ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2022: ಅಚ್ಚರಿ ಮೂಡಿಸಿದ ಸನ್‌ರೈಸರ್ಸ್ ಫ್ರಾಂಚೈಸಿಯ ರೀಟೆನ್ಶನ್ ನಿರ್ಧಾರ

IPL 2022 retention: Sunrisers Hyderabad retailed list with price cap

ಸನ್‌ರೈಸರ್ಸ್ ಹೈದರಾಬಾದ್ ತಂಡ ಮುಂಬರುವ ಮಹಾ ಹರಾಜಿಗೂ ಮುನ್ನ ನಡೆದ ರೀಟೆನ್ಶನ್‌ನಲ್ಲಿ ತೆಗೆದುಕೊಂಡ ನಿರ್ಧಾರ ಹೆಚ್ಚಿನ ಕ್ರಿಕೆಟ್ ಪ್ರೇಮಿಗಳಿಗೆ ಅಚ್ಚರಿ ಮೂಡಿಸಿದೆ. ಕೆಲ ಪ್ರಮುಖ ಆಟಗಾರರನ್ನು ಕೈಬಿಟ್ಟಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ ಮೂರು ಆಟಗಾರರನ್ನು ರೀಟೈನ್ ಮಾಡಿಕೊಂಡಿದೆ.

ಮೊದಲ ರೀಟೈನ್ ಆಗಿ ಕೇನ್ ವಿಲಿಯಮ್ಸನ್ ಎಸ್‌ಆರ್‌ಹೆಚ್ ತಂಡದಲ್ಲಿ ಉಳಿದುಕೊಂಡಿದ್ದರೆ ನಂತರ ಇಬ್ಬರು ಯುವ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳುವ ನಿರ್ಧಾರ ಮಾಡಿದೆ. ಕಳೆದ ಐಪಿಎಲ್‌ನ ಅಂತಿಮ ಹಂತದಲ್ಲಿ ಅವಕಾಶ ಪಡೆದು ಮಿಂಚಿದ ಇಮ್ರಾನ್ ಮಲಿಕ್ ಹಾಗೂ ಮತ್ತೋರ್ವ ಯುವ ಆಟಗಾರ ಅಬ್ದುಲ್ ಸಮದ್ ಫ್ರಾಂಚೈಸಿಯಲ್ಲಿ ಉಳಿದುಕೊಂಡ ಉಳಿದ ಇಬ್ಬರು ಆಟಗಾರರಾಗಿದ್ದಾರೆ.

ಇನ್ನು ನಾಯಕ ಕೇನ್ ವಿಲಿಯಮ್ಸನ್ ಅವರನ್ನು ಮೊದಲ ಆಯ್ಕೆಯ ಆಟಗಾರನಾಗಿ ಎಸ್‌ಆರ್‌ಹೆಚ್ ಉಳಿದಿಕೊಂಡಿದ್ದು ಅವರಿಗೆ 14 ಕೋಟಿ ರೂಪಾಯಿ ನೀಡಿದೆ. ಉಳಿದಂತೆ ಉಮ್ರಾನ್ ಮಲಿಕ್ ಹಾಗೂ ಅಬ್ದುಲ್ ಸಮದ್ ಇಬ್ಬರು ಕೂಡ ತಲಾ ನಾಲ್ಕು ಕೋಟಿ ರೂಪಾಯಿ ಪಡೆದುಕೊಂಡಿದ್ದಾರೆ. ಈ ಮೂಲಕ 22 ಕೋಟಿ ರೂಪಾಯಿ ಮೊತ್ತವನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡ ರೀಟೈನ್ ಪ್ರಕ್ರಿಯೆಗಾಗಿ ಖರ್ಚು ಮಾಡಿದೆ. ಒಟ್ಟು 68 ಕೋಟಿ ರೂಪಾಯಿ ಮೊತ್ತವನ್ನು ತಂಡ ಹರಾಜು ಪ್ರಕ್ರಿಯೆಗಾಗಿ ಉಳಿಸಿಕೊಂಡಿದೆ.

ಸನ್‌ರೈಸರ್ಸ್ ಹೈದರಾಬಾದ್ ತಂಡ ಮಾಜಿ ನಾಯಕ ಡೇವಿಡ್ ವಾರ್ನರ್, ರಶೀದ್ ಖಾನ್, ಮನೀಶ್ ಪಾಂಡೆ, ಜಾನಿ ಬೈರ್‌ಸ್ಟೋವ್, ಭುವನೇಶ್ವರ್ ಕುಮಾರ್ ಅವರಂತಾ ಪ್ರಮುಖ ಆಟಗಾರರಿದ್ದರೂ ಈ ಎಲ್ಲಾ ಆಟಗಾರರನ್ನು ಹರಾಜಿಗೆ ಬಿಡುಗಡೆಗೊಳಿಸುವ ನಿರ್ಧಾರ ತೆಗೆದುಕೊಂಡಿದೆ. ಇದರಲ್ಲಿ ವಾರ್ನರ್ ತಂಡದಿಂದ ಹೊರಗುಳಿಯುವುದು ಈ ಮೊದಲೇ ಖಚಿತವಾಗಿತ್ತು.

ಸನ್‌ರೈಸರ್ಸ್ ಹೈದರಾಬಾದ್ ತಂಡದಿಂದ ಬಿಡುಗಡೆಯಾದ ಆಟಗಾರರ ಪಟ್ಟಿ: ಜೇಸನ್ ರಾಯ್, ಅಭಿಷೇಕ್ ಶರ್ಮಾ, ಮನೀಶ್ ಪಾಂಡೆ, ಪ್ರಿಯಮ್ ಗಾರ್ಗ್, ವೃದ್ಧಿಮಾನ್ ಸಹಾ, ಜೇಸನ್ ಹೋಲ್ಡರ್, ರಶೀದ್ ಖಾನ್, ಮೊಹಮ್ಮದ್ ನಬಿ, ಸಿದ್ದಾರ್ಥ್ ಕೌಲ್, ಶ್ರೀವತ್ಸ್ ಗೋಸ್ವಾಮಿ, ಕೇದಾರ್ ಜಾಧವ್, ಜಗದೀಶ ಸುಚಿತ್, ಶಹಬಾಜ್ ನದೀಮ್, ಖಲೀಲ್ ಅಹ್ಮದ್, ಸಂದೀಪ್, ಸಂದೀಪ್, ಸಂದೀಪ್, ಸಂದೀಪ್ ಶರ್ಮಾ , ಬಸಿಲ್ ಥಂಪಿ, ಮುಜೀಬ್ ಉರ್ ರೆಹಮಾನ್, ಭುವನೇಶ್ವರ್ ಕುಮಾರ್

RCB ಉಳಿಸಿಕೊಂಡ ಆಟಗಾರರಲ್ಲಿ ಚಹಾಲ್ ಕೂಡ ಇರಬೇಕಿತ್ತು | Oneindia Kannada

Story first published: Wednesday, December 1, 2021, 10:27 [IST]
Other articles published on Dec 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X