ಐಪಿಎಲ್: ರಿಟೈನ್ ಆದ ಎಲ್ಲಾ ತಂಡಗಳ ಆಟಗಾರರ ಸಂಪೂರ್ಣ ಪಟ್ಟಿ; ಈ ಮೂವರಿಗೆ ಅತಿಹೆಚ್ಚು ಹಣ

ಈ ವರ್ಷ ನಡೆದ ಐಪಿಎಲ್ ಟೂರ್ನಿ 8 ತಂಡಗಳೊಂದಿಗೆ ನಡೆದ ಕೊನೆಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಾಗಿದ್ದು, ಮುಂದಿನ ವರ್ಷ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆವೃತ್ತಿಯಿಂದ ಒಟ್ಟು 10 ತಂಡಗಳು ಕಣಕ್ಕಿಳಿಯಲಿವೆ. ಹೌದು, ಲಖನೌ ಮತ್ತು ಅಹಮದಾಬಾದ್ ಎಂಬ 2 ಹೊಸ ಫ್ರಾಂಚೈಸಿಗಳು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸೇರ್ಪಡೆಗೊಳ್ಳುತ್ತಿರುವ ಕಾರಣ ಇದಕ್ಕೂ ಮುನ್ನ ಆಟಗಾರರ ಮೆಗಾ ಹರಾಜನ್ನು ಬಿಸಿಸಿಐ ನಡೆಸಲಿದೆ. ಹೀಗಾಗಿ ಈ ಮೆಗಾ ಹರಾಜಿಗೂ ಮುನ್ನ ಸದ್ಯ ಅಸ್ತಿತ್ವದಲ್ಲಿರುವ ಫ್ರಾಂಚೈಸಿಗಳಿಗೆ ತಂಡದಲ್ಲಿ ಯಾರಾದರೂ ನಾಲ್ವರು (ಗರಿಷ್ಠ) ಆಟಗಾರರನ್ನು ಉಳಿಸಿಕೊಳ್ಳುವ ಅನುಮತಿಯನ್ನು ಬಿಸಿಸಿಐ ನೀಡಿತ್ತು.

ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಗೆಲ್ಲಬೇಕೆಂದರೆ ಆತ ಇರಬೇಕು ಎಂದ ದೀಪ್‌ದಾಸ್ ಗುಪ್ತಾನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಗೆಲ್ಲಬೇಕೆಂದರೆ ಆತ ಇರಬೇಕು ಎಂದ ದೀಪ್‌ದಾಸ್ ಗುಪ್ತಾ

ಅದರಂತೆ ಸದ್ಯ ಅಸ್ತಿತ್ವದಲ್ಲಿರುವ 8 ಫ್ರಾಂಚೈಸಿಗಳು ತಾವು ತಂಡದಲ್ಲಿಯೇ ಉಳಿಸಿಕೊಳ್ಳಲು ಇಚ್ಛಿಸುವ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಿದ್ದು, ನವೆಂಬರ್‌ 30ರ ರಾತ್ರಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ವಿವಿಧ ಫ್ರಾಂಚೈಸಿಗಳು ರಿಟೈನ್ ಮಾಡಿಕೊಳ್ಳಲು ಇಚ್ಛಿಸಿರುವ ಆಟಗಾರರ ಪಟ್ಟಿಯನ್ನು ಬಹಿರಂಗಗೊಳಿಸಲಾಯಿತು. ಈ ಮೂಲಕ ಕೆಲ ಫ್ರಾಂಚೈಸಿಗಳು ನಾಲ್ವರು ಆಟಗಾರರನ್ನು ಉಳಿಸಿಕೊಂಡರೆ, ಇನ್ನೂ ಕೆಲವೊಂದಿಷ್ಟು ಫ್ರಾಂಚೈಸಿಗಳು ಮೂವರು ಆಟಗಾರರನ್ನು ರಿಟೈನ್ ಮಾಡಿಕೊಂಡವು ಮತ್ತು ಪಂಜಾಬ್ ಕಿಂಗ್ಸ್ ಮಾತ್ರ ಕೇವಲ ಇಬ್ಬರು ಆಟಗಾರರನ್ನು ರಿಟೈನ್ ಮಾಡಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿತು.

IPL 2022: ಫ್ರಾಂಚೈಸಿಗಳು ರೀಟೈನ್ ಮಾಡಿಕೊಳ್ಳದ ಭಾರತ ಹಾಗೂ ವಿದೇಶಿ ಸ್ಟಾರ್ ಆಟಗಾರರುIPL 2022: ಫ್ರಾಂಚೈಸಿಗಳು ರೀಟೈನ್ ಮಾಡಿಕೊಳ್ಳದ ಭಾರತ ಹಾಗೂ ವಿದೇಶಿ ಸ್ಟಾರ್ ಆಟಗಾರರು

ಹೀಗೆ ರಿಟೈನ್ ಆದ ಆಟಗಾರರ ಪೈಕಿ ರಿಷಭ್ ಪಂತ್, ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ದೊಡ್ಡ ಮೊತ್ತವನ್ನು ಪಡೆದರೆ ಇನ್ನುಳಿದ ಹಲವಾರು ಆಟಗಾರರು ವಿವಿಧ ರೀತಿಯ ಮೊತ್ತಗಳನ್ನು ಪಡೆದುಕೊಂಡಿದ್ದಾರೆ. ಒಟ್ಟಾರೆ ಯಾವ ತಂಡದ ಆಟಗಾರರು ಎಷ್ಟು ಮೊತ್ತಗಳನ್ನು ಪಡೆದುಕೊಳ್ಳುವುದರ ಮೂಲಕ ರಿಟೈನ್ ಆಗಿದ್ದಾರೆ ಎಂಬುದರ ಕುರಿತ ಮಾಹಿತಿ ಈ ಕೆಳಕಂಡಂತಿದೆ ಓದಿ..

ಚೆನ್ನೈ ಸೂಪರ್ ಕಿಂಗ್ಸ್

ಚೆನ್ನೈ ಸೂಪರ್ ಕಿಂಗ್ಸ್

ಆಟಗಾರ 1: ರವೀಂದ್ರ ಜಡೇಜಾ - ರೂ. 16 ಕೋಟಿ

ಆಟಗಾರ 2: ಎಂಎಸ್ ಧೋನಿ - ರೂ. 12 ಕೋಟಿ

ಆಟಗಾರ 3: ಮೊಯಿನ್ ಅಲಿ - 8 ಕೋಟಿ ರೂ

ಆಟಗಾರ 4: ರುತುರಾಜ್ ಗಾಯಕ್ವಾಡ್ - 6 ಕೋಟಿ ರೂ

ರಾಯಲ್ ಚಾಲೆಂಜರ್ಸ್ ಬೆಂಗಳೂರು

ರಾಯಲ್ ಚಾಲೆಂಜರ್ಸ್ ಬೆಂಗಳೂರು

ಆಟಗಾರ 1: ವಿರಾಟ್ ಕೊಹ್ಲಿ - ರೂ. 15 ಕೋಟಿ

ಆಟಗಾರ 2: ಗ್ಲೆನ್ ಮ್ಯಾಕ್ಸ್‌ವೆಲ್ - ರೂ. 11 ಕೋಟಿ

ಆಟಗಾರ 3: ಮೊಹಮ್ಮದ್ ಸಿರಾಜ್ - ರೂ. 7 ಕೋಟಿ

ಡೆಲ್ಲಿ ಕ್ಯಾಪಿಟಲ್ಸ್

ಡೆಲ್ಲಿ ಕ್ಯಾಪಿಟಲ್ಸ್

ಆಟಗಾರ 1: ರಿಷಬ್ ಪಂತ್ - ರೂ. 16 ಕೋಟಿ

ಆಟಗಾರ 2: ಅಕ್ಷರ್ ಪಟೇಲ್ - (ರೂ. 9 ಕೋಟಿ, ಪರ್ಸ್‌ನಿಂದ 12 ಕೋಟಿ ಕಡಿತಗೊಳಿಸಲಾಗಿದೆ)

ಆಟಗಾರ 3: ಪೃಥ್ವಿ ಶಾ - (7.5 ಕೋಟಿ, ಪರ್ಸ್‌ನಿಂದ 8 ಕೋಟಿ ಕಡಿತಗೊಳಿಸಲಾಗಿದೆ)

ಆಟಗಾರ 4: ಅನ್ರಿಚ್ ನಾರ್ಕಿಯಾ - (6.5 ಕೋಟಿ) ಧಾರಣ ಕಡಿತ: 42.5 ಕೋಟಿ ರೂ

ಕೋಲ್ಕತ್ತಾ ನೈಟ್ ರೈಡರ್ಸ್

ಕೋಲ್ಕತ್ತಾ ನೈಟ್ ರೈಡರ್ಸ್

ಆಟಗಾರ 1: ಆಂಡ್ರೆ ರಸೆಲ್ - ರೂ. 12 ಕೋಟಿ (16 ಕೋಟಿ ಪರ್ಸ್‌ನಿಂದ ಕಡಿತಗೊಳಿಸಲಾಗಿದೆ)

ಆಟಗಾರ 2: ವರುಣ್ ಚಕ್ರವರ್ತಿ - ರೂ. 8 ಕೋಟಿ (12 ಕೋಟಿ ಪರ್ಸ್‌ನಿಂದ ಕಡಿತಗೊಳಿಸಲಾಗಿದೆ)

ಆಟಗಾರ 3: ವೆಂಕಟೇಶ್ ಅಯ್ಯರ್ - 8 ಕೋಟಿ ರೂ

ಆಟಗಾರ 4: ಸುನಿಲ್ ನರೈನ್ - 6 ಕೋಟಿ ರೂ

ಮುಂಬೈ ಇಂಡಿಯನ್ಸ್

ಮುಂಬೈ ಇಂಡಿಯನ್ಸ್

ಆಟಗಾರ 1: ರೋಹಿತ್ ಶರ್ಮಾ - ರೂ. 16 ಕೋಟಿ

ಆಟಗಾರ 2: ಜಸ್ಪ್ರೀತ್ ಬುಮ್ರಾ - ರೂ. 12 ಕೋಟಿ

ಆಟಗಾರ 3: ಸೂರ್ಯಕುಮಾರ್ ಯಾದವ್ - ರೂ. 8 ಕೋಟಿ

ಆಟಗಾರ 4: ಕೀರಾನ್ ಪೊಲಾರ್ಡ್ - 6 ಕೋಟಿ ರೂ

ಪಂಜಾಬ್ ಕಿಂಗ್ಸ್

ಪಂಜಾಬ್ ಕಿಂಗ್ಸ್

ಆಟಗಾರ 1: ಮಯಾಂಕ್ ಅಗರ್ವಾಲ್ - ರೂ. 12 ಕೋಟಿ (14 ಕೋಟಿ ಪರ್ಸ್‌ನಿಂದ ಕಡಿತಗೊಳಿಸಲಾಗಿದೆ)

ಆಟಗಾರ 2: ಅರ್ಷದೀಪ್ ಸಿಂಗ್ - ರೂ. 4 ಕೋಟಿ

ರಾಜಸ್ಥಾನ್ ರಾಯಲ್ಸ್

ರಾಜಸ್ಥಾನ್ ರಾಯಲ್ಸ್

ಆಟಗಾರ 1: ಸಂಜು ಸ್ಯಾಮ್ಸನ್ - ರೂ. 14 ಕೋಟಿ

ಆಟಗಾರ 2: ಜೋಸ್ ಬಟ್ಲರ್ - ರೂ. 10 ಕೋಟಿ

ಆಟಗಾರ 3: ಯಶಸ್ವಿ ಜೈಸ್ವಾಲ್ - 4 ಕೋಟಿ ರೂ

Punjab ತಂಡದಿಂದ Rahul ಆಚೆ ಬಂದಿದ್ದರ ಹಿಂದಿನ ರಹಸ್ಯವೇನು | Oneindia Kannada
ಸನ್ ರೈಸರ್ಸ್ ಹೈದರಾಬಾದ್

ಸನ್ ರೈಸರ್ಸ್ ಹೈದರಾಬಾದ್

ಆಟಗಾರ 1: ಕೇನ್ ವಿಲಿಯಮ್ಸನ್ - ರೂ. 14 ಕೋಟಿ

ಆಟಗಾರ 2: ಅಬ್ದುಲ್ ಸಮದ್ - ರೂ. 4 ಕೋಟಿ

ಆಟಗಾರ 3: ಉಮ್ರಾನ್ ಮಲಿಕ್ - 4 ಕೋಟಿ ರೂ

For Quick Alerts
ALLOW NOTIFICATIONS
For Daily Alerts
Story first published: Wednesday, December 1, 2021, 14:39 [IST]
Other articles published on Dec 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X