ಐಪಿಎಲ್: ಧೋನಿ ಬಿಟ್ಟು ಈ 4 ಪ್ರಮುಖ ಆಟಗಾರರನ್ನು ಸಿಎಸ್‌ಕೆ ಉಳಿಸಿಕೊಳ್ಳಲಿದೆ ಎಂದ ಮಾಜಿ ಕ್ರಿಕೆಟಿಗ!

ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಒಂದೆಡೆ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದರೆ, ಮತ್ತೊಂದೆಡೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ರಿಟೆನ್ಷನ್ ಕಾರ್ಯಕ್ರಮ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ. ಹೌದು, ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 8 ತಂಡಗಳ ಜೊತೆ ಲಖನೌ ಮತ್ತು ಅಹ್ಮದಾಬಾದ್ ಈ 2 ನೂತನ ಫ್ರಾಂಚೈಸಿಗಳ ಸೇರ್ಪಡೆಯಾಗುತ್ತಿರುವ ಕಾರಣ ಟೂರ್ನಿಗೂ ಮುನ್ನ ಆಟಗಾರರ ಮೆಗಾ ಹರಾಜು ಪ್ರಕ್ರಿಯೆಯನ್ನು ನಡೆಸಲೇಬೇಕಾಗಿದೆ. ಹೀಗಾಗಿ ಆಟಗಾರರನ್ನು ಅಸ್ತಿತ್ವದಲ್ಲಿರುವ ಐಪಿಎಲ್ ಫ್ರಾಂಚೈಸಿಗಳು ಮೆಗಾ ಹರಾಜಿಗೆ ಬಿಡುಗಡೆ ಮಾಡುವ ಮುನ್ನ ಒಟ್ಟು 4 ಆಟಗಾರರನ್ನು ತಂಡದಲ್ಲಿಯೇ ರಿಟೇನ್ ಮಾಡಿಕೊಳ್ಳುವ ಅವಕಾಶಗಳನ್ನು ಪಡೆದುಕೊಂಡಿವೆ.

ಕೆ.ಎಲ್ ರಾಹುಲ್, ರಶೀದ್‌ ಖಾನ್‌ಗಾಗಿ ಫ್ರಾಂಚೈಸಿಗಳ ಕಿತ್ತಾಟ: ಬಿಸಿಸಿಐಗೆ ದೂರುಕೆ.ಎಲ್ ರಾಹುಲ್, ರಶೀದ್‌ ಖಾನ್‌ಗಾಗಿ ಫ್ರಾಂಚೈಸಿಗಳ ಕಿತ್ತಾಟ: ಬಿಸಿಸಿಐಗೆ ದೂರು

ಹೌದು, ಗರಿಷ್ಠ ಇಬ್ಬರು ವಿದೇಶಿ ಆಟಗಾರರನ್ನು ಒಳಗೊಂಡಂತೆ ಒಟ್ಟು 4 ಆಟಗಾರರನ್ನು ತಂಡವೊಂದು ಉಳಿಸಿಕೊಳ್ಳಲು ಅನುಮತಿ ಇದ್ದು, ಎಲ್ಲಾ ಫ್ರಾಂಚೈಸಿಗಳು ಯಾವ 4 ಆಟಗಾರರನ್ನು ತಮ್ಮ ತಂಡಗಳಲ್ಲಿಯೇ ಉಳಿಸಿಕೊಳ್ಳಲಿವೆ ಎಂಬ ಮಾಹಿತಿಯನ್ನು ಬಿಸಿಸಿಐಗೆ ನವೆಂಬರ್ 30ರ ಮಧ್ಯಾಹ್ನ 12 ಗಂಟೆಯೊಳಗೆ ಸಲ್ಲಿಸಬೇಕು ಎಂದು ಸೂಚನೆಯನ್ನು ನೀಡಲಾಗಿತ್ತು. ಅದರಂತೆ ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ಎಷ್ಟು ಮತ್ತು ಯಾವ ಆಟಗಾರರನ್ನು ತಮ್ಮ ತಂಡಗಳಲ್ಲೇ ಉಳಿಸಿಕೊಳ್ಳಲಿವೆ ಎಂಬ ಮಾಹಿತಿಯನ್ನು ಬಿಸಿಸಿಐಗೆ ಸಲ್ಲಿಸಿದ್ದು, ಇದರ ಕಾರ್ಯಕ್ರಮ ನವೆಂಬರ್‌ 30ರ ರಾತ್ರಿ 9.30ಕ್ಕೆ ಆರಂಭವಾಗಲಿದ್ದು ಯಾವ ತಂಡಗಳು ಯಾವ ಆಟಗಾರರನ್ನು ಉಳಿಸಿಕೊಂಡಿವೆ ಎಂಬ ಮಾಹಿತಿ ಬಹಿರಂಗವಾಗಲಿದೆ.

ಐಪಿಎಲ್: ಆಟಗಾರರ ಹರಾಜಿಗೆ ಬ್ರೇಕ್; ಇನ್ನುಮುಂದೆ ಇರುವುದಿಲ್ಲ ಮೆಗಾ ಹರಾಜು?ಐಪಿಎಲ್: ಆಟಗಾರರ ಹರಾಜಿಗೆ ಬ್ರೇಕ್; ಇನ್ನುಮುಂದೆ ಇರುವುದಿಲ್ಲ ಮೆಗಾ ಹರಾಜು?

ಇನ್ನು ಯಾವ ತಂಡಗಳು ಯಾವ ಆಟಗಾರರನ್ನು ಉಳಿಸಿಕೊಳ್ಳಲಿವೆ ಎಂಬುದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿದ್ದು, ಹಲವಾರು ಮಾಜಿ ಕ್ರಿಕೆಟಿಗರು ಫ್ರಾಂಚೈಸಿಯೊಂದು ಯಾವ ಆಟಗಾರರನ್ನು ಉಳಿಸಿಕೊಂಡರೆ ಉತ್ತಮ ಎಂಬ ಸಲಹೆಗಳನ್ನು ನೀಡಿದ್ದಾರೆ. ಇದೀಗ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಮಾತನಾಡಿದ್ದು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಯಾವ 4 ಆಟಗಾರರನ್ನು ತಂಡದಲ್ಲಿಯೇ ರಿಟೈನ್ ಮಾಡಿಕೊಳ್ಳಲಿದೆ ಎಂಬುದರ ಕುರಿತು ಈ ಕೆಳಕಂಡಂತೆ ಹೇಳಿಕೆ ನೀಡಿದ್ದಾರೆ.

ಈ 4 ಆಟಗಾರರನ್ನು ಚೆನ್ನೈ ಸೂಪರ್ ಕಿಂಗ್ಸ್ ರಿಟೇನ್ ಮಾಡಿಕೊಳ್ಳಲಿದೆ ಎಂದ ಗಂಭೀರ್

ಈ 4 ಆಟಗಾರರನ್ನು ಚೆನ್ನೈ ಸೂಪರ್ ಕಿಂಗ್ಸ್ ರಿಟೇನ್ ಮಾಡಿಕೊಳ್ಳಲಿದೆ ಎಂದ ಗಂಭೀರ್

ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಸಲುವಾಗಿ ಫ್ರಾಂಚೈಸಿಯೊಂದು ಗರಿಷ್ಠ 4 ಆಟಗಾರರನ್ನು ರಿಟೇನ್ ಮಾಡಿಕೊಳ್ಳುವ ಅನುಮತಿ ಪಡೆದುಕೊಂಡಿದೆ. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಋತುರಾಜ್ ಗಾಯಕ್ವಾಡ್, ರವೀಂದ್ರ ಜಡೇಜಾ, ಫಾಫ್ ಡು ಪ್ಲೆಸಿಸ್ ಮತ್ತು ಸ್ಯಾಮ್ ಕರನ್ ಈ 4 ಆಟಗಾರರನ್ನು ಉಳಿಸಿಕೊಳ್ಳಲಿದೆ ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿಕೆ ನೀಡಿದ್ದಾರೆ.

ಚೆನ್ನೈ ಫ್ರಾಂಚೈಸಿಯ ಮೊದಲನೇ ಆಯ್ಕೆಯನ್ನೇ ಕಡೆಗಣಿಸಿದ ಗಂಭೀರ್!

ಚೆನ್ನೈ ಫ್ರಾಂಚೈಸಿಯ ಮೊದಲನೇ ಆಯ್ಕೆಯನ್ನೇ ಕಡೆಗಣಿಸಿದ ಗಂಭೀರ್!

ಆಟಗಾರರನ್ನು ಉಳಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ನಮ್ಮ ಮೊದಲನೇ ಆಯ್ಕೆ ಎಂಎಸ್ ಧೋನಿ ಅವರೇ ಆಗಿರುತ್ತಾರೆ ಎಂದು ಸ್ವತಃ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯೇ ಈ ಹಿಂದೆ ಖಚಿತಪಡಿಸಿತ್ತು. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಎಂಎಸ್ ಧೋನಿ ಅವರನ್ನು ರೀಟೈನ್ ಮಾಡಿಕೊಳ್ಳುವುದು ಶತಾಯಗತಾಯ ಖಚಿತ ಎಂದು ಹೇಳಬಹುದು. ಆದರೆ ಈ ವಿಷಯ ತಿಳಿದಿದ್ದರೂ ಕೂಡ ಗೌತಮ್ ಗಂಭೀರ್ ಎಂಎಸ್ ಧೋನಿ ಅವರ ಹೆಸರನ್ನು ಕೈಬಿಟ್ಟು ಬೇರೆ 4 ಆಟಗಾರರ ಹೆಸರನ್ನು ತೆಗೆದುಕೊಂಡಿರುವುದು ಸದ್ಯ ಮತ್ತೊಂದಷ್ಟು ಚರ್ಚೆಗಳಿಗೆ ಕಾರಣವಾಗಿದೆ.

ಮೂಲಗಳ ಪ್ರಕಾರ ಚೆನ್ನೈ ಸೂಪರ್ ಕಿಂಗ್ಸ್ ಉಳಿಸಿಕೊಳ್ಳಲಿರುವ 4 ಆಟಗಾರರು

ಮೂಲಗಳ ಪ್ರಕಾರ ಚೆನ್ನೈ ಸೂಪರ್ ಕಿಂಗ್ಸ್ ಉಳಿಸಿಕೊಳ್ಳಲಿರುವ 4 ಆಟಗಾರರು

ಇನ್ನು ಬಲ್ಲ ಮೂಲಗಳ ಪ್ರಕಾರ ಚೆನ್ನೈ ಸೂಪರ್ ಕಿಂಗ್ ಫ್ರಾಂಚೈಸಿ ರವೀಂದ್ರ ಜಡೇಜಾ, ಎಂಎಸ್ ಧೋನಿ, ರುತುರಾಜ್ ಗಾಯಕ್ವಾಡ್ ಮತ್ತು ಮೊಯಿನ್ ಅಲಿ ಈ 4 ಆಟಗಾರರನ್ನು ರಿಟೇನ್ ಮಾಡಿಕೊಳ್ಳಲಿದೆ ಎನ್ನಲಾಗುತ್ತಿದೆ.

For Quick Alerts
ALLOW NOTIFICATIONS
For Daily Alerts
Story first published: Tuesday, November 30, 2021, 16:19 [IST]
Other articles published on Nov 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X