ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2022 ರಿಟೆನ್ಶನ್: ಆರ್‌ಸಿಬಿ ಉಳಿಸಿಕೊಳ್ಳಲಿರುವ ಆ ನಾಲ್ಕು ಆಟಗಾರರು ಯಾರು?

IPL 2022 Retention: RCB Predicted Retention List 2022

ಟಿ20 ವಿಶ್ವಕಪ್ ಅಂತ್ಯವಾದ ಬಳಿಕ ಭಾರತ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಭಾಗಿಯಾಗಿದೆ. ಆದರೆ ಐಪಿಎಲ್ ಅಭಿಮಾನಿಗಳು ಈಗ ಮುಂದಿನ ಆವೃತ್ತಿಯ ಐಪಿಎಲ್‌ನ ಲೆಕ್ಕಾಚಾರದಲ್ಲಿದ್ದಾರೆ. ಮುಂದಿನ ಆವೃತ್ತಿಗೆ ಮಹಾ ಹರಾಜು ಪ್ರಕ್ರಿಯೆ ನಡೆಯಲಿದ್ದು ಯಾವೆಲ್ಲಾ ಆಟಗಾರರು ಆಯಾಯ ತಂಡದಲ್ಲಿ ಉಳಿದುಕೊಳ್ಳಲಿದ್ದಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಅದರಲ್ಲೂ ಬೆಂಗಳೂರು ಮೂಲದ ಆರ್‌ಸಿಬಿ ತಂಡದಲ್ಲಿ ಈ ಬಾರಿ ಯಾವೆಲ್ಲಾ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಬಹುದು ಎಂಬುದು ಕುತೂಹಲ ಹೆಚ್ಚಿಸಿದೆ.

ಇನ್ನು ಈ ಬಾರಿಯ ಐಪಿಎಲ್ ಹರಾಜಿಗೂ ಮುನ್ನ ವಿರಾಟ್ ಕೊಹ್ಲಿಯನ್ನು ರೀಟೆನ್ಶನ್ ಮಾಡಿಕೊಳ್ಳುವುದು ಖಚಿತ. ಅನುಭವು ಎಬಿ ಡಿವಲಿಯರ್ಸ್ ಕೂಡ ಆರ್‌ಸಿಬಿ ತಮಡದ ಭಾಗವಾಗಿಯೇ ಮುಂದುವರಿಯಲಿದ್ದಾರೆ. ಹೀಗಾಗಿ ಈ ಎರಡು ಆಟಗಾರರು ಆರ್‌ಸಿಬಿ ತಂಡದಲ್ಲಿ ಮುಂದುವರಿಯುವುದು ನಿಸ್ಸಂಶಯ. ಅಲ್ಲದೆ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡದ ನಾಯಕತ್ವ ತೊರತೆದಿರುವುದರಿಂದಾಗಿ ಎಬಿ ಡಿವಲಿಯರ್ಸ್ ಆರ್‌ಸಿಬಿ ತಂಡದ ನಾಯಕನಾಗಿಯೂ ಮುಂದುವರಿಯುವ ಅವಕಾಶವಿದೆ. ಕನಿಷ್ಟ ಮುಂದಿನ ಎರಡು ಆವೃತ್ತಿಗಳಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಅವರಲ್ಲಿದೆ. ಹೀಗಾಗಿ ಈ ಆಯ್ಕೆ ಬಹಳ ಮುಖ್ಯವಾಗಿದೆ. ಇನ್ನು ಉಳಿದ ಎರಡು ರಿಟೆನ್ಶನ್‌ಗಳು ಬಹಳ ಕುತೂಹಲಕಾರಿಯಾಗಿದೆ.

ಕೊಹ್ಲಿ ಅನುಪಸ್ಥಿತಿಯಲ್ಲಿ ವಿರಾಟ ರೂಪ ಪ್ರದರ್ಶಿಸಿದ ಸೂರ್ಯಕುಮಾರ್: 3ನೇ ಕ್ರಮಾಂಕಕ್ಕೆ ಎದುರಾಯ್ತು ಕಠಿಣ ಸ್ಪರ್ಧೆ!ಕೊಹ್ಲಿ ಅನುಪಸ್ಥಿತಿಯಲ್ಲಿ ವಿರಾಟ ರೂಪ ಪ್ರದರ್ಶಿಸಿದ ಸೂರ್ಯಕುಮಾರ್: 3ನೇ ಕ್ರಮಾಂಕಕ್ಕೆ ಎದುರಾಯ್ತು ಕಠಿಣ ಸ್ಪರ್ಧೆ!

ಆರ್‌ಸಿಬಿ ತಂಡ ಸಾಕಷ್ಟು ಸ್ಟಾರ್ ಆಟಗಾರರನ್ನು ಹೊಂದಿದೆ. ಪ್ರತಿಭಾವಂತ ಆಟಗಾರರು ತಂಡದಲ್ಲಿದ್ದಾರೆ. ಹೀಗಿದ್ದಾಗ ರಿಟೆನ್ಶನ್ ಮೂಲಕ ತಂಡದಲ್ಲಿ ಸ್ಥಾನ ಪಡೆಯಲಿರುವ ಆಟಗಾರ ಯಾರು ಎಂಬುದು ಕುತೂಹಲ ಮೂಡಿಸಿದೆ. ಈ ನಾಲ್ಕು ರಿಟೆನ್ಶನ್‌ಗೆ 42 ಕೋಟಿ ರೂಪಾಯಿಯನ್ನು ಬಳಸಿಕೊಳ್ಳಬೇಕಿದೆ.

ವಿರಾಟ್ ಕೊಹ್ಲಿ-(16 ಕೋಟಿ)

ವಿರಾಟ್ ಕೊಹ್ಲಿ-(16 ಕೋಟಿ)

ಆರ್‌ಸಿಬಿ ತಂಡದ ನಿರ್ಗಮಿತ ನಾಯಕ ವಿರಾಟ್ ಕೊಹ್ಲಿ 2022ರ ಆವೃತ್ತಿಗೂ ಆರ್‌ಸಿಬಿ ತಂಡದಲ್ಲಿಯೇ ಮುಂದುವರಿಯುವುದಾಗಿ ಘೋಷಿಸಿದ್ದಾರೆ. ಹೀಗಾಗಿ ರಿಟೆನ್‌ಶನ್ ಮೂಲಕ ತಂಡದಲ್ಲಿ ಉಳಿದುಕೊಳ್ಳುವುದು ಖಚಿತ. ಕಳೆದ ನಾಲ್ಕು ಆವೃತ್ತಿಗಳಲ್ಲಿ ವಿರಾಟ್ ಕೊಹ್ಲಿ ಪ್ರತಿ ಆವೃತ್ತಿಗೆ 17 ಕೋಟಿ ರೂಪಾಯಿ ಮೊತ್ತವನ್ನು ಗಳಿಸುತ್ತಿದ್ದಾರೆ. ರೀಟೈನ್ಶನ್‌ಗೆ ಒಳಗಾಗುವ ಆಟಗಾರರು ಫ್ರಾಂಚೈಸಿ ಜೊತೆಗೆ ಸಂಬಳದ ಬಗ್ಗೆ ಮಾತನಾಡಿ ಹೆಚ್ಚು ಕಡಿಮೆ ಮಾಡಿಕೊಳ್ಳುವ ಅವಕಾಶಗಳಿದೆ.

ಎಬಿ ಡಿವಿಲಿಯರ್ಸ್

ಎಬಿ ಡಿವಿಲಿಯರ್ಸ್

ವಿರಾಟ್ ಕೊಹ್ಲಿ ನಂತರ ಆರ್‌ಸಿಇಬಿ ತಂಡದ ದಿಗ್ಗಜ ಆಟಗಾರ ಎಬಿ ಡಿವಿಲಿಯರ್ಸ್ ಮತ್ತೊಂದು ರೀಟೆನ್ಶನ್ ಪಡೆಯಲಿರುವ ಆಟಗಾರನಾಗಲಿದ್ದಾರೆ. ಆರ್‌ಸಿಬಿ ಪರವಾಗಿ ಅದ್ಭುತವಾದ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ ಎಬಿ ಡಿವಿಲಿಯರ್ಸ್. ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ಕಾರಣ ನಾಯಕನಾಗಿ ಮುಂದಿವರಿಯುವ ಅವಕಾಶ ದೊರೆತರೆ ತಂಡಕ್ಕೆ ಸ್ಥಿರತೆಯನ್ನು ನೀಡುವ ಸಾಮರ್ಥ್ಯ ಎಬಿಡಿಯಲ್ಲಿದೆ. 5000ಕ್ಕೂ ಅಧಿಕ ರನ್‌ಗಳಿಸಿರುವ ಎಬಿಡಿ ಎರಡನೇ ಸ್ಲ್ಯಾಬ್‌ನಲ್ಲಿ ಉಳಿದುಕೊಳ್ಳುವ ಸಾಧ್ಯತೆಯಿದೆ. ಆದರೆ ಯುಎಇ ಚರಣದಲ್ಲಿ ಎಬಿ ಡಿವಿಲಿಯರ್ಸ್ ಅವರ ವೈಫಲ್ಯದಿಂದಾಗಿ ಹಿಂದಿಗಿಂತ ಕಡಿಮೆ ಮೊತ್ತವನ್ನು ಪಡೆದುಕೊಂಡರೆ ಅಚ್ಚರಿಯಿಲ್ಲ. ಕಳೆದ ಆವೃತ್ತಿಯಲ್ಲಿ ಎಬಿ ಡಿವಿಲಿಯರ್ಸ್ 11 ಕೋಟಿ ರೂಪಾಯಿ ಮೊತ್ತವನ್ನು ಪಡೆದುಕೊಂಡಿದ್ದರು.

ಯುಜುವೇಂದ್ರ ಚಾಹಲ್

ಯುಜುವೇಂದ್ರ ಚಾಹಲ್

ಆರ್‌ಸಿಬಿ ತಂಡದಲ್ಲಿ ಕಳೆದ ಕೆಲ ವರ್ಷಗಳಿಂದ ಪ್ರಮುಖ ಆಟಗಾರನಾಗಿ ಮಿಂಚುತ್ತಿದ್ದಾರೆ ಯುಜುವೇಂದ್ರ ಚಾಹಲ್. ಟಿ20 ಮಾದರಿಯಲ್ಲಿ ಅತ್ಯುತ್ತಮ ಸ್ಪಿನ್ನರ್‌ಗಳಲ್ಲಿ ಚಾಹಲ್ ಕೂಡ ಒಬ್ಬರು. 2014ರಲ್ಲಿ ಆರ್‌ಸಿಬಿ ತಂಡಕ್ಕೆ ಪದಾರ್ಪಣೆ ಮಾಡಿರುವ ಚಾಹಲ್ ಪ್ರತಿ ಆವೃತ್ತಿಯಲ್ಲಿಯೂ ಮಿಂಚುತ್ತಿದ್ದಾರೆ. 113 ಪಂದ್ಯಗಳಲ್ಲಿ ಚಾಹಲ್ 139 ವಿಕೆಟ್ ಸಂಪಾದಿಸಿದ್ದಾರೆ. 2021ರಲ್ಲಿಯೂ ಚಾಹಲ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಆರ್‌ಸಿಬಿ ಪರವಾಗಿ ತಂಡದಲ್ಲಿ ಉಳಿದುಕೊಳ್ಳಲಿರುವ ಮೂರನೇ ಸಂಭಾವ್ಯ ಆಟಗಾರ ಯುಜುವೇಂದ್ರ ಚಾಹಲ್.

ದೇವದತ್ ಪಡಿಕ್ಕಲ್

ದೇವದತ್ ಪಡಿಕ್ಕಲ್

ಆರ್‌ಸಿಬಿ ತಂಡದ ಯುವ ಆಟಗಾರ ದೃವದತ್ ಪಡಿಕ್ಕಲ್ ಕಳೆದ ಎರಡು ಆವೃತ್ತಿಗಳಲ್ಲಿ ಆರ್‌ಸಿಬಿ ಪೊರವಾಗಿ ಅದ್ಭುತವಾದ ಪ್ರದರ್ಶನ ನೀಡಿದ್ದಾರೆ. ಅಗ್ರ ಕ್ರಮಾಂಕದಲ್ಲಿ ತಂಡಕ್ಕೆ ಸ್ಥಿರತೆಯನ್ನು ನಿಡುವ ಸಮರ್ಥ್ಯ ಹೊಂದಿದ್ದಾರೆ ಪಡಿಕ್ಕಲ್. ಐಪಿಎಲ್ 2020 ಹಾಗೂ 2021ರ ಆವೃತ್ತಿಯಲ್ಲಿ ಪಡಿಕ್ಕಲ್ 411 ಹಾಗೂ 473 ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ಈ ಪ್ರದರ್ಶನದಿಂದಾಗಿ ಪಡಿಕ್ಕಲ್ ಅವರನ್ನು ಫ್ರಾಂಚೈಸಿ ತಂಡಲ್ಲಿಯೇ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ಮೂಲೆಗುಂಪಾದವರ ಆಟ ನೋಡಿ ಶಾಕ್ ಆದ ಐಪಿಎಲ್ ಫ್ರಾಂಚೈಸಿಗಳು | Oneindia Kannada

Story first published: Thursday, November 18, 2021, 11:27 [IST]
Other articles published on Nov 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X