ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2022 ರಿಟೆನ್ಷನ್: ಆರ್‌ಸಿಬಿಯ ಈ ಇಬ್ಬರು ಆಟಗಾರರು ಮಾತ್ರ ಸೇಫ್, ಉಳಿದವರ ಕಥೆ?

IPL 2022: Royal Challengers Bangalore likely to retain Virat Kohli and Glenn Maxeell ahead of Mega Auction

ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಒಂದೆಡೆ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಟೆಸ್ಟ್ ಸರಣಿ ಸದ್ದು ಮಾಡುತ್ತಿದ್ದರೆ, ಮತ್ತೊಂದೆಡೆ ಮುಂಬರಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಸಲುವಾಗಿ ಇಂದು ( ನವೆಂಬರ್‌ 30 ) ನಡೆಯಲಿರುವ ಆಟಗಾರರ ರೀಟೈನ್‌ಮೆಂಟ್ ಕೂಡ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ. ಹೌದು, ಮುಂದಿನ ವರ್ಷ ನಡೆಯಲಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 2 ನೂತನ ಫ್ರಾಂಚೈಸಿಗಳಾದ ಅಹ್ಮದಾಬಾದ್ ಲಕ್ನೋನ ತಂಡಗಳು ಕಣಕ್ಕಿಳಿಯಲಿವೆ. ಹೀಗಾಗಿ ಆ ಆವೃತ್ತಿ ಆರಂಭಕ್ಕೂ ಮುನ್ನ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದ್ದು, ಇದಕ್ಕೂ ಮುನ್ನ ಸದ್ಯ ಅಸ್ತಿತ್ವದಲ್ಲಿರುವ 8 ತಂಡಗಳಿಗೆ 4 ಆಟಗಾರರನ್ನು ಉಳಿಸಿಕೊಳ್ಳಲು ಬಿಸಿಸಿಐ ಅನುಮತಿ ನೀಡಿದೆ.

ಕಾನ್ಪುರ ಟೆಸ್ಟ್: ಗೆದ್ದೇಬಿಟ್ಟೆವು ಎಂಬ ಉತ್ಸಾಹದಲ್ಲಿದ್ದ ಟೀಮ್ ಇಂಡಿಯಾಗೆ ಉಲ್ಟಾ ಹೊಡೆದಿದ್ದು ಈ 3 ಅಂಶಗಳು!ಕಾನ್ಪುರ ಟೆಸ್ಟ್: ಗೆದ್ದೇಬಿಟ್ಟೆವು ಎಂಬ ಉತ್ಸಾಹದಲ್ಲಿದ್ದ ಟೀಮ್ ಇಂಡಿಯಾಗೆ ಉಲ್ಟಾ ಹೊಡೆದಿದ್ದು ಈ 3 ಅಂಶಗಳು!

ಹೌದು, ಗರಿಷ್ಠ ಇಬ್ಬರು ವಿದೇಶಿ ಆಟಗಾರರನ್ನೊಳಗೊಂಡಂತೆ ಒಟ್ಟು 4 ಆಟಗಾರರನ್ನು ಫ್ರಾಂಚೈಸಿಯೊಂದು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಸಲುವಾಗಿ ತಂಡದಲ್ಲಿಯೇ ಉಳಿಸಿಕೊಳ್ಳಬಹುದಾಗಿದೆ. ಹೀಗೆ ವಿವಿಧ ತಂಡಗಳು ಯಾವ ಆಟಗಾರರನ್ನು ಮೆಗಾ ಹರಾಜಿಗೆ ಕಳುಹಿಸದೇ ತಮ್ಮ ತಂಡದಲ್ಲಿಯೇ ಉಳಿಸಿಕೊಳ್ಳಲಿವೆ ಎಂಬ ಮಾಹಿತಿಯನ್ನು ನವೆಂಬರ್ 30ರೊಳಗೆ ಸಲ್ಲಿಸಬೇಕು ಎಂದು ಬಿಸಿಸಿಐ ಸೂಚನೆಯನ್ನು ನೀಡಿತ್ತು. ಅದರಂತೆಯೇ ಇದೀಗ ವಿವಿಧ ತಂಡಗಳು ಯಾವ ಆಟಗಾರರನ್ನು ಉಳಿಸಿಕೊಳ್ಳಲಿವೆ ಎಂಬ ವಿವರವನ್ನು ಬಿಸಿಸಿಐಗೆ ಸಲ್ಲಿಸಲಾಗಿದೆ ಎನ್ನಲಾಗುತ್ತಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಬ್ಬರು ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ತೀರ್ಮಾನಿಸಿದೆ ಎಂಬ ಸುದ್ದಿ ಇದೆ.

ಜೀವನದುದ್ದಕ್ಕೂ ವರ್ಣಭೇದ ತಾರತಮ್ಯಕ್ಕೆ ಒಳಗಾಗಿದ್ದೇನೆ: ಮಾಜಿ ಸ್ಪಿನ್ನರ್ ಲಕ್ಷ್ಮಣ್ ಶಿವರಾಮಕೃಷ್ಣನ್ಜೀವನದುದ್ದಕ್ಕೂ ವರ್ಣಭೇದ ತಾರತಮ್ಯಕ್ಕೆ ಒಳಗಾಗಿದ್ದೇನೆ: ಮಾಜಿ ಸ್ಪಿನ್ನರ್ ಲಕ್ಷ್ಮಣ್ ಶಿವರಾಮಕೃಷ್ಣನ್

ಈ ಹಿಂದೆ ಹೊರಬಿದ್ದಿದ್ದ ಮಾಹಿತಿಯ ಪ್ರಕಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಯುಜ್ವೇಂದ್ರ ಚಾಹಲ್ ಮತ್ತು ಹರ್ಷಲ್ ಪಟೇಲ್ ಈ 4 ಆಟಗಾರರನ್ನು ರಿಟೈನ್ ಮಾಡಿಕೊಳ್ಳಲಿದೆ ಎನ್ನಲಾಗುತ್ತಿತ್ತು. ಆದರೆ ಇದೀಗ ಬಂದಿರುವ ಬಲ್ಲ ಮೂಲಗಳ ಮಾಹಿತಿಯ ಪ್ರಕಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಕೆಳಕಂಡಂತೆ ಆಟಗಾರರನ್ನು ರಿಟೈನ್ ಮಾಡಿಕೊಳ್ಳಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ರಿಟೇನ್ ಮಾಡಿಕೊಳ್ಳಲಿರುವ ಇಬ್ಬರು ಆಟಗಾರರು

ರಾಯಲ್ ಚಾಲೆಂಜರ್ಸ್ ಬೆಂಗಳೂರು ರಿಟೇನ್ ಮಾಡಿಕೊಳ್ಳಲಿರುವ ಇಬ್ಬರು ಆಟಗಾರರು

ಬಲ್ಲ ಮೂಲಗಳ ಮಾಹಿತಿಯ ಪ್ರಕಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸದ್ಯ ಈ ಇಬ್ಬರು ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳುತ್ತಿದೆ. ಹೌದು, ವಿರಾಟ್ ಕೊಹ್ಲಿ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಈ ಇಬ್ಬರನ್ನು ಮಾತ್ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಿಟೈನ್ ಮಾಡಿಕೊಳ್ಳಲು ತೀರ್ಮಾನಿಸಿದೆ ಎನ್ನಲಾಗುತ್ತಿದೆ.

ಚಹಲ್, ಸಿರಾಜ್ ಹಾಗೂ ಮುಂತಾದವರನ್ನು ಉಳಿಸಿಕೊಳ್ಳುವುದರ ಕುರಿತು ನಡೆಯುತ್ತಿದೆ ಚರ್ಚೆ

ಚಹಲ್, ಸಿರಾಜ್ ಹಾಗೂ ಮುಂತಾದವರನ್ನು ಉಳಿಸಿಕೊಳ್ಳುವುದರ ಕುರಿತು ನಡೆಯುತ್ತಿದೆ ಚರ್ಚೆ

ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ವಿರಾಟ್ ಕೊಹ್ಲಿ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಈ ಇಬ್ಬರು ಆಟಗಾರರನ್ನು ಉಳಿಸಿಕೊಳ್ಳುವುದು ಬಹುತೇಕ ಖಚಿತವಾಗಿದ್ದು, ಇನ್ನುಳಿದ ಇಬ್ಬರು ಆಟಗಾರರ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಲಿದೆ ಎಂಬ ಪ್ರಶ್ನೆ ಇದೀಗ ಮೂಡಿದೆ. ಇನ್ನು ಯಜುವೇಂದ್ರ ಚಹಾಲ್, ದೇವದತ್ ಪಡಿಕ್ಕಲ್, ಮೊಹಮ್ಮದ್ ಸಿರಾಜ್ ಮತ್ತು ಕೆಎಸ್ ಭರತ್ ಈ 4 ಆಟಗಾರರಲ್ಲಿ ಯಾರಿಗಾದರೂ ಇಬ್ಬರು ಆಟಗಾರರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮಣೆ ಹಾಕುವ ಸಾಧ್ಯತೆಗಳಿವೆ.

RCB ಮುಂದಿನ ನಾಯಕನಾಗಲು Maxwellಗೆ ಅವಕಾಶ ? | Oneindia Kannada
ರಿಟೆನ್ಷನ್ ನೇರ ಪ್ರಸಾರ ವೀಕ್ಷಿಸಬಹುದು ಹೇಗೆ?

ರಿಟೆನ್ಷನ್ ನೇರ ಪ್ರಸಾರ ವೀಕ್ಷಿಸಬಹುದು ಹೇಗೆ?

ಐಪಿಎಲ್ ರಿಟೆನ್ಷನ್ ಕಾರ್ಯಕ್ರಮದ ನೇರ ಪ್ರಸಾರವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ನವೆಂಬರ್‌ 30ಕ್ಕೆ ಪ್ರಸಾರವಾಗಲಿದೆ.

Story first published: Tuesday, November 30, 2021, 15:08 [IST]
Other articles published on Nov 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X