ಮುಂಬೈ ಮಾಡಿದ್ದು ಸಣ್ಣ ಸಹಾಯ, ಇನ್ನೇನಿದ್ದರೂ ನಮ್ಮದೇ ಆಟ ಎಂದ ಆರ್‌ಸಿಬಿ ಆಟಗಾರ!

Wankhede Stadiumನಲ್ಲಿ RCB ಅಭಿಮಾನಿಗಳು ಮಾಡಿದ ವಿಶೇಷ ಕೆಲಸ | Oneindia Kannada

ಸದ್ಯ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತ ಮುಕ್ತಾಯಗೊಂಡಿದ್ದು, ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್, ಸಂಜು ಸ್ಯಾಮ್ಸನ್ ನಾಯಕತ್ಬದ ರಾಜಸ್ಥಾನ್ ರಾಯಲ್ಸ್, ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಫಾಫ್ ಡ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಶಸ್ವಿಯಾಗಿ ಪ್ಲೇಆಫ್ ಸುತ್ತಿಗೆ ಲಗ್ಗೆ ಇಟ್ಟಿವೆ.

IPL 2022: ಮುಂದಿನ ಸೀಸನ್‌ಗೆ ಹೊಸ ನಾಯಕನ ಹುಡುಕಾಟ ನಡೆಸಲಿವೆ ಈ 4 ತಂಡಗಳುIPL 2022: ಮುಂದಿನ ಸೀಸನ್‌ಗೆ ಹೊಸ ನಾಯಕನ ಹುಡುಕಾಟ ನಡೆಸಲಿವೆ ಈ 4 ತಂಡಗಳು

ಇನ್ನು ಗುಜರಾತ್ ಟೈಟನ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ನೇರವಾಗಿ ಪ್ಲೇಆಫ್ ತಲುಪಿದರೆ, ಕೊನೆಯದಾಗಿ ಪ್ಲೇಆಪ್ ಸುತ್ತಿಗೆ ಲಗ್ದೆ ಇಟ್ಟ ರಾಯಲ್ ಚಾಲೆಂಜರ್ಸ್ ಈ ಸುತ್ತಿಗೆ ಅರ್ಹತೆ ಪಡೆಯಲು ಮುಂಬೈ ಇಂಡಿಯನ್ಸ್ ತಂಡದ ಮೇಲೆ ಅವಲಂಬಿತವಾಗಿತ್ತು. ಹೌದು, ಪ್ಲೇಆಫ್ ಅರ್ಹತೆ ಪಡೆದುಕೊಳ್ಳುವಲ್ಲಿ ರಾಯಲ್ ಚಾಲೆಂಜರಸ್ ಬೆಂಗಳೂರು ಮತ್ತು ಡೆಲ್ಲಿ ಕಾಪಿಟಲ್ಸ್ ನಡುವಣ ತೀವ್ರ ಪೈಫೋಟಿ ಇತ್ತು. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಶಸ್ವಿಯಾಗಿ ಪ್ಲೇಆಫ್ ತಲುಪಬೇಕೆಂದರೆ ಮುಂಬೈ ಇಂಡಿಯನ್ಸ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಬೇಕಿತ್ತು. ಅದರಂತೆ ಶನಿವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 5 ವಿಕೆಟ್‌ಗಳ ಗೆಲುವನ್ನು ದಾಖಲಿಸಿದೆ.

ಹೈದ್ರಾಬಾದ್ ವಿರುದ್ಧ ಗೆದ್ದ ಪಂಜಾಬ್ ಕಿಂಗ್ಸ್‌: ಟ್ವಿಟ್ಟರ್‌ನಲ್ಲಿ ಲಿವಿಂಗ್‌ಸ್ಟೋನ್‌ಗೆ ಜೈಕಾರಹೈದ್ರಾಬಾದ್ ವಿರುದ್ಧ ಗೆದ್ದ ಪಂಜಾಬ್ ಕಿಂಗ್ಸ್‌: ಟ್ವಿಟ್ಟರ್‌ನಲ್ಲಿ ಲಿವಿಂಗ್‌ಸ್ಟೋನ್‌ಗೆ ಜೈಕಾರ

ಹೀಗೆ ಮುಂಬೈ ಇಂಡಿಯನ್ಸ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿದ ಕಾರಣ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಆಫ್ ಸುತ್ತಿಗೆ ಲಗ್ಗೆ ಇಟ್ಟಿದ್ದು, ಪಂದ್ಯ ಆರಂಭವಾಗುವುದಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ತಂಡಕ್ಕೆ ಬೆಂಬಲ ನೀಡಲು ಮುಂದಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರು ಒಟ್ಟಿಗೆ ಕೂತು ಸಂಪೂರ್ಣ ಪಂದ್ಯವನ್ನು ವೀಕ್ಷಿಸಿ ಮುಂಬೈ ಇಂಡಿಯನ್ಸ್ ತಂಡದ ಗೆಲುವನ್ನು ಸಂಭ್ರಮಿಸಿದ್ದಾರೆ. ಇನ್ನು ಪಂದ್ಯ ಮುಕ್ತಾಯವಾದ ನಂತರ ಮಾತನಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್, ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಈ ಕೆಳಕಂಡಂತೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಧನ್ಯವಾದ ಹೇಳಿದ್ದಾರೆ.

ಎಂದಿಗೂ ಮರೆಯುವುದಿಲ್ಲ ಎಂದ ಕೊಹ್ಲಿ

ಎಂದಿಗೂ ಮರೆಯುವುದಿಲ್ಲ ಎಂದ ಕೊಹ್ಲಿ

ಮುಂಬೈ ಇಂಡಿಯನ್ಸ್ ಗೆದ್ದಾಗ ಚೇಂಜಿಂಗ್ ಕೊಠಡಿಯಲ್ಲಾದ ಭಾವನೆಗಳ ಬದಲಾವಣೆಯನ್ನು ನಿಜಕ್ಕೂ ನಂಬಲಾಗುತ್ತಿಲ್ಲ, ಇದನ್ನು ಎಂದಿಗೂ ಮರೆಯುವುದಿಲ್ಲ, ಧನ್ಯವಾದಗಳು ಮುಂಬೈ ಎಂದು ವಿರಾಟ್ ಕೊಹ್ಲಿ ಹೇಳಿಕೆ ನೀಡಿದ್ದಾರೆ. ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯವನ್ನು ಎಲ್ಲರೂ ಸಂಪೂರ್ಣವಾಗಿ ವೀಕ್ಷಿಸಿದೆವು ಎಂದ ವಿರಾಟ್ ಕೊಹ್ಲಿ ಮುಂಬೈ ಇಂಡಿಯನ್ಸ್ ವಿಕೆಟ್ ಪಡೆದಾಗ ಮತ್ತು ಬೌಂಡರಿ ಬಾರಿಸಿದಾಗ ಸಂಭ್ರಮಿಸುತ್ತಿದ್ದೆವು ಎಂದು ಹೇಳಿಕೊಂಡಿದ್ದಾರ.

ಮುಂಬೈ ಇಂಡಿಯನ್ಸ್ ಸಹಾಯ ಬೇಕಿತ್ತು ಎಂದ ಡು ಪ್ಲೆಸಿಸ್

ಮುಂಬೈ ಇಂಡಿಯನ್ಸ್ ಸಹಾಯ ಬೇಕಿತ್ತು ಎಂದ ಡು ಪ್ಲೆಸಿಸ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡುಪ್ಲೆಸಿಸ್ ಕೂಡ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯ ಮುಕ್ತಾಯವಾದ ನಂತರ ಮಾತನಾಡಿದ್ದು, ಗುಜರಾತ್ ಟೈಟನ್ಸ್ ವಿರುದ್ಧದ ಅಂತಿಮ ಪಂದ್ಯ ಈ ಬಾರಿಯ ಟೂರ್ನಿಯಲ್ಲಿ ತಾವಾಡಿದ ಅತ್ಯುತ್ತಮ ಪಂದ್ಯವಾಗಿತ್ತು ಎಂದರು. ಹಾಗೂ ಈ ಪಂದ್ಯವನ್ನು ಗೆದ್ದರೂ ಸಹ ತಮಗೆ ಬೇರೆಯವರ ಸಹಾಯ ಬೇಕಿತ್ತು ಹಾಗೂ ಈ ಸಹಾಯವನ್ನು ಮುಂಬೈ ಇಂಡಿಯನ್ಸ್ ಮಾಡಿತು ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಹಾಗೂ ಸಹಾಯ ಮಾಡಿದ ಮುಂಬೈ ಇಂಡಿಯನ್ಸ್‌ಗೆ ಧನ್ಯವಾದವನ್ನೂ ಸಹ ತಿಳಿಸಿದ್ದಾರೆ.

ಗ್ಲೆನ್ ಮ್ಯಾಕ್ಸ್‌ವೆಲ್ ಹೇಳಿದ್ದಿಷ್ಟು

ಗ್ಲೆನ್ ಮ್ಯಾಕ್ಸ್‌ವೆಲ್ ಹೇಳಿದ್ದಿಷ್ಟು

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆದ್ದದ್ದು ಅದ್ಭುತ ಫಲಿತಾಂಶ ಎಂದಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಈ ಬಾರಿ ನಾವು ಉತ್ತಮ ಪ್ರದರ್ಶನ ನೀಡಿ ಪ್ಲೇಆಫ್ ಸನಿಹಕ್ಕೆ ಬಂದಿದ್ದೆವು, ಈ ಸಂದರ್ಭದಲ್ಲಿ ನಮಗೆ ಇತರೆ ತಂಡದಿಂದ ಸಣ್ಣ ಸಹಾಯವೊಂದು ಬೇಕಿತ್ತು, ಮುಂಬೈ ಗೆಲುವು ಅದನ್ನು ಮಾಡಿದೆ, ಆದರೆ ಇನ್ನು ಮುಂದೆ ನಮ್ಮದೇ ಆಟ ಎಂದು ಗ್ಲೆನ್ ಮ್ಯಾಕ್ಸ್‌ವೆಲ್ ಹೇಳಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Monday, May 23, 2022, 9:41 [IST]
Other articles published on May 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X