ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಾವಿರಾರು ಕೋಟಿಯ 2 ನೂತನ ಐಪಿಎಲ್ ತಂಡ ಪ್ರಕಟ: ಮತ್ತೆ ಬಂದರು ಆ ಹಳೇ ತಂಡದ ಮಾಲೀಕರು!

IPL 2022: RPSG and CVC companies win bids for Lucknow and Ahmadabad
ಅಹಮದಾಬಾದ್ ಮತ್ತು ಲಕ್ನೋ ಮುಂದಿನ ಋತುವಿನಿಂದ ಭಾರತೀಯ IPL ಕುಟುಂಬದ ಇಬ್ಬರು ಹೊಸ ಸದಸ್ಯರು | Oneindia Kannada

ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆವೃತ್ತಿಗೆ 2 ನೂತನ ತಂಡಗಳ ಸೇರ್ಪಡೆಯಾಗಲಿದೆ ಎಂಬ ವಿಷಯವನ್ನು ಈ ಹಿಂದೆಯೇ ಬಿಸಿಸಿಐ ತಿಳಿಸಿತ್ತು. ಹೌದು, ಮುಂದಿನ ವರ್ಷ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 10 ತಂಡಗಳು ಕಣಕ್ಕಿಳಿಯಲಿದ್ದು ಸೆಣಸಾಟ ನಡೆಸಲಿವೆ ಹಾಗೂ ಹೊಸದಾಗಿ ಯಾವ ಫ್ರಾಂಚೈಸಿಗಳು ಮುಂಬರಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನೂತನ ತಂಡಗಳನ್ನು ಖರೀದಿಸಲಿವೆ ಮತ್ತು ಆ ತಂಡಗಳು ಯಾವುವು ಎಂಬುದನ್ನು ಅಕ್ಟೋಬರ್ 25ರಂದು ಘೋಷಣೆ ಮಾಡುವುದಾಗಿ ಬಿಸಿಸಿಐ ತಿಳಿಸಿತ್ತು.

ಪಾಕ್ ವಿರುದ್ಧದ ಸೋಲಿಗೆ ಕಾರಣ ಬಿಚ್ಚಿಟ್ಟ ಕೊಹ್ಲಿ; ಕಳಪೆ ಪ್ರದರ್ಶನ ನೀಡಿದ ರೋಹಿತ್ ಬಗ್ಗೆ ಕೊಹ್ಲಿ ಮಾತುಪಾಕ್ ವಿರುದ್ಧದ ಸೋಲಿಗೆ ಕಾರಣ ಬಿಚ್ಚಿಟ್ಟ ಕೊಹ್ಲಿ; ಕಳಪೆ ಪ್ರದರ್ಶನ ನೀಡಿದ ರೋಹಿತ್ ಬಗ್ಗೆ ಕೊಹ್ಲಿ ಮಾತು

ಅದರಂತೆ ಇದೀಗ ದುಬೈ ನಗರದಲ್ಲಿ ಮುಂಬರಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಸೇರಿಕೊಳ್ಳಲಿರುವ 2 ನೂತನ ತಂಡಗಳಿಗೆ ಬಿಡ್ಡಿಂಗ್ ನಡೆಸಲಾಯಿತು. ಈ ಹರಾಜಿನಲ್ಲಿ ಸುಮಾರು 22 ವಿವಿಧ ಕಂಪನಿಗಳು ಪಾಲ್ಗೊಂಡಿದ್ದವು. ಈ 22 ಕಂಪನಿಗಳ ಪೈಕಿ ಸಂಜೀವ್ ಗೊಯಂಕಾ ಮಾಲೀಕತ್ವದ ಆರ್‌ಪಿಎಸ್‌ಜಿ ಹಾಗೂ ಲಂಡನ್ ಮೂಲದ ಕಂಪೆನಿಯಾದ ಸಿವಿಸಿ ಕ್ಯಾಪಿಟಲ್ ನೂತನ ತಂಡಗಳನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿವೆ. ಈ ಹರಾಜಿನಲ್ಲಿ ಅದಾನಿ ಗ್ರೂಪ್, ಮ್ಯಾಂಚೆಸ್ಟರ್ ಯುನೈಟೆಡ್, ಜಿಂದಾಲ್ ಸ್ಟೀಲ್ಸ್ ಹಾಗೂ ರಿತಿ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಸೇರಿದಂತೆ ಇನ್ನೂ ಹಲವಾರು ಪ್ರಮುಖ ಕಂಪನಿಗಳು ಭಾಗವಹಿಸಿದ್ದವು.

ಟಿ20 ವಿಶ್ವಕಪ್: ಈ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ ಎಂದು ಬಲಿಷ್ಠ ತಂಡವನ್ನೇ ಕಡೆಗಣಿಸಿದ ಇಯಾನ್ ಚಾಪೆಲ್!ಟಿ20 ವಿಶ್ವಕಪ್: ಈ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ ಎಂದು ಬಲಿಷ್ಠ ತಂಡವನ್ನೇ ಕಡೆಗಣಿಸಿದ ಇಯಾನ್ ಚಾಪೆಲ್!

ಇನ್ನು ನೂತನ ಐಪಿಎಲ್ ಫ್ರಾಂಚೈಸಿಗಳ ಘೋಷಣೆಯ ದಿನಾಂಕ ಹತ್ತಿರ ಬರುತ್ತಿದ್ದಂತೆ ದೀಪಿಕಾ ಪಡುಕೋಣೆ - ರಣ್ವೀರ್ ಸಿಂಗ್ ಹಾಗೂ ಮ್ಯಾಂಚೆಸ್ಟರ್ ಯುನೈಟೆಡ್ ಮತ್ತು ಅದಾನಿ ಕಂಪೆನಿ ನೂತನ ಐಪಿಎಲ್ ತಂಡಗಳನ್ನು ಖರೀದಿಸಲಿದ್ದಾರೆ ಎಂಬ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು. ಆದರೆ ಈ ಸುದ್ದಿಗಳೆಲ್ಲಾ ಇದೀಗ ಹುಸಿಯಾಗಿದ್ದು 2 ನೂತನ ಐಪಿಎಲ್ ತಂಡಗಳು ಸಂಜೀವ್ ಗೊಯಂಕಾ ಮಾಲೀಕತ್ವದ ಆರ್‌ಪಿಎಸ್‌ಜಿ ಹಾಗೂ ಲಂಡನ್ ಮೂಲದ ಕಂಪೆನಿಯಾದ ಸಿವಿಸಿ ಕ್ಯಾಪಿಟಲ್ ಪಾಲಾಗಿವೆ. ಹೀಗೆ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದ್ದು ಯಾವ ಕಂಪನಿ ಯಾವ ತಂಡವನ್ನು ಎಷ್ಟು ಮೊತ್ತಕ್ಕೆ ಖರೀದಿಸಿದೆ ಎಂಬುದರ ಸಂಪೂರ್ಣ ವಿವರ ಈ ಕೆಳಕಂಡಂತಿದೆ.

ಲಕ್ನೋ, ಅಹ್ಮದಾಬಾದ್ ನೂತನ ತಂಡಗಳು

ಲಕ್ನೋ, ಅಹ್ಮದಾಬಾದ್ ನೂತನ ತಂಡಗಳು

ಮುಂಬರಲಿರುವ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಗೆ ಅಹ್ಮದಾಬಾದ್, ಲಕ್ನೋ, ಕಟಕ್, ಗುವಾಹಟಿ ಮತ್ತು ಧರ್ಮಶಾಲಾ ತಂಡಗಳಿಗಾಗಿ ಹರಾಜು ಪ್ರಕ್ರಿಯೆ ನಡೆದಿತ್ತು. ಈ ಹರಾಜು ಪ್ರಕ್ರಿಯೆಯಲ್ಲಿ ಅಂತಿಮವಾಗಿ ಲಕ್ನೋ ಮತ್ತು ಅಹಮದಾಬಾದ್ ತಂಡಗಳು ಮುಂಬರಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಸೇರ್ಪಡೆಯಾಗಲಿರುವ 2 ನೂತನ ತಂಡಗಳಾಗಿ ಹೊರಹೊಮ್ಮಿವೆ.

ಲಕ್ನೋ ಖರೀದಿಸಿದ ಹಳೇ ಮಾಲೀಕರು, ಸಿವಿಸಿ ಪಾಲಾದ ಅಹ್ಮದಾಬಾದ್

ಲಕ್ನೋ ಖರೀದಿಸಿದ ಹಳೇ ಮಾಲೀಕರು, ಸಿವಿಸಿ ಪಾಲಾದ ಅಹ್ಮದಾಬಾದ್

ಹೀಗೆ ನಡೆದ ಹರಾಜಿನಲ್ಲಿ 22 ವಿವಿಧ ಕಂಪನಿಗಳು ಭಾಗವಹಿಸಿದ್ದು 10 ಕಂಪನಿಗಳು ಅಂತಿಮವಾಗಿದ್ದವು. ಈ ಕಂಪೆನಿಗಳ ಪೈಕಿ ಕೊನೆಗೆ ಸಂಜೀವ್ ಗೊಯಂಕಾ ಮಾಲೀಕತ್ವದ ಆರ್‌ಪಿಎಸ್‌ಜಿ ಲಕ್ನೋ ತಂಡವನ್ನು 7,090 ಕೋಟಿಗೆ ಖರೀದಿಸಿತು ಹಾಗೂ ಲಂಡನ್ ಮೂಲದ ಕಂಪೆನಿಯಾದ ಸಿವಿಸಿ ಕ್ಯಾಪಿಟಲ್ ಅಹಮದಾಬಾದ್ ತಂಡವನ್ನು 5,600 ಕೋಟಿಗೆ ತನ್ನದಾಗಿಸಿಕೊಂಡಿತು. ಈ ಬಾರಿಯ ಹರಾಜಿನಲ್ಲಿ ಲಕ್ನೋ ತಂಡವನ್ನು ಖರೀದಿಸಿರುವ ಆರ್‌ಪಿಎಸ್‌ಜಿ ಮಾಲೀಕ ಸಂಜೀವ್ ಗೊಯಂಕಾ ಈ ಹಿಂದೆ 2 ವರ್ಷಗಳ ಕಾಲ ಐಪಿಎಲ್ ಆಡಿದ್ದ ಎಂಎಸ್ ಧೋನಿ ನಾಯಕತ್ವದ ರೈಸಿಂಗ್ ಪುಣೆ ಸೂಪರ್‌ಜಿಯಂಟ್ಸ್ ತಂಡವನ್ನು ಖರೀದಿಸಿದ್ದರು. ಈ ಮೂಲಕ ಸಂಜೀವ್ ಗೊಯೆಂಕಾ ರೈಸಿಂಗ್ ಪುಣೆ ಸೂಪರ್‌ಜಿಯಂಟ್ಸ್ ನಂತರ ಲಕ್ನೋ ತಂಡವನ್ನು ಖರೀದಿ ಮಾಡಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಮರುಪ್ರವೇಶಿಸಿದ್ದಾರೆ.

ಎಲ್ಲಾ ಐಪಿಎಲ್ ತಂಡಗಳ ಮೊತ್ತದ ವಿವರ ( ಅಮೆರಿಕನ್ ಮಿಲಿಯನ್ ಡಾಲರ್‌ಗಳಲ್ಲಿ )

ಎಲ್ಲಾ ಐಪಿಎಲ್ ತಂಡಗಳ ಮೊತ್ತದ ವಿವರ ( ಅಮೆರಿಕನ್ ಮಿಲಿಯನ್ ಡಾಲರ್‌ಗಳಲ್ಲಿ )


ಲಕ್ನೋ 950, ಅಹಮದಾಬಾದ್ 710, ಪುಣೆ ವಾರಿಯರ್ಸ್ ಇಂಡಿಯಾ 370, ಕೊಚ್ಚಿ ಟಸ್ಕರ್ಸ್ ಕೇರಳ 333, ಮುಂಬೈ ಇಂಡಿಯನ್ಸ್ 111.9, ರಾಯಲ್ ಚಾಲೆಂಜರ್ಸ್ ಬೆಂಗಳೂರು 111.6, ಡೆಕ್ಕನ್ ಚಾರ್ಜರ್ಸ್ 107, ಚೆನ್ನೈ ಸೂಪರ್ ಕಿಂಗ್ಸ್ 91, ಡೆಲ್ಲಿ ಕ್ಯಾಪಿಟಲ್ಸ್ 84, ಸನ್ ರೈಸರ್ಸ್ ಹೈದರಾಬಾದ್ 79.5 (ಐದು ವರ್ಷಗಳ ಒಪ್ಪಂದ), ಪಂಜಾಬ್ ಕಿಂಗ್ಸ್ 76, ಕೊಲ್ಕತ್ತಾ ನೈಟ್ ರೈಡರ್ಸ್ 75.1 ಮತ್ತು ರಾಜಸ್ಥಾನ್ ರಾಯಲ್ಸ್ 67.

Story first published: Tuesday, October 26, 2021, 9:53 [IST]
Other articles published on Oct 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X