ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

MI vs KKR: ಮೋಸದ ತೀರ್ಪಿಗೆ ಬಿತ್ತಾ ರೋಹಿತ್ ವಿಕೆಟ್?; ಮೋಸವೆನ್ನಲು ಇಲ್ಲಿದೆ ಬಲವಾದ ಕಾರಣ!

IPL 2022: Rohit Sharma walks back with disappointment afrer controversial dismissal against KKR

ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ನಿನ್ನೆ ( ಮೇ 9 ) ಮುಂಬೈನ ಡಾ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 56ನೇ ಪಂದ್ಯ ಜರುಗಿತು. ಇತ್ತಂಡಗಳ ನಡುವಿನ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 52 ರನ್‌ಗಳ ಬೃಹತ್ ಗೆಲುವನ್ನು ದಾಖಲಿಸಿತು. ಇನ್ನು ಈ ಬಾರಿಯ ಟೂರ್ನಿಯಲ್ಲಿ ನೆಲಕಚ್ಚಿರುವ ಮುಂಬೈ ಇಂಡಿಯನ್ಸ್ ಒಂಬತ್ತನೇ ಸೋಲನ್ನು ಕಂಡು ಹಿಂದೆಂದೂ ಕಂಡಿರದ ರೀತಿ ಮುಗ್ಗರಿಸಿದೆ.

KKR vs MI: ಮುಂಬೈ ವಿರುದ್ಧ ಗೆದ್ದ ಕೆಕೆಆರ್ ಪ್ಲೇ ಆಫ್ ಜೀವಂತ, ಪಾಯಿಂಟ್ಸ್ ಎಷ್ಟು?KKR vs MI: ಮುಂಬೈ ವಿರುದ್ಧ ಗೆದ್ದ ಕೆಕೆಆರ್ ಪ್ಲೇ ಆಫ್ ಜೀವಂತ, ಪಾಯಿಂಟ್ಸ್ ಎಷ್ಟು?

ಇನ್ನು ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಮೊದಲನೇ ಓವರ್‌ನ ಅಂತಿಮ ಎಸೆತದಲ್ಲಿಯೇ ಔಟ್ ಆಗುವ ಮೂಲಕ ಮತ್ತೊಮ್ಮೆ ನಿರಾಸೆ ಮೂಡಿಸಿದ್ದಾರೆ. ಹೌದು, ಕೋಲ್ಕತ್ತಾ ನೈಟ್ ರೈಡರ್ಸ್ ನೀಡಿದ್ದ ಗುರಿಯನ್ನು ಬೆನ್ನತ್ತಲು ಯತ್ನಿಸಿದ ಮುಂಬೈ ಇಂಡಿಯನ್ಸ್ ಪರ ಆರಂಭಿಕ ಆಟಗಾರರಾಗಿ ನಾಯಕ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಕಣಕ್ಕಿಳಿದರು. ಈ ಪೈಕಿ ರೋಹಿತ್ ಶರ್ಮಾ ಟಿಮ್ ಸೌಥಿ ಎಸೆದ ಮೊದಲ ಓವರ್‌ನ ಅಂತಿಮ ಎಸೆತದಲ್ಲಿ ವಿಕೆಟ್ ಕೀಪರ್‌ಗೆ ಕ್ಯಾಚ್ ನೀಡುವ ಮೂಲಕ ಔಟ್ ಆಗಿದ್ದಾರೆ.

"ಐಪಿಎಲ್ 2022ರ ಅತಿ ಕೆಟ್ಟ ರೀಟೆನ್ಶನ್ ಇದು": ಮುಂಬೈ ಇಂಡಿಯನ್ಸ್ ಸೋಲಿನ ಬಳಿಕ ಅಭಿಮಾನಿಗಳ ಆಕ್ರೋಶ

ಇನ್ನು ಮೊದಲಿಗೆ ರೋಹಿತ್ ಶರ್ಮಾ ವಿಕೆಟ್ ಕುರಿತು ಕೋಲ್ಕತ್ತಾ ನೈಟ್ ರೈಡರ್ಸ್ ಮನವಿ ಮಾಡಿದಾಗ ಮೈದಾನದಲ್ಲಿದ್ದ ಅಂಪೈರ್ ಅದನ್ನು ನಾಟ್ಔಟ್ ಎಂದು ತೀರ್ಪನ್ನು ನೀಡಿದ್ದರು. ಆದರೆ, ನಂತರ ಕೆಕೆಆರ್ ಡಿಆರ್ಎಸ್ ಮೊರೆ ಹೋದ ನಂತರ ಮೂರನೇ ಅಂಪೈರ್ ತೀರ್ಪನ್ನು ಬದಲಿಸಿ ಅದನ್ನು ಔಟ್ ಎಂದು ಘೋಷಿಸಿದರು. ಆದರೆ, ಇದರ ಕುರಿತು ಆ ಕ್ಷಣದಿಂದಲೇ ಅಸಮಾಧಾನದ ಹೊಗೆ ಎದ್ದಿದ್ದು, ಇದೊಂದು ಮೋಸದ ತೀರ್ಪು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಅಂದಹಾಗೆ ರೋಹಿತ್ ಶರ್ಮಾರ ಈ ವಿಕೆಟ್ ಕುರಿತು ಅಸಮಾಧಾನ ಭುಗಿಲೇಳಲು ಕಾರಣವೇನು ಎಂಬುದರ ಕುರಿತಾದ ವಿವರ ಈ ಕೆಳಕಂಡಂತಿದೆ ಓದಿ..

ಮೋಸವೆನ್ನಲು ಇದೇ ಕಾರಣ

ಮೋಸವೆನ್ನಲು ಇದೇ ಕಾರಣ

ಇನ್ನು ನಾಟ್ ಔಟ್ ಇದ್ದ ತೀರ್ಪನ್ನು ಮೂರನೇ ಅಂಪೈರ್ ಡಿಆರ್ಎಸ್ ನಿಯಮದಡಿಯಲ್ಲಿ ಔಟ್ ಎಂದು ಘೋಷಿಸಿದ ನಂತರ ಮೈದಾನದಲ್ಲಿದ್ದ ರೋಹಿತ್ ಶರ್ಮಾ ಸೇರಿದಂತೆ ಇಡೀ ಪ್ರೇಕ್ಷಕ ವೃಂದವೇ ಆಶ್ಚರ್ಯಕ್ಕೊಳಗಾಗಿತ್ತು. ಇದೊಂದು ಮೋಸದ ತೀರ್ಪು ಎಂಬ ಅಭಿಪ್ರಾಯಗಳು ಆ ಕ್ಷಣದಿಂದಲೇ ವ್ಯಕ್ತವಾದವು. ಈ ರೀತಿಯ ಅಭಿಪ್ರಾಯಗಳು ಕೇಳಿಬರಲು ಬಲವಾದ ಕಾರಣವೂ ಸಹ ಇದೆ. ಹೌದು, ಈ ರೀತಿಯ ಅಭಿಪ್ರಾಯ ಮತ್ತು ಅಸಮಾಧಾನ ಉಂಟಾಗಲು ಕಾರಣ ಗೊಂದಲಮಯ ಡಿಆರ್ಎಸ್ ನಿಯಮ. ಡಿಆರ್ಎಸ್ ರಿವ್ಯೂನಲ್ಲಿ ಚೆಂಡು ಬ್ಯಾಟ್‌ಗೆ ತಾಗದೇ ರೋಹಿತ್ ಶರ್ಮಾ ನಡುವಿಗೆ ಬಡಿದು ವಿಕೆಟ್ ಕೀಪರ್ ಕೈಸೇರಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತಿತ್ತು. ಆದರೆ, ಅಲ್ಟ್ರಾ ಎಡ್ಜ್ ರಿವ್ಯೂನಲ್ಲಿ ಚೆಂಡು ಬ್ಯಾಟ್‌ಗೆ ತಾಗಿದೆ ಎಂದು ತೋರಿಸಲಾಗಿದೆ. ಅಷ್ಟೇ ಅಲ್ಲದೇ ಚೆಂಡು ಬ್ಯಾಟ್ ಬಳಿ ಸರಿಯಾಗಿ ಬರುವುದಕ್ಕೂ ಮುನ್ನವೇ ಅಲ್ಟ್ರಾ ಎಡ್ಜ್‌ನಲ್ಲಿ ಚೆಂಡು ತಾಗಿರುವ ನಕ್ಷೆ ಕಂಡುಬಂದಿದೆ. ಹೀಗೆ ಚೆಂಡು ಬ್ಯಾಟ್ ಬಳಿ ಬರುವುದಕ್ಕೂ ಮುನ್ನ ಅಲ್ಟ್ರಾ ಎಡ್ಜ್‌ನಲ್ಲಿ ಈ ರೀತಿ ಗೋಚರಿಸಲು ಹೇಗೆ ಸಾಧ್ಯ, ಇದೊಂದು ಮೋಸದ ತೀರ್ಪು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ತೀರ್ಪನ್ನು ನಂಬದ ರೋಹಿತ್ ಶರ್ಮಾ

ತೀರ್ಪನ್ನು ನಂಬದ ರೋಹಿತ್ ಶರ್ಮಾ

ಇನ್ನು ಡಿಆರ್ಎಸ್ ರಿವ್ಯೂನಲ್ಲಿ ಔಟ್ ಎಂದು ಘೋಷಣೆಯಾಗುತ್ತಿದ್ದಂತೆ ಆಶ್ಚರ್ಯಕ್ಕೊಳಗಾದ ರೋಹಿತ್ ಶರ್ಮಾ ಬೇಸರದಲ್ಲಿಯೇ ತಲೆಯಾಡಿಸಿ ಮೈದಾನದಿಂದ ಹೊರನಡೆದಿದ್ದಾರೆ. ರೋಹಿತ್ ಶರ್ಮಾ ಅವರ ಈ ನಡೆ ಆ ತೀರ್ಪಿನ ವಿರುದ್ಧ ನಡೆಸಿದ ಮೌನ ಪ್ರತಿಭಟನೆಯಂತಿತ್ತು. ಇನ್ನು ಮುಂಬೈ ಇಂಡಿಯನ್ಸ್ ತಂಡದ ಕೋಚ್ ಮಹೇಲಾ ಜಯವರ್ಧನೆ ಕೂಡ ಈ ತೀರ್ಪನ್ನು ಕಂಡು ತಲೆ ಮೇಲೆ ಕೈಹೊತ್ತು ಕುಳಿತರು ಹಾಗೂ ಕ್ರಿಕೆಟ್ ಪ್ರೇಕ್ಷಕರು ಮತ್ತು ಮುಂಬೈ ಇಂಡಿಯನ್ಸ್ ತಂಡದ ಸಿಬ್ಬಂದಿ ವರ್ಗ ಕೂಡ ಈ ತೀರ್ಪನ್ನು ನಂಬಲಾಗದೇ ಮೌನವಹಿಸಿದ್ದರು.

ಮುಂಬೈ ಸೋಲಿಗೆ ರೋಹಿತ್ ಶರ್ಮಾ ಹೊಣೆ ಹಾಕಿದ್ದು ಯಾರ ಮೇಲೆ? | Oneindia Kannada
ಕಮ್‌ಬ್ಯಾಕ್ ಮಾಡುವಲ್ಲಿ ರೋಹಿತ್ ಪದೇಪದೇ ವಿಫಲ

ಕಮ್‌ಬ್ಯಾಕ್ ಮಾಡುವಲ್ಲಿ ರೋಹಿತ್ ಪದೇಪದೇ ವಿಫಲ

ಈ ಪಂದ್ಯದಲ್ಲಿ 6 ಎಸೆತಗಳನ್ನು ಎದುರಿಸಿ ಕೇವಲ 2 ರನ್ ಕಲೆಹಾಕಿದ ರೋಹಿತ್ ಶರ್ಮಾ ಟೂರ್ನಿಯಲ್ಲಿ ಮತ್ತೊಮ್ಮೆ ವಿಫಲರಾದರು. ಈ ಬಾರಿಯ ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 11 ಪಂದ್ಯಗಳನ್ನಾಡಿರುವ ರೋಹಿತ್ ಶರ್ಮಾ 200 ರನ್ ಮಾತ್ರ ಗಳಿಸಿದ್ದಾರೆ. ಹಾಗೂ ಟೂರ್ನಿಯಲ್ಲಿ ಒಮ್ಮೆಯೂ ಅರ್ಧಶತಕವನ್ನು ಗಳಿಸಲಾಗದ ರೋಹಿತ್ ಶರ್ಮಾ ತಮ್ಮ ಕೆಟ್ಟ ಫಾರ್ಮ್ ಮುಂದುವರೆಸಿದ್ದಾರೆ.

Story first published: Tuesday, May 10, 2022, 15:38 [IST]
Other articles published on May 10, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X