ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆ.ಎಲ್ ರಾಹುಲ್, ರಶೀದ್‌ ಖಾನ್‌ಗಾಗಿ ಫ್ರಾಂಚೈಸಿಗಳ ಕಿತ್ತಾಟ: ಬಿಸಿಸಿಐಗೆ ದೂರು

KL RAHUL AND RASHID KHAN

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಆವೃತ್ತಿಗೆ ಈಗಿನಿಂದಲೇ ತಯಾರಿ ಶುರುವಾಗಿದೆ. ಮುಂದಿನ ವರ್ಷ ಏಪ್ರಿಲ್ ನಲ್ಲಿ ಪ್ರಾರಂಭಗೊಳ್ಳಬಹುದು ಎನ್ನಲಾಗಿರುವ ಚುಟುಕು ಕ್ರಿಕೆಟ್ ಟೂರ್ನಿಗೂ ಮೊದಲು ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಆದ್ರೆ ಇದೀಗ ಅದಕ್ಕೂ ಮೊದಲು ಆಟಗಾರರ ರೀಟೇನ್ ಫೈನಲ್ ಆಗಬೇಕಿದೆ.

ಈ ಮೊದಲೇ ತಿಳಿಸಿದಂತೆ ಫ್ರಾಂಚೈಸಿಗಳು ತಮ್ಮಲ್ಲಿ ಉಳಿಸಿಕೊಳ್ಳುವ ಆಟಗಾರರ ಅಂತಿಮ ಪಟ್ಟಿಯನ್ನ ನವೆಂಬರ್ 30ರೊಳಗೆ ಸಲ್ಲಿಸಬೇಕಾಗುತ್ತದೆ. ಹೀಗಾಗಿ ತಮ್ಮಲ್ಲಿ ಉಳಿಸಿಕೊಳ್ಳುವ ಗರಿಷ್ಠ ನಾಲ್ಕು ಆಟಗಾರರ ಹೆಸರನ್ನು ಪ್ರಕಟಿಸಬೇಕು. ಆದ್ರೆ ಈ ಪಟ್ಟಿ ಅಂತಿಮ ಹಂತ ತಲುಪುವ ಮೊದಲೇ ಹಳೆಯ ಫ್ರಾಂಚೈಸಿಗಳು, ಹೊಸ ತಂಡ ಅಂದ್ರೆ RPSG ಗ್ರೂಪ್ ಬೆಂಬಲಿತ ಲಕ್ನೋ ಫ್ರಾಂಚೈಸಿ ಮೇಲೆ ಆರೋಪ ಹೊರಿಸಿವೆ.

ಕೆ.ಎಲ್ ರಾಹುಲ್ ಮೇಲೆ ಹೊಸ ಫ್ರಾಂಚೈಸಿ ಕಣ್ಣು

ಕೆ.ಎಲ್ ರಾಹುಲ್ ಮೇಲೆ ಹೊಸ ಫ್ರಾಂಚೈಸಿ ಕಣ್ಣು

ಈಗಾಗಲೇ 8 ಹಳೆಯ ಐಪಿಎಲ್‌ ಫ್ರಾಂಚೈಸಿಗಳು IPL 2022 ಗಾಗಿ ಆಟಗಾರರ ಪಟ್ಟಿಯನ್ನ ಮಾಡಿಕೊಂಡಿವೆ. ಇದರ ನಡುವೆ ಆರ್‌ಸಿಬಿ ಸೇರಿದಂತೆ ಕೆಲ ತಂಡಗಳಷ್ಟೇ ಹೊಸ ನಾಯಕನ ಹುಡುಕಾಟದಲ್ಲಿವೆ. ಆರ್‌ಸಿಬಿ ಪರ ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ಬಳಿಕ ಕೆ.ಎಲ್‌ ರಾಹುಲ್‌ರನ್ನ ಹೇಗಾದ್ರು ಪಡೆಯಬೇಕೆಂಬ ಯೋಜನೆ ಹಾಕಿಕೊಂಡಿವೆ. ಈಗಾಗಲೇ ರಾಹುಲ್ ಲಕ್ನೋ ಫ್ರಾಂಚೈಸಿ ನಾಯಕ ಎಂದೇ ಬಿಂಬಿತವಾಗಿದೆ.

ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಪರ ಆಡ್ತಿದ್ದ ಶ್ರೇಯಸ್ ಅಯ್ಯರ್ ನಾಯಕತ್ವದ ಸಲುವಾಗಿಯೇ ತಂಡದಿಂದ ಹೊರಬಂದು ಹರಾಜಿಗೆ ಇಳಿಯಲಿದ್ದಾರೆ ಎಂಬ ಮಾತು ಕೇಳಿಬಂದಿದೆ.

ಹರ್ಭಜನ್ ಸಿಂಗ್ ದಾಖಲೆಯನ್ನ ಮುರಿದ ಆರ್. ಅಶ್ವಿನ್: ಭಾರತದ 3ನೇ ಗರಿಷ್ಠ ವಿಕೆಟ್ ಟೇಕರ್

ಲಕ್ನೋ ಫ್ರಾಂಚೈಸಿ ವಿರುದ್ಧ ಪಂಜಾಬ್ ಕಿಂಗ್ಸ್‌ ಆರೋಪ

ಲಕ್ನೋ ಫ್ರಾಂಚೈಸಿ ವಿರುದ್ಧ ಪಂಜಾಬ್ ಕಿಂಗ್ಸ್‌ ಆರೋಪ

ಈಗಾಗಲೇ ಆಟಗಾರರನ್ನ ರೀಟೇನ್ ಮಾಡಿಕೊಳ್ಳಲು ತಂಡಗಳ ಪ್ರಯತ್ನ ಒಂದೆಡೆಯಾದ್ರೆ, ಪಂಜಾಬ್ ಕಿಂಗ್ಸ್‌ನ ಕೆ.ಎಲ್ ರಾಹುಲ್ ಮತ್ತು ಸನ್‌ರೈಸರ್ಸ್ ಹೈದ್ರಾಬಾದ್ ತಂಡದ ಪ್ರಮುಖ ಸ್ಪಿನ್ನರ್ ರಶೀದ್ ಖಾನ್‌ರನ್ನ ತಮ್ಮ ಫ್ರಾಂಚೈಸಿಯಿಂದ ತೊರೆಯುವಂತೆ ಲಕ್ನೋ ಫ್ರಾಂಚೈಸಿ ಮಾಡುತ್ತಿದೆ ಎಂದು ಎರಡು ಫ್ರಾಂಚೈಸಿಗಳು ಬಿಸಿಸಿಐಗೆ ದೂರು ನೀಡಿವೆ. ಈ ಕುರಿತು ಇನ್‌ಸೈಡ್‌ಸ್ಪೋರ್ಟ್‌ ವರದಿ ಮಾಡಿದ್ದು, ಭಾರತೀಯ ಕ್ರಿಕೆಟ್ ಮಂಡಳಿ ಈ ದೂರುಗಳನ್ನ ಪರಿಶೀಲನೆ ಮಾಡುತ್ತಿದೆ ಎನ್ನಲಾಗಿದೆ.

'ಪರಿಸ್ಥಿತಿ ತುಂಬಾ ಹದಗೆಟ್ಟಿದೆ': ನ್ಯೂಜಿಲೆಂಡ್ ಪ್ರದರ್ಶನಕ್ಕೆ ದಿಗ್ಗಜ ಆಟಗಾರನಿಂದ ಅಸಮಾಧಾನ

ದೂರಿನ ಬಗ್ಗೆ ಬಿಸಿಸಿಐ ಏನು ಹೇಳುತ್ತಿದೆ?

ದೂರಿನ ಬಗ್ಗೆ ಬಿಸಿಸಿಐ ಏನು ಹೇಳುತ್ತಿದೆ?

"ನಾವು ಯಾವುದೇ ಪತ್ರದ ಮೂಲಕ ದೂರನ್ನು ಸ್ವೀಕರಿಸಿಲ್ಲ, ಆದರೆ ಲಕ್ನೋ ತಂಡವು ಆಟಗಾರರನ್ನು ಸೆಳೆಯುತ್ತಿರುವ ಬಗ್ಗೆ ಎರಡು ಫ್ರಾಂಚೈಸಿಗಳಿಂದ ಮೌಖಿಕ ದೂರು ಸ್ವೀಕರಿಸಿದ್ದೇವೆ. ನಾವು ಅದನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಅದು ನಿಜವೆಂದು ಸಾಭೀತಾದರೆ ನಾವು ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಏಕೆಂದೆರ ತಂಡದ ಸಮತೋಲನವನ್ನು ತೊಂದರೆಗೊಳಿಸಲು ನಾವು ಬಯಸುವುದಿಲ್ಲ. ತೀವ್ರ ಪೈಪೋಟಿ ಇರುವಾಗ ನೀವು ಅಂತಹ ವಿಷಯಗಳನ್ನು ತಪ್ಪಿಸಲು ಸಾಧ್ಯವಿಲ್ಲ. ಆದರೆ ಅಸ್ತಿತ್ವದಲ್ಲಿರುವ ತಂಡಗಳು ಎಲ್ಲವನ್ನೂ ಸಮತೋಲನಗೊಳಿಸಲು ಪ್ರಯತ್ನಿಸುತ್ತಿರುವಾಗ ಅದು ನ್ಯಾಯೋಚಿತವಲ್ಲ "ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಇನ್ಸೈಡ್‌ಸ್ಪೋರ್ಟ್‌ಗೆ ತಿಳಿಸಿದ್ದಾರೆ.

ಆಟಗಾರರಿಗೆ ತಂಡದಿಂದ ಹೊರಹೋಗುವ ಅವಕಾಶ

ಆಟಗಾರರಿಗೆ ತಂಡದಿಂದ ಹೊರಹೋಗುವ ಅವಕಾಶ

ಐಪಿಎಲ್ ಫ್ರಾಂಚೈಸಿಗಳಿಂದ ಆಟಗಾರರು ರೀಟೇನ್‌ಗೆ ಒಪ್ಪದೆ ಪುನಃ ಹರಾಜಿಗೆ ಹೋಗುವ ಅವಕಾಶವಿರುತ್ತದೆ. ಒಂದು ವೇಳೆ ಆಟಗಾರನೊಬ್ಬನಿಗೆ ಪಡೆದಿರುವ ಸಂಭಾವನೆ ಅಥವಾ ಇನ್ಯಾವುದೇ ವಿಷಯದಲ್ಲಿ ಸಮಾಧಾನ ಇಲ್ಲದಿದ್ದಾಗ ರೀಟೇನ್‌ಗೆ ಒಪ್ಪದೆ ಹರಾಜಿಗೆ ಇಳಿಯಬಹುದು.

ಭಾರತ-ನ್ಯೂಜಿಲೆಂಡ್ ಮೊದಲ ಟೆಸ್ಟ್‌ ಪಂದ್ಯ ಡ್ರಾನಲ್ಲಿ ಅಂತ್ಯ: ಕಿವೀಸ್ ತಂಡವನ್ನ ಸೋಲಿನಿಂದ ಪಾರುಮಾಡಿದ ರಚಿನ್ ರವೀಂದ್ರ

ರೀಟೇನ್ ಆದ ಆಟಗಾರರಿಗೆ ಎಷ್ಟು ಹಣ ಸಿಗಲಿದೆ?

ರೀಟೇನ್ ಆದ ಆಟಗಾರರಿಗೆ ಎಷ್ಟು ಹಣ ಸಿಗಲಿದೆ?

ಹೊಸ ನಿಯಮದ ಪ್ರಕಾರ ಕಳೆದ ಸೀಸನ್​ನಲ್ಲಿದ್ದ ಎಂಟು ಐಪಿಎಲ್ ತಂಡಗಳು ತಲಾ ಗರಿಷ್ಠ ನಾಲ್ವರು ಆಟಗಾರರನ್ನ ಮಾತ್ರ ಉಳಿಸಿಕೊಳ್ಳಬಹುದಾಗಿದೆ. ಅದರಲ್ಲಿ ಗರಿಷ್ಠ ಮೂವರು ಭಾರತೀಯರು, ಗರಿಷ್ಠ ಇಬ್ಬರು ವಿದೇಶಿಯರನ್ನ ಮಾತ್ರ ರೀಟೇನ್ ಮಾಡಿಕೊಳ್ಳಬಹುದು.

ಒಂದುವೇಳೆ ಫ್ರಾಂಚೈಸಿಯೊಂದು 4 ಆಟಗಾರರನ್ನು ಉಳಿಸಿಕೊಂಡರೆ 42 ಕೋಟಿ ಖರ್ಚು ಮಾಡಬಹುದಾಗಿದೆ. ಮೊದಲ ಆಟಗಾರನಿಗೆ 16 ಕೋಟಿ, ದ್ವಿತೀಯ ಆಟಗಾರನಿಗೆ 12 ಕೋಟಿ, ಮೂರನೇ ಆಟಗಾರನಿಗೆ 8 ಕೋಟಿ ಮತ್ತು ನಾಲ್ಕನೇ ಆಟಗಾರನಿಗೆ 6 ಕೋಟಿ ಸಿಗಲಿದೆ.

ಆದ್ರೆ, 3 ಆಟಗಾರರನ್ನು ಉಳಿಸಿಕೊಂಡರೆ 33 ಕೋಟಿ ಖರ್ಚು ಮಾಡಬಹುದಾಗಿದೆ. ಈ ಮೂಲಕ ಫ್ರಾಂಚೈಸಿಯೊಂದು ಉಳಿಸಿಕೊಳ್ಳಲಿರುವ ಪ್ರಥಮ ಆಟಗಾರನಿಗೆ 15 ಕೋಟಿ, ದ್ವಿತೀಯ ಆಟಗಾರನಿಗೆ 11 ಕೋಟಿ ಮತ್ತು ಮೂರನೇ ಆಟಗಾರನಿಗೆ 7 ಕೋಟಿ ಲಭಿಸಲಿದೆ. ಇನ್ನು ಇಬ್ಬರು ಆಟಗಾರರನ್ನು ಉಳಿಸಿಕೊಂಡರೆ 24 ಕೋಟಿ ಖರ್ಚು ಮಾಡಬಹುದಾಗಿದೆ. ಈ ಮೂಲಕ ಫ್ರಾಂಚೈಸಿಯೊಂದು ಉಳಿಸಿಕೊಳ್ಳಲಿರುವ ಪ್ರಥಮ ಆಟಗಾರನಿಗೆ 14 ಕೋಟಿ ಮತ್ತು ದ್ವಿತೀಯ ಆಟಗಾರನಿಗೆ 10 ಕೋಟಿ ರೂಪಾಯಿ ನೀಡಬೇಕಾಗುತ್ತದೆ.

Story first published: Tuesday, November 30, 2021, 10:30 [IST]
Other articles published on Nov 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X