ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2022: ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ತೊರೆಯಲು ಸಜ್ಜಾದ ಶ್ರೇಯಸ್ ಐಯ್ಯರ್

IPL 2022 Retention News: Shreyas Iyer set to leave Delhi Capitals eyeing leadership role in other teams

ಮುಂದಿನ ಐಪಿಎಲ್ ಆವೃತ್ತಿಗೂ ಮುನ್ನ ಮಹಾ ಹರಾಜು ಪ್ರಕ್ರಿಯೆ ನಡೆಯಲಿದ್ದು ಈ ಬಗ್ಗೆ ಈಗಾಗಲೇ ಸಾಕಷ್ಟು ಚುರುಕಿನ ಬೆಳವಣಿಗೆಗಳು ನಡೆಯುತ್ತಿದೆ. ಹರಾಜು ಪ್ರಕ್ರಿಯೆಗೆ ಸಂಬಂದಿಸಿದ ನಿಯಮಗಳನ್ನು ಬಿಸಿಸಿಐ ಈಗಾಗಲೇ ಸಿದ್ಧಪಡಿಸಿದೆ. ಎರಡು ಹೊಸ ತಂಡಗಳು ಕೂಡ ಈ ಬಾರಿ ಸೇರ್ಪಡೆಯಾಗುತ್ತಿರುವುದರಿಂದಾಗಿ ಪೈಪೋಟಿ ಮತ್ತಷ್ಟು ಹೆಚ್ಚಾಗಲಿದೆ. ಈಗಾಗಲೇ ಇರುವ 8 ತಂಡಗಳು ಯಾವ್ಯಾವ ಆಟಗಾರರನ್ನು ಉಳಿಸಿಕೊಳ್ಳಬೇಕು ಎಂಬ ಲೆಕ್ಕಾಚಾರದಲ್ಲಿ ತೊಡಗಿಸಿಕೊಂಡಿದೆ.

ಈ ಸಂದರ್ಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕಡೆಯಿಂದ ಅಚ್ಚರಿಯ ಸುದ್ದಿಯೊಂದು ಲಭ್ಯವಾಗುತ್ತಿದೆ. ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಹಂಗಾಮಿ ನಾಯಕನಾಗಿ ಕಾರ್ಯ ನಿರ್ವಹಿಸಿದ್ದ ರಿಷಬ್ ಪಂತ್ ಅವರನ್ನೇ ತಂಡ ಖಾಯಂ ನಾಯಕನಾಗಿ ಮುಂದುವರಿಸಲು ಬಯಸಿದ್ದು ಶ್ರೇಯಸ್ ಐಯ್ಯರ್ ಫ್ರಾಂಚೈಸಿಯನ್ನು ತೊರೆಯಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಪಾಕ್ ವಿರುದ್ಧ ಭಾರತ ಸೋತ ಬಳಿಕ ವಿರೇಂದ್ರ ಸೆಹ್ವಾಗ್ ಪ್ರಕಾರ ಈ ಬಾರಿ ಟ್ರೋಫಿ ಗೆಲ್ಲಲಿರುವ ತಂಡವಿದುಪಾಕ್ ವಿರುದ್ಧ ಭಾರತ ಸೋತ ಬಳಿಕ ವಿರೇಂದ್ರ ಸೆಹ್ವಾಗ್ ಪ್ರಕಾರ ಈ ಬಾರಿ ಟ್ರೋಫಿ ಗೆಲ್ಲಲಿರುವ ತಂಡವಿದು

ಶ್ರೇಯಸ್ ಐಯ್ಯರ್ ಈ ಬಾರಿಯ ಐಪಿಎಲ್ ಆವೃತ್ತಿಯ ಆರಂಭಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧಧ ಸರಣಿಯಲ್ಲಿ ಬೆನ್ನು ನೋವಿಗೆ ಒಳಗಾದ ಕಾರಣದಿಂದಾಗಿ ಐಪಿಎಲ್‌ನ ಮೊದಲ ಚರನದ ಪಂದ್ಯಗಳಿಮದ ಹೊರಗುಳಿಯಬೇಕಾಯಿತ್ತು. ಈ ಸಂದರ್ಭದಲ್ಲಿ ಫ್ರಾಂಚೈಸಿ ರಿಷಭ್ ಪಂತ್ ಅವರನ್ನು ತಂಡದ ಹಂಗಾಮಿ ನಾಯಕನಾಗಿ ನೇಮಕವಾದರು. ಪಂತ್ ನೇತೃತ್ವದಲ್ಲಿ ತಂಡ ಅದ್ಭುತವಾದ ಪ್ರದರ್ಶನ ನಿಡಲು ಯಶಸ್ವಿಯಾಗುತ್ತು. ಅಲ್ಲದೆ ನಾಯಕನಾಗಿಯೂ ಪಂತ್ ಸಾಧನೆ ಗಮನಾರ್ಹವಾಗಿತ್ತು.

ಕೊರಿನಾ ವೈರಸ್‌ನ ಕಾರಣದಿಂದಾಗಿ ಐಪಿಎಲ್‌ನ ಎರಡನೇ ಚರಣ ತಡವಾಗಿ ದುಬೈನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಶ್ರೇಯಸ್ ಐಯ್ಯರ್ ಲಭ್ಯವಿದ್ದರೂ ರಿಷಭ್ ಪಂತ್ ಅವರನ್ನೇ ನಾಯಕನನ್ನಾಗಿ ಮುಂದುವರಿಸಿತ್ತು ಫ್ರಾಂಚೈಸಿ. ಇದೀಗ ರಿಷಭ್ ಪಂತ್ ಅವರನ್ನು ಪೂರ್ಣ ಪ್ರಮಾಣದ ನಾಯಕನನ್ನಾಗಿ ಮಾಡಲು ಡೆಲ್ಲಿ ಕ್ಯಾಪಟಿಲ್ಸ್ ಫ್ರಾಂಚೈಸಿ ಒಲವು ಹೊಂದಿದೆ ಎಂದು ಮೂಲಗಳು ಮಾಹಿತಿ ನೀಡಿದೆ. ಈ ಮಧ್ಯೆ ಶ್ರೇಯಸ್ ಐಯ್ಯರ್ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯನ್ನೇ ತೊರೆಯಲಿದ್ದಾರೆ ಎಂಬ ವರದಿಗಳು ಕೂಡ ಲಭ್ಯವಾಗುತ್ತಿದೆ. ಶ್ರೇಯಸ್ ಐಯ್ಯರ್ ತಂಡವೊಂದರ ನಾಯಕನಾಗುವತ್ತ ಚಿತ್ತ ಹರಿಸಿದ್ದಾರೆ ಎಂದು ಶ್ರೇಯಸ್ ಐಯ್ಯರ್ ಅವರ ಆಪ್ತ ವಲಯದಿಂದ ಮಾಹಿತಿಗಳು ಲಭ್ಯವಾಗುತ್ತಿದೆ.

ಟಿ20 ವಿಶ್ವಕಪ್: ಟೀಮ್ ಇಂಡಿಯಾದ 6ನೇ ಬೌಲರ್‌ನ ಸಮಸ್ಯೆಗೆ ಸಿಕ್ಕಿತು ಉತ್ತರ!ಟಿ20 ವಿಶ್ವಕಪ್: ಟೀಮ್ ಇಂಡಿಯಾದ 6ನೇ ಬೌಲರ್‌ನ ಸಮಸ್ಯೆಗೆ ಸಿಕ್ಕಿತು ಉತ್ತರ!

ಕನ್ನಡಿಗ KL ರಾಹುಲ್ ಗೆ ಬಿಗ್ ಶಾಕ್ ಕೊಟ್ಟ ಪಂಜಾಬ್ ಟೀಂನ ಮಾಲೀಕ | Oneindia Kannada

ಶ್ರೇಯಸ್ ಐಯ್ಯರ್ ಅವರ ನಾಯಕತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಹಿಂದಿನ ಎರಡು ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿತ್ತು. ಐಯ್ಯರ್ ನಾಯಕತ್ವದಲ್ಲಿಯೇ ಡೆಲ್ಲಿ 2020ರಲ್ಲಿ ತನ್ನ ಚೊಚ್ಚಲ ಫೈನಲ್ ಪ್ರವೇಶವನ್ನು ಪಡೆದುಕೊಂಡಿತ್ತು. ಹೀಗಾಗಿ ನಾಯಕನಾಗಿ ಯಶಸ್ಸು ಸಾಧಿಸಿರುವ ಶ್ರೇಯಸ್ ಐಯ್ಯರ್ ಮುಂದಿನ ಐಪಿಎಲ್ ಆವೃತ್ತಿಗೆ ಯಾವುದಾದರೂ ತಂಡದ ನಾಯಕತ್ವ ವಹಿಸಲು ಸಿದ್ಧರಾಗಿದ್ದಾರೆ. ರಾಜಸ್ಥಾನ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಂದಿನ ಆವೃತ್ತಿಗೆ ಹೊಸ ನಾಯಕನತ್ತ ಚಿತ್ತ ನಡೆಸುವ ಸಾಧ್ಯತೆಯಿದ್ದು ಶ್ರೇಯಸ್ ಐಯ್ಯರ್‌ಗೆ ಈ ಅವಕಾಶದ ಜೊತೆಗೆ ಎರಡು ಹೊಸ ತಂಡಗಳು ಸೇರ್ಪಡೆಯಾಗುತ್ತಿರುವುದು ಕೂಡ ಅವಕಾಶ ಹೆಚ್ಚಿಸಿದೆ.

Story first published: Friday, October 29, 2021, 10:39 [IST]
Other articles published on Oct 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X