ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ರೀಟೆನ್ಶನ್, ಪಂಜಾಬ್ ಕಿಂಗ್ಸ್: ಇಬ್ಬರು ಆಟಗಾರರನ್ನು ರೀಟೈನ್ ಮಾಡಿದ PBKS

IPL 2022 retention: Punjab Kings retained players list with price cap

ಸಾಕಷ್ಟು ಕುತೂಹಲ ಕೆರಳಿಸಿದ್ದ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಮುಂದಿನ ಮೆಗಾ ಆಕ್ಷನ್‌ಗೂ ಮುನ್ನ ಕೇವಲ ಇಬ್ಬರು ಆಟಗಾರರನ್ನು ಮಾತ್ರವೇ ತಂಡದಲ್ಲಿ ಉಳಿಸಿಕೊಂಡಿದೆ. ಪ್ರಮುಖ ಆಟಗಾರನಾಗ ಮಯಾಂಕ್ ಅಗರ್ವಾಲ್ ಅವರನ್ನು ಫ್ರಾಂಚೈಸಿ ಉಳಿಸಿಕೊಂಡಿದ್ದರೆ ಪಂಜಾಬ್ ಉಳಿಸಿಕೊಂಡಿರುವ ಮತ್ತೋರ್ವ ಆಟಗಾರ ಅರ್ಷದೀಪ್ ಸಿಂಗ್.

ಮಯಾಂಕ್ ಅಗರ್ವಾಲ್‌ಗೆ ಪಂಜಾಬ್ ಮೂಲದ ಫ್ರಾಂಚೈಸಿ 14 ಕೋಟಿ ನಿಗದಿಪಡಿಸಿದೆ. ಇನ್ನು ಯುವ ಆಟಗಾರ ಅರ್ಷದೀಪ್ ಅವರಿಗೆ 4 ಕೋಟಿ ರೂಪಾಯಿ ನೀಡಿ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಈ ಮೂಲಕ ಕೇವಲ ಇಬ್ಬರು ಆಟಗಾರರನ್ನು ಮಾತ್ರವೇ ಪಂಜಾಬ್ ಕಿಂಗ್ಸ್ ತಂಡ ರೀಟೈನ್ ಮಾಡಿಕೊಂಡಿದೆ. ಈ ಮೂಲಕ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ.

ಇನ್ನು ಕೇವಲ ಇಬ್ಬರು ಆಟಗಾರರನ್ನು ಮಾತ್ರವೇ ರೀಟೈನ್ ಮಾಡಿಕೊಳ್ಳುವ ಮೂಲಕ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಮುಂದಿನ ಹರಾಜಿಗೆ ಭಾರೀ ಮೊತ್ತವನ್ನು ಪರ್ಸ್‌ನಲ್ಲಿ ಉಳಿಸಿಕೊಂಡಿದೆ. ಬರೊಬ್ಬರಿ 72 ಕೋಟಿ ರೂಪಾಯಿ ಮೊತ್ತ ಪಂಜಾಬ್ ಕಿಂಗ್ಸ್ ತಂಡಕ್ಕೆ ಹರಾಜು ಪ್ರಕ್ರಿಯೆಯಲ್ಲಿ ಲಭ್ಯವಾಗಲಿದೆ. ಇದನ್ನು ಫ್ರಾಂಚೈಸಿ ಎಷ್ಟು ಪರಿಣಾಮಕಾರಿಯಾಗಿ ಉಳಿಸಿಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

ಹರಾಜಿಗೆ ಹೋಗಲು ನಿರ್ಧರಿಸಿದ ಕೆಎಲ್ ರಾಹುಲ್: ಇನ್ನು ಈ ಬಾರಿಯ ಐಪಿಎಲ್‌ನ ರೀಟೆನ್ಶನ್‌ನಿಂದ ಕೆಎಲ್ ರಾಹುಲ್ ಸ್ವತಃ ಹೊರಗುಳಿಯಲು ನಿರ್ಧರಿಸಿದ್ದಾರೆ. ತಂಡದ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಈ ಬಗ್ಗೆ ಹೇಳಿಕೊಂಡಿದ್ದಾರೆ. ಕೆಎಲ್ ರಾಹುಲ್ ಅವರನ್ನು ರೀಟೈನ್ ಮಾಡಿಕೊಳ್ಳಲು ಬಯಸಿದ್ದೆವು, ಆದರೆ ಸ್ವತಃ ಅವರೇ ಹರಾಜು ಪ್ರಕ್ರಿಯೆಗೆ ಭಾಗಿಯಾಗಲು ನಿರ್ಧರಿಸಿದ್ದಾರೆ, ಅವರ ನಿರ್ಧಾರವನ್ನು ನಾವು ಗೌರವಿಸುತ್ತೇವೆ ಎಂದಿದ್ದಾರೆ ಅನಿಲ್ ಕುಂಬ್ಳೆ.

ಇನ್ನು ಕೆಎಲ್ ರಾಹುಲ್ ಅಲ್ಲದೆ ಇನ್ನೂ ಕೆಲ ಪ್ರಮುಖ ಆಟಗಾರರು ತಂಡದ ಹರಾಜಿನಲ್ಲಿ ಭಾಗಿಯಾಗಲಿದ್ದಾರೆ. ಯುವ ಆಟಗಾರ ಶಾರೂಖ್‌ಖಾನ್, ಮೊಹಮ್ಮದ್ ಶಮಿ, ಏಡೆನ್ ಮಾರ್ಕ್ರಾಮ್, ರವಿ ಬಿಷ್ಣೋಯ್ ಹರಾಜಿನಲ್ಲಿ ಭಾಗಿಯಾಗಲಿರುವ ಪಂಜಾಬ್ ಕಿಂಗ್ಸ್ ತಂಡ ಕೆಲ ಪ್ರಮುಖ ಆಟಗಾರರಾಗಿದ್ದಾರೆ. ಕ್ರಿಸ್ ಗೇಲ್ ಮುಂದಿನ ಐಪಿಎಲ್‌ನಲ್ಲಿ ಭಾಗಿಯಾಗಲು ನಿರ್ಧರಿಸಿದರೆ ಅವರು ಕೂಡ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ.

ಇನ್ನು ಕೆಎಲ್ ರಾಹುಲ್ ಅಲ್ಲದೆ ಇನ್ನೂ ಕೆಲ ಪ್ರಮುಖ ಆಟಗಾರರು ತಂಡದ ಹರಾಜಿನಲ್ಲಿ ಭಾಗಿಯಾಗಲಿದ್ದಾರೆ. ಯುವ ಆಟಗಾರ ಶಾರೂಖ್‌ಖಾನ್, ಮೊಹಮ್ಮದ್ ಶಮಿ, ಏಡೆನ್ ಮಾರ್ಕ್ರಾಮ್, ರವಿ ಬಿಷ್ಣೋಯ್ ಹರಾಜಿನಲ್ಲಿ ಭಾಗಿಯಾಗಲಿರುವ ಪಂಜಾಬ್ ಕಿಂಗ್ಸ್ ತಂಡ ಕೆಲ ಪ್ರಮುಖ ಆಟಗಾರರಾಗಿದ್ದಾರೆ. ಕ್ರಿಸ್ ಗೇಲ್ ಮುಂದಿನ ಐಪಿಎಲ್‌ನಲ್ಲಿ ಭಾಗಿಯಾಗಲು ನಿರ್ಧರಿಸಿದರೆ ಅವರು ಕೂಡ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ.

ಇನ್ನು ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಈ ಹರಾಜಿನಲ್ಲಿ ಕೇವಲ ಇಬ್ಬರು ಆಟಗಾರರನ್ನು ಮಾತ್ರವೇ ಉಳಿಸಿಕೊಂಡಿದೆ. ಈ ಮೂಲಕ ರೀಟೈನ್‌ನಲ್ಲಿ ಕಡಿಮೆ ಆಟಗಾರರನ್ನು ರೀಟೈನ್ ಮಾಡಿದ ತಂಡ ಎನಿಸಿಕೊಂಡಿದೆ. ಈ ಕಾರಣದಿಂದಾಗಿ ಮುಂದಿನ ಹರಾಜು ಪ್ರಕ್ರಿಯೆಯಲ್ಲಿ ಆಟಗಾರರ ಮೇಲೆ ಹೂಡಿಕೆ ಮಾಡಲು ಅತಿ ಹೆಚ್ಚಿನ ಮೊತ್ತವನ್ನು ಪರ್ಸ್‌ನಲ್ಲಿ ಉಳಿಸಿಕೊಂಡ ತಂಡವೂ ಪಂಜಾಬ್ ಕಿಂಗ್ಸ್ ಆಗಿದೆ. ಪಂಜಾಬ್ ಕಿಂಗ್ಸ್ ಪರ್ಸ್‌ನಲ್ಲಿ ಈಗ ಭರ್ತಿ 72 ಕೋಟಿ ರೂಪಾಯಿಗಳು ಉಳಿದುಕೊಂಡಿದೆ. ಹೀಗಾಗಿ ಮುಂದಿನ ಹರಾಜು ಪ್ರಕ್ರಿಯೆಯಲ್ಲಿ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯ ಪಾತ್ರ ಬಹಳ ಮುಖ್ಯವಾಗಿದೆ.

ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಬಿಡುಗಡೆಗೊಳಿಸಿರುವ ಆಟಗಾರರ ಪಟ್ಟಿ: ಕೆಎಲ್ ರಾಹುಲ್, ಕ್ರಿಸ್ ಗೇಲ್, ಏಡೆನ್ ಮಾರ್ಕ್ರಾಮ್, ಸರ್ಫರಾಜ್ ಖಾನ್, ಶಾರುಖ್ ಖಾನ್, ಮೊಯಿಸಸ್ ಹೆನ್ರಿಕ್ಸ್, ಕ್ರಿಸ್ ಜೋರ್ಡಾನ್, ಹರ್‌ಪ್ರೀತ್ ಬ್ರಾರ್, ಮೊಹಮ್ಮದ್ ಶಮಿ, ರವಿ ಬಿಷ್ಣೋಯ್, ಆದಿಲ್ ರಶೀದ್, ಮನ್‌ದೀಪ್ ಸಿಂಗ್, ಜಲಜ್ ಸಕ್ಸೇನಾ, ದೀಪಕ್ ಹೂಡಾ, ಫ್ಯಾಬಿಯನ್ ಅಲೆನ್, ಸೌರಭ್ ಕುಮಾರ್ ಇಶಾನ್ ಪೊರೆಲ್, ಉತ್ಕರ್ಷ್ ಸಿಂಗ್, ದರ್ಶನ್ ನಲ್ಕಂಡೆ, ಪ್ರಬ್‌ಸಿಮ್ರಾನ್ ಸಿಂಗ್, ನಾಥನ್ ಎಲ್ಲಿಸ್, ಮುರುಗನ್ ಅಶ್ವಿನ್, ನಿಕೋಲಸ್ ಪೂರನ್

Story first published: Wednesday, December 1, 2021, 10:31 [IST]
Other articles published on Dec 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X