ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

R Ashwin: ಇದ್ದಕ್ಕಿದ್ದಂತೆ ಕ್ರೀಸ್ ಬಿಟ್ಟು ತೆರಳಿದ ಅಶ್ವಿನ್: ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲು!

IPL 2022: RR all-rounder R Ashwin Becomes First cricketer To Be Retired Out In IPL

ಐಪಿಎಲ್‌ನಲ್ಲಿ ಭಾನುವಾರ ನಡೆದ ರಾಜಸ್ಥಾನ್ ರಾಯಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯ ನಿರೀಕ್ಷೆಯಂತೆಯೇ ಅಭಿಮಾನಿಗಳನ್ನು ಅಂತಿಮ ಕ್ಷಣದವರೆಗೂ ಉಸಿರು ಬಿಗಿಹಿಡಿದು ಕೂರುವಂತೆ ಮಾಡಿತ್ತು. ಎರಡೂ ತಂಡಗಳು ಕೂಡ ಸಾಕಷ್ಟು ಸ್ಪೋಟಕ ಬ್ಯಾಟರ್‌ಗಳು ಹಾಗೂ ಪ್ರತಿಭಾವಂತ ಬೌಲರ್‌ಗಳ ಪಡೆಯನ್ನು ಹೊಂದಿದ್ದು ಜಿದ್ದಾಜಿದ್ದಿನ ಪ್ರದರ್ಶನ ಕಂಡುಬಂದಿದೆ. ಅಂತಿಮ ಓವರ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಮೇಲುಗೈ ಸಾಧಿಸಿ ಗೆದ್ದು ಬೀಗಿದೆ.

ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಬ್ಯಾಟಿಂಗ್ ವೇಳೆ ಆರ್ ಅಶ್ವಿನ್ ಐಪಿಎಲ್ ಇತಿಹಾಸವೊಂದನ್ನು ಬರೆದಿದ್ದಾರೆ. ಬ್ಯಾಟಿಂಗ್ ನಡೆಸುತ್ತಿದ್ದ ಆರ್ ಅಶ್ವಿನ್ ರಿಟೈರ್ಡ್ ಔಟ್ ಆಗಿ ಫೆವಿಲಿಯನ್ ಸೇರಿಕೊಂಡಿದ್ದಾರೆ. ಈ ಮೂಲಕ ಐಪಿಎಲ್‌ನಲ್ಲಿ ಈ ರೀತಿಯಾಗಿ ಫೆವಿಲಿಯನ್ ಸೇರಿಕೊಂಡ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ ಆರ್ ಅಶ್ವಿನ್.

ಆರ್ ಅಶ್ವಿನ್ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಬ್ಯಾಟಿಂಗ್ ನಡೆಸಿದ್ದರು. 23 ಎಸೆತಗಳನ್ನು ಎದುರಿಸಿ 28 ರನ್‌ಗಳನ್ನು ಗಳಿಸಿದ್ದರು ಆರ್ ಅಶ್ವಿನ್. 121ರ ಡೀಸೆಂಟ್ ಸರಾಸರಿಯಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದ ಅಶ್ವಿನ್ 2 ಸಿಕ್ಸರ್ ಬಾರಿಸಿದ್ದರು. ಆದರೆ ಇನ್ನಿಂಗ್ಸ್‌ನ ಮುಕ್ತಾಯಕ್ಕೆ 10 ಎಸೆತಗಳು ಬಾಕಿಯಿರುವಾಗ ಆರ್ ಅಶ್ವಿನ್ ಫೆವಿಲಿಯನ್‌ಗೆ ಮರಳುವ ನಿರ್ಧಾರ ತೆಗೆದುಕೊಂಡು ಕ್ರೀಸ್ ತೊರೆದರು. ನಂತರ ರಿಯಾನ್ ಪರಾಗ್ ಕ್ರೀಸ್‌ನಲ್ಲಿದ್ದ ಶಿಮ್ರಾನ್ ಹೇಟ್ಮೇಯರ್ ಅವರನ್ನು ಸೇರಿಕೊಂಡರು. ರಿಯಾನ್ ಪರಾಗ್ 4 ಎಸೆತಗಳನ್ನು ಎದುರಿಸಿ 8 ರನ್‌ಗಳನ್ನು ಗಳಿಸಿ ವಿಕೆಟ್ ಕಳೆದುಕೊಂಡಿದ್ದಾರೆ. ಇದರಲ್ಲಿ ಒಂದು ಸಿಕ್ಸರ್ ಸೇರಿಕೊಂಡಿತ್ತು.

Nita Ambani : ಸತತ 4 ಪಂದ್ಯ ಸೋತ ಮುಂಬೈ ಇಂಡಿಯನ್ಸ್ ತಂಡಕ್ಕೆ ನೀತಾ ಅಂಬಾನಿಯಿಂದ ವಿಶೇಷ ಸಂದೇಶNita Ambani : ಸತತ 4 ಪಂದ್ಯ ಸೋತ ಮುಂಬೈ ಇಂಡಿಯನ್ಸ್ ತಂಡಕ್ಕೆ ನೀತಾ ಅಂಬಾನಿಯಿಂದ ವಿಶೇಷ ಸಂದೇಶ

ಈ ಇನ್ನಿಂಗ್ಸ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ 6 ವಿಕೆಟ್ ಕಳೆದುಕೊಂಡು 165 ರನ್‌ಗಳಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ಪರವಾಗಿ ಶಿಮ್ರಾನ್ ಹೇಟ್ಮೇಯರ್ 36 ಎಸೆತಗಳನ್ನು ಎದುರಿಸಿ ಭರ್ಜರಿ 59 ರನ್‌ಗಳ ಕೊಡುಗೆ ನೀಡಿದ್ದಾರೆ. ನಾಲ್ಕು ಬೌಂಡರಿ ಹಾಗೂ ಆರು ಸಿಕ್ಸರ್‌ಗಳು ಹೇಟ್ಮೇಯರ್ ಬ್ಯಾಟ್‌ನಿಂದ ಸಿಡಿದಿತ್ತು.

ರಾಜಸ್ಥಾನ್ ರಾಯಲ್ಸ ತಂಡ ನೀಡಿದ ಈ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ಆರಂಭಿಕ ಆಘಾತವನ್ನು ಅನುಭವಿಸಿತು. ಇನ್ನಿಂಗ್ಸ್‌ನ ಮೊದಲ ಎಸೆತದಲ್ಲಿಯೇ ನಾಯಕ ಕೆಎಲ್ ರಾಹುಲ್ ಬೋಲ್ಟ್ ಎಸೆತದಲ್ಲಿ ಬೌಲ್ಡ್ ಆಗುವ ಮೂಲಕ ವಿಕೆಟ್ ಕಳೆದುಕೊಂಡಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೃಷ್ಣಪ್ಪ ಗೌತಮ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದು ತಮ್ಮ ಬ್ಯಾಟಿಂಗ್ ಸಾಮರ್ಥ್ಯ ಪ್ರದರ್ಶಿಸಲು ವಿಫಲವಾದರು. ಜೇಸನ್ ಹೋಲ್ಡರ್ ಅವರಿಂದಲೂ ಉತ್ತಮ ಮೊತ್ತ ಬಾರದೆ ವಿಕೆಟ್ ಕಳೆದುಕೊಂಡರು. ಹೀಗೆ ಒಂದರ ನಂತರ ಮತ್ತೊಂದರಂತೆ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತ್ತು. 9.1 ಓವರ್‌ನಲ್ಲಿ 52 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು.

ನಂತರರ ದೀಪಕ್ ಹೂಡಾ, ಈ ಬಾರಿಯ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚುತ್ತಿರುವ ಆಯುಷ್ ಬದೋನಿ ಕೂಡ ವಿಕೆಟ್ ಕಳೆದುಕೊಂಡರು. ಅಷ್ಟರಲ್ಲಿ ಈ ಆರಂಭದಿಂದ ವಿಕೆಟ್ ಕಳೆದುಕೊಳ್ಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ಗಟ್ಟಿಯಾಗಿ ನೆಲೆಯೂರಿದ್ದ ಕ್ವಿಂಟನ್ ಡಿಕಾಕ್ 39 ರನ್‌ಗಳಿಗೆ ವಿಕೆಟ್ ಕಳೆದುಕೊಂಡರು. ನಂತರ ಅಂತಿಮ ಹಂತದಲ್ಲಿ ಕಣಕ್ಕಿಳಿದ ಮಾರ್ಕಸ್ ಸ್ಟೋಯ್ನಿಸ್ ಹಾಗೂ ಕೃನಾಲ್ ಪಾಂಡ್ಯ ತಂಡವನ್ನು ಗೆಲುವಿನ ಸನಿಹಕ್ಕೆ ತಂದಿತ್ತರು. ಅಂತಿಮ ಓವರ್‌ನಲ್ಲಿ 15 ರನ್‌ಗಳಿಸುವ ಸವಾಲು ಎಲ್‌ಎಸ್‌ಜಿ ಮುಂದಿತ್ತು. ಈ ಓವರ್‌ನಲ್ಲಿ ಯುವ ಆಟಗಾರ ಕುಲ್‌ದೀಪ್ ಸೇನ್ ಅದ್ಭುತ ಬೌಲಿಂಗ್ ಪ್ರದರ್ಶಿಸಿ ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾದರು.

Story first published: Monday, April 11, 2022, 14:27 [IST]
Other articles published on Apr 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X