ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಾಜಸ್ತಾನ್ ರಾಯಲ್ಸ್ ತಂಡದಲ್ಲಿ ಮೂವರು ಆಟಗಾರರಿಗೆ ಮಣೆ: ಸಂಜು ಸ್ಯಾಮನ್ಸ್‌ಗೆ 14 ಕೋಟಿ

Sanju samson

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದ ಚೊಚ್ಚಲ ಚಾಂಪಿಯನ್ ತಂಡ ರಾಜಸ್ತಾನ್ ರಾಯಲ್ಸ್ ತಂಡವು 2022ರ ಐಪಿಎಲ್ ಸೀಸನ್‌ಗೆ ಬಲಿಷ್ಠ ತಂಡವನ್ನು ಕಟ್ಟುವತ್ತ ಹೆಜ್ಜೆ ಇಟ್ಟಿದೆ. ಇಬ್ಬರು ದೇಶೀಯ ಆಟಗಾರರು ಮತ್ತು ಓರ್ವ ವಿದೇಶಿ ಆಟಗಾರನನ್ನ ಆರ್ಆರ್ ರೀಟೈನ್ ಮಾಡಿಕೊಂಡಿದೆ. 62 ಕೋಟಿ ರೂಪಾಯಿ ಉಳಿಸಿಕೊಂಡು ಐಪಿಎಲ್ ಹರಾಜು ಪ್ರವೇಶಿಸಲಿದೆ.

ತಂಡದ ಯುವ ನಾಯಕ, ಸ್ಫೋಟಕ ಆಟಗಾರ ಸಂಜು ಸ್ಯಾಮನ್ಸ ರಾಜಸ್ತಾನ್ ರಾಯಲ್ಸ್ ಪರ ರೀಟೈನ್ ಆದ ಮೊದಲ ಪ್ಲೇಯರ್ ಆಗಿದ್ದು, ಇಂಗ್ಲೆಂಡ್‌ನ ಸೂಪರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜಾಸ್ ಬಟ್ಲರ್ ರೀಟೈನ್ ಆದ ಎರಡನೇ ಆಟಗಾರನಾಗಿದ್ದಾನೆ. ಇನ್ನು ಅನ್‌ಕ್ಯಾಪ್ಡ್‌ ಪ್ಲೇಯರ್‌ ಯಶಸ್ವಿ ಜೈಸ್ವಾಲ್ ರೀಟೈನ್ ಆದ ಮೂರನೇ ಆಟಗಾರನಾಗಿದ್ದಾನೆ.

ಸಂಜು ಸ್ಯಾಮ್ಸನ್ 14 ಕೋಟಿ ರೂಪಾಯಿಗೆ ರೀಟೈನ್ ಆಗಿದ್ದರೆ, ಜಾಸ್ ಬಟ್ಲರ್‌ 10 ಕೋಟಿ ರೂಪಾಯಿಗೆ ಆರ್‌ಆರ್‌ ಜರ್ಸಿ ತೊಡಲಿದ್ದಾರೆ. ಪರ ಆಡಲಿದ್ದಾರೆ. ಯಶಸ್ವಿ ಜೈಸ್ವಾಲ್ 4 ಕೋಟಿ ರೂಪಾಯಿಗೆ ಆರ್‌ಆರ್‌ ಜರ್ಸಿ ತೊಡಲಿದ್ದಾರೆ.

ಸಂಜು ಸ್ಯಾಮ್ಸನ್‌ಗೆ ಮತ್ತೆ ನಾಯಕತ್ವ

ಸಂಜು ಸ್ಯಾಮ್ಸನ್‌ಗೆ ಮತ್ತೆ ನಾಯಕತ್ವ

IPL 2022 ರಲ್ಲಿ RR ಉಳಿಸಿಕೊಂಡ ಪ್ರಮುಖ ಆಟಗಾರ ಸಂಜು ಸ್ಯಾಮ್ಸನ್‌ . IPL 2021 ರಲ್ಲಿ ಫ್ರಾಂಚೈಸ್ ಅವರನ್ನು ನಾಯಕನಾಗಿ ಆಯ್ಕೆ ಮಾಡಿತು. ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ 2021 ರ ಸೀಸನ್‌ನಲ್ಲಿ ತನ್ನ ಚೊಚ್ಚಲ ಪಂದ್ಯದಲ್ಲಿಯೇ ಶತಕವನ್ನು ಸಿಡಿಸಿದರು.

14 ಪಂದ್ಯಗಳಲ್ಲಿ, 27 ವರ್ಷದ ಆಟಗಾರ 40.33 ರ ಅದ್ಭುತ ಸರಾಸರಿಯಲ್ಲಿ 484 ರನ್ ಗಳಿಸಿದರು, ಆರ್ಆರ್‌ಗೆ ಅಗ್ರ ರನ್ ಗಳಿಸಿದ ಆಟಗಾರ ಮತ್ತು ಪಂದ್ಯಾವಳಿಯಲ್ಲಿ 6 ನೇ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಇವರಾಗಿದ್ದಾರೆ. ಸ್ಯಾಮ್ಸನ್ ಕಳೆದ ಕೆಲವು ಸೀಸನ್‌ಗಳಲ್ಲಿ ತಂಡಕ್ಕಾಗಿ ಸ್ಥಿರವಾದ ಬ್ಯಾಟಿಂಗ್ ಪ್ರದರ್ಶನಗಳನ್ನು ನೀಡಿದ್ದಾರೆ .

ಜಾಸ್ ಬಟ್ಲರ್

ಜಾಸ್ ಬಟ್ಲರ್

ಐಪಿಎಲ್ 2022 ರಲ್ಲಿ RR ಉಳಿಸಿಕೊಳ್ಳುವ ಇನ್ನೊಬ್ಬ ಆಟಗಾರ ಜಾಸ್ ಬಟ್ಲರ್ ಆಗಿದ್ದಾರೆ. ಬೆನ್ ಸ್ಟೋಕ್ಸ್ ಕೂಡ ಉತ್ತಮ ಆಯ್ಕೆಯಾಗಿದ್ದರೂ, ಬಟ್ಲರ್‌ಗೆ ಚಾನ್ಸ್ ಕೊಡಲಾಗಿದೆ. ಏಕೆಂದರೆ ಇಂಗ್ಲೆಂಡ್ ಆಲ್-ರೌಂಡರ್ ಕಳೆದ ಸೀಸನ್‌ನಲ್ಲಿ ಕೇವಲ 1 ಪಂದ್ಯವನ್ನು ಆಡಿದರು ಮತ್ತು ಸ್ವತಃ ಗಾಯಗೊಂಡರು. ನಂತರ ಅವರು ಕ್ರಿಕೆಟ್‌ನಿಂದ ಸುದೀರ್ಘ ವಿರಾಮವನ್ನು ತೆಗೆದುಕೊಂಡರು ಮತ್ತು ಯಾವುದೇ ಸ್ಪರ್ಧಾತ್ಮಕ ಆಟಗಳನ್ನು ಆಡಲಿಲ್ಲ.

ಆದ್ದರಿಂದ, ಜೋಸ್ ಬಟ್ಲರ್ ಉತ್ತಮ ಆಯ್ಕೆಯಾಗಿದೆ. ಐಪಿಎಲ್ 2021 ರಲ್ಲಿ, ಇಂಗ್ಲೆಂಡ್ ವಿಕೆಟ್ ಕೀಪರ್ ಕೇವಲ 7 ಪಂದ್ಯಗಳಲ್ಲಿ 36.28 ಸರಾಸರಿ ಮತ್ತು 153+ ಸ್ಟ್ರೈಕ್ ರೇಟ್‌ನಲ್ಲಿ 254 ರನ್ ಗಳಿಸಿದರು. ಬಟ್ಲರ್ ಒಂದು ಶತಕ ಕೂಡ ಸಿಡಿಸಿ ಎಲ್ಲರ ಗಮನ ಸೆಳೆದರು.

ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ನಾಲ್ವರು ಆಟಗಾರರು ರೀಟೈನ್: ಶ್ರೇಯಸ್ ಅಯ್ಯರ್ ಹೊರಕ್ಕೆ!

ಯಶಸ್ವಿ ಜೈಸ್ವಾಲ್

ಯಶಸ್ವಿ ಜೈಸ್ವಾಲ್

4 ಕೋಟಿ ರೂಪಾಯಿಗೆ ರಾಜಸ್ತಾನ್ ರಾಯಲ್ಸ್ ಪರ ರೀಟೇನ್ ಆಗಿರುವ ಮೂರನೇ ಆಟಗಾರ ಯಶಸ್ವಿ ಜೈಸ್ವಾಲ್ ಭವಿಷ್ಯದ ಭರವಸೆಯ ಆಟಗಾರ. ಅಂಡರ್ 19 ವಿಶ್ವಕಪ್ ಗೆಲುವಿನ ಭಾರತದ ತಂಡದಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ್ದ ಜೈಸ್ವಾಲ್‌ಗೆ ಕಳೆದ ಸೀಸನ್‌ನಲ್ಲಿ ಐಪಿಎಲ್ ಕೈ ಬೀಸಿ ಕರೆಯಿತು.

ಸಿಎಸ್‌ಕೆ ತಂಡದಲ್ಲಿ ರೀಟೇನ್ ಆದ ಮೊದಲ ಪ್ಲೇಯರ್ ಜಡೇಜಾ: ಧೋನಿ, ಮೋಯಿನ್ ಅಲಿ, ರುತುರಾಜ್ ಆಯ್ಕೆ

RCB ಉಳಿಸಿಕೊಂಡ ಆಟಗಾರರಲ್ಲಿ ಚಹಾಲ್ ಕೂಡ ಇರಬೇಕಿತ್ತು | Oneindia Kannada
ಜೊಫ್ರಾ ಆರ್ಚರ್‌ಗಿಲ್ಲ ಸ್ಥಾನ

ಜೊಫ್ರಾ ಆರ್ಚರ್‌ಗಿಲ್ಲ ಸ್ಥಾನ

ಆರ್‌ಆರ್‌ ಪರ ಆಶ್ಚರ್ಯವೇನಂದ್ರೆ ಇಂಗ್ಲೆಂಡ್‌ನ ಪ್ರಮುಖ ವೇಗಿ ಜೊಫ್ರಾ ಆರ್ಚರ್‌ಗೆ ಅವಕಾಶ ನೀಡಿಲ್ಲ. ಪ್ರಮುಖ ವೇಗಿಯನ್ನ ಆರ್‌ಆರ್ ರೀಟೈನ್ ಮಾಡಿಕೊಳ್ಳದೆ ಹರಾಜಿಗೆ ಬಿಟ್ಟಿರುವುದು ಕುತೂಹಲ ಮೂಡಿಸಿದೆ. ಜೊಫ್ರಾ ಗಾಯಗೊಂಡಿದ್ದಾರ ಅಥವಾ ಐಪಿಎಲ್‌ಗೆ ಅಲಭ್ಯರಾಗಿದ್ದಾರ ಕಾದು ನೋಡ್ಬೇಕು.

ರಾಜಸ್ಥಾನ ರಾಯಲ್ಸ್ ಖಾತೆಯಲ್ಲಿ 62 ಕೋಟಿ ರುಪಾಯಿ ಇದೆ. ಈಗಾಗಲೇ ಮೂವರು ಅಟಗಾರರನ್ನು ರೀಟೈನ್ ಮಾಡಿಕೊಂಡಿದ್ದರಿಂದ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಖಾತೆಯಿಂದ 28 ಕೋಟಿ ರುಪಾಯಿ ಖರ್ಚಾಗಿದ್ದು, ಇನ್ನುಳಿದ 62 ಕೋಟಿ ರೂಪಾಯಿಗಳಲ್ಲಿ ತಮಗೆ ಬೇಕಾದ ಆಟಗಾರರನ್ನು ಖರೀದಿಸಬೇಕಿದೆ.

Story first published: Wednesday, December 1, 2021, 10:27 [IST]
Other articles published on Dec 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X