ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: 5 ಗಂಟೆಗೆ ನಡೆಯಬೇಕಿದ್ದ ರಿಟೈನ್‌ಮೆಂಟ್ ಮುಂದೂಡಿಕೆ; ಹೊಸ ಸಮಯ ಇಲ್ಲಿದೆ

IPL 2022 retention: Time, Date and live streaming details in Kannada

ಈ ವರ್ಷ ನಡೆದ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಾಲ್ಕನೇ ಬಾರಿಗೆ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿಯಿತು. ಹೀಗೆ ಈ ಬಾರಿ ಮುಕ್ತಾಯಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ 8 ತಂಡಗಳೊಂದಿಗೆ ನಡೆದ ಕೊನೆಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಎನಿಸಿಕೊಂಡಿದೆ.

ಭಾರತ vs ನ್ಯೂಜಿಲೆಂಡ್: ಎರಡನೇ ಪಂದ್ಯದ ಪ್ಲೇಯಿಂಗ್ XI ಬಗ್ಗೆ ರಹಾನೆ ಹೇಳಿದ್ದಿಷ್ಟು!ಭಾರತ vs ನ್ಯೂಜಿಲೆಂಡ್: ಎರಡನೇ ಪಂದ್ಯದ ಪ್ಲೇಯಿಂಗ್ XI ಬಗ್ಗೆ ರಹಾನೆ ಹೇಳಿದ್ದಿಷ್ಟು!

ಹೌದು, ಮುಂದಿನ ಬಾರಿ ನಡೆಯಲಿರುವ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಒಟ್ಟು 10 ತಂಡಗಳು ಕಣಕ್ಕಿಳಿಯಲಿದ್ದು 2 ನೂತನ ಫ್ರಾಂಚೈಸಿಗಳ ಸೇರ್ಪಡೆಯಾಗಲಿದೆ. ಇತ್ತೀಚೆಗಷ್ಟೇ ನಡೆದ ನೂತನ ಫ್ರಾಂಚೈಸಿಗಳ ಹರಾಜು ಪ್ರಕ್ರಿಯೆಯಲ್ಲಿ 20ಕ್ಕೂ ಹೆಚ್ಚು ಕಂಪೆನಿಗಳ ನಡುವಿನ ಜಿದ್ದಾಜಿದ್ದಿನ ಹರಾಜಿನಲ್ಲಿ ಲಕ್ನೋ ಮತ್ತು ಅಹ್ಮದಾಬಾದ್ ತಂಡಗಳು ಹರಾಜಾಗಿವೆ. ಹೀಗಾಗಿ ಮುಂದಿನ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅಸ್ತಿತ್ವದಲ್ಲಿರುವ 8 ತಂಡಗಳ ಜೊತೆಗೆ ಲಕ್ನೋ ಮತ್ತು ಅಹ್ಮದಾಬಾದ್ ತಂಡಗಳು ಟ್ರೋಫಿಗಾಗಿ ಕಣಕ್ಕಿಳಿಯಲಿವೆ.

ಕೆ.ಎಲ್ ರಾಹುಲ್, ರಶೀದ್‌ ಖಾನ್‌ಗಾಗಿ ಫ್ರಾಂಚೈಸಿಗಳ ಕಿತ್ತಾಟ: ಬಿಸಿಸಿಐಗೆ ದೂರುಕೆ.ಎಲ್ ರಾಹುಲ್, ರಶೀದ್‌ ಖಾನ್‌ಗಾಗಿ ಫ್ರಾಂಚೈಸಿಗಳ ಕಿತ್ತಾಟ: ಬಿಸಿಸಿಐಗೆ ದೂರು

ಹೀಗಾಗಿ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೂ ಮುನ್ನ ಡಿಸೆಂಬರ್ ಅಥವಾ ಜನವರಿ ತಿಂಗಳಿನಲ್ಲಿ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ 8 ಐಪಿಎಲ್ ತಂಡಗಳ ಫ್ರಾಂಚೈಸಿಗಳು ಯಾವ ಆಟಗಾರರನ್ನು ಉಳಿಸಿಕೊಳ್ಳಲು ಬಯಸುತ್ತವೆಯೋ ಅಂಥ 4 ಆಟಗಾರರ ಪಟ್ಟಿಯನ್ನು ನವೆಂಬರ್ 30ರೊಳಗೆ ಬಿಸಿಸಿಐಗೆ ಸಲ್ಲಿಸಲೇಬೇಕಾಗಿದೆ. ಹೀಗೆ ಅಸ್ತಿತ್ವದಲ್ಲಿರುವ ಫ್ರಾಂಚೈಸಿಗಳು ಸಲ್ಲಿಸಲಿರುವ ಪಟ್ಟಿಯನ್ನು ನವೆಂಬರ್ 30ರ ಸಂಜೆ 5 ಗಂಟೆಯಿಂದ ನಡೆಯಲಿರುವ ರಿಟೆನ್ಷನ್ ಕಾರ್ಯಕ್ರಮದಲ್ಲಿ ಬಹಿರಂಗಪಡಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ ಇದೀಗ ಬಂದಿರುವ ಸುದ್ದಿಯ ಪ್ರಕಾರ ಈ ಸಮಯದಲ್ಲಿ ಬದಲಾವಣೆಯಾಗಿದ್ದು, ಕಾರ್ಯಕ್ರಮ ಯಾವಾಗ ಪ್ರಾರಂಭವಾಗಲಿದೆ ಮತ್ತು ಇದರ ನೇರ ಪ್ರಸಾರ ವೀಕ್ಷಿಸುವುದು ಹೇಗೆ ಎಂಬುದರ ಕುರಿತ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ ಓದಿ.

ರಿಟೆನ್ಷನ್ ಕಾರ್ಯಕ್ರಮದ ಸಮಯ ಹಾಗೂ ಸ್ಥಳ

ರಿಟೆನ್ಷನ್ ಕಾರ್ಯಕ್ರಮದ ಸಮಯ ಹಾಗೂ ಸ್ಥಳ

ಅಸ್ತಿತ್ವದಲ್ಲಿರುವ 8 ಐಪಿಎಲ್ ಫ್ರಾಂಚೈಸಿಗಳು ಯಾವ ಯಾವ ಆಟಗಾರರನ್ನು ಉಳಿಸಿಕೊಳ್ಳಲು ಇಚ್ಛಿಸುತ್ತವೆ ಎಂಬ ಮಾಹಿತಿಯನ್ನು ಬಿಸಿಸಿಐಗೆ ಸಲ್ಲಿಸಿದ್ದು, ಈ ಮಾಹಿತಿಯನ್ನು ಕ್ರಿಕೆಟ್ ವೀಕ್ಷಕರಿಗೆ ತಿಳಿಸುವ ಸಲುವಾಗಿ ಕಾರ್ಯಕ್ರಮವನ್ನು ಕೂಡ ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ನವೆಂಬರ್ 30ರ ಮಂಗಳವಾರದಂದು ರಾತ್ರಿ 9.30ಕ್ಕೆ ಭಾರತದಲ್ಲಿಯೇ ನಡೆಯಲಿದೆ.

ನೇರಪ್ರಸಾರದ ಮಾಹಿತಿ

ನೇರಪ್ರಸಾರದ ಮಾಹಿತಿ

ಐಪಿಎಲ್ 2022ರ ರಿಟೆನ್ಷನ್ ಕಾರ್ಯಕ್ರಮದ ನೇರ ಪ್ರಸಾರವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ನವೆಂಬರ್‌ 30ರ ರಾತ್ರಿ 9.30ಕ್ಕೆ ಆರಂಭವಾಗಲಿದೆ.

KL Rahul ಹಾಗು Rashid Khanಗೆ ಎದುರಾಯಿತು ಭಾರೀ ಕಂಟಕ | Oneindia Kannada
ರಿಟೆನ್ಷನ್ ನಿಯಮ ಮತ್ತು ಆಟಗಾರರಿಗೆ ಸಿಗಲಿರುವ ಹಣ

ರಿಟೆನ್ಷನ್ ನಿಯಮ ಮತ್ತು ಆಟಗಾರರಿಗೆ ಸಿಗಲಿರುವ ಹಣ

ಬಿಸಿಸಿಐನ ರಿಟೆನ್ಷನ್ ಪಾಲಿಸಿ ಪ್ರಕಾರ ಅಸ್ತಿತ್ವದಲ್ಲಿರುವ ಐಪಿಎಲ್ ಫ್ರಾಂಚೈಸಿಯೊಂದು ಒಟ್ಟು 4 ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದೆ. ಹೀಗೆ ಉಳಿಸಿಕೊಳ್ಳಬಹುದಾದ 4 ಆಟಗಾರರ ಪೈಕಿ ಗರಿಷ್ಠ ಇಬ್ಬರು ವಿದೇಶಿ ಆಟಗಾರರನ್ನು ಮಾತ್ರ ತಂಡವೊಂದು ಉಳಿಸಿಕೊಳ್ಳಬಹುದಾಗಿದೆ. ಈ ಮೂಲಕ ಇಬ್ಬರು ಸ್ವದೇಶಿ ಆಟಗಾರರು ಮತ್ತು ಇಬ್ಬರು ವಿದೇಶಿ ಆಟಗಾರರು ಅಥವಾ ಮೂವರು ಸ್ವದೇಶಿ ಆಟಗಾರರು ಮತ್ತು ಒಬ್ಬ ವಿದೇಶಿ ಆಟಗಾರನನ್ನು ಫ್ರಾಂಚೈಸಿಯೊಂದು ಉಳಿಸಿಕೊಳ್ಳಬಹುದಾಗಿದೆ.ಒಂದುವೇಳೆ ಫ್ರಾಂಚೈಸಿಯೊಂದು 4 ಆಟಗಾರರನ್ನು ಉಳಿಸಿಕೊಂಡರೆ 42 ಕೋಟಿ ಖರ್ಚು ಮಾಡಬಹುದಾಗಿದೆ. ಈ ಮೂಲಕ ಫ್ರಾಂಚೈಸಿಯೊಂದು ಉಳಿಸಿಕೊಳ್ಳಲಿರುವ ಪ್ರಥಮ ಆಟಗಾರನಿಗೆ 16 ಕೋಟಿ, ದ್ವಿತೀಯ ಆಟಗಾರನಿಗೆ 12 ಕೋಟಿ, ಮೂರನೇ ಆಟಗಾರನಿಗೆ 8 ಕೋಟಿ ಮತ್ತು ನಾಲ್ಕನೇ ಆಟಗಾರನಿಗೆ 6 ಕೋಟಿ ನೀಡಬೇಕಾಗುತ್ತದೆ.


ಒಂದುವೇಳೆ ಫ್ರಾಂಚೈಸಿಯೊಂದು 3 ಆಟಗಾರರನ್ನು ಉಳಿಸಿಕೊಂಡರೆ 33 ಕೋಟಿ ಖರ್ಚು ಮಾಡಬಹುದಾಗಿದೆ. ಈ ಮೂಲಕ ಫ್ರಾಂಚೈಸಿಯೊಂದು ಉಳಿಸಿಕೊಳ್ಳಲಿರುವ ಪ್ರಥಮ ಆಟಗಾರನಿಗೆ 15 ಕೋಟಿ, ದ್ವಿತೀಯ ಆಟಗಾರನಿಗೆ 11 ಕೋಟಿ ಮತ್ತು ಮೂರನೇ ಆಟಗಾರನಿಗೆ 7 ಕೋಟಿ ನೀಡಬೇಕಾಗುತ್ತದೆ.


ಒಂದುವೇಳೆ ಫ್ರಾಂಚೈಸಿಯೊಂದು ಇಬ್ಬರು ಆಟಗಾರರನ್ನು ಉಳಿಸಿಕೊಂಡರೆ 24 ಕೋಟಿ ಖರ್ಚು ಮಾಡಬಹುದಾಗಿದೆ. ಈ ಮೂಲಕ ಫ್ರಾಂಚೈಸಿಯೊಂದು ಉಳಿಸಿಕೊಳ್ಳಲಿರುವ ಪ್ರಥಮ ಆಟಗಾರನಿಗೆ 14 ಕೋಟಿ ಮತ್ತು ದ್ವಿತೀಯ ಆಟಗಾರನಿಗೆ 10 ಕೋಟಿ ನೀಡಬೇಕಾಗುತ್ತದೆ.

Story first published: Tuesday, November 30, 2021, 15:07 [IST]
Other articles published on Nov 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X