ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2022: ದಿನೇಶ್ ಕಾರ್ತಿಕ್, ಮಾರ್ಗನ್‌ ಬಿಡುಗಡೆ: ಕೆಕೆಆರ್ ರೀಟೈನ್ ಮಾಡಿದ 4 ಆಟಗಾರರು!

IPL 2022 retention: Kolkata Knight Riders retailed list with price cap

ಐಪಿಎಲ್ 2022ರ ಹರಾಜು ಪ್ರಕ್ರಿಯೆಗೂ ಮುನ್ನ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ನಾಲ್ಕು ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ನಿರ್ಧರಿಸಿದೆ. ನಿರೀಕ್ಷೆಯಂತೆಯೇ ಪ್ರಮುಖ ಆಟಗಾರರಾದ ಇಯಾನ್ ಮಾರ್ಗನ್ ಹಾಗೂ ದಿನೇಶ್ ಕಾರ್ತಿಕ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ರೀಟೈನ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳಲು ವಿಫಲವಾಗಿದ್ದಾರೆ. ಇಬ್ಬರು ಭಾರತೀಯ ಆಟಗಾರರು ಹಾಗೂ ಇಬ್ಬರು ವಿದೇಶಿ ಆಟಗಾರರನ್ನು ಕೆಕೆಆರ್ ಫ್ರಾಂಚೈಸಿ ರೀಟೈನ್ ಮಾಡಿಕೊಂಡಿದೆ.

ಕೊಲ್ಕತ್ತಾ ನೈಟ್ ರಯಡರ್ಸ್ ತಂಡ ಪ್ರಮುಖ ರೀಟೆನ್ಶನ್ ಆಗಿ ಆಂಡ್ರೆ ರಸೆಲ್ ಅವರನ್ನು ಉಳಿಸಿಕೊಂಡಿದ್ದು ಉಳಿದಂತೆ ಆರಂಭಿಕ ಆಟಗಾರ ವೆಂಕಟೇಶ್ ಐಯ್ಯರ್, ವರುಣ್ ಚಕ್ರವರ್ತಿ ಹಾಗೂ ಸುನಿಲ್ ನರೈನ್ ಅವರನ್ನು ರೀಟೈನ್ ಮಾಡಿಕೊಂಡಿದೆ. ಆಲ್‌ರೌಂಡರ್ ಆಂಡ್ರೆ ರಸೆಲ್ 12 ಕೋಟಿ ರೂಪಾಯಿಗೆ ರೀಟೈನ್ ಆಗಿದ್ದರೆ ವೆಂಕಟೇಶ್ ಐಯ್ಯರ್ ಹಾಗೂ ವರುಣ್ ಚಕ್ರವರ್ತಿ ತಲಾ 8 ಕೋಟಿ ರೂಪಾಯಿ ಬೆಲೆಯನ್ನು ಪಡೆದುಕೊಂಡಿದ್ದಾರೆ. ಆಲ್‌ರೌಂಡರ್ ಸುನಿಲ್ ನರೈನ್ 6 ಕೋಟಿ ರೂಪಾಯಿಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಉಳಿದುಕೊಂಡಿದ್ದಾರೆ.

ಇನ್ನು ಈ ರೀಟೈನ್ ಬಳಿಕ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 56 ಕೋಟಿ ರೂಪಾಯಿ ಮೊತ್ತವನ್ನು ತನ್ನ ಪರ್ಸ್‌ನಲ್ಲಿ ಉಳಿಸಿಕೊಂಡಿದೆ. ಈ ಮೊತ್ತದಲ್ಲಿ ತಂಡ ಉಳಿದ ಆಟಗಾರರನ್ನು ತಂಡಕ್ಕೆ ಸೇರ್ಪಡೆಗೊಳಿಸಿ ಮುಂದಿನ ಆವೃತ್ತಿಗೆ ಬಲಿಷ್ಠ ತಂಡವನ್ನು ಕಟ್ಟಬೇಕಿದೆ.

ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಬಿಡುಗಡೆಯಾದ ಆಟಗಾರರ ಪಟ್ಟಿ: ಶುಬ್ಮನ್ ಗಿಲ್, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಇಯಾನ್ ಮಾರ್ಗನ್ (ನಾಯಕ), ಶಕೀಬ್ ಅಲ್ ಹಸನ್, ಲಾಕಿ ಫರ್ಗುಸನ್, ಶಿವಂ ಮಾವಿ, ಹರ್ಭಜನ್ ಸಿಂಗ್, ಟಿಮ್ ಸೌಥಿ, ಬೆನ್ ಕಟಿಂಗ್, ಕರುಣ್ ನಾಯರ್, ಪವನ್ ನೇಗಿ, ಕುಲದೀಪ್ ಯಾದವ್, ಗುರುಕೀರತ್ ಸಿಂಗ್ ಮಾನ್, ಶೆಲ್ಡನ್ ಜಾಕ್ಸನ್, ಸಂದೀಪ್ ವಾರಿಯರ್, ಟಿಮ್ ಸೀಫರ್ಟ್, ಪ್ರಸಿದ್ಧ್ ಕೃಷ್ಣ, ರಿಂಕು ಸಿಂಗ್, ಕಮಲೇಶ್ ನಾಗರಕೋಟಿ, ವೈಭವ್ ಅರೋರಾ

Story first published: Wednesday, December 1, 2021, 10:29 [IST]
Other articles published on Dec 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X