ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

3 ವರ್ಷ ಆರ್‌ಸಿಬಿಯಲ್ಲೇ ಇರುತ್ತೇನೆ, ಅತ್ಯುತ್ತಮವಾದದ್ದು ಇನ್ನೂ ಬರಬೇಕಿದೆ ಎಂದ ವಿರಾಟ್ ಕೊಹ್ಲಿ

IPL 2022 Retention: The amazing at RCB continues says Virat Kohli

ನಾನು ಎಷ್ಟು ದಿನಗಳ ಕಾಲ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ಕಣಕ್ಕಿಳಿದು ಭಾಗವಹಿಸುತ್ತೇನೋ ಅಷ್ಟು ದಿನಗಳವರೆಗೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವೇ ಆಡಲಿದ್ದೇನೆ ಎಂದು ವಿರಾಟ್ ಕೊಹ್ಲಿ ಈ ಹಿಂದೆ ಸಾಕಷ್ಟು ಬಾರಿ ಹೇಳಿಕೆಗಳನ್ನು ನೀಡಿದ್ದಾರೆ. 2008ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾದಾಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾಗಿದ್ದ ವಿರಾಟ್ ಕೊಹ್ಲಿ ಅಂದಿನಿಂದ ಇಂದಿನವರೆಗೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಕಣಕ್ಕಿಳಿಯುತ್ತಿದ್ದಾರೆ.

ಐಪಿಎಲ್: ರಿಟೈನ್ ಆದ ಎಲ್ಲಾ ತಂಡಗಳ ಆಟಗಾರರ ಸಂಪೂರ್ಣ ಪಟ್ಟಿ; ಈ ಮೂವರಿಗೆ ಅತಿಹೆಚ್ಚು ಹಣಐಪಿಎಲ್: ರಿಟೈನ್ ಆದ ಎಲ್ಲಾ ತಂಡಗಳ ಆಟಗಾರರ ಸಂಪೂರ್ಣ ಪಟ್ಟಿ; ಈ ಮೂವರಿಗೆ ಅತಿಹೆಚ್ಚು ಹಣ

ಹೌದು, ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಹೊರತುಪಡಿಸಿ ಬೇರೆ ಯಾವುದೇ ತಂಡದ ಪರ ಕೂಡ ಆಡಿಲ್ಲ ಎಂಬುದು ಒಂದು ರೀತಿಯ ಸಾಧನೆ ಕೂಡ ಹೌದು. ಕೇವಲ ಒಂದು ಕ್ರಿಕೆಟ್ ತಂಡವನ್ನಾಗಿ ಮಾತ್ರವಲ್ಲದೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ತನ್ನ ಸ್ವಂತ ಕುಟುಂಬದಂತೆಯೇ ಯಾವಾಗಲೂ ಭಾವಿಸುವ ವಿರಾಟ್ ಕೊಹ್ಲಿ ಬೆಂಗಳೂರನ್ನು ತನ್ನ ಎರಡನೇ ಮನೆ ಎಂದು ಕೂಡ ಈ ಹಿಂದೆ ಮಾತನಾಡಿದ್ದರು.

ಹೀಗೆ ಸತತವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕಣಕ್ಕಿಳಿಯುತ್ತಾ ಬಂದಿರುವ ವಿರಾಟ್ ಕೊಹ್ಲಿ 2013ನೇ ಸಾಲಿನ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ. ಹೀಗೆ ಕಳೆದ 8 ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕನಾಗಿದ್ದ ವಿರಾಟ್ ಕೊಹ್ಲಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ದ್ವಿತೀಯಾರ್ಧ ಯುಎಇಯಲ್ಲಿ ಆರಂಭವಾಗುವುದಕ್ಕೂ ಮುನ್ನ ವಿಶೇಷ ಪ್ರಕಟಣೆಯೊಂದನ್ನು ಹೊರಡಿಸಿ ಈ ಬಾರಿಯ ಐಪಿಎಲ್ ಟೂರ್ನಿ ಮುಗಿದ ನಂತರ ತಾನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಸ್ಥಾನದಿಂದ ಕೆಳಗಿಳಿಯುವುದಾಗಿ ಘೋಷಿಸಿದ್ದರು. ಹಾಗೂ ಓರ್ವ ಆಟಗಾರನಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿಯೇ ಇರುತ್ತೇನೆ ಹೊರತು ಬೇರೆ ತಂಡ ಸೇರುವುದಿಲ್ಲ ಎಂದು ಕೂಡ ವಿರಾಟ್ ಕೊಹ್ಲಿ ಹೇಳಿಕೆ ನೀಡಿದ್ದರು. ಅದರಂತೆ ಇದೀಗ ನವೆಂಬರ್ 30ರಂದು ನಡೆದ ರಿಟೆನ್ಷನ್ ಪ್ರಕ್ರಿಯೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿರಾಟ್ ಕೊಹ್ಲಿಗೆ 15 ಕೋಟಿ ನೀಡುವ ಮೂಲಕ ಮೊದಲನೇ ಆಟಗಾರನಾಗಿ ರಿಟೈನ್ ಮಾಡಿಕೊಂಡಿದೆ.

ದೊಡ್ಡ ಮೊತ್ತ ಪಡೆಯುತ್ತಿದ್ದ ಧೋನಿಗೆ ಈ ಸಲ ಕಡಿಮೆ ಮೊತ್ತ ಸಿಕ್ಕಿದ್ದಕ್ಕೆ ಕಾರಣ ಆ ಒಬ್ಬ ಆಟಗಾರ!ದೊಡ್ಡ ಮೊತ್ತ ಪಡೆಯುತ್ತಿದ್ದ ಧೋನಿಗೆ ಈ ಸಲ ಕಡಿಮೆ ಮೊತ್ತ ಸಿಕ್ಕಿದ್ದಕ್ಕೆ ಕಾರಣ ಆ ಒಬ್ಬ ಆಟಗಾರ!

ಹೀಗೆ ನಾಯಕನ ಸ್ಥಾನವನ್ನು ತ್ಯಜಿಸಿದ ನಂತರ ಓರ್ವ ಆಟಗಾರನಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಮುಂದುವರಿಯುತ್ತಿರುವ ವಿರಾಟ್ ಕೊಹ್ಲಿ ಫ್ರಾಂಚೈಸಿಯಿಂದ ರಿಟೈನ್ ಆದ ಬಳಿಕ ವಿಡಿಯೋವೊಂದರಲ್ಲಿ ಮಾತನಾಡಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತು ಅಭಿಮಾನಿಗಳ ಕುರಿತಾಗಿ ವಿಶೇಷವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಜೊತೆಗಿನ ಪಯಣ ಮತ್ತೆ ಮುಂದುವರಿದಿದೆ. ಇನ್ನೂ 3 ವರ್ಷಗಳ ಕಾಲ ಈ ಫ್ರಾಂಚೈಸಿಯ ಜೊತೆ ಇರುವುದು ತುಂಬಾ ಖುಷಿಯ ವಿಚಾರ. ಇನ್ನೂ ಅತ್ಯುತ್ತಮವಾದದ್ದು ಬರಲಿವೆ ಎನ್ನುವ ವಿಶ್ವಾಸದಲ್ಲಿದ್ದೇನೆ ಎಂದು ವಿರಾಟ್ ಕೊಹ್ಲಿ ಹೇಳಿಕೆ ನೀಡಿದ್ದಾರೆ. ಹೀಗೆ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕುರಿತಾಗಿ ರಿಟೇನ್ ಆದ ಬಳಿಕ ಮಾತನಾಡಿರುವ ವಿಡಿಯೋವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು ಸಾಕಷ್ಟು ವೈರಲ್ ಆಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ರಿಟೆನ್ಷನ್

ಆಟಗಾರ 1: ವಿರಾಟ್ ಕೊಹ್ಲಿ - ರೂ. 15 ಕೋಟಿ

ಆಟಗಾರ 2: ಗ್ಲೆನ್ ಮ್ಯಾಕ್ಸ್‌ವೆಲ್ - ರೂ. 11 ಕೋಟಿ

ಆಟಗಾರ 3: ಮೊಹಮ್ಮದ್ ಸಿರಾಜ್ - ರೂ. 7 ಕೋಟಿ

ಸರಳತೆ ಮೆರೆದ ಡಿಕೆ ಶಿವಕುಮಾರ್ | Oneindia Kannada

Story first published: Thursday, December 2, 2021, 9:57 [IST]
Other articles published on Dec 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X