ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಹಾರ್ದಿಕ್ ಪಾಂಡ್ಯ ವಿಕೆಟ್ ಪಡೆದು, ಫ್ಲೈಯಿಂಗ್ ಕಿಸ್ ಕೊಟ್ಟ ರಿಷಿ ಧವನ್

Rishi dhawan

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಸೀಸನ್‌ನಲ್ಲಿ ಮಂಗಳವಾರ(ಏ.03) ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟನ್ಸ್ ಮುಗ್ಗರಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್‌ ಲೆಕ್ಕಾಚಾರ ಎಲ್ಲಾ ತಲೆಕೆಳಗಾಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟಾಪ್ ಆರ್ಡರ್ ಬ್ಯಾಟಿಂಗ್ ವೈಫಲ್ಯದಿಂದಾಗಿ 8 ವಿಕೆಟ್ ಕಳೆದುಕೊಂಡು ಕೇವಲ 143ರನ್ ಕಲೆಹಾಕುವಷ್ಟೇ ಶಕ್ತವಾಯಿತು. ಗುಜರಾತ್ ಟೈಟನ್ಸ್ ಪರ ಸಾಯಿ ಸುದರ್ಶನ್ 50 ಎಸೆತಗಳಲ್ಲಿ ಅಜೇಯ 65 ರನ್ ಕಲೆಹಾಕಿದ್ದು ತಂಡದ ಪರ ಗರಿಷ್ಠ ಸ್ಕೋರ್ ಆಗಿತ್ತು. ಈ ಪಂದ್ಯದಲ್ಲಿ ಇನ್‌ಫಾರ್ಮ್ ಬ್ಯಾಟ್ಸ್‌ಮನ್ ನಾಯಕ ಹಾರ್ದಿಕ್ ಪಾಂಡ್ಯ ವಿಕೆಟ್ ಪತನ ತಂಡಕ್ಕೆ ಬಹುದೊಡ್ಡ ಹೊಡೆತ ನೀಡಿದೆ.

ಟೂರ್ನಿಯಲ್ಲಿ ಅಮೋಘ ಫಾರ್ಮ್‌ನಲ್ಲಿರುವ ಹಾರ್ದಿಕ್ ಪಾಂಡ್ಯ ಇದುವರೆಗೆ ಆಡಿರುವ ಪಂದ್ಯಗಳಲ್ಲಿ ಒಟ್ಟಾರೆ 309ರನ್‌ಗಳಿಸಿದ್ದು, ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಹೀಗಿರುವ ಮೊದಲ ಆರು ಎಸೆತಗಳಲ್ಲಿ ಪಂಜಾಬ್ ವಿರುದ್ಧ ಕೇವಲ 1 ರನ್ ಕಲೆಹಾಕಿದ್ದ ಹಾರ್ದಿಕ್‌ಗೆ ಖೆಡ್ಡಾ ತೋಡಿದ್ದು ರಿಷಿ ಧವನ್.

ಆಫ್‌ ಸ್ಟಂಫ್ ಹೊರಗೆ ಬೌಲ್ ಮಾಡಿದ ರಿಷಿ ಧವನ್

ಪಂಜಾಬ್ ಪರ ಸ್ಥಿರ ಬೌಲಿಂಗ್ ಪ್ರದರ್ಶನ ನೀಡುತ್ತಿರುವ ರಿಷಿ ಧವನ್ ಆಫ್-ಸ್ಟಂಪ್ ಹೊರಗೆ ಬೌಲ್‌ ಮಾಡಿದರು ಮತ್ತು ಪಾಂಡ್ಯ ಕೇವಲ ತಮ್ಮ ಕೈಗಳಿಂದ ಚೆಂಡನ್ನು ತಲುಪಲು ಪ್ರಯತ್ನಿಸಿದರು. ಆದ್ರೆ ಅವರ ಪಾದಗಳು ಹೆಚ್ಚು ಚಲಿಸಲಿಲ್ಲ. ಹೀಗಾಗಿ ಚೆಂಡು ಅವರ ಬ್ಯಾಟ್‌ನ ಅಂಚನ್ನು ಸವರಿಕೊಂಡು ಹೋಗಿ ಪಂಜಾಬ್ ವಿಕೆಟ್ ಕೀಪರ್‌ ಜಿತೇಶ್ ಶರ್ಮಾ ಕೈ ಸೇರಿತು.

ಜಿತೇಶ್ ಹಿಡಿದ ಸರಳ ಕ್ಯಾಚ್‌ಗೆ 7 ಎಸೆತಗಳಲ್ಲಿ ಒಂದು ರನ್‌ ಕಲೆಹಾಕಿದ್ದ ಹಾರ್ದಿಕ್ ಪಾಂಡ್ಯ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಬೇಕಾಯಿತು. ಹಾರ್ದಿಕ್ ವಿಕೆಟ್ ಪಡೆಯುತ್ತಿದ್ದಂತೆ ರಿಷಿ ಧವನ್ ಆತನಿಗೆ ಫ್ಲೈಯಿಂಗ್ ಕಿಸ್ ನೀಡುವ ಮೂಲಕ ಪಾಂಡ್ಯಗೆ ಬೀಳ್ಕೊಡುಗೆ ನೀಡಿದರು. ಅತ್ತ ಹಾರ್ದಿಕ್ ಪಾಂಡ್ಯ ಔಟಾಗುತ್ತಿದ್ದಂತೆ ಆತನ ಪತ್ನಿ ನತಾಶ ಬೇಸರದಿಂದ ತಲೆ ತಗ್ಗಿಸಿದರು.

ಈ ಕುರಿತಾದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಿಷಿ ಧವನ್ ಬೌಲಿಂಗ್ ಕುರಿತು ಪ್ರಶಂಸೆ ವ್ಯಕ್ತವಾಗಿದೆ.

RCB vs CSK: 6 ರನ್‌ ಗಳಿಸಿದ್ರೆ MS ಧೋನಿ ಹೊಸ ಮೈಲಿಗಲ್ಲು ಸ್ಥಾಪನೆ; ಸದ್ಯ ಕೊಹ್ಲಿ ನಂಬರ್ ನಂ. 1

ನಾಲ್ಕು ಓವರ್ ಬಾಕಿ ಇರುವಂತೆಯೇ ಪಂದ್ಯ ಗೆದ್ದ ಪಂಜಾಬ್

ನಾಲ್ಕು ಓವರ್ ಬಾಕಿ ಇರುವಂತೆಯೇ ಪಂದ್ಯ ಗೆದ್ದ ಪಂಜಾಬ್

ಗುಜರಾತ್‌ ನೀಡಿದ 144ರನ್‌ಗಳ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ಆರಂಭ ಕೂಡ ಉತ್ತಮವಾಗಿರಲಿಲ್ಲ. ಆರಂಭದಲ್ಲೇ ಜಾನಿ ಬೈಸ್ಟ್ರೋವ್ 1ರನ್‌ಗೆ ಔಟಾದ್ರು. ಆದ್ರೆ ಓಪನರ್ ಶಿಖರ್ ಧವನ್ ಅಜೇಯ 62, ರಾಜಪಕ್ಷೆ 40ರನ್, ಲಿಯಾಮ್ ಲಿವಿಂಗ್‌ಸ್ಟೋನ್ ಸ್ಫೋಟಕ 30ರನ್‌ಗಳ ನೆರವಿನಿಂದ ಪಂಜಾಬ್ ಕಿಂಗ್ಸ್‌ ಇನ್ನೂ ನಾಲ್ಕು ಓವರ್ ಬಾಕಿ ಇರುವಂತೆಯೇ 8 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು.

RCB vs CSK: ಪಂದ್ಯದಲ್ಲಿ ಗೆಲ್ಲಬೇಕೆಂದರೆ ನಿಮ್ಮ ಡ್ರೀಮ್ ಟೀಮ್ ಹೀಗಿರಲಿ; ಈತನಿಗೆ ನಾಯಕತ್ವ ನೀಡಿ

16ನೇ ಓವರ್‌ನಲ್ಲಿ 117 ಮೀಟರ್ ದೂರಕ್ಕೆ ಸಿಕ್ಸರ್ ಹೊಡೆದ ಲಿವಿಂಗ್‌ಸ್ಟೋನ್

16ನೇ ಓವರ್‌ನಲ್ಲಿ 117 ಮೀಟರ್ ದೂರಕ್ಕೆ ಸಿಕ್ಸರ್ ಹೊಡೆದ ಲಿವಿಂಗ್‌ಸ್ಟೋನ್

16ನೇ ಓವರ್‌ನಲ್ಲಿ ಶಮಿ ಬೌಲಿಂಗ್‌ನಲ್ಲಿ ಲಿವಿಂಗ್‌ಸ್ಟೋನ್ ಹ್ಯಾಟ್ರಿಕ್ ಸಿಕ್ಸರ್ ಹೊಡೆಯುವ ಮೂಲಕ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ರು. 16ನೇ ಮೊದಲ ಎಸೆತದಲ್ಲಿ ಡೀಪ್ ಸ್ಕ್ವೈರ್ ಲೆಗ್ ಕಡೆಗೆ 117 ಮೀಟರ್ ಸಿಕ್ಸರ್ ಹೊಡೆದ ಲಿವಿಂಗ್‌ಸ್ಟೋನ್, ಟೂರ್ನಿಯಲ್ಲಿ ಅತಿ ದೂರದ ಸಿಕ್ಸರ್ ಹೊಡೆದ ದಾಖಲೆ ಮಾಡಿದರು.

ಇದಾದ ಬಳಿಕ ಎರಡನೇ ಎಸೆತದಲ್ಲಿ ಮಿಡ್‌ವಿಕೆಟ್ ಕಡೆಗೆ ಸಿಕ್ಸರ್ ಸಿಡಿಸಿದ್ರು. ಇನ್ನು ಮೂರನೇ ಎಸೆತದಲ್ಲಿ ಗಟ್ಟಿಯಾಗಿ ಬ್ಯಾಟ್ ಬೀಸಿದ ಪರಿಣಾಮ ಚೆಂಡು ಟಾಪ್ ಎಡ್ಜ್‌ ಆಗಿ ಕೀಪರ್ ತಲೆ ಮೇಲೆ ತೇಲಿ ಸಿಕ್ಸರ್‌ ಗಡಿ ದಾಟಿತು. ಇದರ ನಂತರದ ಎಸೆತದಲ್ಲೇ ಲಿವಿಂಗ್‌ಸ್ಟೋನ್ ಬೌಂಡರಿ ಕಲೆಹಾಕಿದರು. ಐದನೇ ಎಸೆತದಲ್ಲೇ ಎರಡು ರನ್‌ಗಳನ್ನ ಓಡಿದ ಲಿವಿಂಗ್‌ಸ್ಟೋನ್‌ , ಆರನೇ ಎಸೆತದಲ್ಲಿ ಸ್ವಲ್ಪದರಲ್ಲೇ ಮಿಸ್ ಆಗಿ ಶಾರ್ಟ್ ಥರ್ಡ್‌ ಮ್ಯಾನ್ ಬಳಿ ಬೌಂಡರಿ ಬಾರಿಸಿದ್ರು. ಈ ಮೂಲಕ 16ನೇ ಓವರ್‌ನಲ್ಲಿ ಲಿವಿಂಗ್‌ಸ್ಟೋನ್ ಹ್ಯಾಟ್ರಿಕ್ ಸಿಕ್ಸರ್, ಎರಡು ಬೌಂಡರಿ ಸೇರಿದಂತೆ ಒಟ್ಟು 28ರನ್ ದಾಖಲಿಸಿದರು.

ಈ ಪಂದ್ಯದಲ್ಲಿ ಸೋಲನ್ನ ಕಂಡರೂ ಸಹ ಗುಜರಾತ್ ಟೈಟನ್ಸ್ ಪಾಯಿಂಟ್ಸ್ ಟೇಬಲ್‌ನಲ್ಲಿ 16 ಪಾಯಿಂಟ್ಸ್‌ನೊಂದಿಗೆ ಅಗ್ರಸ್ಥಾನದಲ್ಲೇ ಉಳಿದಿದ್ದು, ಪಂಜಾಬ್ ಐದನೇ ಸ್ಥಾನಕ್ಕೆ ಜಿಗಿದಿದೆ.

Story first published: Wednesday, May 4, 2022, 15:29 [IST]
Other articles published on May 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X