ಐಪಿಎಲ್ 2022 ರೀಟೆನ್ಶನ್: ನಾಯಕನನ್ನು ಬಿಡುಗಡೆಗೊಳಿಸಲು ಕೆಕೆಆರ್ ನಿರ್ಧಾರ?

ಐಪಿಎಲ್ 2022ರ ಆವೃತ್ತಿಯ ರೀಟೆನ್ಶನ್ ಪ್ರಕ್ರಿಯೆಗೆ ಕೆಲವೇ ಕ್ಷಣಗಳು ಬಾಕಿಯಿದೆ. ಯಾವೆಲ್ಲಾ ಆಟಗಾರರನ್ನು ಫ್ರಾಂಚೈಸಿಗಳು ತಮ್ಮಲ್ಲಿಯೇ ಉಳಿಸಿಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ. ಈ ಕುತೂಹಲಕ್ಕೆ ಕೆಲವೇ ಕ್ಷಣಗಳಲ್ಲಿ ಉತ್ತರ ಸ್ಪಷ್ಟವಾಗಲಿದೆ. ಈ ಸಂದರ್ಭದಲ್ಲಿ ಬಹುತೇಕ ತಂಡಗಳು ಯಾವೆಲ್ಲಾ ಆಟಗಾರರನ್ನು ಉಳಿಸಿಕೊಳ್ಳಲು ನಿರ್ಧರಿಸಿದೆ ಎಂಬುದರ ಲೆಕ್ಕಾಚಾರಗಳು ಜೋರಾಹಿ ನಡೆಯುತ್ತಿದೆ.

ಐಪಿಎಲ್‌ನ ಪ್ರಮುಖ ತಂಡಗಳಲ್ಲಿ ಒಂದಾಗಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಈ ಬಾರಿಯ ರೀಟೆನ್ಶನ್ ಪಟ್ಟಿಯಿಂದ ಸ್ವತಃ ನಾಯಕನನ್ನೇ ಹೊರಗಿಡಲು ನಿರ್ಧರಿಸಿದೆ. ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಸಾಕಷ್ಟು ಸಾಧನೆ ಮಾಡಿರುವ ಇಂಗ್ಲೆಂಡ್‌ನ ಆಟಗಾರ ಇಯಾನ್ ಮಾರ್ಗನ್ ಕಳೆದ ಐಪಿಎಲ್ ಆವೃತ್ತಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದರು. ಹೀಗಾಗಿ ಮುಂದಿನ ಹರಾಜು ಪ್ರಕ್ರಿಯೆಗೆ ಅವರನ್ನು ಬಿಡುಗಡೆಗೊಳಿಸಲು ತಂಡ ನಿರ್ಧರಿಸಿದೆ. ಈ ಬಗ್ಗೆ ಕೆಲವೇ ಕ್ಷಣಗಳಲ್ಲಿ ಅಧಿಕೃತ ಮಾಹಿತಿ ಲಭ್ಯವಾಗಲಿದೆ.

ಐಪಿಎಲ್: ಧೋನಿ ಬಿಟ್ಟು ಈ 4 ಪ್ರಮುಖ ಆಟಗಾರರನ್ನು ಸಿಎಸ್‌ಕೆ ಉಳಿಸಿಕೊಳ್ಳಲಿದೆ ಎಂದ ಮಾಜಿ ಕ್ರಿಕೆಟಿಗ!ಐಪಿಎಲ್: ಧೋನಿ ಬಿಟ್ಟು ಈ 4 ಪ್ರಮುಖ ಆಟಗಾರರನ್ನು ಸಿಎಸ್‌ಕೆ ಉಳಿಸಿಕೊಳ್ಳಲಿದೆ ಎಂದ ಮಾಜಿ ಕ್ರಿಕೆಟಿಗ!

ಇನ್ನು ಈ ಸಂದರ್ಭದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ರೀಟೈನ್ ಮಾಡಲು ಬಯಸಿರುವ ಆಟಗಾರರು ಯಾರು ಎಂಬ ಬಗ್ಗೆಯೂ ಮಾಹಿತಿಗಳು ಲಭ್ಯವಾಗಿದೆ. ಇಬ್ಬರು ಭಾರತೀಯ ಆಟಗಾರರು ಹಾಗೂ ಇಬ್ಬರು ವಿದೇಶಿ ಆಟಗಾರರನ್ನು ಉಳಿಸಿಕೊಳ್ಳಲು ಕೆಕೆಆರ್ ಫ್ರಾಂಚೈಸಿ ನಿರ್ಧಾರ ಮಾಡಿದೆ.

ಕಳೆದ ಐಪಿಎಲ್ ಆವೃತ್ತಿಯಲ್ಲಿ ಅಮೋಘ ಆಟವನ್ನು ಪ್ರದರ್ಶಿಸಿದ ಆಲ್‌ರೌಂಡರ್ ವೆಂಕಟೇಶ್ ಐಯ್ಯರ್ ಅವರನ್ನು ಕೆಕೆಆರ್ ಫ್ರಾಂಚೈಸಿ ಉಳಿಸಿಕೊಳ್ಳಲು ನಿರ್ಧರಿಸಿದೆ ಎಂದು ತಿಳಿದು ಬರುತ್ತಿದೆ. ಜೊತೆಗೆ ಬೌಲಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿರುವ ವರುಣ್ ಚಕ್ರವರ್ತಿ ಕೂಡ ಕೆಕೆಆರ್ ತಂಡದಲ್ಲಿ ಮುಂದುವರಿಯುವುದು ಬಹುತೇಕ ಖಚಿತ. ಇನ್ನು ವೆಸ್ಟ್ ಇಂಡೀಸ್‌ನ ಇಬ್ಬರು ಪ್ರಮುಖ ಆಟಗಾರಾದ ಆಂಡ್ರೆ ರಸೆಲ್ ಹಾಗೂ ಸುನಿಲ್ ನರೈನ್ ಕೆಕೆಆರ್ ತಂಡದಲ್ಲಿಯೇ ಮುಂದಿವರಿಯಲಿರುವ ಮತ್ತಿಬ್ಬರು ಆಟಗಾರರಾಗಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಐಪಿಎಲ್ 2022 ರಿಟೆನ್ಷನ್: ಆರ್‌ಸಿಬಿಯ ಈ ಇಬ್ಬರು ಆಟಗಾರರು ಮಾತ್ರ ಸೇಫ್, ಉಳಿದವರ ಕಥೆ?ಐಪಿಎಲ್ 2022 ರಿಟೆನ್ಷನ್: ಆರ್‌ಸಿಬಿಯ ಈ ಇಬ್ಬರು ಆಟಗಾರರು ಮಾತ್ರ ಸೇಫ್, ಉಳಿದವರ ಕಥೆ?

ಇನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಯುವ ಆರಂಭಿಕ ಆಟಗಾರ ಶುಬ್ಮನ್ ಗಿಲ್ ಅವರನ್ನು ಕೂಡ ಬಿಡುಗಡೆಗೊಳಿಸಲಿದೆ. ಶುಬ್ಮನ್ ಗಿಲ್ ಹಾಗೂ ವೆಂಕಟೇಶ್ ಐಯ್ಯರ್ ಮಧ್ಯೆ ಯಾರನ್ನು ಉಳಿಸಿಕೊಳ್ಳಬೇಕೆಂದು ಕೊಲ್ಕತ್ತಾ ನೈಟ್ ರೈಡರ್ಸ್ ಸಾಕಷ್ಟು ಚರ್ಚೆಯನ್ನು ನಡೆಸಿದ್ದು ನಂತರ ವೆಂಕಟೇಶ್ ಐಯ್ಯರ್ ಆಯ್ಕೆ ಹೆಚ್ಚು ಸೂಕ್ತ ಎಂದು ಪರಿಗಣಿಸಿ ಈ ನಿರ್ಧಾರಕ್ಕೆ ಫ್ರಾಂಚೈಸಿ ಬಂದಿದೆ ಎನ್ನಲಾಗಿದೆ.

2021 ಆವೃತ್ತಿಯ ಕೊಲ್ಕತ್ತಾ ನೈಟ್ ರಯಡರ್ಸ್ ಸಂಪೂರ್ಣ ಸ್ಕ್ವಾಡ್ ಹೀಗಿದೆ: ಶುಬ್ಮನ್ ಗಿಲ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಇಯಾನ್ ಮಾರ್ಗನ್ (ನಾಯಕ), ಶಕೀಬ್ ಅಲ್ ಹಸನ್, ಸುನಿಲ್ ನರೈನ್, ಲಾಕಿ ಫರ್ಗುಸನ್, ಶಿವಂ ಮಾವಿ, ವರುಣ್ ಚಕ್ರವರ್ತಿ, ಆಂಡ್ರೆ ರಸೆಲ್, ಹರ್ಭಜನ್ ಸಿಂಗ್, ಟಿಮ್ ಸೌಥಿ, ಬೆನ್ ಕಟಿಂಗ್, ಕರುಣ್ ನಾಯರ್, ಪವನ್ ನೇಗಿ, ಕುಲದೀಪ್ ಯಾದವ್, ಗುರುಕೀರತ್ ಸಿಂಗ್ ಮಾನ್, ಶೆಲ್ಡನ್ ಜಾಕ್ಸನ್, ಸಂದೀಪ್ ವಾರಿಯರ್, ಟಿಮ್ ಸೀಫರ್ಟ್, ಪ್ರಸಿದ್ಧ್ ಕೃಷ್ಣ, ರಿಂಕು ಸಿಂಗ್, ಕಮಲೇಶ್ ನಾಗರಕೋಟಿ, ವೈಭವ್ ಅರೋರಾ

For Quick Alerts
ALLOW NOTIFICATIONS
For Daily Alerts
Story first published: Tuesday, November 30, 2021, 20:36 [IST]
Other articles published on Nov 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X