಾಯ ಹೊಂದಿದೆ ಡೆಲ್ಲಿ ಕ್ಯಾಪಿಟಲ್ಸ್

ಕಡಿಮೆ ಉಳಿತಾಯ ಹೊಂದಿದೆ ಡೆಲ್ಲಿ ಕ್ಯಾಪಿಟಲ್ಸ್

4 ಆಟಗಾರರನ್ನು ಉಳಿಸಿಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ತನ್ನ ಬಳಿ 47.5 ಕೋಟಿ ರೂಪಾಯಿಗಳನ್ನು ಹೊಂದಿದ್ದು ಮೆಗಾ ಹರಾಜಿನಲ್ಲಿ ಜಿದ್ದಾ ಜಿದ್ದಿಗೆ ಬಿದ್ದು ಆಟಗಾರರನ್ನು ಖರೀದಿಸುವುದರಲ್ಲಿ ಹಿಂದೇಟು ಹಾಕಲಿದೆ. ಇನ್ನುಳಿದಂತೆ ಕೋಲ್ಕತ್ತಾ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಕೂಡ 48 ಕೋಟಿ ಉಳಿತಾಯ ಮಾಡಿವೆ.

Story first published: Friday, December 3, 2021, 9:36 [IST]
Other articles published on Dec 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X