ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದೊಡ್ಡ ಮೊತ್ತ ಪಡೆಯುತ್ತಿದ್ದ ಧೋನಿಗೆ ಈ ಸಲ ಕಡಿಮೆ ಮೊತ್ತ ಸಿಕ್ಕಿದ್ದಕ್ಕೆ ಕಾರಣ ಆ ಒಬ್ಬ ಆಟಗಾರ!

IPL 2022 retention: MS Dhoni took huge pay cut so CSK could retain Ravindra Jadeja

ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಲಕ್ನೋ ಮತ್ತು ಅಹ್ಮದಾಬಾದ್ ಫ್ರಾಂಚೈಸಿಗಳು ಸೇರ್ಪಡೆಯಾಗುತ್ತಿರುವುದರಿಂದ ಟೂರ್ನಿ ಆರಂಭಕ್ಕೂ ಮುನ್ನ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಹೌದು, ಡಿಸೆಂಬರ್ ಅಂತಿಮ ವಾರ ಅಥವಾ ಜನವರಿಯ ಮೊದಲನೇ ವಾರದಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದ್ದು, ಇದಕ್ಕೂ ಮುನ್ನ ಅಸ್ತಿತ್ವದಲ್ಲಿರುವ 8 ಫ್ರಾಂಚೈಸಿಗಳು ತಂಡಕ್ಕೆ ಅಗತ್ಯವಿರುವ ಒಟ್ಟು 4 ಆಟಗಾರರನ್ನು ತಂಡದಲ್ಲಿಯೇ ಉಳಿಸಿಕೊಂಡು ಉಳಿದ ಆಟಗಾರರನ್ನು ಮೆಗಾ ಹರಾಜಿಗೆ ಕಳುಹಿಸಬೇಕಾದ ಅನಿವಾರ್ಯತೆ ಇತ್ತು. ಹೀಗಾಗಿ ನವೆಂಬರ್ 30ರ ರಾತ್ರಿ ನಡೆದ ರಿಟೆನ್ಷನ್ ಕಾರ್ಯಕ್ರಮದಲ್ಲಿ ಅಸ್ತಿತ್ವದಲ್ಲಿರುವ 8 ಫ್ರಾಂಚೈಸಿಗಳು ಸಲ್ಲಿಸಿದ್ದ ತಮಗೆ ಬೇಕಾದ ಆಟಗಾರರ ರಿಟೆನ್ಷನ್ ಪಟ್ಟಿಯನ್ನು ಘೋಷಣೆ ಮಾಡಲಾಯಿತು.

IPL 2022: ಫ್ರಾಂಚೈಸಿಗಳು ರೀಟೈನ್ ಮಾಡಿಕೊಳ್ಳದ ಭಾರತ ಹಾಗೂ ವಿದೇಶಿ ಸ್ಟಾರ್ ಆಟಗಾರರುIPL 2022: ಫ್ರಾಂಚೈಸಿಗಳು ರೀಟೈನ್ ಮಾಡಿಕೊಳ್ಳದ ಭಾರತ ಹಾಗೂ ವಿದೇಶಿ ಸ್ಟಾರ್ ಆಟಗಾರರು

ಈ ರಿಟೆನ್ಷನ್ ಕಾರ್ಯಕ್ರಮ ನಡೆಯುವ ಮುನ್ನ ಹಲವಾರು ಕ್ರಿಕೆಟ್ ಪ್ರೇಕ್ಷಕರು ಮತ್ತು ಕ್ರೀಡಾ ಪಂಡಿತರು ಊಹಿಸಿದಂತೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ತನ್ನ ತಂಡದ ಪ್ರಮುಖ 4 ಆಟಗಾರರಿಗೆ ಮಣೆ ಹಾಕಿದೆ. ಹೌದು, ಚೆನ್ನೈ ಸೂಪರ್ ಕಿಂಗ್ಸ್ ರವೀಂದ್ರ ಜಡೇಜಾ, ಎಂಎಸ್ ಧೋನಿ, ಮೊಯಿನ್ ಅಲಿ ಮತ್ತು ರುತುರಾಜ್ ಗಾಯಕ್ವಾಡ್ ಈ 4 ಆಟಗಾರರನ್ನು ರಿಟೇನ್ ಮಾಡಿಕೊಂಡಿದೆ. ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಉತ್ತಮ ಪ್ರದರ್ಶನ ನೀಡುವ ಮೂಲಕ ಟ್ರೋಫಿಯನ್ನು ಎತ್ತಿ ಹಿಡಿಯುವಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ರಿಟೇನ್ ಮಾಡಿಕೊಂಡಿರುವ ಈ 4 ಆಟಗಾರರು ಪ್ರಮುಖ ಪಾತ್ರ ನಿರ್ವಹಿಸಿದ್ದರು. ಅಷ್ಟೇ ಅಲ್ಲದೆ ಕಳೆದ ಕೆಲ ಐಪಿಎಲ್ ಟೂರ್ನಿಗಳಲ್ಲಿ ಈ 4 ಆಟಗಾರರು ತಂಡಕ್ಕೆ ನೀಡಿರುವ ಕೊಡುಗೆಯೇ ಅವರಿಗೆ ಈಗ ತಂಡದಲ್ಲಿ ಸ್ಥಾನ ಸಿಗುವುದಕ್ಕೆ ಕಾರಣವಾಗಿದೆ.

ರಾಜಸ್ತಾನ್ ರಾಯಲ್ಸ್ ತಂಡದಲ್ಲಿ ಮೂವರು ಆಟಗಾರರಿಗೆ ಮಣೆ: ಸಂಜು ಸ್ಯಾಮನ್ಸ್‌ಗೆ 14 ಕೋಟಿರಾಜಸ್ತಾನ್ ರಾಯಲ್ಸ್ ತಂಡದಲ್ಲಿ ಮೂವರು ಆಟಗಾರರಿಗೆ ಮಣೆ: ಸಂಜು ಸ್ಯಾಮನ್ಸ್‌ಗೆ 14 ಕೋಟಿ

ಇನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಈ 4 ಆಟಗಾರರನ್ನು ಉಳಿಸಿಕೊಂಡಿದೆ ಎಂಬ ಸುದ್ದಿ ಹೊರ ಬಿದ್ದಾಗ ಯಾರಿಗೂ ಸಹ ಹೆಚ್ಚೇನೂ ಆಶ್ಚರ್ಯವಾಗಲಿಲ್ಲ. ಕಾರಣ ಈ ಆಟಗಾರರನ್ನು ಚೆನ್ನೈ ಫ್ರಾಂಚೈಸಿ ಉಳಿಸಿಕೊಳ್ಳಲಿದೆ ಎಂಬುದನ್ನು ಹಲವಾರು ಮಂದಿ ಹಿಂದೆಯೇ ಸರಿಯಾಗಿ ಊಹಿಸಿದ್ದರು. ಆದರೆ ಎಂ ಎಸ್ ಧೋನಿಗೆ ನೀಡಿರುವ ಆದ್ಯತೆ ಮತ್ತು ಮೊತ್ತ ಸದ್ಯ ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿವೆ. ಹೌದು, ಕಳೆದ ನಾಲ್ಕೈದು ವರ್ಷಗಳಿಂದ ದೊಡ್ಡ ಮೊತ್ತ ಪಡೆಯುತ್ತಿದ್ದ ಎಂಎಸ್ ಧೋನಿ ಈ ಬಾರಿ ತುಸು ಕಡಿಮೆ ಮೊತ್ತಕ್ಕೆ ರಿಟೇನ್ ಆಗಿರುವುದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆದರೆ ಎಂಎಸ್ ಧೋನಿಗೆ ಈ ರೀತಿ ಕಡಿಮೆ ಮೊತ್ತದ ಸಂಭಾವನೆ ಸಿಗುತ್ತಿರುವುದರ ಹಿಂದೆಯೂ ಕೂಡ ಕಾರಣ ಇದ್ದು ಅದರ ವಿವರ ಈ ಕೆಳಕಂಡಂತಿದೆ..

3 ಕೋಟಿ ಕಡಿಮೆ ಮೊತ್ತಕ್ಕೆ ರಿಟೈನ್ ಆದ ಎಂ ಎಸ್ ಧೋನಿ

3 ಕೋಟಿ ಕಡಿಮೆ ಮೊತ್ತಕ್ಕೆ ರಿಟೈನ್ ಆದ ಎಂ ಎಸ್ ಧೋನಿ

ಈ ಬಾರಿ ನಡೆದ ರಿಟೆನ್ಷನ್ ಪ್ರಕ್ರಿಯೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ತಮ್ಮ ತಂಡದ ನಾಯಕ ಎಂಎಸ್ ಧೋನಿಗೆ 12 ಕೋಟಿ ಸಂಭಾವನೆಯನ್ನು ನೀಡುವುದರ ಮೂಲಕ ರಿಟೈನ್ ಮಾಡಿಕೊಂಡಿದೆ. ಈ ಮೂಲಕ ಎಂಎಸ್ ಧೋನಿ 5 ವರ್ಷಗಳ ಬಳಿಕ 15 ಕೋಟಿಗಿಂತ ಕಡಿಮೆ ಮೊತ್ತದ ಸಂಭಾವನೆಯನ್ನು ಪಡೆಯುತ್ತಿದ್ದಾರೆ. ಹೌದು, 2018, 2019, 2020 ಮತ್ತು 2021ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ಎಂಎಸ್ ಧೋನಿ 15 ಕೋಟಿ ಸಂಭಾವನೆಯನ್ನು ಪಡೆದಿದ್ದರು. ಆದರೆ ಈ ಬಾರಿ ಎಂ ಎಸ್ ಧೋನಿ 12 ಕೋಟಿಗೆ ರಿಟೇನ್ ಆಗಿದ್ದು ಮಾತ್ರವಲ್ಲದೆ ತಂಡದ ಆದ್ಯತೆಯ ಎರಡನೇ ಆಟಗಾರನಾಗಿ ರಿಟೇನ್ ಆಗಿರುವುದು ಅಚ್ಚರಿ ಮೂಡಿಸಿದೆ.

ರವೀಂದ್ರ ಜಡೇಜಾಗೋಸ್ಕರ ಕಡಿಮೆ ಮೊತ್ತ ಪಡೆದ ಎಂ ಎಸ್ ಧೋನಿ

ರವೀಂದ್ರ ಜಡೇಜಾಗೋಸ್ಕರ ಕಡಿಮೆ ಮೊತ್ತ ಪಡೆದ ಎಂ ಎಸ್ ಧೋನಿ

ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿಯ ರಿಟೆನ್ಷನ್ ಪ್ರಕ್ರಿಯೆಯಲ್ಲಿ ರವೀಂದ್ರ ಜಡೇಜಾಗೆ 15 ಕೋಟಿ, ಎಂ ಎಸ್ ಧೋನಿಗೆ 12 ಕೋಟಿ, ಮೊಯಿನ್ ಅಲಿಗೆ 8 ಕೋಟಿ ಮತ್ತು ರುತುರಾಜ್ ಗಾಯಕ್ವಾಡ್‌ಗೆ 6 ಕೋಟಿ ನೀಡಿ ತಂಡದಲ್ಲಿಯೇ ಉಳಿಸಿಕೊಂಡಿದೆ. ಹೀಗೆ ಎಂಎಸ್ ಧೋನಿಗಿಂತ ರವೀಂದ್ರ ಜಡೇಜಾಗೆ ಹೆಚ್ಚಿನ ಆದ್ಯತೆ ಮತ್ತು ಮೊತ್ತ ಸಿಕ್ಕಿದ್ದು, ಇದರ ಹಿಂದಿನ ಕಾರಣವನ್ನು ತಂಡದ ಬೌಲಿಂಗ್ ಕೋಚ್ ಲಕ್ಷ್ಮಿಪತಿ ಬಾಲಾಜಿ ಬಿಚ್ಚಿಟ್ಟಿದ್ದಾರೆ. ಎಂಎಸ್ ಧೋನಿ ಅವರೇ ರವೀಂದ್ರ ಜಡೇಜಾಗೆ ರಿಟೆನ್ಷನ್ ಪ್ರಕ್ರಿಯೆಯಲ್ಲಿ ಪ್ರಥಮ ಸ್ಥಾನವನ್ನು ಬಿಟ್ಟುಕೊಟ್ಟರು, ಓರ್ವ ನಾಯಕನಾಗಿ ತಂಡಕ್ಕೆ ಏನು ಬೇಕಿದೆ ಎಂಬುದು ಧೋನಿಯವರಿಗೆ ಚೆನ್ನಾಗಿ ತಿಳಿದಿದೆ ಎಂದು ಲಕ್ಷ್ಮೀಪತಿ ಬಾಲಾಜಿ ತಿಳಿಸಿದರು.

ವಿರಾಟ್,ಧೋನಿಗಿಂತ ಅಧಿಕ ಮೊತ್ತಕ್ಕೆ ಸೇಲಾದ ಜಡೇಜಾ | Oneindia Kannada
ಚೆನ್ನೈನಲ್ಲಿಯೇ ತನ್ನ ಕೊನೆಯ ಐಪಿಎಲ್ ಪಂದ್ಯವನ್ನು ಆಡುವ ಆಸೆ ವ್ಯಕ್ತಪಡಿಸಿದ್ದ ಧೋನಿ

ಚೆನ್ನೈನಲ್ಲಿಯೇ ತನ್ನ ಕೊನೆಯ ಐಪಿಎಲ್ ಪಂದ್ಯವನ್ನು ಆಡುವ ಆಸೆ ವ್ಯಕ್ತಪಡಿಸಿದ್ದ ಧೋನಿ

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಚಾಂಪಿಯನ್ಸ್ ಆಗಿ ಹೊರಹೊಮ್ಮಿದ ನಂತರ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಂ ಎಸ್ ಧೋನಿ ತನ್ನ ಕೊನೆಯ ಐಪಿಎಲ್ ಪಂದ್ಯವನ್ನು ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಆಡುವ ಆಸೆಯನ್ನು ವ್ಯಕ್ತಪಡಿಸಿದ್ದರು. ಈ ಮೂಲಕ ತಮ್ಮ ಮತ್ತು ತಮ್ಮ ನೆಚ್ಚಿನ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಇರುವ ಉತ್ತಮ ಸಂಬಂಧವನ್ನು ಎಂಎಸ್ ಧೋನಿ ಮತ್ತೊಮ್ಮೆ ಬಹಿರಂಗಪಡಿಸಿದ್ದರು.

Story first published: Wednesday, December 1, 2021, 10:45 [IST]
Other articles published on Dec 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X